For Quick Alerts
ALLOW NOTIFICATIONS  
For Daily Alerts

ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು

|

ಗರುಡ ಪುರಾಣವೆಂಬುವುದು ವಿಷ್ಣು ಹಾಗೂ ಗರುಡನ ನಡುವೆ ನಡೆದ ಸಂಭಾಷಣೆಎಂದು ಹೇಳಲಾಗಿದೆ. ಇದರಲ್ಲಿ ಸ್ವರ್ಗ, ನರಕ, ಸಾವು ಇವುಗಳ ಬಗ್ಗೆ ಹೇಳಲಾಗಿದೆ, ಅಷ್ಟು ಮಾತ್ರವಲ್ಲ ಇದರಲ್ಲಿ ಭಕ್ತಿ, ಜೀವನ, ಧರ್ಮ ಇವುಗಳ ಬಗ್ಗೆ ಹೇಳಲಾಗಿದೆ ನೋಡಿ.

ಯಾರು ಗರುಡ ಪುರಾಣದಲ್ಲಿ ಹೇಳಿದಂತೆ ಅನುಸರಿಸುತ್ತಾರೋ ಅವರು ಜೀವನದಲ್ಲಿ ಹಾದಿ ತಪ್ಪುವುದಿಲ್ಲ, ಅವರ ಬದುಕು ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.

garuda purana

ನಾವು ಅನ್ನದ ಋಣದ ಬಗ್ಗೆ ಹೇಳುತ್ತೇವೆ, ಯಾರಾದರೂ ನಮಗೆ ಆಹಾರ ಹಾಕಿದರೆ ಅನ್ನದ ಋಣ ನಮ್ಮ ಮೇಲಿರುತ್ತದೆ ಎಂದು ಹೇಳುತ್ತೇವೆ ಅಲ್ವಾ? ಆದರೆ ಗರುಡ ಪುರಾಣದಲ್ಲಿ ನಾವು 10 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ಸೇವಿಸಬಾರದು ಎಂದು ಹೇಳುತ್ತದೆ, ಅಂಥವರ ಮನೆಯಲ್ಲಿ ಆಹಾರ ಸೇವಿಸಿದರೆ ನಮ್ಮ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆಯಂತೆ.

ಎಂಥವರ ಮನೆಯಲ್ಲಿ ಆಹಾರ ಸೇವಿಸಬಾರದು ಎಂದು ನೋಡೋಣ:

ತುಂಬಾ ಕೋಪ ಪಡುವವರ ಮನೆಯಲ್ಲಿ ಆಹಾರ ಸೇವಿಸಬಾರದು

ತುಂಬಾ ಕೋಪ ಪಡುವವರ ಮನೆಯಲ್ಲಿ ಆಹಾರ ಸೇವಿಸಬಾರದು

ತುಂಬಾ ಕೋಪ ಒಳ್ಳೆಯದಲ್ಲ, ಯಾರಿಗೆ ತುಂಬಾ ಕೋಪ ಇರುತ್ತದೋ ಅವರು ಜೀವನದಲ್ಲಿ ಒಳ್ಳೆಯ ಕಾರ್ಯ ಮಾಡುವುದಿಲ್ಲ, ಅವರಿಂದ ತಪ್ಪಾಗುವ ಸಾಧ್ಯತೆ ಇದೆ, ಅಂಥವರ ಮನೆಯಲ್ಲಿ ಊಟ ಮಾಡಿ ಆತ್ಮೀಯತೆ ಬೆಳೆದರೆ ಅವರ ಗುಣ ನಮಗೂ ಕೆಡಕು ತರುವುದು, ಆದ್ದರಿಂದ ಇಂಥವರ ಮನೆಯಲ್ಲಿ ಆಹಾರ ಸೇವಿಸಬಾರದು.

ಅಲ್ಲದೆ ಪಟ್‌ ಅಂತ ಕೋಪ ಮಾಡುವವರ ಜೊತೆ ಸ್ನೇಹ ಮಾಡುವುದು ಕೂಡ ಒಳ್ಳೆಯದಲ್ಲ, ಇಂಥವರು ನಮಗೆ ಆಪತ್ತು ತರುತ್ತಾರೆ, ವಿವೇಕವಿಲ್ಲದೆ ನಮಗೆ ತೊಂದರೆ ಉಂಟು ಮಾಡಬಹುದು, ಆದ್ದರಿಂದ ಇವರ ಅನ್ನದ ಋಣ ನಮ್ಮ ಮೇಲೆ ಇರದಿದ್ದರೆ ಒಳ್ಳೆಯದು.

ಕ್ರೂರವಾದ ರಾಜ/ ವ್ಯಕ್ತಿಯ ಮನೆಯಲ್ಲಿ

ಕ್ರೂರವಾದ ರಾಜ/ ವ್ಯಕ್ತಿಯ ಮನೆಯಲ್ಲಿ

ಕ್ರೂರವಾದ ರಾಜನ ಅರಮನೆಯಲ್ಲಿ ಅಥವಾ ಕ್ರೂರ ವ್ಯಕ್ತಿಯ ಮನೆಯಲ್ಲಿ ಆಹಾರ ಸೇವಿಸಿದರೆ ಅವರ ಮಾಡಿರುವ ಪಾಪದ ಪಾಲು ನಮಗೂ ಸಿಗುವುದಂತೆ ಆದ್ದರಿಂದ ಇಂಥವರ ಮನೆಯಲ್ಲಿ ಆಹಾರ ಸೇವಿಸಬಾರದು.

ಕ್ರೂರ ವ್ಯಕ್ತಿಗಳ ಮನೆಯಲ್ಲಿ ಊಟ ಮಾಡಿದರೆ ಅವರ ಪಾಪದ ಫಲ ನಮಗೂ ತಗುಲಬಹುದು, ಏಕೆಂದರೆ ಇವರಿಂದ ಇತರ ವ್ಯಕ್ತಿಗಳು ಕಣ್ಣೀರು ಹಾಕಿರುತ್ತಾರೆ, ಇಂಥ ಕ್ರೂರಿಗಳ ಜೊತೆ ಸ್ನೇಹ ಮಾಡಿದರುವುದೇ ಒಳ್ಳೆಯದು.

ಕಳ್ಳ ಅಥವಾ ಕ್ರಿಮಿನಲ್ ಮನೆಯಿಂದ ಆಹಾರ ಸೇವಿಸಬಾರದು

ಕಳ್ಳ ಅಥವಾ ಕ್ರಿಮಿನಲ್ ಮನೆಯಿಂದ ಆಹಾರ ಸೇವಿಸಬಾರದು

ಕ್ರಿಮಿನಲ್ ಅಥವಾ ಕಳ್ಳನ ಮನೆಯಿಂದ ಆಹಾರ ಸೇವಿಸಿದರೆ ನಮ್ಮ ಮೇಲೆ ಋಣಾತ್ಮಕ ಪ್ರಭಾವ ಬೀರುವುದು ಎಂದು ಗರುಡ ಪುರಾಣ ಹೇಳುತ್ತದೆ.

ಕಳ್ಳ ಇನ್ನೊಬ್ಬರು ದುಡಿದು ಮಾಡಿದ ಸಂಪತ್ತಿಗೆ ಕನ್ನ ಹಾಕಿ ತಾನು ಸಂಪತ್ತು ಸಂಗ್ರಹಿಸುತ್ತಾನೆ, ಇಂಥವರ ಮನೆಯಲ್ಲಿ ಅಪ್ಪಿ ತಪ್ಪಿಯೂ ಆಹಾರ ಸೇವಿಸಬೇಡಿ.

ಕಾಯಿಲೆ ಬಿದ್ದವರ ಮನೆಯಿಂದ

ಕಾಯಿಲೆ ಬಿದ್ದವರ ಮನೆಯಿಂದ

ಯಾರು ಕಾಯಿಲೆ ಬಿದ್ದಿರುತ್ತಾರೋ ಅವರ ಮನೆಯಲ್ಲಿ ಆಹಾರ ಸೇವಿಸಿದರೆ ಬ್ಯಾಕ್ಟಿರಿಯಾ ಸೋಂಕು ಹರಡುವ ಸಾಧ್ಯತೆ ಇದೆ, ಆದ್ದರಿಂದ ಇಂಥವರ ಮನೆಯಿಂದ ಆಹಾರ ಸೇವಿಸಬಾರದು.

ಕರುಣೆ ಇಲ್ಲದವರ ಮನೆಯಿಂದ

ಕರುಣೆ ಇಲ್ಲದವರ ಮನೆಯಿಂದ

ಕರುಣೆಯಿಲ್ಲದವರು ಬೇರೆಯವರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ, ಇಂಥವರು ಬೇರೆಯವರಿಗೆ ತೊಂದರೆ ಕೊಡುತ್ತಾರೆ, ಇಂಥವರ ಮನೆಯಲ್ಲಿ ಆಹಾರ ಸೇವಿಸಿದರೆ ಅವರ ಪಾಪ ನಮಗೂ ತಟ್ಟುವುದು ಎಂದು ಹೇಳಲಾಗುವುದು.

 ಬೇರೆಯವರ ಬಗ್ಗೆ ಸದಾ ಕೆಟ್ಟ ಮಾತುಗಳನ್ನಾಡುವವರು

ಬೇರೆಯವರ ಬಗ್ಗೆ ಸದಾ ಕೆಟ್ಟ ಮಾತುಗಳನ್ನಾಡುವವರು

ಬೇರೆಯವರಿಗೆ ತೊಂದರೆ ಕೊಡುವವರು, ಸದಾ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಮನೆಯಲ್ಲಿ ಆಹಾರ ಸೇವಿಸಬಾರದೆಂದು ಗರುಡ ಪುರಾಣ ಹೇಳುತ್ತದೆ.

ಇಂಥವರು ನಿಮ್ಮ ಜೊತೆ ಚೆನ್ನಾಗಿ ಮಾತನಾಡಿ, ನೀವು ಆ ಕಡೆ ಹೋಗುತ್ತಿದ್ದಂತೆ ನಿಮ್ಮ ಬಗೆಯೇ ಇನ್ನೊಬ್ಬರ ಬಳಿ ದೂರುತ್ತಾರೆ. ಆದ್ದರಿಂದ ಇಂಥವರನ್ನು ಯಾವುದೇ ಕಾರಣಕ್ಕೆ ನಂಬಬೇಡಿ.

ದರೋಡೆಕೋರರು

ದರೋಡೆಕೋರರು

ಬೇರೆಯವರಿಂದ ಹಣ ಕಿತ್ತು ಕೊಳ್ಳುವವರು , ಅವರು ಬೇರೆಯವರನ್ನು ಕಷ್ಟಕ್ಕೆ ಸಿಲುಕಿಸಿ ಹಣವನ್ನು ದರೋಡೆ ಮಾಡಿ ಪಡೆಯುವವರ ಮನೆಯಲ್ಲಿ ಆಹಾರ ಸೇವಿಸಬಾರದು.

ಬೇರೆಯವರ ಕಣ್ಣೀರಿನ ಶಾಪ ಅವರ ಮೇಲಿರುತ್ತದೆ, ಅಲ್ಲದೆ ಪಾಪದ ಹಣದಿಂದ ಬದುಕುತ್ತಿರುವ ದರೋಡೆಕೋರರ ಮನೆಯಲ್ಲಿ ಆಹಾರ ಸೇವಿಸಬೇಡಿ.

 ಮಾದಕ ವಸ್ತುಗಳ ಮಾರಾಟ ಮಾಡುವವನ ಮನೆಯಿಂದ

ಮಾದಕ ವಸ್ತುಗಳ ಮಾರಾಟ ಮಾಡುವವನ ಮನೆಯಿಂದ

ಯಾರು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಾರೋ ಅವರು ಪಾಪದ ಕಾರ್ಯದಿಂದ ಹಣ ಮಾಡಿರುತ್ತಾರೆ.

ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ತಾವು ಹಣ ಮಾಡಲು ಇನ್ನೊಬ್ಬರ ನೆಮ್ಮದಿ ಹಾಳು ಮಾಡುತ್ತಾರೆ ಇದು ಪಾಪದ ಕೆಲಸ, ಇಂಥವರ ಅನ್ನ ಋಣ ನಮ್ಮ ಮೇಲೆ ಇರದಿದ್ದರೆ ಒಳ್ಳೆಯದು.

English summary

Garuda Purana: Don't eat food in house of these kinds of people in kannada

According to garuda purana one should not eat food from these people house read on...
X
Desktop Bottom Promotion