For Quick Alerts
ALLOW NOTIFICATIONS  
For Daily Alerts

ಪಿತೃದೋಷ/ಕಾಳ ಸರ್ಪ ದೋಷ ನಿವಾರಣೆ ಆಷಾಢ ಅಮವಾಸ್ಯೆಯಂದು ಈ ರೀತಿ ಪೂಜೆ ಮಾಡಿ

|

ಧಾರ್ಮಿಕ ನಂಬಿಕೆಗಳ ಪ್ರಕಾರ ಆಷಾಢ ಮಾಸದ ಅಮಾವಾಸ್ಯೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಗತಿಸಿದ ಪೂರ್ವಜರಿಗೆ ತರ್ಪಣ ನೀಡುವುದು ಈ ಅಮವಾಸ್ಯೆಯ ವಿಶೇಷವಾಗಿದೆ. ಉತ್ತರ ಭಾರತದ ಕಡೆ ಆಷಾಢ ಅಮವಾಸ್ಯೆ ಜೂನ್ 28ಕ್ಕೆ ಆಚರಿಸಲಾಗುತ್ತಿದೆ, ಆದರೆ ಕರ್ನಾಟಕದಲ್ಲಿ ಆಷಾಢ ಪ್ರಾರಂಭವಾಗುವುದೇ ಜೂನ್ 30ಕ್ಕೆ. ಜುಲೈ 27ಕ್ಕೆ ಆಷಾಢ ಅಮವಾಸ್ಯೆ ಆಚರಿಸಲಾಗುವುದು.

ಜಾತಕದಲ್ಲಿ ಪಿತೃದೋಷ ಅಥವಾ ಕಾಳಸರ್ಪ ದೋಷವಿದ್ದರೆ ಅದನ್ನು ನಿವಾರಿಸಲು ಆಷಾಢ ಅಮವಾಸ್ಯೆ ತುಂಬಾ ಸೂಕ್ತವಾದ ದಿನವಾಗಿದೆ. ಈ ದಿನ ಏನು ಮಾಡಿದರೆ ಪಿತೃದೋಷ ಹಾಗೂ ಕಾಳಸರ್ಪ ದೋಷ ನಿವಾರಣೆಯಾಗುತ್ತೆ ಎಂದು ನೋಡೋಣ ಬನ್ನಿ:

ಪಿತೃತರ್ಪಣ

ಪಿತೃತರ್ಪಣ

ಆಷಾಢ ಮಾಸದ ಅಮಾವಾಸ್ಯೆಯಂದು ಪಿತೃತರ್ಪಣವನ್ನು ಮಾಡುವುದರಿಂದ ಅಥವಾ ಶ್ರಾದ್ಧ ಕರ್ಮವನ್ನು ಮಾಡುವುದರಿಂದ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ, ಅವರ ನಮ್ಮನ್ನು ಆಶೀರ್ವದಿಸುತ್ತಾರೆ. ಇದರಿಂದಾಗಿ ಜೀವನದಲ್ಲಿರುವ ಕಷ್ಟಗಳಿಗೆ ಪರಿಹಾರ ಸಿಗುವುದು. ಹೀಗೆ ಮಾಡಿ ಪಿತೃದೋಷ, ಸರ್ಪದೋಷದಿಂದ ಮುಕ್ತಿ ಮಾಡಿಯಬಹುದು.

ಈ ದಿನ ಏನು ಮಾಡಿದರೆ ಒಳ್ಳೆಯದು

ಈ ದಿನ ಏನು ಮಾಡಿದರೆ ಒಳ್ಳೆಯದು

ಆಷಾಢ ಅಮಾವಾಸ್ಯೆಯ ದಿನ ಬೆಳಗ್ಗೆ ಬೇಗ ಎದ್ದು ನದಿ ಸ್ನಾನ ಮಾಡಬೇಕು, ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾ ಜಲ ಹಾಕಿ ಸ್ನಾನ ಮಾಡಿ.

ನಂತರ ಪೂರ್ವಜರನ್ನು ಮನದಲ್ಲಿ ನೆನೆದು ಈ ದಿನ ಉಪವಾಸವಿದ್ದು ಶ್ರಾದ್ಧ ಕಾರ್ಯ ಮಾಡಬೇಕು. ಕೆಲವರು ಈ ದಿನ ವಿವಿಧ ತಿನಿಸುಗಳನ್ನು ಮಾಡಿ ಭಕ್ಷ್ಯ ಇಡುತ್ತಾರೆ.

ಜಾತಕ ದೋಷ ನಿವಾರಣೆಗೆ ಏನು ಮಾಡಬೇಕು

ಜಾತಕ ದೋಷ ನಿವಾರಣೆಗೆ ಏನು ಮಾಡಬೇಕು

ಜಾತಕ ದೋಷವದ್ದವರು ಈ ದಿನ ಸ್ನಾನ ಮಾಡಿದ ಬಳಿಕ ಆಲದ ಮರಕ್ಕೆ ಪೂಜೆಯನ್ನು ಸಲ್ಲಿಸಬೇಕು. ನಂತರ ನೀರು, ಹಾಲು ಅರ್ಪಿಸಿ.

ಅಮಾವಾಸ್ಯೆಯ ದಿನ ಸಂಜೆ ಪೂಜೆ ಮಾಡಿದ ನಂತರ ದಕ್ಷಿಣ ದಿಕ್ಕಿನಲ್ಲಿ ನಾಲ್ಕು ಬತ್ತಿಯ ಎಣ್ಣೆಯ ದೀಪವನ್ನು ಬೆಳಗಿಸಿ. ನಂತರ ಕಾಗೆ, ಹಸು, ನಾಯಿಗೆ ಆಹಾರ ನೀಡಿ. ಈ ಆಹಾರವನ್ನು ಹಸು ಅಥವಾ ನಾಯಿ ಅಥವಾ ಕಾಗೆ ತಿಂದರೆ ನಿಮ್ಮ ಪೂರ್ವಜರು ಸಂತೃಪ್ತರಾಗಿ ಆಶೀರ್ವದಿಸಿದ್ದಾರೆ ಎಂದು ನಂಬಲಾಗುವುದು.

ಪಿತೃದೋಷವಿದ್ದರೆ

ಪಿತೃದೋಷವಿದ್ದರೆ

ಪಿತೃದೋಷವಿದ್ದರೆ ಈ ದಿನ ಆಲದ ಮರವನ್ನು ನೆಟ್ಟು ಅದಕ್ಕೆ ನೀರು ಹಾಲು ಹಾಕಿ ಆರೈಕೆ ಮಾಡಬೇಕು. ನಂತರ ಪ್ರತಿ ಅಮವಾಸ್ಯೆಗೆ ಬಂದು ಆ ಮರದ ಕೆಳಗಡೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಅಮಾವಾಸ್ಯೆಯ ದಿನದಂದು ಮನೆಯಲ್ಲಿ ಪೂರ್ವಜರನ್ನು ಗೌರವಪೂರ್ವಕವಾಗಿ ನೋಡಿಕೊಳ್ಳುವ ಮೂಲಕ ಪೂರ್ವಜರ ಕೃಪೆಗೆ ಪಾತ್ರರಾಗಿ.

ಹೀಗೆ ಮಾಡಿ

ಹೀಗೆ ಮಾಡಿ

* ಅಮಾವಾಸ್ಯೆಯ ದಿನದಂದು ರಾಮಚರಿತೆ ಪಠಿಸಿ.

* ಆರ್ಥಿಕ ಸಂಕಟ ದೂರಾಗಲು ಮೀನುಗಳಿಗೆ ಆಹಾರ ನೀಡಿ.

*ಮನೆಯ ಈಶಾನ್ಯದಲ್ಲಿ ಹಸುವಿನ ತುಪ್ಪದಿಂದ ದೀಪವನ್ನು ಬೆಳಗಿದರೆ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

English summary

Ashadha Amavasya Worship Method for Pitru Dosh, Kalsarp Dosh in Kannada

Ashadha Amavasya Worship Method for Pitru Dosh, Kalsarp Dosh in Kannada...
X
Desktop Bottom Promotion