For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ: 23 ಮೇ 2020

|

ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ವಾನರ ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆ ಎಂದು ಹನುಮಂತನನ್ನು ಪೂಜಿಸಲಾಗುತ್ತದೆ. ವಾನದ ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ. ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಸಂವತ್ಸರ: ಶಾರ್ವರಿ

ಆಯನ: ಉತ್ತರಾಯನ

ಋತು: ಗ್ರೀಷ್ಮ

ಮಾಸ: ವಸಂತ

ಪಕ್ಷ: ಶುಕ್ಲ

ತಿಥಿ: ಪ್ರತಿಪಾದ

ನಕ್ಷತ್ರ: ರೋಹಿಣಿ

ರಾಹುಕಾಲ: ಬೆಳಿಗ್ಗೆ 8.52 ರಿಂದ 10.35 ರವರೆಗೆ

ಗುಳಿಕಕಾಲ: ಬೆಳಿಗ್ಗೆ 5.26 ರಿಂದ 7.09 ರವರೆಗೆ

ಯಮಗಂಡಕಾಲ: ಮಧ್ಯಾಹ್ನ 2.01 ರಿಂದ 3.44 ರವರೆಗೆ

ದುರ್ಮುಹೂರ್ತ: ಬೆಳಿಗ್ಗೆ 5.26 ರಿಂದ 6.21 ರವರೆಗೆ

ಸೂರ್ಯೋದಯ: ಬೆಳಿಗ್ಗೆ 5.26

ಸೂರ್ಯಾಸ್ತ: ಸಂಜೆ 7.10

ಮೇಷ ರಾಶಿ

ಮೇಷ ರಾಶಿ

ಇಂದು ನೀವು ಕೆಟ್ಟ ಮನಃಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮ ಕಠಿಣ ವರ್ತನೆಯು ನಿಮ್ಮ ಮಕ್ಕಳಿಗೆ ಇಷ್ಟವಾಗದು. ಮಕ್ಕಳು ಯಾವುದಾದರೂ ವಸ್ತು ಅಥವಾ ವಿಷಯಕ್ಕೆ ಹಠವನ್ನು ಮಾಡುತ್ತಿದ್ದರೆ ನೀವು ಅದರ ಬಗ್ಗೆ ಸಮಾಧಾನದಿಂದಲೇ ಸಂತೈಸಿ. ವೈವಾಹಿಕ ಜೀವನದಲ್ಲೂ ಸಮಸ್ಯೆಗಳು ಎದುರಾಗುತ್ತವೆ. ಒಂದಿಷ್ಟು ಬೇಸರವು ನಿಮ್ಮನ್ನು ಕಾಡಬಹುದು. ಸಂಬಂಧಗಳಲ್ಲಿ ಉಂಟಾಗುವ ಮೌನ ತಪ್ಪು ಗ್ರಹಿಕೆಯನ್ನು ಮೂಡಿಸಬಹುದು. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಮಿಶ್ರ ಫಲವನ್ನು ಪಡೆದುಕೊಳ್ಳುವಿರಿ. ಇಂದು ನಿಮ್ಮ ಸ್ನೇಹಿತರು ಉತ್ತಮ ಸಹಾಯ ಮಾಡುವರು. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಇರುವಾಗಲೂ ನಿಮ್ಮ ಸಂಗಾತಿಗೆ ಸಂಪೂರ್ಣ ಬೆಂಬಲ ನೀಡುವಿರಿ. ಆದಷ್ಟು ಒತ್ತಡದಿಂದ ಮುಕ್ತರಾಗಿರಲು ಪ್ರಯತ್ನಿಸಿ. ಆಗ ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಕ್ರೀಮ್

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಸಂಜೆ 7:00 - ರಾತ್ರಿ 9:00

ವೃಷಭ ರಾಶಿ

ವೃಷಭ ರಾಶಿ

ಹಣಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಉತ್ತಮವಾದ ದಿನವಲ್ಲ. ಅನಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚು ಹಣವನ್ನು ವ್ಯಯಿಸದಿರಿ. ನಿಮ್ಮ ಬಜೆಟ್ ಗೆ ಅನುಗುಣವಾಗಿ ಖರ್ಚು ಮಾಡುವುದು ಉತ್ತಮ. ನೀವು ನಿಮ್ಮ ಭಾವನೆಗಳ ಮೇಲೆ ಉತ್ತಮ ಹಿಡಿತವನ್ನು ಹೊಂದಿರಬೇಕು. ಅತಿಯಾಗಿ ಭಾವುಕರಾಗದಿರಿ. ಅನಗತ್ಯ ಉದ್ವೇಗದಿಂದ ಸಮಯ ವ್ಯರ್ಥವಾಗಬಹುದು. ಅದು ನಿಮ್ಮ ಶಕ್ತಿ ಮತ್ತು ಸಮಯವನ್ನು ಹಾಳುಮಾಡುವುದು. ಪ್ರೀತಿಗೆ ಸಂಬಂಧಿಸಿದಂತೆ ದಿನವು ಅತ್ಯುತ್ತಮವಾಗಿ ಇರುತ್ತದೆ. ಸಂಗಾತಿಯೊಂದಿಗೆ ಮುಂಬತ್ತಿ ಭೋಜನ ಮಾಡುವ ಸಾಧ್ಯತೆಗಳಿವೆ. ಕೆಲವು ಸ್ಮರಣೀಯ ಸಮಯವನ್ನು ಪಡೆದುಕೊಳ್ಳುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 29

ಅದೃಷ್ಟ ಸಮಯ: ಸಂಜೆ 4:00 - ಸಂಜೆ 6:45

ಮಿಥುನ ರಾಶಿ

ಮಿಥುನ ರಾಶಿ

ಇಂದು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ನೀವು ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದು ಬಯಸುತ್ತೀರಿ ಎಂದಾದರೆ ಮೊದಲು ಸಿಗರೇಟ್ ಮತ್ತು ಆಲ್ಕೋಹಾಲ್ ಮುಂತಾದವುಗಳಿಂದ ದೂರವಿರಿ. ಏಕೆಂದರೆ ಅವು ನಿಮ್ಮ ನೆಮ್ಮದಿ ಹಾಗೂ ಆರೋಗ್ಯ ಎರಡನ್ನು ಕಸಿದುಕೊಳ್ಳುತ್ತವೆ. ನೀವು ತೋರುವ ಶ್ರಮಕ್ಕೆ ಇಂದು ಉತ್ತಮ ಲಾಭ ದೊರೆಯುವುದು. ಅಧಿಕ ಹಣ ಗಳಿಸುವಲ್ಲಿಯೂ ಸಫಲರಾಗುವಿರಿ. ನೀವು ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ಯೋಜನೆಯನ್ನು ಮುಂದುವರಿಸಲು ಶುಭ ದಿನವಾಗಿರುತ್ತದೆ. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ದಿನದ ಎರಡನೇ ಭಾಗದಲ್ಲಿ ನೀವು ಒಬ್ಬ ಪ್ರಮುಖ ವ್ಯಕ್ತಿಯನ್ನು ಭೇಟಿಯಾಗಬಹುದು. ಆದರೆ ಮಾತನಾಡುವಾಗ ನಿಮ್ಮ ಮಾತಿನಲ್ಲಿ ಹಿಡಿತ ಇರಲಿ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಮಧ್ಯಾಹ್ನ 2:00 - ಮಧ್ಯಾಹ್ನ 3:25

ಕರ್ಕ ರಾಶಿ

ಕರ್ಕ ರಾಶಿ

ನೀವು ಕೆಲಸದ ಸ್ಥಳದಲ್ಲಿ ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಹೋದ್ಯೋಗಿಗಳಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ನಿಮಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಾರೆ. ಅವರುನಿಮ್ಮ ಸಹಿಷ್ಣುತೆಯನ್ನು ಪರೀಕ್ಷಿಸಬಹುದು. ಅಂತಹ ಜನರೊಂದಿಗೆ ವ್ಯವಹರಿಸುವಾಗ ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ನೀವು ಉದ್ಯಮಿಗಳಾಗಿದ್ದರೆ ಪಾಲುದಾರಿಕೆ ವ್ಯವಹಾರ ಉತ್ತಮ ಪ್ರಯೋಜನಗಳನ್ನು ತಂದುಕೊಡುವುದು. ಕುಟುಂಬ ಜೀವನದಲ್ಲಿ ಸ್ವಲ್ಪ ಸಂಘರ್ಷ ಉಂಟಾಗುತ್ತದೆ. ಮನೆಯ ಸದಸ್ಯರ ನಡುವೆ ಪರಸ್ಪರ ಹೊಂದಾಣಿಕೆ ಕ್ಷೀಣಿಸುವುದು. ಅದರಿಂದ ಜಗಳವಾಗಬಹುದು. ವಿದ್ಯಾರ್ಥಿಗಳು ಇಂದು ಅಧ್ಯಯನದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅಧ್ಯಯನಗಳತ್ತ ಗಮನಹರಿಸಲು ಧ್ಯಾನ ಮಾಡಿ. ಆರ್ಥಿಕ ರಂಗದಲ್ಲಿ ದಿನವು ಶುಭವಲ್ಲ. ಹಣಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ನಿರ್ಧಾರ ಕೈಗೊಳ್ಳುವುದು ಉತ್ತಮ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 3

ಅದೃಷ್ಟ ಸಮಯ: ಬೆಳಿಗ್ಗೆ 9:45 - ಮಧ್ಯಾಹ್ನ 12:45

ಸಿಂಹ ರಾಶಿ

ಸಿಂಹ ರಾಶಿ

ದಿನವು ಉತ್ತಮವಾಗಿರುತ್ತದೆ. ನೀವು ಸಂತೋಷವನ್ನು ಅನುಭವಿಸುತ್ತೀರಿ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಮತ್ತು ನಿಮ್ಮ ಸಂಗಾತಿಯ ಉತ್ತಮ ಆವೃತ್ತಿಯನ್ನು ನೀವು ನೋಡಬಹುದು. ಆರ್ಥಿಕ ರಂಗದಲ್ಲಿ ಉತ್ತಮ ದಿನವನ್ನು ನಿರೀಕ್ಷಿಸಬಹುದು. ದೀರ್ಘಕಾಲದಿಂದ ಸಿಲುಕಿಕೊಂಡಿದ್ದ ಹಣವನ್ನು ನೀವು ಮರಳಿ ಪಡೆಯುತ್ತೀರಿ. ಅದು ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಅಲ್ಲದೆ ನೀವು ಕೆಲವು ಹೊಸ ಮೂಲಗಳಿಂದ ಹಣವನ್ನು ಸಂಪಾದಿಸಬಹುದು. ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳು ಸಹ ಕಾಯುತ್ತಿವೆ. ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಇಂದು ಕಾಣಬಹುದು. ಪ್ರಣಯ ಜೀವನದಲ್ಲಿ ಎಲ್ಲವೂ ಸಾಮಾನ್ಯವಾಗಲಿದೆ. ನಿಮ್ಮ ಸಂಗಾತಿಯನ್ನು ಭೇಟಿಯಾಗಲು ಹೋಗಬಹುದು. ಶತ್ರುಗಳ ಕಡೆಯವರು ಇಂದು ಸಕ್ರಿಯರಾಗುತ್ತಾರೆ. ಆದ್ದರಿಂದ ಜಾಗರೂಕರಾಗಿರಿ. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮವಾಗುತ್ತೀರಿ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಸಂಜೆ 6:00 - ರಾತ್ರಿ 8:45

ಕನ್ಯಾ ರಾಶಿ

ಕನ್ಯಾ ರಾಶಿ

ವೈವಾಹಿಕ ಜೀವನದಲ್ಲಿ ಸಂಘರ್ಷ ಉಂಟಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸರಳ ಚರ್ಚೆಯು ದೊಡ್ಡ ಹೋರಾಟವಾಗಿ ಬದಲಾಗಬಹುದು. ಅಲ್ಲದೆ ಅವರ ಅಸಭ್ಯ ವರ್ತನೆ ನಿಮ್ಮನ್ನು ಕಾಡಬಹುದು. ನಿಮ್ಮ ಅಮೂಲ್ಯ ಸಮಯವನ್ನು ಹಗಲುಗನಸಿಗೆ ವ್ಯರ್ಥ ಮಾಡದಿರಿ. ನಿಮಗೆ ಅನುಕೂಲವಾಗುವಂತಹದನ್ನು ಮಾಡಲು ಪ್ರಯತ್ನಿಸಿ. ಇಂದು ನಿಮ್ಮ ಬಾಸ್ ಬೈಯ್ಯಬಹುದು. ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ. ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ. ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಸಂಜೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಮೂಲಕ ನಿಮ್ಮ ಸಂತೋಷ ಹೆಚ್ಚಾಗುತ್ತದೆ. ಕುಟುಂಬದ ಬಗ್ಗೆ ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ಪ್ರಯತ್ನಿಸಿ. ಆರೋಗ್ಯ ಇಂದು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಸಂಜೆ 5:30 - ರಾತ್ರಿ 9:00

ತುಲಾ ರಾಶಿ

ತುಲಾ ರಾಶಿ

ಕೆಲಸದ ವಿಷಯದಲ್ಲಿ ಇಂದು ಅದ್ಭುತ ದಿನ. ಕಚೇರಿಯಲ್ಲಿ ನಿಮ್ಮ ಕೆಲಸವು ಹೆಚ್ಚು ಮೆಚ್ಚುಗೆ ಪಡೆಯುತ್ತದೆ. ಉನ್ನತ ಸ್ಥಾನವನ್ನು ಪಡೆಯುವ ನಿಮ್ಮ ಬಯಕೆ ಈಡೇರುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ದಿನವು ಲಾಭದಾಯಕವಾಗಿರುತ್ತದೆ. ಸ್ವಾರ್ಥಿ ಜನರಿಂದ ದೂರವಿರಿ. ನಿಮ್ಮ ಸುತ್ತ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ಇರಿಸಿ. ನಿಮ್ಮ ಹಣವನ್ನು ಉಳಿಸಲು ನಿಮಗೆ ಸಾಧ್ಯವಾಗುವುದರಿಂದ ಹಣಕಾಸಿನ ಮುಂಭಾಗದಲ್ಲಿ ಉತ್ತಮ ದಿನ. ನೀವು ಇಂದು ನಿಮ್ಮ ಸಂಗಾತಿಗೆ ಸುಳ್ಳು ಹೇಳಿದರೆ ಅದು ಅವರ ಭಾವನೆಗಳನ್ನು ಘಾಸಿಗೊಳಿಸಬಹುದು. ನಿಮ್ಮ ಮಾತುಗಳನ್ನು ಬಹಿರಂಗವಾಗಿ ಮತ್ತು ಸ್ಪಷ್ಟವಾಗಿ ಹೇಳಲು ಪ್ರಯತ್ನಿಸಿ. ಆರೋಗ್ಯ ಇಂದು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಆಳವಾದ ಕೆಂಪು

ಅದೃಷ್ಟ ಸಂಖ್ಯೆ: 21

ಅದೃಷ್ಟ ಸಮಯ: ಸಂಜೆ 5:15 - ಸಂಜೆ 6:45

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಕೆಲಸದ ವಿಷಯದಲ್ಲಿ ಅದೃಷ್ಟವು ಇಂದು ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಇತರರಿಗೆ ಬದಲಾವಣೆಗಳನ್ನು ಸೂಚಿಸುವ ಮೊದಲು ನೀವು ನಿಮ್ಮನ್ನು ಬದಲಾಯಿಸಿಕೊಳ್ಳಬೇಕು. ನಿಮ್ಮ ಕುತಂತ್ರ ವರ್ತನೆ ನಿಮ್ಮ ಪ್ರೀತಿಪಾತ್ರರಿಂದ ನಿಮ್ಮನ್ನು ದೂರವಿರಿಸುತ್ತದೆ. ನಿಮ್ಮ ಬಾಯಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ನಿಮ್ಮ ಆಪ್ತ ಸ್ನೇಹಿತನ ಭಾವನೆಗಳನ್ನು ನೀವು ಅಜಾಗರೂಕತೆಯಿಂದ ನೋಯಿಸಬಹುದು. ನಿಮ್ಮ ಸಂಗಾತಿಯ ಅನಾರೋಗ್ಯ ನಿಮ್ಮ ಆತಂಕವನ್ನು ಹೆಚ್ಚಿಸುತ್ತದೆ. ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಯೋಚಿಸದೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ರಾತ್ರಿ 10:45 - ಮಧ್ಯಾಹ್ನ 12:25

ಧನು ರಾಶಿ

ಧನು ರಾಶಿ

ನಿಮ್ಮ ಸಂಗಾತಿಯೊಂದಿಗೆ ನೀವು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತೀರಿ. ನಿಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ದಿನವನ್ನು ಕಳೆಯುತ್ತೀರಿ. ಪ್ರೀತಿಯ ವಿಷಯಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ನೀವು ನಿಮ್ಮ ಸಂಗಾತಿಗೆ ಭರವಸೆ ನೀಡಬಹುದು. ಆರೋಗ್ಯವಾಗಿರಲು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತೂಕವನ್ನು ನಿಯಂತ್ರಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು. ಆರ್ಥಿಕ ಪರಿಸ್ಥಿತಿ

ಸದೃಢವಾಗಿ ಉಳಿಯುತ್ತದೆ. ಇಂದು ನೀವು ಶಾಪಿಂಗ್ ಮತ್ತು ಇತರ ಹೊರಾಂಗಣ ಚಟುವಟಿಕೆಗಳಲ್ಲಿ ನಿರತರಾಗಿರಬಹುದು. ನಿಮ್ಮ ಕೆಲವು ಪ್ರಮುಖ ಸಮಸ್ಯೆಗಳನ್ನು ಇಂದು ಪರಿಹರಿಸುವ ಸಾಧ್ಯತೆಯಿದೆ ಮತ್ತು ನೀವು ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ. ಕಚೇರಿಯಲ್ಲಿ ಅಡಗಿರುವ ಶತ್ರುಗಳು ನಿಮ್ಮ ಕೆಲಸವನ್ನು ತಡೆಯಲು ಪ್ರಯತ್ನಿಸಬಹುದು. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಇಂದು ನೀವು ಕೆಲವು ನಿರ್ಗತಿಕ ಜನರಿಗೆ ಸಹಾಯ ಮಾಡಬಹುದು.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 14

ಅದೃಷ್ಟ ಸಮಯ: ಸಂಜೆ 5:00 - ಸಂಜೆ 7:20

ಮಕರ ರಾಶಿ

ಮಕರ ರಾಶಿ

ಪ್ರಮುಖ ಸಹೋದ್ಯೋಗಿಯನ್ನು ಭೇಟಿಯಾಗುವುದು ತುಂಬಾ ಪ್ರಯೋಜನಕಾರಿ ಎಂದು ನಿಮಗೆ ಸಾಬೀತು ಆಗುತ್ತದೆ. ನೀವು ಅಂಟಿಕೊಂಡಿರುವ ಕೆಲವು ಕೆಲಸಗಳನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ. ಉದ್ಯಮಿಗಳು ಯಾವುದೇ ದೊಡ್ಡ ಹೂಡಿಕೆ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಉತ್ತಮ. ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ತಪ್ಪು ಎಂದು ಸಾಬೀತಾಗುತ್ತದೆ. ಇಂದು ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚು ಇರುತ್ತದೆ. ಆದರೆ ನಿಮ್ಮ ಸಕಾರಾತ್ಮಕ ಚಿಂತನೆ ಮತ್ತು ಸಮರ್ಪಣೆ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಇಂದು ನೀವು ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಮಯ ಕಳೆಯಲು ಪ್ರವಾಸ ಕೈಗೊಳ್ಳಬಹುದು. ಮೋಜಿನ ಚಟುವಟಿಕೆಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಯಾವುದೇ ರೀತಿಯ ಉದ್ವೇಗ ಅಥವಾ ಜಗಳಗಳಿಂದ ದೂರವಿರಿ. ಶಾಂತಿಯುತವಾದ ದಿನವನ್ನು ಕಳೆಯಿರಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 32

ಅದೃಷ್ಟ ಸಮಯ: ರಾತ್ರಿ 11:00 - ಮಧ್ಯಾಹ್ನ 2:30

 ಕುಂಭ ರಾಶಿ

ಕುಂಭ ರಾಶಿ

ವಿವಾಹಿತ ದಂಪತಿಗಳಿಗೆ ದಿನ ಶುಭ. ಇಂದು ನೀವು ವಿಭಿನ್ನ ರೀತಿಯ ಪ್ರೀತಿಯನ್ನು ಅನುಭವಿಸುವಿರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಪ್ರಣಯ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಬಹುದು. ಬಹುಶಃ ಇಂದು ಕುಟುಂಬದ ಅನುಮೋದನೆಯನ್ನು ಪಡೆಯುತ್ತೀರಿ. ಆರೋಗ್ಯ ದೃಷ್ಟಿಕೋನದಿಂದ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು. ವಿಶೇಷವಾಗಿ ನೀವು ಮೈಗ್ರೇನ್ ಹೊಂದಿದ್ದರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಂದು ಉತ್ತಮ ದಿನ. ಉದ್ಯಮಿಗಳು ಇದ್ದಕ್ಕಿದ್ದಂತೆ ಕೆಲವು ದೊಡ್ಡ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನೌಕರರು ಸಾಮಾನ್ಯ ದಿನವನ್ನು ಹೊಂದಿರುತ್ತಾರೆ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 3

ಅದೃಷ್ಟ ಸಮಯ: ಸಂಜೆ 6:00 - ರಾತ್ರಿ 9:20

ಮೀನ ರಾಶಿ

ಮೀನ ರಾಶಿ

ನಿಮ್ಮ ಸಹೋದ್ಯೋಗಿಗಳೊಂದಿಗೆ ಸಣ್ಣ ಕಲಹಗಳು ಉಂಟಾಗಬಹುದು. ನಿಮ್ಮ ಮೇಲೆ ಸಲ್ಲದ ಅಪವಾದ ಬರುವ ಸಾಧ್ಯತೆಗಳಿವೆ. ಹಾಗಾಗಿ ಆದಷ್ಟು ಜಾಗರೂಕತೆಯಿಂದ ಇರಬೇಕು. ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ಗಮನಹರಿಸುವುದು ಉತ್ತಮ. ನಿಮ್ಮ ಆಲೋಚನೆಗಳನ್ನು ಆಶಾವಾದಿಯಾಗಿರಿಸಿಕೊಳ್ಳಿ. ಯಶಸ್ಸಿನತ್ತ ಸಾಗಲು ನಿಮ್ಮನ್ನು ಪ್ರೇರೇಪಿಸಿ. ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯ ಸಾಧ್ಯತೆಯಿದೆ. ಆದರೆ ನೀವು ಇತರರನ್ನು ಮೆಚ್ಚಿಸಲು ಹೆಚ್ಚು ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದರೆ ನಿಮ್ಮ ಬಜೆಟ್ ಬಹುಬೇಗ ಖಾಲಿಯಾಗುವುದು. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುವುದು. ಇಂದು ಸಂಗಾತಿಯೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಪ್ರಣಯದ ಕ್ಷಣಗಳನ್ನು ಕಳೆಯುವ ಅವಕಾಶ ಪಡೆದುಕೊಳ್ಳುವಿರಿ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 17

ಅದೃಷ್ಟ ಸಮಯ: ಬೆಳಿಗ್ಗೆ 7:30 - ಮಧ್ಯಾಹ್ನ 3:00

English summary

Dina Bhavishya 23 May 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, May 23, 2020, 4:00 [IST]
X