For Quick Alerts
ALLOW NOTIFICATIONS  
For Daily Alerts

ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡಲಿದೆ ನೆಚ್ಚಿನ ಸಂಗೀತಾಸಕ್ತಿ!

|

ಮೊಗವೇ ಮನಸ್ಸಿನ ಕನ್ನಡಿ ಎನ್ನುವ ಹಾಗೇ, ನೀವು ಕೇಳುವ ಸಂಗೀತವೇ ನಿಮ್ಮ ವ್ಯಕ್ತಿತ್ವದ ಕನ್ನಡಿ ಎನ್ನಬಹುದು. ಹೌದು, ನೀವು ಆಲಿಸುವ ಸಂಗೀತ ನಿಮ್ಮ ವ್ಯಕ್ತಿತ್ವವನ್ನು ತಿಳಿಸಿಕೊಡಲಿದೆ ಎನ್ನುತ್ತದೆ ಮನೋಶಾಸ್ತ್ರ. ನಿಮ್ಮ ಸಂಗೀತದ ಅಭಿರುಚಿಯಿಂದ ಯಾರೂ ಸಹ ನಿಮ್ಮ ವ್ಯಕ್ತಿತ್ವವನ್ನು ಅಂದಾಜಿಸಬಹುದಾಗಿದೆ.

Music

ಹಾಗಿದ್ದರೆ ನಿಮ್ಮ ಅಥವಾ ನಿಮ್ಮ ಸ್ನೇಹಿತರ ವ್ಯಕ್ತಿತ್ವದ ಬಗ್ಗೆ ತಿಳಿಯಲು ನಿಮಗೂ ಕುತೂಹಲವಿದೆಯೇ?, ಇಲ್ಲಿದೆ ಎಂಥಹ ಸಂಗೀತ ಯಾವ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ, ಈ ಲೇಖನ ಓದಿ.

ಶಾಸ್ತ್ರೀಯ ಸಂಗೀತ

ಶಾಸ್ತ್ರೀಯ ಸಂಗೀತ

ಶಾಸ್ತ್ರೀಯ ಸಂಗೀತ ಕೇಳುವವರು ಸೃಜನಶೀಲ ಸ್ವಭಾವದವರಾಗಿದ್ದು, ಬಹಳ ಅಂತರ್ಮುಖಿಗಳಾಗಿರುತ್ತಾರೆ. ಅತಿಯಾದ ಸ್ವಾಭಿಮಾನ ಗುಣ ಇವರ ಸಕಾರಾತ್ಮಕ ಗರ್ವವನ್ನು ಪ್ರತಿನಿಧಿಸುತ್ತದೆ. ಚತುರ ಸ್ವಭಾವದವರಾದ ಇವರು ತನ್ನ ವ್ಯಕ್ತಿತ್ವಕ್ಕೆ ಹೊಂದುವ ಸ್ನೇಹಿತರನ್ನು ಮಾತ್ರ ಸೇರುತ್ತಾರೆ.

ಜಾನಪದ, ಜಾಸ್

ಜಾನಪದ, ಜಾಸ್

ಜಾನಪದ, ಜಾಸ್ ಸಂಗೀತಾಸಕ್ತರು ಪ್ರತಿಫಲಿತ ಸ್ವಭಾವದವರಾಗಿದ್ದಾರೆ. ಇವರು ಮುಕ್ತ ಮನಸ್ಸಿನವರಾಗಿದ್ದು, ಅತಿಯಾದ ಸೃಜನಾತ್ಮಕತೆ ಇವರ ಸಾಮರ್ಥ್ಯವಾಗಿದೆ. ಹೊಸ ಹೊಸ ಪ್ರಯತ್ನಗಳಿಗೆ ತಾವು ಒಳಗಾಗುತ್ತಾರೆ, ದೈಹಿಕ ಕಸರತ್ತಿಗಿಂತ ಸಂಗೀತದ ಮೂಲಕವೇ ಮಾನಸಿಕ ಕಸರತ್ತಿಗೆ ಮುಂದಾಗುವಂಥ ಚಾಣಾಕ್ಷರಿವರು.

ರಾಕ್ ಸಂಗೀತ

ರಾಕ್ ಸಂಗೀತ

ರಾಕ್ ಸಂಗೀತ ಆಲಿಸುವವರು ಹೆಚ್ಚು ಶ್ರಮಪಡುವ ಸ್ವಭಾವದವರಾಗಿದ್ದು, ಜಯಶಾಲಿಗಳಾಗಿರುತ್ತಾರೆ. ಇತರರಿಗೆ ಹೋಲಿಸಿದರೆ ಇವರು ಸ್ವಾರ್ಥ ಗುಣ ಹೊಂದಿದ್ದು, ಸೃಜನಾತ್ಮಕತೆ ಹಾಗೂ ನೂತನ ಪ್ರಯೋಗಗಳಿಗೆ ಹೆಚ್ಚು ಆಸಕ್ತಿ ತೋರುತ್ತಾರೆ.

ಹಿಪ್-ಹಾಪ್ ಸಂಗೀತ

ಹಿಪ್-ಹಾಪ್ ಸಂಗೀತ

ಹಿಪ್-ಹಾಪ್ ಸಂಗೀತ ಆಲಿಸುವವರು ಸಾಮಾನ್ಯವಾಗಿ ಬಹುರ್ಮುಖಿ ಹಾಗೂ ಅತಿಯಾದ ಆತ್ಮವಿಶ್ವಾಸ ಹೊಂದಿರುವವರಾಗಿರುತ್ತಾರೆ. ಇವರಿಗೆ ಸಮಾಜದೊಂದಿಗೆ ಬೆರೆಯುವುದು, ಸಂಗೀತ, ನೃತ್ಯ, ಹಾಡುವುದು ಇವರ ಬಹಳ ಆಸಕ್ತಿಯ ವಿಷಯಗಳಾಗಿದೆ.

ಪಾಪ್ ಸಂಗೀತ

ಪಾಪ್ ಸಂಗೀತ

ಬೇರೆ ಸಂಗೀತ ಆಸಕ್ತರಿಗೆ ಹೋಲಿಸಿದಾಗ ಪಾಪ್ ಸಂಗೀತ ಆಲಿಸುವವರಿಗೆ ಸೃಜನಶೀಲತೆ ಕಡಿಮೆ ಹಾಗೂ ಹೆಚ್ಚು ಚಿಂತೆಯಲ್ಲೇ ಮುಳುಗಿರುತ್ತಾರೆ. ಎಲ್ಲರ ಜತೆ ಹೆಚ್ಚು ಬೆರೆಯುವ, ಆತ್ಮಗೌರವದ ವ್ಯಕ್ತಿತ್ವ ಹೊಂದಿರುವ ಇವರು ಚಿಂತೆಯಿಂದ ಹೊರಬರಲು ಸದಾ ಪ್ರಯತ್ನದಲ್ಲಿರುತ್ತಾರೆ.

Read more about: insync fact music
English summary

Favorite Music Can Reflects Your Personality

Music plays an important role in the lives of people all of the world, which is why many wonder what individual factors might influence musical preferences. Could the contents of your playlist reveal something about your personality. People listen to music as a way to set the mood, to motivate a workout, or even to gain inspiration. How much are those choices influenced by underlying personality.
Story first published: Friday, August 16, 2019, 15:22 [IST]
X
Desktop Bottom Promotion