For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿ ಕಾಗೆಯ ಬಗ್ಗೆ ಇರುವ ನಂಬಿಕೆಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ

|

ಹಿಂದೂ ಧರ್ಮದಲ್ಲಿ ಕಾಗೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಕಾಗೆಯನ್ನು ಕೆಲವು ಸಂದರ್ಭಗಳಲ್ಲಿ ಅದೃಷ್ಟ ಎಂದರೆ ಇನ್ನು ಕೆಲವು ಸಂದರ್ಭಗಳಲ್ಲಿ ಅಶುಭ ಎಂದೂ ಹೇಳುವುದುಂಟು. ಪ್ರಯಾಣದ ಮೊದಲು ಕಾಗೆಯನ್ನು ನೋಡುವುದು ಅಥವಾ ಮನೆಯ ಸುತ್ತಲೂ ಕಾಗೆ ಶಬ್ದ ಮಾಡುವುದು ಕೆಟ್ಟ ಅದೃಷ್ಟ ಎಂದು ನಂಬಲಾಗಿದೆ. ಕಾಗೆ ಮನೆಯ ಮರದ ಬಳಿ ಕುಳಿತು ಬೆಳಿಗ್ಗೆ ಸಮಯದಲ್ಲಿ ಶಬ್ದ ಮಾಡುವುದು ಮನೆಗೆ ನೆಂಟರು ಬರುತ್ತಾರೆ ಎಂಬುದರ ಸಂಕೇತವಾಗಿದೆ.

Crow Superstitions in India : Crow Sound and Sighting Beliefs in Hindu Religion in Kannada

ಮನೆಯಲ್ಲಿ ಮೃತಪಟ್ಟಾಗ ಹಿರಿಯರಿಗೆ ಎಡೆ ಇಟ್ಟರೆ ಕಾಗೆಗಳು ಬಂದು ಸೇವಿಸಿದರೆ ತುಂಬಾ ಒಳ್ಳೆಯದು ಎಂದು ಕಾಗೆಯನ್ನು ಕಾಯುತ್ತಾರೆ, ಆದರೆ ಇದೇ ಕಾಗೆಗಳು ಶುಭ ಸಮಯದಲ್ಲಿ ಅಥವಾ ಇತರೆ ಸಂದರ್ಭದಲ್ಲಿ ಬಂದರೆ ಅಪಶಕುನ ಎನ್ನುತ್ತಾರೆ. ಒಟ್ಟಾರೆ ಕಾಗೆಗಳು ಯಾವ ಸಮಯದಲ್ಲಿ, ಹೇಗೆ ಬಂದರೆ, ಯಾವ ದಿಕ್ಕಿನಲ್ಲಿ ಕೂಗಿದೆ ಎಂಬುದನ್ನು ಆಧರಿಸಿ ಶುಭ-ಅಶುಭವನ್ನು ಅಂದಾಜಿಸಲಾಗಿದೆ.

ಹೀಗೆ ಸಾಕಷ್ಟು ನಂಬಿಕೆಯಗಳನ್ನು ಹೊತ್ತ ಪಕ್ಷಿ ಕಾಗೆಯ ಪ್ರತಿಯೊಂದು ಕಾರ್ಯವೂ, ವರ್ತನೆಗೂ ಮನುಷ್ಯನ ಜೀವನದಲ್ಲಿ ವಿಭಿನ್ನ ಸನ್ನಿವೇಶದಲ್ಲಿ ವಿಭಿನ್ನ ಅರ್ಥವನ್ನು ಕಲ್ಪಿಸುತ್ತದೆ. ನಾವಿಂದು ಹಿಂದೂ ಧರ್ಮದಲ್ಲಿ ಕಾಗೆ ಯಾವ ರೀತಿ ಕಂಡರೆ ಅದೃಷ್ಟ, ಯಾವುದು ದುರದೃಷ್ಟ ಎಂಬುದನ್ನು ತಿಳಿಸಿಕೊಡಲಿದ್ದೇವೆ:

* ಪ್ರಯಾಣ ಪ್ರಾರಂಭಿಸುವಾಗ ಕಾಗೆ ಹಸು, ಹಸುವಿನ ಸಗಣಿಯ ಮೇಲೆ ಅಥವಾ ಹಸಿರು ಎಲೆಗಳ ಮರದ ಮೇಲೆ ಕುಳಿತಿರುವುದನ್ನು ನೋಡುವುದು ಶುಭ.

* ಕಾಗೆ ಎಲೆಗಳು, ಕೋಲುಗಳು, ಕೊಂಬೆಗಳು, ಬಟ್ಟೆ, ಲೋಹ ಅಥವಾ ಹಗ್ಗವನ್ನು ಹೊತ್ತುಕೊಂಡು ಹೋಗುವುದನ್ನು ನೋಡುವುದು ಒಳ್ಳೆಯದು. ಅಂತಹ ವ್ಯಕ್ತಿಯು ಆರ್ಥಿಕ ಲಾಭ, ಆಸ್ತಿ ಲಾಭ, ಲಾಟರಿ ಅದೃಷ್ಟ ಒಟ್ಟಾರೆ ಲಾಭದಿಂದ ಆಶೀರ್ವದಿಸಲ್ಪಡುತ್ತಾರೆ.

* ಮನೆ ಅಥವಾ ಕಿಟಕಿಯ ಬಳಿ ಕಾಗೆ ಅಸಾಮಾನ್ಯ ಶಬ್ದ ಮಾಡಿದರೆ ಸಾವು ಅಥವಾ ಅಪಘಾತದ ಮೂಲಕ ಕುಟುಂಬದಲ್ಲಿನ ಅನಾಹುತ ಅಥವಾ ಅನಾರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ.

* ಕಾಗೆ ಮನೆಯ ಉತ್ತರ ಭಾಗದಲ್ಲಿ ಕುಳಿತು ಶಬ್ದ ಮಾಡಿದರೆ ಕುಟುಂಬದಲ್ಲಿನ ಅನಾರೋಗ್ಯ ಸಮಸ್ಯೆಗಳು ಶೀಘ್ರ ಗುಣಮುಖವಾಗುತ್ತದೆ ಎಂದರ್ಥ.

* ಕಾಗೆ ದಕ್ಷಿಣ ಭಾಗದಲ್ಲಿ ಕುಳಿತುಕೊಳ್ಳುವುದು ದುರದೃಷ್ಟ ಮತ್ತು ಸಾವಿನ ಸಂಕೇತ ಎನ್ನಲಾಗುತ್ತದೆ.

* ಕಾಗೆ ಪೂರ್ವ ಭಾಗದಲ್ಲಿ ಕುಳಿತು ಕೂಗಿದರೆ ಆಸೆ ಈಡೇರಿಕೆ ಮತ್ತು ಹಣದ ವಿಷಯಗಳಲ್ಲಿ ಅದೃಷ್ಟ ನಿಮ್ಮದಾಗುತ್ತದೆ ಎಂಬುದರ ಸಂಕೇತವಾಗಿದೆ.

* ಕಾಗೆ ಪಶ್ಚಿಮ ಭಾಗದಲ್ಲಿ ಕುಳಿತುಕೊಳ್ಳುವುದು ಉತ್ತಮ ಸಂಬಂಧ ಮತ್ತು ವೈವಾಹಿ ಜೀವನದೊಂದಿಗಿನ ಸಂಬಂಧವನ್ನು ಸೂಚಿಸುತ್ತದೆ.

* ವೈಶಾಖ ಮಾಸದಲ್ಲಿ (ಮೇ ತಿಂಗಳಲ್ಲಿ) ಕಾಗೆ ಸಮೃದ್ಧ ಮರದಲ್ಲಿ ತನ್ನ ಗೂಡನ್ನು ನಿರ್ಮಿಸಿದರೆ, ಸಾಕಷ್ಟು ಸಂತೋಷ, ಸಮೃದ್ಧಿ ಸಿಗುತ್ತದೆ. ಒಣಗಿದ ಅಥವಾ ಮುಳ್ಳಿನ ಮರದಲ್ಲಿ ಕಟ್ಟಿದ್ದರೆ ಬರಗಾಲದ ಅಪಾಯವಿದೆ.

* ಮರದ ಪೂರ್ವದಲ್ಲಿ ಕಾಗೆಯ ಗೂಡು = ಶರತ್ಕಾಲದಲ್ಲಿ ಉತ್ತಮ ಮಳೆ

ಮರದ ಪಶ್ಚಿಮದಲ್ಲಿ ಕಾಗೆಯ ಗೂಡು = ಮಳೆಗಾಲದಲ್ಲಿ ಮಾತ್ರ ಮಳೆ

ಮರದ ದಕ್ಷಿಣ ಅಥವಾ ಉತ್ತರದಲ್ಲಿ ಕಾಗೆಯ ಗೂಡು = ಎರಡು ಕಾಲಗಳ ನಡುವೆ ಮಳೆ

ಮರದ ಮೇಲ್ಭಾಗದಲ್ಲಿ ಕಾಗೆಯ ಗೂಡು = 4 ತಿಂಗಳ ಕಾಲ ವಿಪರೀತ ಮಳೆಯ ಸಂಕೇತವಾಗಿದೆ.

* ಕಾಗೆಗಳು ಯಾವುದೇ ಕಾರಣವಿಲ್ಲದೆ ಹಳ್ಳಿಯ ಮಧ್ಯದಲ್ಲಿ ಅಥವಾ ಗಟ್ಟಿಯಾಗಿ ಕೂಗಿದರೆ ಬರಗಾಲದ ಅಪಾಯ ಎಂದರ್ಥ. ಕಾಗೆಗಳು ಹಲವಾರು ಗುಂಪುಗಳಲ್ಲಿ ಕಾಣಿಸಿಕೊಂಡರೆ ಅನಾಹುತ ಸಂಭವಿಸುತ್ತದೆ.

* ಕಾಗೆಗಳು ತಮ್ಮ ಕೊಕ್ಕು, ರೆಕ್ಕೆಗಳಿಂದ ಬಡಿದರೆ ಅಥವಾ ಕುಕ್ಕಿದರೆ, ಜನರನ್ನು ನಿರ್ಭಯಗೊಳಿಸಿದರೆ, ಆಕ್ರಮಣ ಮಾಡಿದರೆ ಶತ್ರುಗಳ ಹೆಚ್ಚಳ ಇರುತ್ತದೆ, ಅವರು ರಾತ್ರಿಯಲ್ಲಿ ಹಾರಿದರೆ, ವಿನಾಶವನ್ನು ಸೂಚಿಸಲಾಗುತ್ತದೆ.

ಕಾಗೆಗಳು ಪ್ರದಕ್ಷಿಣಾಕಾರವಾಗಿ ಹಾರಿದರೆ, ಸಂಬಂಧಪಟ್ಟ ವ್ಯಕ್ತಿಗೆ ತನ್ನ ಸ್ವಂತ ಸಂಬಂಧಿಗಳಿಂದ ತೊಂದರೆ ಉಂಟಾಗುತ್ತದೆ; ವಿರೋಧಿ ಪ್ರದಕ್ಷಿಣಾಕಾರದಲ್ಲಿದ್ದರೆ, ಶತ್ರುಗಳಿಂದ; ಬಹಳ ಅವ್ಯವಸ್ಥೆಯ ಶೈಲಿಯಲ್ಲಿದ್ದರೆ, ಸುಂಟರಗಾಳಿ ಇರುತ್ತದೆ.

* ಕಾಗೆಯ ಕೊಕ್ಕಿನಲ್ಲಿ ಮರಳು, ಜೋಳ, ಒದ್ದೆಯಾದ ಜೇಡಿಮಣ್ಣು, ಹೂವು ತುಂಬಿದಾಗ ಸಂಪತ್ತಿನ ಲಾಭವಾಗುತ್ತದೆ.

English summary

Crow Superstitions in India : Crow Sound and Sighting Beliefs in Hindu Religion in Kannada

Here we are discussing about Crow Superstitions in India : Crow Sound and Sighting Beliefs in Hindu Religion in Kannada. Read more.
Story first published: Wednesday, July 14, 2021, 17:54 [IST]
X
Desktop Bottom Promotion