For Quick Alerts
ALLOW NOTIFICATIONS  
For Daily Alerts

ವಿಶ್ವ ಉಳಿತಾಯ ದಿನ 2019: ಉದ್ಯೋಗಸ್ಥ ತಾಯಂದಿರಿಗೆ ಹಣ ಉಳಿತಾಯಕ್ಕೆ ಏಳು ಸೂತ್ರಗಳು

|

ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದ ವಿಶ್ವದ ಪ್ರತಿ ಪ್ರಜೆಯು ಹಣವನ್ನು ಉಳಿತಾಯ ಮಾಡುವುದು ಅತ್ಯಗತ್ಯ. ಅಲ್ಲದೇ ಇದು ವ್ಯಕ್ತಿಯ ವೈಯಕ್ತಿಕ ದೃಷ್ಟಿಯಿಂದಲೂ ಸಹ ಸಹಕಾರಿ. ಆದ್ದರಿಂದಲೇ ಹಣ ಉಳಿತಾಯದ ಬಗ್ಗೆ ಜಗತ್ತಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ 90 ವರ್ಷಗಳಿಂದ ವಿಶ್ವ ಉಳಿತಾಯ ದಿನವಾಗಿ ಆಚರಿಲಾಗುತ್ತಿದೆ.

ಅಕ್ಟೋಬರ್ 31ರ 1924ರಲ್ಲಿ ಇಟಲಿಯಲ್ಲಿ ಮೊದಲನೇ ಅಂತಾರಾಷ್ಟ್ರೀಯ ಉಳಿತಾಯ ಬ್ಯಾಂಕ್ ಕಾಂಗ್ರೆಸ್ ನ ಆರಂಭವಾಗಿದ್ದು, ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 31ರಂದು ವಿಶ್ವ ಉಳಿತಾಯ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಈ ದಿನದ ಮಹತ್ವದ ಬಗ್ಗೆ ಹಾಗೃತಿ ಮೂಡಿಸುವ ಉದ್ದೇಶದಿಂದ 80ಕ್ಕೂ ಹೆಚ್ಚು ದೇಶಗಳು ಉಳಿತಾಯ ದಿನವನ್ನು ಆಚರಣೆ ಮಾಡುತ್ತಿದೆ.

ಈ ದಿನದ ಹಿನ್ನೆಲೆ ಉದ್ಯೋಗಸ್ಥ ಮಹಿಳೆಯರು ಯಾವ ರೀತಿ ಹಣ ಉಳಿತಾಯ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ.

"ನೀವು ದುಡಿದ ಹಣವನ್ನು ಮೊದಲು ಉಳಿತಾಯ ಮಾಡಿ, ಬಳಿಕ ಖರ್ಚು ಮಾಡಿ'' ಎಂದು ಶೇರು ಮಾರುಕಟ್ಟೆ ದಿಗ್ಗಜ ವರೇನ್ ಬಫೆಟ್ ಅವರು ಹೇಳಿರುವರು. ಆದರೆ ನಾವೆಲ್ಲರೂ ಮಾಡುವುದು ಇದರ ತದ್ವಿರುದ್ಧ. ಬಂದ ತಿಂಗಳ ಸಂಬಳವನ್ನು ಮೊದಲು ಖರ್ಚು ಮಾಡಿಕೊಂಡು, ಬಳಿಕ ಉಳಿದಿರುವುದನ್ನು ಉಳಿತಾಯ ಮಾಡುತ್ತೇವೆ. ಇನ್ನು ಕೆಲವು ಸಲ ಈ ಉಳಿತಾಯದ ಖಾತೆಗೆ ಹಣವೇ ಬೀಳುವುದಿಲ್ಲ.

ಹಿಂದೆ ಮನೆಯಲ್ಲಿದ್ ಮಹಿಳೆಯರು ತಮ್ಮ ಪತಿ ಅಥವಾ ಮನೆಯವರು ನೀಡಿದ ಹಣವನ್ನೇ ಉಳಿತಾಯ ಮಾಡುತ್ತಿದ್ದರು. ಆದರೆ ಇಂದು ಆಧುನಿಕ ಮಹಿಳೆಯು ಉದ್ಯೋಗಕ್ಕೆ ಹೋದರೂ ಉಳಿತಾಯ ತುಂಬಾ ಕಡಿಮೆ ಎನ್ನಬಹುದು. ಅದರಲ್ಲೂ ಉದ್ಯೋಗಸ್ಥ ತಾಯಂದಿರಿಗೆ ಉಳಿತಾಯ ಮಾಡಲು ತುಂಬಾ ಕಷ್ಟ ಹಾಗೂ ಅಸಾಧ್ಯವೆಂದೇ ಹೇಳಬಹುದು. ಉದ್ಯೋಗಸ್ಥ ತಾಯಂದಿರಿಗೆ ಹಣ ಉಳಿತಾಯ ಮಾಡಲು ನಾವು ಏಳು ಸೂತ್ರಗಳನ್ನು ಹೇಳಿಕೊಡಲಿದ್ದೇವೆ. ಇದರಿಂದ ಹೆಚ್ಚು ಖರ್ಚು ಮಾಡದೆ ಆಕೆ ತಮ್ಮ ಆದಾಯ ಹೆಚ್ಚಿಸಬಹುದು. ತುಂಬಾ ಬಿಡುವಿಲ್ಲದ ಜೀವನದಲ್ಲೂ ಉದ್ಯೋಗಸ್ಥ ಮಹಿಳೆಯರು ಹಣ ಉಳಿತಾಯ ಮಾಡಬಹುದು.

ದೈನಂದಿನ ಆರೈಕೆ, ನಿಯಮಿತವಾಗಿ ಹೊರಗಡೆ ಊಟ ಮಾಡುವುದು, ಡ್ರೈ ಕ್ಲಿನಿಂಗ್ ಮತ್ತು ಇತರ ಕೆಲವೊಂದು ಸೇವೆಗಳಿಗೆ ನೀವು ಹಣ ನೀಡುತ್ತಿರಬಹುದು. ವೃತ್ತಿಗಾಗಿ ನೀವು ಹೆಚ್ಚು ಹಣ ವ್ಯಯ ಮಾಡುತ್ತಿರಬಹುದು. ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ದುಡಿಮೆಗಿಂತ ಹೆಚ್ಚು ಹಣ ಖರ್ಚಾಗುತ್ತಲಿದ್ದರೆ ಮತ್ತು ಹಣ ಉಳಿತಾಯ ಮಾಡಲು ನೀವು ಈ ಲೇಖನವನ್ನು ಓದುತ್ತಾ ಸಾಗಿ.

1. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಲೆಕ್ಕ ಇಟ್ಟುಕೊಳ್ಳಿ

1. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಲೆಕ್ಕ ಇಟ್ಟುಕೊಳ್ಳಿ

ನೀವು ಖರ್ಚು ಕಡಿಮೆ ಮಾಡುವ ಬದಲು ಮೊದಲಿಗೆ ಹಣ ಹೆಚ್ಚಾಗಿ ಎಲ್ಲಿ ಖರ್ಚಾಗುತ್ತಾ ಇದೆ ಎಂದು ತಿಳಿದುಕೊಳ್ಳಬೇಕು. ಖರ್ಚುಗಳ ಬಗ್ಗೆ ಲೆಕ್ಕಪತ್ರ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಇದು ತುಂಬಾ ಸರಳ ಪ್ರಕ್ರಿಯೆ ಆಗಿದೆ. ನೀವು ಹೇಗೆ ಹಣ ಖರ್ಚು ಮಾಡುತ್ತಲಿದ್ದೀರಿ ಮತ್ತು ಎಲ್ಲಿ ಹಣ ಖರ್ಚು ಮಾಡುತ್ತಿದ್ದೀರಿ ಎಂದು ತಿಳಿಯಬೇಕು. ಇಂದಿನ ದಿನಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಯಾವುದೇ ಆಪ್ ಗೆ ಜೋಡಿಸಬಹುದು. ಉದಾಹರಣೆಗೆ ಪರ್ಸನಲ್ ಕ್ಯಾಪಿಟಲ್, ಮಿಂಟ್. ಕಾಮ್ ಮತ್ತು ವೈಎನ್ ಎಬಿ ಯಂತಹ ಕೆಲವೊಂದು ಆಪ್ ಗಳು ನೀವು ಮಾಡಿದಂತಹ ಖರ್ಚು ಮತ್ತು ವೆಚ್ಚಗಳ ಬಗ್ಗೆ ದಾಖಲೆ ಇಟ್ಟುಕೊಳ್ಳುವುದು. ಯಾವುದಕ್ಕೆ ಎಷ್ಟು ಖರ್ಚಾಗುತ್ತಿದೆ ಎಂದು ತಿಳಿದರೆ ಆಗ ನಿಮಗೆ ಖಂಡಿತವಾಗಿಯೂ ಜ್ಞಾನೋದಯವಾಗುವುದು. ಅನಗತ್ಯವಾಗಿ ಆಗುವಂತಹ ಖರ್ಚುಗಳ ಮೇಲೆ ನಿಗಾ ವಹಿಸಿ, ಅದನ್ನು ಕಡಿಮೆ ಮಾಡಬೇಕು. ಇದರಿಂದ ಕುಟುಂಬ ಆರ್ಥಿಕ ಗುರಿಗಳನ್ನು ಹೇಗೆ ಮುಟ್ಟುವುದು ಎಂದು ತಿಳಿದುಬರುವುದು.

2. ಅನಗತ್ಯವಾಗಿರುವುದನ್ನು ತೆಗೆದುಹಾಕಿ

2. ಅನಗತ್ಯವಾಗಿರುವುದನ್ನು ತೆಗೆದುಹಾಕಿ

ಹಣ ಎಲ್ಲಿ ಸೋರಿಹೋಗುತ್ತಿದೆ ಎಂದು ನಿಮಗೆ ಮನವರಿಕೆ ಆದ ಬಳಿಕ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಉದಾಹರಣೆಗೆ, ಜಿಮ್ ಗೆ ಹೋಗಿ ವ್ಯಾಯಾಮ ಮಾಡುವ ಬದಲು ಮನೆಯಲ್ಲೇ ಸ್ವಲ್ಪ ವ್ಯಾಯಾಮ ಅಥವಾ ಯೋಗ ಮಾಡಬಹುದು. ಬ್ಯೂಟಿ ಸಲೂನ್ ಗೆ ತಿಂಗಳಲ್ಲಿ ನಾಲ್ಕೈದು ಸಲ ಹೋಗುವ ಬದಲು ಒಂದೇ ಸಲ ಹೋಗಬಹುದು.

ಕೇಬಲ್, ಮ್ಯಾಗಜಿನ್ ಮತ್ತು ಡಿಜಿಟಲ್ ಸಬ್ ಸ್ಕ್ರಿಪ್ಶನ್ ಮತ್ತು ಯಾವಾಗಲೂ ಹೊರಗಡೆ ಹೋಗಿ ಊಟ ಮಾಡುವುದನ್ನು ನಿಲ್ಲಿಸಬಹುದು. ಕೆಲವನ್ನು ನೀವು ತೆಗೆಯಬಹುದು ಅಥವಾ ಮನೆಯವರಿಗೆ ಇದನ್ನು ತಗ್ಗಿಸುವ ಕೆಲಸ ನೀಡಬಹುದು. ತಕ್ಷಣವೇ ನಿಮ್ಮ ಖರ್ಚಿನಲ್ಲಿ ದೊಡ್ಡ ಮಟ್ಟಿನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ನಿಧಾನವಾಗಿ ನೀವು ಇದನ್ನು ಕಡಿಮೆ ಮಾಡುತ್ತಾ ಬರಬಹುದು ಮತ್ತು ಇದರಿಂದ ಕುಟುಂಬದವರಿಗೂ ಹೊಂದಿಕೊಳ್ಳಲು ಸಾಧ್ಯವಾಗುವುದು.

3. ಖರ್ಚಿಲ್ಲದ ಉಪವಾಸ ಮಾಡಿ

3. ಖರ್ಚಿಲ್ಲದ ಉಪವಾಸ ಮಾಡಿ

ಉದ್ಯೋಗಸ್ಥ ತಾಯಿ ಆಗಿರುವ ನೀವು ವಾರದಲ್ಲಿ ಅಥವಾ ದಿನದಲ್ಲಿ ಕೆಲವು ಸಲ ಅಂಗಡಿಗೆ ಹೋಗಬಹುದು. ಬೇಜಾರು ಆದಾಗ ಅಥವಾ ಅಗತ್ಯಕ್ಕೆಂದು ನೀವು ಅಂಗಡಿಗೆ ಹೋಗುತ್ತಲಿದ್ದರೆ ಆಗ ನೀವು ಖರ್ಚಿನ ಉಪವಾಸ ಮಾಡಬೇಕು. ಖರ್ಚಿನ ಉಪವಾಸವು ನಿಮ್ಮ ಖರ್ಚನ್ನು ತುಂಬಾ ಕಡಿಮೆ ಮಾಡಲಿದೆ ಮತ್ತು ಇದು ತುಂಬಾ ಪರಿಣಾಮಕಾರಿ ಕೂಡ. ಸ್ವಲ್ಪ ಸಮಯದ ತನಕ ಮನೆಯ ಎಲ್ಲಾ ಸದಸ್ಯರ ಖರ್ಚಿಗೆ ನಿಷೇಧ ಹೇರಿ. ಕೆಲವು ಜನರು ವಾರಗಳ ಕಾಲ ಯಾವುದೇ ಖರ್ಚು ಮಾಡದೆ ಇರುವರು ಮತ್ತು ಇದನ್ನು ತಿಂಗಳುಗಳಿಗೆ ವಿಸ್ತರಿಸುವರು. ಖರ್ಚಿನ ಉಪವಾಸವೆಂದರೆ ಆಗ ನೀವು ಸಂಪೂರ್ಣವಾಗಿ ಖರ್ಚು ಮಾಡದೆ ಇರಬಹುದು ಅಥವಾ ಕೆಲವು ಖರ್ಚುಗಳಿಗೆ ನಿರ್ಬಂಧ ಹೇರಬಹುದು. ಇದರಲ್ಲಿ ಮುಖ್ಯವಾಗಿ ಆಹಾರ ಮತ್ತು ಪೆಟ್ರೋಲ್ ಇತ್ಯಾದಿ. ಕುಟುಂಬದ ಅಗತ್ಯತೆ ಹಾಗೂ ಆರ್ಥಿಕ ಗುರಿಗೆ ಅನುಗುಣವಾಗಿ ಇದನ್ನು ಮಿತಿಗೊಳಿಸಬಹುದು.

ಎಚ್ಚರಿಕೆ: ಖರ್ಚಿಗೆ ಕಡಿವಾಣ ಹಾಕಿ ಹಣ ಉಳಿತಾಯ ಮಾಡಲು ಬಯಸುವವರಿಗೆ ಖರ್ಚಿನ ಉಪವಾಸವು ಒಂದು ಒಳ್ಳೆಯ ವಿಧಾನವಾಗಿದೆ. ಇದು ಎಲ್ಲರಿಗೂ ಸಾಧ್ಯವಾಗದು.

ಉದ್ಯೋಗಸ್ಥ ತಾಯಿಯಾಗಿರುವ ಕಾರಣದಿಂದಾಗಿ ನೀವು ಖರ್ಚಿನ ಉಪವಾಸದಲ್ಲಿ ಕೆಲವು ಸ್ಪಷ್ಟ ನಿಯಮಗಳನ್ನು ಮಾಡಬೇಕು ಮತ್ತು ಬೇಡದ ಖರ್ಚನ್ನು ನಿಯಂತ್ರಿಸಬೇಕು. ಯಾವ ವಿಭಾಗದಲ್ಲಿ ನೀವು ಹಣ ಖರ್ಚು ಮಾಡುವುದನ್ನು ನಿಲ್ಲಿಸಲು ಬಯಸುತ್ತೀರಿ ಮತ್ತು ಎಷ್ಟು ಅವಧಿಗೆ ಎನ್ನುವುದನ್ನು ಮೊದಲು ನಿರ್ಧಾರ ಮಾಡಿಕೊಳ್ಳಿ. ನಿರೀಕ್ಷೆಗಳನ್ನು ನೀವು ಬರೆದಿಟ್ಟುಕೊಳ್ಳಿ ಮತ್ತು ಯಾವ ತುರ್ತು ಸಂದರ್ಭ ಅಥವಾ ಕಾರಣಕ್ಕಾಗಿ ಈ ಉಪವಾಸ ಕೈಬಿಡಬಹುದು ಎಂದು ನಿರ್ಧರಿಸಿ.

4. ಬಿಲ್ ಗಳ ಬಗ್ಗೆ ಅವಲೋಕಿಸಿ

4. ಬಿಲ್ ಗಳ ಬಗ್ಗೆ ಅವಲೋಕಿಸಿ

ಮನೆಯ ಕಾವಲು ಅಲರಾಮ್ ವ್ಯವಸ್ಥೆಗಾಗಿ ತಿಂಗಳಿಗೆ ಸುಮಾರು ಐದು ಸಾವಿರ ತನಕ ಖರ್ಚಾಗುತ್ತಲಿತ್ತು. ಕೆಲವು ವರ್ಷಗಳ ಮೊದಲು ಇದನ್ನು ಆರಂಭಿಸಿದ ವೇಳೆ ಅದು ಕೇವಲ ಎರಡು ಸಾವಿರ ರೂಪಾಯಿ ಮಾತ್ರ ಇತ್ತು. ತಕ್ಷಣವೇ ನಾನು ಕಂಪೆನಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ ವೇಳೆ ಅವರು ವಾರ್ಷಿಕವಾಗಿ ಹೆಚ್ಚಾಗಿರುವ ಬಿಲ್ ನಿಂದ ಹೊರಗೆ ಬರಬಹುದು ಮತ್ತು ತಿಂಗಳಿಗೆ ಕೇವಲ 2 ಸಾವಿರ ಮಾತ್ರ ಕಟ್ಟಬಹುದು ಎಂದು ಹೇಳಿದರು. ಕೆಲವೊಂದು ಸಂದರ್ಭದಲ್ಲಿ ನಾವು ಕೇಬಲ್, ಮೊಬೈಲ್, ಇನ್ಸೂರೆನ್ಸ್ ಇತ್ಯಾದಿಗಳ ಬಿಲ್ ಗಳನ್ನು ಹಾಗೆ ಕಟ್ಟಿಬಿಡುತ್ತೇವೆ. ನಿಮಗೆ ಯಾವುದೇ ರಿಯಾಯಿತಿ ಲಭ್ಯವಿದೆಯಾ ಅಥವಾ ಪ್ರಮೋಷನ್ ಇದೆಯಾ ಎಂದು ಹೇಳಿನೋಡಿ. ನಿಷ್ಠಾವಂತ ಗ್ರಾಹಕರಿಗೆ ಕಂಪೆನಿಗಳು ಒಳ್ಳೆಯ ರಿಯಾಯಿತಿ ನೀಡುವುದು ಮತ್ತು ಇದರ ಬಗ್ಗೆ ಗ್ರಾಹಕರು ಸರಿಯಾಗಿ ತಿಳಿದುಕೊಳ್ಳಬೇಕು.

5. ಆನ್ ಲೈನ್ ನಲ್ಲಿ ಶಾಪಿಂಗ್

5. ಆನ್ ಲೈನ್ ನಲ್ಲಿ ಶಾಪಿಂಗ್

ನೀವು ಹಣ ಖರ್ಚಾಗುವುದನ್ನು ಕಡಿಮೆ ಮಾಡಬೇಕು ಎಂದಿದ್ದರೆ ಆಗ ನೀವು ಮೊದಲಿಗೆ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಬೇಕು. ನೀವು ಇಲ್ಲಿ ಹಣ ಖರ್ಚು ಮಾಡಿದರೂ ಆಗ ತುಂಬಾ ನಿಗದಿತ ಮತ್ತು ಲೆಕ್ಕಾಚಾರದ್ದಾಗಿರುವುದು. ಆನ್ ಲೈನ್ ನಲ್ಲಿ ನೀವು ಕೆಲವೊಂದು ಕೂಪನ್ ಗಳನ್ನು ಬಳಸಬಹುದು ಮತ್ತು ನಿಮ್ಮ ಬಜೆಟ್ ಮೀರದಂತೆ ತಡೆಯಬಹುದು. ನಿಮ್ಮ ಬಜೆಟ್ ಗಿಂತ ಹೆಚ್ಚು ಹಣವಾದರೆ ಆಗ ನೀವು ಬೇಸರ ಪಟ್ಟುಕೊಳ್ಳಬೇಕಾಗಿಲ್ಲ. ಯಾಕೆಂದರೆ ನೀವು ಇಲ್ಲಿ ಕೆಲವೊಂದು ವಸ್ತುಗಳನ್ನು ಕಡಿತ ಮಾಡಿ ನಿಮ್ಮ ಬಜೆಟ್ ಗೆ ಸರಿಹೊಂದಿಸಬಹುದು. ಮನೆ ಸಾಮಾನು ಖರೀದಿ ಮಾಡಲು ಇದು ತುಂಬಾ ಒಳ್ಳೆಯ ವಿಧಾನ. ನೀವು ಹೆಚ್ಚಾಗಿ ಆನ್ ಲೈನ್ ನಲ್ಲಿ ಆಹಾರ ತರಿಸಿಕೊಳ್ಳುತ್ತಿದ್ದರೆ ಆಗ ನೀವು ಆಹಾರ ಸರಬರಾಜು ಸೇವೆಗಳ ಬಗ್ಗೆ ನೋಡಿ. ಇದು ನಿಮ್ಮ ಹಣ ಮಾತ್ರವಲ್ಲದೆ, ಸಮಯ ಕೂಡ ಉಳಿತಾಯ ಮಾಡುವುದು. ನಿಮ್ಮ ಮನೆ ಬಾಗಿಲಿಗೆ ಆಹಾರವು ಬಂದು ತಲುಪುವುದು. ಇದರಿಂದ ರೆಸ್ಟೋರೆಂಟ್ ಗೆ ಹೋಗುವುದು ಮತ್ತು ಅಲ್ಲಿ ಮೆನು ಕಾರ್ಡ್ ನಲ್ಲಿ ಇರುವ ಕೆಲವನ್ನು ಆರ್ಡರ್ ಮಾಡುವುದು ತಪ್ಪುವುದು.

6. ಕ್ರೆಡಿಟ್ ಕಾರ್ಡ್ ರಿವಾರ್ಡ್ ಬಳಸಿ

6. ಕ್ರೆಡಿಟ್ ಕಾರ್ಡ್ ರಿವಾರ್ಡ್ ಬಳಸಿ

ಉದ್ಯೋಗಸ್ಥ ಮಹಿಳೆಯು ತುಂಬಾ ವ್ಯಸ್ತವಾಗಿ ಇರುವಳು. ಹೀಗಾಗಿ ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿರಬಹುದು. ಇಂತಹ ಸಮಯದಲ್ಲಿ ನೀವು ಕ್ರೆಡಿಟ್ ಕಾರ್ಡ್ ನ ರಿವಾರ್ಡ್ ಗಳನ್ನು ಬಳಕೆ ಮಾಡುವುದನ್ನು ಕಲಿಯಬೇಕು. ನೀವು ಖರ್ಚಿನ ಲೆಕ್ಕಾಚಾರಗಳನ್ನು ನೋಡಿದ್ದರೆ ಆಗ ನೀವು ಖಂಡಿತವಾಗಿಯೂ ಇದರ ಬಗ್ಗೆ ಆಲೋಚನೆ ಮಾಡಿ ಮತ್ತು ಕೆಲವೊಂದು ವಿಭಾಗದಲ್ಲಿ ಹೆಚ್ಚು ಹಣ ವ್ಯಯ ಮಾಡಿದರೆ ಆಗ ರಿವಾರ್ಡ್ ಸಿಗುವುದು. ಆಹಾರ ಸಾಮಗ್ರಿ, ಇಂಧನ ಮತ್ತು ರೆಸ್ಟೋರೆಂಟ್ ನಲ್ಲಿ ಖರ್ಚು ಮಾಡುವುದಕ್ಕೆ ಕೆಲವೊಂದು ಕ್ರೆಡಿಟ್ ಕಾರ್ಡ್ ಗಳಲ್ಲಿ ಹೆಚ್ಚು ರಿವಾರ್ಡ್ ನೀಡಲಾಗುತ್ತದೆ. ನೀವು ಯಾವ ವಿಭಾಗದಲ್ಲಿ ಹಣ ಖರ್ಚು ಮಾಡುತ್ತಿದ್ದೀರಿ ಎಂದು ತಿಳಿದು ಅದರಿಂದ ಬರುವಂತಹ ರಿವಾರ್ಡ್ ಗಳನ್ನು ನೀವು ಪಡೆದುಕೊಳ್ಳಬಹುದು. ಇದಕ್ಕಾಗಿ ನಾವು ನಿಮಗೆ ಕೆಲವೊಂದು ವಿಭಾಗಗಳನ್ನು ಸೂಚಿಸಲಿದ್ದೇವೆ.

* ಆಹಾರ ಸಾಮಗ್ರಿಗಳು

* ಗ್ಯಾಸ್, ಆನ್ ಲೈನ್ ಶಾಪಿಂಗ್, ಪ್ರವಾಸ, ಮೆಡಿಕಲ್ ಅಥವಾ ಮನೆ ರಿಪೇರಿ ಖರ್ಚಿಗೆ ಇದನ್ನು ಬಳಕೆ ಮಾಡಬಹುದು.

* ವಾಹನ ಇಂಧನ ಖರ್ಚು: ಕೆಲವೊಂದು ಕಾರ್ಡ್ ಗಳಲ್ಲಿ ಇಂಧನಕ್ಕಾಗಿ ಹಣ ವ್ಯಯಿಸಿದರೆ ಆಗ ನಿಮಗೆ ಶೇ. 1 ಅಥವಾ 2ರಷ್ಟು ನಗದು ವಾಪಸಾತಿ ಸಿಗುವುದು.

* ರೆಸ್ಟೋರೆಂಟ್ ನಲ್ಲಿ ಊಟ: ಕೆಲವೊಂದು ಕಾರ್ಡ್ ಗಳಲ್ಲಿ ಹೊರಗಡೆ ಊಟ ಮಾಡುವುದಕ್ಕೆ ಮತ್ತು ಸಿನಿಮಾ ನೋಡಲು ಶೇ.4ರಷ್ಟು ನಗದು ವಾಪಸಾತಿ ಸಿಗುವುದು. ಶೇ.2ರಷ್ಟು ಆಹಾರ ಸಾಮಗ್ರಿ ಖರೀದಿ ಮತ್ತು ಶೇ.1ರಷ್ಟು ಇತರ ಖರ್ಚಿಗೆ ಸಿಗುವುದು.

7. ಆಪ್ಸ್ ಮತ್ತು ಡಿಸ್ಕೌಂಟ್ ಸೈಟ್ ಗಳು

7. ಆಪ್ಸ್ ಮತ್ತು ಡಿಸ್ಕೌಂಟ್ ಸೈಟ್ ಗಳು

ನೀವು ಆನ್ ಲೈನ್ ಅಥವಾ ಅಂಗಡಿಗೆ ಹೋಗಿ ಖರೀದಿ ಮಾಡುತ್ತಲಿದ್ದರೆ ಆಗ ನೀವು ಕೆಲವೊಂದು ಆಪ್ ಗಳನ್ನು ಬಳಕೆ ಮಾಡುವುದು ತುಂಬಾ ಒಳ್ಳೆಯದು. ಕೆಲವೊಂದು ಸಲ ವಿಶೇಷ ರಿಯಾಯಿತಿ ಮತ್ತು ಕೂಪನ್ ಗಳು ನಿಮಗೆ ಆಪ್ ಮೂಲಕ ಸಿಗುವುದು. ಇದರಿಂದ ನೀವು ಆನ್ ಲೈನ್ ಅಥವಾ ಅಂಗಡಿಯಲ್ಲಿ ಖರೀದಿ ಮಾಡಿದರೆ ಅದರಿಂದ ಖರ್ಚು ಕಡಿಮೆ ಮಾಡಬಹುದು. ಇದಕ್ಕಾಗಿ ನೀವು ಕೆಲವೊಂದು ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಕ್ಯಾಶ್ ಬ್ಯಾಕ್ ಅಥವಾ ಕೂಪನ್ ಸಿಗುವುದು. ಆನ್ ಲೈನ್ ನಲ್ಲಿ ಖರೀದಿ ಮಾಡಿದರೂ ಅದರಲ್ಲಿ ಕೆಲವೊಂದು ಕೂಪನ್ ಹಾಗೂ ಕ್ಯಾಶ್ ಬ್ಯಾಕ್ ಸಿಗುವುದು.

English summary

Easy Ways To Save Money As A Working Mom

Saving money as a working mom can seem difficult or just near impossible. But, it’s doable if you break it into small chunks. Here are 7 ways you can save as a working mom. A working mom can bring extra income to the table but at what cost? The average working mom can still save money on working-mom expense, even with a hectic, busy lifestyle. Between daycare, frequent dining out, dry cleaning, and other services you might hire out, you can end up shelling out a lot of cash for the sake of your career.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X