For Quick Alerts
ALLOW NOTIFICATIONS  
For Daily Alerts

ಮಂಗಳವಾರದ ದಿನ ಭವಿಷ್ಯ (15-10-2019)

|
Astrology 15/10/2019 : 12 ರಾಶಿಚಕ್ರಗಳ ದಿನ ಭವಿಷ್ಯ | BoldSky Kannada

ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ.

ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

ಮೇಷ:21 ಮಾರ್ಚ್ 19 ಏಪ್ರಿಲ್

ಮೇಷ:21 ಮಾರ್ಚ್ 19 ಏಪ್ರಿಲ್

ಭವಿಷ್ಯದ ಯೋಜನೆಯ ಬಗ್ಗೆ ಹೆಚ್ಚು ಚಿಂತಿಸುವಿರಿ. ಅದರ ಬಗ್ಗೆಯೇ ಹೆಚ್ಚು ಕ್ರಿಯಾಶೀಲರಾಗಿರುತ್ತೀರಿ. ಈ ನಿಟ್ಟಿನಲ್ಲಿಯೇ ದಿನ ಪೂರ್ತಿ ಹೆಚ್ಚು ಕಾರ್ಯನಿರತರಾಗಿರುತ್ತೀರಿ. ಸಂಗಾತಿಯೊಂದಿಗಿನ ಸಣ್ಣ ವೈಮನಸ್ಸು ನಿಮಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೆತ್ತವರ ಆರೋಗ್ಯ ಹಾಳಾಗಬಹುದು. ಪರಿಸ್ಥಿತಿಯನ್ನು ಸಮನ್ವಯಗೊಳಿಸಲು ಶಾಂತ ಮತ್ತು ತಾಳ್ಮೆಯಿಂದ ಇರುವುದು ಉತ್ತಮ. ಕೆಲಸದ ವಿಷಯದಲ್ಲಿ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಕೆಲವು ನಡವಳಿಕೆಯನ್ನು ಇಷ್ಟಪಡದೆ ಇರಬಹುದು. ತಂಡದ ಸದಸ್ಯರು ವೈಯಕ್ತಿಕವಾಗಿ ನಿಮ್ಮನ್ನು ಬೆಂಬಲಿಸುವರು. ನಿಮ್ಮ ಸಂಗಾತಿಯು ದಿನಚರಿಯೊಂದಿಗೆ ಹೊಂದಿಕೊಳ್ಳದ ಕಾರಣ ಕುಟುಂಬದಲ್ಲಿ ತೊಂದರೆ ಉಂಟಾಗಬಹುದು. ಹಣಕಾಸಿಗೆ ಸಂಬಂಧಿಸಿದಂತೆ ಉತ್ತಮವಾದ ದಿನ ಎನ್ನಬಹುದು. ನಿಮ್ಮ ನಿರ್ಬಂಧಿತ ಹಣವನ್ನು ನೀವು ಇಂದು ಪಡೆದುಕೊಳ್ಳಬಹುದು. ದಿನದ ಅಂತ್ಯದ ವೇಳೆಗೆ ಆಲಸ್ಯದ ಅನುಭವವನ್ನು ಹೊಂದಬಹುದು. ದೇಹದಲ್ಲಿ ಉತ್ತಮ ನೀರಿನಂಶ ಇರಲು ಹೆಚ್ಚು ನೀರನ್ನು ಕುಡಿಯಿರಿ. ಅದೃಷ್ಟ ಬಣ್ಣ: ತುಕ್ಕು

ಅದೃಷ್ಟ ಸಂಖ್ಯೆ: 27

ಅದೃಷ್ಟ ಸಮಯ: ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 12:30 ರವರೆಗೆ

ವೃಷಭ ರಾಶಿ: 20 ಏಪ್ರಿಲ್ - 20 ಮೇ

ವೃಷಭ ರಾಶಿ: 20 ಏಪ್ರಿಲ್ - 20 ಮೇ

ಬಹುತೇಕ ಮಂದಿಯು ಮಧ್ಯಾಹ್ನದ ಹೊತ್ತಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳುವರು. ನಿಮಗೆ ನಿಮ್ಮ ಕೆಲಸ ಕಾರ್ಯಗಳನ್ನು ಪೂರೈಸಲು ಅನುಕೂಲವಾಗುತ್ತದೆ. ಅನುಭವಸ್ತರಿಂದ ನೀವು ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಯನ್ನು ಪಡೆದುಕೊಳ್ಳುವುದರಿಂದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಕರ್ಪೋರೇಟ್ ವಲಯದಲ್ಲಿ ಕೆಲಸ ನಿರ್ವಹಿಸುವವರಿಗೆ ಇಂದು ಕೊಂಚ ಕಷ್ಟದ ದಿನ ಎನ್ನಬಹುದು. ಹೊಸ ಕೆಲಸವನ್ನು ಹಾಗೂ ಯೋಜನೆಯನ್ನು ಹೊಂದುವ ಸಾಧ್ಯತೆಗಳಿವೆ. ಇವರು ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ. ಕಾನೂನು ಇಲಾಖೆಯಲ್ಲಿ ಕೆಲಸ ನಿರ್ವಹಿಸುವವರು ಉತ್ತಮ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಮಿಶ್ರ ದಿನ ಎನ್ನಬಹುದು. ನಿಮ್ಮ ನಿರೀಕ್ಷೆಗಿಂತ ಹೆಚ್ಚು ಖರ್ಚಾಗುವುದು. ಕುಟುಂಬದಲ್ಲಿ ಸಣ್ಣ ಸವಾಲುಗಳು ನಿಮ್ಮನ್ನು ಕರ್ಯನಿರತವಾಗಿರಿಸುತ್ತದೆ. ನಿಮ್ಮ ಸಂಗಾತಿಯು ಬೆಂಬಲಿಸುವರು. ಒಡ ಹುಟ್ಟಿದವರೊಂದಿಗೆ ಸಂಬಂಧವು ಸುಧಾರಿಸುವುದು. ಹಿರಿಯರು ಸಹ ನಿರಾಳವಾಗಿರುತ್ತಾರೆ. ಆಪ್ತರೊಂದಿಗೆ ವಿಹಾರವನ್ನು ಕೈಗೊಳ್ಳಬಹುದು. ಪ್ರೇಮಿಯೊಂದಿಗೆ ತಪ್ಪು ಕಲ್ಪನೆಗೆ ಒಳಗಾಗಿ ದೂರ ಇರುವಿರಿ. ಈ ದಿನ ನಿಮ್ಮ ಅರೋಗ್ಯವು ಉತ್ತಮವಾಗಿರುತ್ತದೆ.ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 31

ಅದೃಷ್ಟ ಸಮಯ: ಸಂಜೆ 6:15 ರಿಂದ 8:55 ರವರೆಗೆ

ಮಿಥುನ: 21 ಮೇ - 20 ಜೂನ್

ಮಿಥುನ: 21 ಮೇ - 20 ಜೂನ್

ಇಂದು ಒಟ್ಟಾರೆ ಉತ್ತಮ ದಿನವಾಗಿರುತ್ತದೆ. ನಿಮ್ಮಲ್ಲಿ ಕೆಲವರು ಸಣ್ಣ ಪ್ರವಾಸವನ್ನು ಯೋಜಿಸಬಹುದು. ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಯಾವ ಸಂಗತಿಯೂ ನಡೆಯದು. ಅದು ನಿಮಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು. ಶೈಕ್ಷಣಿಕ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಇಂದು ಮಹತ್ವದ ದಿನವಾಗಿರುತ್ತದೆ. ಹಣಕಾಸಿನ ಮುಂಭಾಗದಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ನೀವು ಹೆಚ್ಚು ನಂಬುವ ವ್ಯಕ್ತಿ ನಿಮ್ಮನ್ನು ಹಿಮ್ಮೆಟ್ಟಿಸುವ ನಿರೀಕ್ಷೆಯಿದೆ. ಹಣಕಾಸಿನ ವಿಷಯವನ್ನು ಯಾರೊಂದಿಗೂ ಹಂಚಿಕೊಕೊಳ್ಳದಿರಿ. ನಿಮ್ಮ ಸಂಗಾತಿಯು ಒಂದೇ ವಿಷಯಕ್ಕೆ ಸಿಟ್ಟಾಗುತ್ತಾರೆ ಮತ್ತು ಯಾವುದೇ ವಿವರಣೆಯನ್ನು ಕೇಳಲು ಬಯಸುವುದಿಲ್ಲ. ಪೂರ್ವಜರ ಆಸ್ತಿಯ ಬಗ್ಗೆ ನಿಮ್ಮ ತಂದೆಯೊಂದಿಗೆ ಕೆಲವು ವಿವಾದ ಉಂಟಾಗಬಹುದು. ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಿ. ತಾಯಿಯ ಆರೋಗ್ಯವು ಕಳವಳಕಾರಿಯಾಗುವುದು. ಸಾಧ್ಯವಾದಷ್ಟು ಬೇಗ ವಿಷಯಗಳನ್ನು ಪರಿಹರಿಸಲು ಬುದ್ಧಿವಂತಿಕೆಯಿಂದ ವರ್ತಿಸಿ. ಇಂದು ಚಾಲನೆ ಮಾಡುವಾಗ ಜಾಗರೂಕರಾಗಿರಿ.

ಅದೃಷ್ಟ ಬಣ್ಣ: ಕೆನ್ನೇರಳೆ ಬಣ್ಣ

ಅದೃಷ್ಟ ಸಂಖ್ಯೆ: 31

ಅದೃಷ್ಟ ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 7:55 ರವರೆಗೆ

ಕರ್ಕ: 21 ಜೂನ್ - 22 ಜುಲೈ

ಕರ್ಕ: 21 ಜೂನ್ - 22 ಜುಲೈ

ಒಟ್ಟಾರೆ ಬದ್ಧತೆಯ ದಿನವಾಗಿರುವುದರಿಂದ ನೀವು ಬದ್ಧತೆಗಳಿಂದ ತುಂಬಿರುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಗಾಸಿಪ್ ಹರಡುವುದು ಅಥವಾ ಕೇಳುವ ಸಂಗತಿಗೆ ಹೋಗದಿರಿ. ಅದು ನಿಮಗೆ ಕೆಟ್ಟ ಸ್ಥಿತಿಯನ್ನು ಒದಗಿಸಬಹುದು. ಶಿಕ್ಷಣ ತಜ್ಞರಿಗೆ ಅನುಕೂಲವಾಗಲಿದೆ. ನಿಮ್ಮ ಕಾರ್ಯದ ಮೇಲೆ ಕೇಂದ್ರೀಕರಿಸಿ ಮತ್ತು ಸಾಮಾನ್ಯರಾಗಿರಿ. ವೈಯಕ್ತಿಕ ಮುಂಭಾಗದಲ್ಲಿ ವಿಷಯಗಳು ಸಾಮಾನ್ಯವಾಗಿರುತ್ತದೆ. ಏಕೆಂದರೆ ನೀವು ಹಲವಾರು ಬದ್ಧತೆಗಳನ್ನು ಹೊಂದಿರುತ್ತೀರಿ. ನಿಮ್ಮ ಸಂಗಾತಿ ತಮ್ಮ ತುದಿಯಿಂದ ವಿಷಯಗಳನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಾರೆ. ಪ್ರತಿಯೊಂದು ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡುತ್ತಾರೆ. ಇಂದು ಆರ್ಥಿಕ ರಂಗದಲ್ಲಿ ಸಾಮಾನ್ಯ ದಿನವಾಗಿರುತ್ತದೆ. ಉದ್ಯಮಿಗಳು ತಮ್ಮ ಗುರಿಯನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕು. ಸಂಬಂಧದಲ್ಲಿರುವವರಿಗೆ ಇಂದು ಒಂದು ಪ್ರಣಯ ದಿನವಾಗಿರುತ್ತದೆ. ಇಬ್ಬರಲ್ಲೂ ಪರಸ್ಪರ ಹೊಂದಾಣಿಕೆ ಇರುತ್ತದೆ. ನೀವು ಹೊಟ್ಟೆ ನೋವನ್ನು ಅನುಭವಿಸಬಹುದು. ಆದ್ದರಿಂದ ತಂಗಳು ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಆರೋಗ್ಯದಲ್ಲಿನ ಸುಧಾರಣೆಯು ನಿಮ್ಮ ಮನಃಸ್ಥಿತಿಯನ್ನು ಸುಧಾರಿಸುವ ಸಾಧ್ಯತೆಗಳಿವೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ರಾತ್ರಿ 8:15 ರಿಂದ 11:54 ರವರೆಗೆ

ಸಿಂಹ: 23 ಜುಲೈ - 22 ಆಗಸ್ಟ್

ಸಿಂಹ: 23 ಜುಲೈ - 22 ಆಗಸ್ಟ್

ಇಂದು ನೀವು ಪ್ರೀತಿಯ ಗಾಳಿಯಲ್ಲಿ ತೇಲುವ ಸಾಧ್ಯತೆಗಳಿವೆ. ಭವಿಷ್ಯದ ಹೂಡಿಕೆಗಾಗಿ ನೀವು ಯೋಜಿಸಬಹುದು. ನಿಮ್ಮ ಪಾಲುದಾರರು ಹೆಚ್ಚು ಬೆಂಬಲಿಸುವ ಕಾರಣ ಇದು ಹಣಕಾಸಿನ ಮುಂಭಾಗದಲ್ಲಿ ಸಾಮಾನ್ಯ ದಿನವೆಂದು ನಿರೀಕ್ಷಿಸಲಾಗಿದೆ. ಹೊಸ ಆರಂಭದ ಮೊದಲು ಪೋಷಕರ ಆಶೀರ್ವಾದವನ್ನು ಪಡೆಯುವುದು ಫಲಪ್ರದವಾಗಿರುತ್ತದೆ. ಇಂದು ಕೆಲವು ಕಾರ್ಯಕ್ರಮಗಳು ಮತ್ತು ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ನಿಮಗೆ ಅನಿವಾರ್ಯವಾಗಿರುತ್ತದೆ. ನೀವು ಅನಿರೀಕ್ಷಿತವಾದದ್ದನ್ನು ಎದುರಿಸಬಹುದು. ಅದು ನಿಮಗೆ ವಿಶೇಷವೆನಿಸುತ್ತದೆ. ಇಂದು ಕುಟುಂಬದ ಮುಂಭಾಗದಲ್ಲಿ ಭಾವನಾತ್ಮಕ ದಿನವಾಗಿರುತ್ತದೆ. ನೀವು ದೀರ್ಘಾವಧಿಯ ಕಾನೂನು ವಿಧಾನದಿಂದ ಮುಕ್ತರಾಗುವಿರಿ. ಇದರಿಂದ ನೀವು ನಿರಾಳ ಭಾವನೆಯನ್ನು ಅನುಭವಿಸಬಹುದು. ನಿಮ್ಮ ಪ್ರಿಯಕರನೊಂದಿಗೆ ಹಳೆಯ ತಪ್ಪುಗ್ರಹಿಕೆಯನ್ನು ವಿಂಗಡಿಸುವುದು. ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯಿಂದಾಗಿ ನೀವು ಜೀವನದ ವಿಭಿನ್ನ ಕೋನವನ್ನು ಅನ್ವೇಷಿಸುವಿರಿ. ಸಂತೃಪ್ತಿಯ ಭಾವನೆ ನಿಮ್ಮನ್ನು ಸುತ್ತುವರೆದಿರುತ್ತದೆ. ಬೆಳಿಗ್ಗೆ ಸೂರ್ಯ ದೇವರಿಗೆ ನೀರು ಅರ್ಪಿಸುವುದರ ಮೂಲಕ ದಿನವನ್ನು ಪ್ರಾರಂಭಿಸಿ. ಶುಭವಾಗುವುದು.

ಅದೃಷ್ಟ ಬಣ್ಣ: ತಿಳಿ ಹಳದಿ

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ಮುಂಜಾನೆ ಒಂದು ಶುಭ ಸುದ್ದಿಯನ್ನು ಕೇಳುವಿರಿ. ಪ್ರಮುಖ ಕಾರ್ಯಗಳನ್ನು ನಿರ್ವಹಿಸುವುದರಿಂದ ನೀವು ಇಂದು ಕೆಲಸದಲ್ಲಿ ನಿರತರಾಗಿರುತ್ತೀರಿ. ಹೊಸ ದಂಪತಿಗಳಿಗೆ ಒಂದು ಪ್ರಣಯದ ದಿನವಾಗಿರುತ್ತದೆ. ಏಕೆಂದರೆ ನೀವು ವಿದೇಶ ಪ್ರವಾಸವನ್ನು ಯೋಜಿಸಬಹುದು. ಸಂಬಂಧದಲ್ಲಿರುವವರು ಈ ಹಂತವನ್ನು ಆನಂದಿಸುತ್ತಾರೆ. ಇಂದು ಕೆಲಸಕ್ಕೆ ಸಂಬಂಧಿಸಿದಂತೆ ಶಕ್ತಿಯುತ ದಿನವಾಗಿರುತ್ತದೆ. ನೀವು ನಿಮ್ಮ ಗುರಿಯನ್ನು ಸಾಧಿಸುವಿರಿ. ಆಧ್ಯಾತ್ಮದ ಕಡೆಗಿನ ನಿಮ್ಮ ಒಲವು ಅದ್ಭುತವನ್ನು ಮಾಡುವುದು. ನಿಮ್ಮನ್ನು ಶಾಂತಗೊಳಿಸುತ್ತದೆ. ವಿಶೇಷವಾಗಿ ಕಾರ್ಪೊರೇಟ್ ವಲಯದವರು ಕೆಲಸದ ಬದಲಾವಣೆಗೆ ಮನಸ್ಸು ಮಾಡುವರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯದಲ್ಲಿ ಸವಾಲಿನ ದಿನವಾಗಿರುತ್ತದೆ. ಪೋಷಕರು ಬೆಂಬಲ ನೀಡುತ್ತಾರೆ. ಪ್ರಮುಖ ವಹಿವಾಟುಗಳಿಗೆ ಇದು ಸೂಕ್ತ ದಿನ. ಷೇರು ಮಾರುಕಟ್ಟೆಯಲ್ಲಿರುವವರಿಗೆ ವಸ್ತುಗಳು ಲಾಭದಾಯಕವಾಗುತ್ತವೆ. ದೀರ್ಘ ಸಮಯದ ಬಳಿಕ ನೀವು ದೊಡ್ಡ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತೀರಿ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 27

ಅದೃಷ್ಟ ಸಮಯ: ಬೆಳಿಗ್ಗೆ 8:40 ರಿಂದ ಮಧ್ಯಾಹ್ನ 3:30 ರವರೆಗೆ

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ಇಂದು ನಿಮಗೆ ಒಟ್ಟಾರೆಯಾಗಿ ಸಂತೋಷದಾಯಕ ದಿನವಾಗಿರುತ್ತದೆ. ನಿಮ್ಮ ಸಂಗಾತಿ ಅಸಾಧಾರಣವಾದದ್ದನ್ನು ನಿಮಗೆ ಆಶ್ಚರ್ಯಗೊಳಿಸುವರು. ಅದು ನಿಮಗೆ ಅತ್ಯಂತ ಸಂತೋಷವನ್ನು ನೀಡುವುದು. ಕೆಲಸದ ಬದಲಾವಣೆಯ ಬಗ್ಗೆ ಒಳ್ಳೆಯ ಸುದ್ದಿ ಪಡೆಯುವಿರಿ. ನಿಮ್ಮ ಬಾಸ್ ನಿಮ್ಮ ಕಠಿಣ ಪರಿಶ್ರಮವನ್ನು ಮೆಚ್ಚುತ್ತಾರೆ ಮತ್ತು ಪ್ರಮುಖ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಪಡೆಯಬಹುದು. ಹಣದ ವಿಷಯದಲ್ಲಿ ನೀವು ನಿರ್ಗತಿಕರಿಗೆ ಸಹಾಯ ಮಾಡಬಹುದು. ಉದ್ಯಮಿಗಳು ಭಾರಿ ಲಾಭ ಗಳಿಸುವ ನಿರೀಕ್ಷೆಯಿದೆ. ನಿಮ್ಮ ಒಡಹುಟ್ಟಿದವರು ವೈಯಕ್ತಿಕ ಸಮಸ್ಯೆಯಿಂದ ದೂರವಿರಲು ನಿಮಗೆ ಸಹಾಯ ಮಾಡುತ್ತಾರೆ. ಇಂದು ನಿರ್ಧಾರ ತೆಗೆದುಕೊಳ್ಳುವುದು ಜಾಣತನ. ರಜಾದಿನಗಳು ಬಹುತೇಕ ಮುಗಿದಿರುವುದರಿಂದ ವಿದ್ಯಾರ್ಥಿಗಳಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ನಿಮ್ಮ ಗತಕಾಲದ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ನಿಮ್ಮ ಭವಿಷ್ಯದ ಬಗ್ಗೆ ಗಮನಹರಿಸಿ. ಬೆಳಿಗ್ಗೆ ನಡಿಗೆಯೊಂದಿಗೆ ದಿನವನ್ನು ಪ್ರಾರಂಭಿಸಿ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 49

ಅದೃಷ್ಟ ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 2:35

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ಯಾವುದಾದರೂ ವಿಶೇಷ ಸಂಗತಿಯ ಬಗ್ಗೆ ಯೋಜನೆಯನ್ನು ಕೈಗೊಳ್ಳಬಹುದು. ಪರಸ್ಪರ ಸಹಕಾರವು ಬಂಧವನ್ನು ಇನ್ನಷ್ಟು ಬಲಪಡಿಸುವುದು. ವೈಯಕ್ತಿಕ ಮುಂಭಾಗದಲ್ಲಿ ವಿಷಯಗಳು ಅನುಕೂಲಕರವಾಗಿರುತ್ತದೆ. ಪರಿಸ್ಥಿತಿಯು ಪ್ರತಿಕೂಲವಾಗಿರುತ್ತದೆ ಎಂದು ನಿರೀಕ್ಷಿಸಲಾಗುವುದು. ಕೆಲಸ ಬೇಡವೆಂದು ಹೇಳುವುದನ್ನು ತಪ್ಪಿಸಿ. ವಿಷಯ ಕ್ರಮೇಣ ಸುಧಾರಿಸುತ್ತದೆ. ನಿಮಗೆ ತಾಳ್ಮೆಯಿಂದಿರಲು ಸೂಚಿಸಲಾಗಿದೆ. ವಿಷಯಗಳನ್ನು ಟೀಕಿಸುವುದನ್ನು ತಪ್ಪಿಸಿ. ಏಕೆಂದರೆ ಇದು ನಿಮ್ಮ ಸ್ವಭಾವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಣಕಾಸಿನ ಮುಂಭಾಗದಲ್ಲಿ ವಿಷಯಗಳು ಸುಗಮವಾಗಿರುತ್ತವೆ. ಇದರಿಂದಾಗಿ ನೀವು ಆರಾಮವಾಗಿರುತ್ತೀರಿ. ನೀವು ಹೊಸ ಹೂಡಿಕೆಗಾಗಿ ಯೋಜಿಸಬಹುದು. ವ್ಯವಹಾರದಲ್ಲಿ ಜಾಗರೂಕರಾಗಿರಿ. ಸಂಬಂಧಗಳ ಮೇಲೆ ಪ್ರಾಭಲ್ಯ ಸಾಧಿಸಲು ಮುಂದಾಗದಿರಿ. ಮೈಗ್ರೇನ್ ಸಮಸ್ಯೆಗಳನ್ನು ಎದುರಿಸುತ್ತಿರುವವರು ಜಾಗರೂಕರಾಗಿರಬೇಕು.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಮಧ್ಯಾಹ್ನ 1:20 ರಿಂದ 4:45 ರವರೆಗೆ

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ನಿಮ್ಮಲ್ಲಿ ಕೆಲವರು ಸವಾಲುಗಳನ್ನು ಎದುರಿಸಬಹುದು. ವಿದ್ಯಾರ್ಥಿಗಳು ಶೈಕ್ಷಣಿಕ ರಂಗದಲ್ಲಿ ನಿರತರಾಗಿರುತ್ತಾರೆ. ಕಾರ್ಪೊರೇಟ್ ವಲಯದವರು ದೀರ್ಘ ಸಮಯದ ನಂತರ ಸಂತೋಷವನ್ನು ಪಡೆದುಕೊಳ್ಳುತ್ತಿದ್ದಾರೆ. ಹಣಕಾಸಿನ ಮುಂಭಾಗದಲ್ಲಿ ನಕ್ಷತ್ರಗಳು ಅನುಕೂಲಕರವಾಗಿವೆ. ಬಾಕಿ ಪಾವತಿಯನ್ನು ಸ್ವೀಕರಿಸುತ್ತೀರಿ. ಭವಿಷ್ಯದ ಸಮಯಕ್ಕಾಗಿ ಗುಣಮಟ್ಟದ ಸಮಯದ ಆಲೋಚನೆ ಮತ್ತು ಯೋಜನೆಯನ್ನು ನೀವು ಹೂಡಿಕೆ ಮಾಡುತ್ತೀರಿ. ಪೋಷಕರು ಬೆಂಬಲ ನೀಡುತ್ತಾರೆ. ನೀವು ಕುಟುಂಬ ಪ್ರವಾಸಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಬಿಡುವಿಲ್ಲದ ದಿನವಾಗಬಹುದು. ಸಹೋದರರೊಂದಿಗೆ ವಾದವನ್ನು ಮಾಡದಿರಿ. ಸೂಕ್ಷ್ಮ ವಿಷಯಗಳಿಂದ ದೂರವಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ.

ಅದೃಷ್ಟ ಬಣ್ಣ: ಬೀಜ್

ಅದೃಷ್ಟ ಸಂಖ್ಯೆ: 47

ಅದೃಷ್ಟ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 3:50

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ಕುಟುಂಬದೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳಬಹುದು. ಸಂಜೆಯ ಹೊತ್ತಿಗೆ ನೀವು ಹತ್ತಿರದ ಸಂಬಂಧಿಯನ್ನು ಭೇಟಿಯಾಗಬಹುದು. ವಿದ್ಯಾರ್ಥಿಗಳು ಅಜ್ಜಿಯರೊಂದಿಗೆ ಅಮೂಲ್ಯ ಸಮಯವನ್ನು ಕಳೆಯುತ್ತಾರೆ. ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದು ಹಣಕಾಸಿನ ಮುಂಭಾಗದಲ್ಲಿ ಸುಗಮ ದಿನವಾಗಿರುತ್ತದೆ. ನಿಮ್ಮ ಬಜೆಟ್ ಬಗ್ಗೆ ನೀವು ಜಾಗರೂಕರಾಗಿರಬೇಕು. ಕೆಲಸದ ಮುಂಭಾಗದಲ್ಲಿ ನಿಮ್ಮ ಪ್ರಯತ್ನವು ಫಲಪ್ರದವಾಗಲಿದೆ. ನಿಮಗೆ ಮಾನ್ಯತೆ ಮತ್ತು ಗೌರವವನ್ನು ಪಡೆಯಲು ಸಹಾಯ ಮಾಡುತ್ತದೆ. ಸುಳ್ಳು ಹೇಳುವುದನ್ನು ತಪ್ಪಿಸಿ. ಇಲ್ಲವಾದರೆ ವಿಷಯಗಳು ಜಟಿಲವಾಗುತ್ತವೆ. ಕುಟುಂಬದ ಮುಂಭಾಗದಲ್ಲಿ ವಿಷಯಗಳು ಸಮೃದ್ಧವಾಗಿರುತ್ತವೆ. ನೀವು ವಿಷಯಗಳನ್ನು ಸುಂದರವಾಗಿ ಮತ್ತು ವಿಶೇಷವಾಗಿಸುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 15

ಅದೃಷ್ಟ ಸಮಯ: ಬೆಳಿಗ್ಗೆ 8:15 ರಿಂದ ಸಂಜೆ 7:30 ರವರೆಗೆ

ಕುಂಭ: 20 ಜನವರಿ - 18 ಫೆಬ್ರವರಿ

ಕುಂಭ: 20 ಜನವರಿ - 18 ಫೆಬ್ರವರಿ

ಇಂದು ಒಟ್ಟಾರೆಯಾಗಿ ಸಾಮಾನ್ಯ ಮತ್ತು ಕಾರ್ಯನಿರತ ದಿನವಾಗಿರುತ್ತದೆ. ನೀವು ವಸ್ತುಗಳ ಹಿಂದೆ ಓಡುತ್ತಲೇ ಇರುತ್ತೀರಿ. ಕುಟುಂಬದ ಮುಂಭಾಗದಲ್ಲಿ ವಿಷಯಗಳು ಕಷ್ಟಕರವಾಗಿರುತ್ತದೆ. ಏಕೆಂದರೆ ಏರಿಳಿತಗಳು ನಿಮ್ಮ ಹಾದಿಗೆ ಬರುತ್ತವೆ. ನಿಮ್ಮ ಸಂಗಾತಿಯ ಅಸಡ್ಡೆ ವರ್ತನೆಯಿಂದ ನೀವು ಕಿರಿಕಿರಿ ಅನುಭವಿಸಬಹುದು. ಸಾರ್ವಜನಿಕ ವೇದಿಕೆಯಲ್ಲಿ ನಿಮ್ಮ ನಡವಳಿಕೆ ಮತ್ತು ಮಾತುಗಳ ಮೇಲೆ ನಿಯಂತ್ರಣ ಇರಲಿ. ಹಣಕಾಸಿನ ಮುಂಭಾಗದಲ್ಲಿ ವಿಷಯ ಸಡಿಲಗೊಳಿಸಲಾಗುತ್ತದೆ. ಅದು ನಿಮಗೆ ಹಿತಕರವಾಗಿರುತ್ತದೆ. ದುಷ್ಟ ಜನರಿಗೆ ಜ್ಞಾನವನ್ನು ನೀಡುವ ನಿಮ್ಮ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಿ. ಬೇರೊಬ್ಬರ ಸಂಬಂಧದಲ್ಲಿ ಮಧ್ಯಪ್ರವೇಶಿಸುವುದನ್ನು ತಪ್ಪಿಸಿ.

ಅದೃಷ್ಟ ಬಣ್ಣ: ಪಚ್ಚೆ

ಅದೃಷ್ಟ ಸಂಖ್ಯೆ: 34

ಅದೃಷ್ಟ ಸಮಯ: ಮಧ್ಯಾಹ್ನ 1:20 ರಿಂದ 3:55 ರವರೆಗೆ

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ: 19 ಫೆಬ್ರವರಿ - 20 ಮಾರ್ಚ್

ಮಾರುಕಟ್ಟೆಯ ವ್ಯವಹಾರದಲ್ಲಿ ಇರುವವರಿಗೆ ಅದೃಷ್ಟದ ದಿನವಾಗಿರುತ್ತದೆ. ವ್ಯಾಪಾರದ ಮುಂಭಾಗದಲ್ಲಿ ಅತ್ಯುತ್ತಮ ದಿನವಾಗಿರುತ್ತದೆ. ಭಾರಿ ಲಾಭವು ನಿಮ್ಮ ಹಾದಿಗೆ ಬರುತ್ತದೆ. ನಿಮ್ಮ ಸುತ್ತಲಿನ ಜನರು ಅಸೂಯೆ ಪಡಬಹುದು. ನೀವು ನಿಮ್ಮ ಜಾಗ್ರತೆಯಲ್ಲಿ ಇರಬೇಕು. ಕೆಲಸದ ಬಗ್ಗೆ ಯಾವುದೇ ಕಾರಣವಿಲ್ಲದೆ ಜನರನ್ನು ಬೇಡಿಕೊಳ್ಳುವುದನ್ನು ತಪ್ಪಿಸಿ. ಇದು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ. ನಿಮ್ಮ ವ್ಯವಸ್ಥಿತ ಸ್ವಭಾವವು ನಿಮ್ಮ ಸಂಗಾತಿಗೆ ನಿರಾಳತೆಯನ್ನುಂಟು ಮಾಡುತ್ತದೆ. ಇದು ಉದ್ಯಮಿಗಳಿಗೆ ಲಾಭದಾಯಕ ದಿನವಾಗಿರುತ್ತದೆ. ಹೆತ್ತವರ ಆರೋಗ್ಯದ ಬಗ್ಗೆ ಗಮನ ಕೊಡಿ. ದಿನವನ್ನು ಪ್ರಾರ್ಥನೆ ಮತ್ತು ಧ್ಯಾನದೊಂದಿಗೆ ಪ್ರಾರಂಭಿಸಿ. ಆಗ ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಬಹುದು. ಅದೃಷ್ಟ ಬಣ್ಣ: ಸಾಸಿವೆ

ಅದೃಷ್ಟ ಸಂಖ್ಯೆ: 18

ಅದೃಷ್ಟ ಸಮಯ: ಮಧ್ಯಾಹ್ನ 2:15 ರಿಂದ 10:10 ರವರೆಗೆ

English summary

Daily Horoscope 15 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Tuesday, October 15, 2019, 4:00 [IST]
X