For Quick Alerts
ALLOW NOTIFICATIONS  
For Daily Alerts

ಶ್ರಾವಣ ತಿಂಗಳಿನಲ್ಲಿ ಬರುವ 7 ಪ್ರಮುಖ ಹಬ್ಬಗಳು

|

ಶ್ರಾವಣ ಬಂತು ಕಾಡಿಗೆ | ಬಂತು ನಾಡಿಗೆ | ಬಂತು ಬೀಡಿಗೆ | ಶ್ರಾವಣ ಬಂತು ||

ಹೌದು, ಹಿಂದೂಗಳ ಸಡಗರದ ತಿಂಗಳಂದೇ ಕರೆಯಬಹುದಾದ ಶ್ರಾವಣ ಬಂದಾಗಿದೆ. ಶ್ರಾವಣ ತಿಂಗಳೆಂದರೆ ಅದೇನೋ ಹರ್ಷ. ವರ್ಷದ ಹಬ್ಬಗಳ ಸಡಗರ ಶುರುವಾಗುವುದೇ ಈ ತಿಂಗಳಿನಿಂದ.

ಶ್ರಾವಣ ತಿಂಗಳು ಪರಶಿವನಿಗೆ ಮೀಸಲಿಟ್ಟ ತಿಂಗಳು, ಶ್ರಾವಣದಲ್ಲಿ ವ್ರತ ಮಾಡಿದರೆ ಬಯಸಿದ್ದು ನೆರವೇರುವುದು ಎಂಬ ನಂಬಿಕೆ ಭಕ್ತರಲ್ಲಿದೆ. ಅದರಲ್ಲೂ ಶ್ರಾವಣ ಸೋಮವಾರ ಅಂತೂ ತುಂಬಾ ವಿಶೇಷವಾದದ್ದು. ಈ ಎಲ್ಲಾ ವಿಶೇಷಗಳ ನಡುವೆ ಹಲವಾರು ಹಬ್ಬಗಳು ಬಂದು ಶ್ರಾವಣ ತಿಂಗಳನ್ನು ಹಬ್ಬಮಯವಾಗಿಸಿದೆ.

2020ರಲ್ಲಿ ಶ್ರಾವಣ ತಿಂಗಳು ಜುಲೈ 21ರಿಂದ ಪ್ರಾರಂಭವಾಗಿ ಆಗಸ್ಟ್ 17ಕ್ಕೆ ಮುಗಿಯಲಿದೆ. ಇಲ್ಲಿ ನಾವು ಶ್ರಾವಣ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ಅವುಗಳನ್ನು ಯಾವ ದಿನದಲ್ಲಿ ಆಚರಿಸಲಾಗುವುದು ಎಮದು ಹೇಳಿದ್ದೇವೆ ನೋಡಿ:

1. ಜುಲೈ 21 ಮಂಗಳವಾರದಂದು ಮಂಗಳಗೌರಿ ವ್ರತ

1. ಜುಲೈ 21 ಮಂಗಳವಾರದಂದು ಮಂಗಳಗೌರಿ ವ್ರತ

ಮುತ್ತೈದೆ ಮಹಿಳೆಯರು ಈ ವ್ರತ ಮಾಡುತ್ತಾರೆ. ಗೌರಿ ದೇವಿಗೆ ಪೂಜೆಯನ್ನು ಸಮರ್ಪಿಸಿ ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ವೈವಾಹಿಕ ಜೀವನ ಆನಂದದಿಂದ ಇರುವಂತೆ ಆಶೀರ್ವದಿಸುವಂತೆ ಭಕ್ತಿಯಿಂದ ಬೇಡಿಕೊಳ್ಳಲಾಗುವುದು. ಮದುವೆಯಾದ ಮೊದಲ ಐದು ವರ್ಷಗಳಲ್ಲಿ ಮಹಿಳೆಯರು ಈ ವ್ರತವನ್ನು ಮಾಡುತ್ತಾರೆ. ಮುತ್ತೈದೆಯರು ದೀರ್ಘ ಸುಮಂಗಲಿಯ ಆಶೀರ್ವಾದಕ್ಕಾಗಿ, ಸಂತಾನ ಭಾಗ್ಯ ಪಡೆಯಲು, ಸಂತೋಷದ ದಾಂಪತ್ಯ ಜೀವನಕ್ಕಾಗಿ ಮಾಡಿದರೆ, ಅವಾಹಿತ ಹೆಣ್ಣುಮಕ್ಕಳು ಉತ್ತಮ ಬಾಳ ಸಂಗಾತಿಗಾಗಿ ಈ ವ್ರತ ಮಾಡುತ್ತಾರೆ.

2. ಜುಲೈ 25 ಶನಿವಾರ ನಾಗರಪಂಚಮಿ

2. ಜುಲೈ 25 ಶನಿವಾರ ನಾಗರಪಂಚಮಿ

ಇಡೀ ಭಾರತದಾದ್ಯಂತ ಈ ಹಬ್ಬವನ್ನು ಶ್ರದ್ಧಾ ಮತ್ತು ಭಕ್ತಿಯಿಂದ ಆಚರಿಸಲಾಗುವುದು. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನ ಜನರು ಭೂಮಿಯನ್ನು ಅಗೆಯಲು ಹೋಗುವುದಿಲ್ಲ. ಅದರ ಬದಲಿಗೆ ನಾಗರ ಕಲ್ಲು, ಮಣ್ಣಿನ ನಾಗ ಅಥವಾ ಚಿತ್ರ ಪಟದ ಮುಂದೆ ಉರಿದ ಭತ್ತ, ಧೂರ್ವವನ್ನು ಇಟ್ಟು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಾರತದ ಎಲ್ಲಾ ಭಾಗಗಳಲ್ಲಿ ಬಹುತೇಕ ಒಂದೇ ಬಗೆಯಲ್ಲಿ ಆಚರಿಸಲಾಗುತ್ತದೆ.

ಇನ್ನು ಮದುವೆಯಾದ ಹೆಂಗಸರು ನಾಗಗಳಿಗೆ ಹಾಲೆರೆಯುವ ಹಿಂದೆ ಕುತೂಹಲಕಾರಿ ವಿಚಾರ ಅಡಗಿದೆ. ಅದೇನೆಂದರೆ ಹಾವುಗಳು ತಮಗೆ ನೋವನ್ನು ಉಂಟು ಮಾಡಿದವರ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಮತ್ತು ಅವರು ಇಲ್ಲದಿದ್ದಲ್ಲಿ ಅವರ ಕುಟುಂಬದ ಸದಸ್ಯರ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಛಲವನ್ನು ಹೊಂದಿರುತ್ತವೆಯಂತೆ. ಹಾಗಾಗಿ ಮುತ್ತೈದೆಯರು ನಾಗ ದೇವತೆಗಳನ್ನು ಪೂಜಿಸಿ, ತಮ್ಮ ಕುಟುಂಬ ಸದಸ್ಯರು ತಿಳಿದೊ ಅಥವಾ ತಿಳಿಯದೆಯೋ ಮಾಡಿದ ಅಪರಾಧವನ್ನು ಮನ್ನಿಸುವಂತೆ ಕೋರುತ್ತಾರೆ.

3. ಜುಲೈ 30 ಗುರುವಾರ ಶ್ರಾವಣ ಏಕಾದಶಿ

3. ಜುಲೈ 30 ಗುರುವಾರ ಶ್ರಾವಣ ಏಕಾದಶಿ

ಶ್ರಾವಣ ಮಾಸದಲ್ಲಿ ಬರುವ ಏಕಾದಶಿ ತುಂಬಾ ಶ್ರೇಷ್ಠವಾದದ್ದು. ಇದನ್ನು ಪುತ್ರಡ ಏಕಾದಶಿಯೆಂದು ಕೂಡ ಕರೆಯುತ್ತಾರೆ. ಪುತ್ರಡ ಏಕಾದಶಿ ಉಪವಾಸ ಆಚರಿಸಿದರೆ ಮಾಡಿದ ಪಾಪಕರ್ಮಗಳಿಂದ ಮುಕ್ತಿ ಹೊಂದುತ್ತಾರೆ. ಇದನ್ನು ಆಚರಿಸಿದವರಿಗೆ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುವುದು.

4. ಜುಲೈ 31 ಶನಿವಾರ ವರಮಹಾಲಕ್ಷ್ಮಿ ವ್ರತ

4. ಜುಲೈ 31 ಶನಿವಾರ ವರಮಹಾಲಕ್ಷ್ಮಿ ವ್ರತ

ಶ್ರಾವಣ ಮಾಸದಲ್ಲಿ ನಾಗರಪಂಚಮಿ ನಂತರ ಬರುವ ಮುಖ್ಯವಾದ ಹಬ್ಬ ವರಮಹಾಲಕ್ಷ್ಮೀ ಹಬ್ಬ. ಲಕ್ಷ್ಮೀ ಎಂದರೆ ಸಂಪತ್ತು ಅನುಗ್ರಹಿಸುವ ದೇವತೆ, ಈಕೆಯನ್ನು ಪೂಜಿಸುವುದರಿಂದ ಒಳಿತಾಗುವುದು ಎಂಬ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸಲಾಗುವುದು. ವರಮಹಾಲಕ್ಷ್ಮಿ ಹಬ್ಬದಂದು ಅಷ್ಟಲಕ್ಷ್ಮೀ ಸ್ವರೂಪವನ್ನು ಪೂಜಿಸಲಾಗುವುದು.

5. ಆಗಸ್ಟ್ 3ಕ್ಕೆ ರಕ್ಷಾಬಂಧನ, ನೂಲು ಹುಣ್ಣಿಮೆ

5. ಆಗಸ್ಟ್ 3ಕ್ಕೆ ರಕ್ಷಾಬಂಧನ, ನೂಲು ಹುಣ್ಣಿಮೆ

ರಕ್ಷಾ ಬಂಧನಕ್ಕೆ ನಮ್ಮಲ್ಲಿ ತುಂಬಾ ಮಹತ್ವವಿದೆ. ಅಣ್ಣ ತಂಗಿಯ ಅನುಬಂಧ ಬೆಲೆ ಕಟ್ಟಲಾಗದ್ದು. ತಾಯಿಯ ಮಮತೆಯಂತೆಯೇ ಅಣ್ಣನ ರಕ್ಷಣೆ ಪ್ರೀತಿ ಹೆಣ್ಣಿಗೆ ಬಲವಿದ್ದಂತೆ. ಅನಾದಿ ಕಾಲದಿಂದಲೂ ಅಣ್ಣ ತಂಗಿಯ ಪವಿತ್ರ ಅನುಬಂಧ ಗಟ್ಟಿಯಾಗಿ ನೆಲೆ ನಿಂತಿರುವಂಥದ್ದು. ಸಹೋದರನ ಶ್ರೀರಕ್ಷೆ ಎಂದಿಗೂ ಸಹೋದರಿಯ ಮೇಲಿರಲಿ ಎಂಬ ಆಶಯದೊಂದಿಗೆ ರಕ್ಷಾ ಬಂಧನವನ್ನು ಭಾರತದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.

6. ಆಗಸ್ಟ್ 7 ಶುಕ್ರವಾರ ಸಂಕಷ್ಟ ಚತುರ್ಥಿ

6. ಆಗಸ್ಟ್ 7 ಶುಕ್ರವಾರ ಸಂಕಷ್ಟ ಚತುರ್ಥಿ

ಸಂಕಷ್ಟಿಯ ದಿನದಂದು ಉಪವಾಸ ಮಾಡಬೇಕು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು. ಪೂಜೆ ಅಂತ್ಯವಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನವನ್ನು ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

7. ಆಗಸ್ಟ್ 11 ಮಂಗಳವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ

7. ಆಗಸ್ಟ್ 11 ಮಂಗಳವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

English summary

Festivals In Shravana Masa 2020

Shravan month very special for Hindu, This is month of festivals and celebration, here are list of festivals in shravan month, read on.
X
Desktop Bottom Promotion