For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ ಆಷಾಢ ಅಮವಾಸ್ಯೆ ಯಾವಾಗ? ಜೂನ್‌ನಲ್ಲೋ-ಜುಲೈನಲ್ಲೋ?

|

ಹಿಂದೂ ಧರ್ಮದಲ್ಲಿ ಆಷಾಢ ಮಾಸಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ವಿಶೇಷ ಪೂಜೆ ಕಾರ್ಯಗಳನ್ನು ಮಾಡಲಾಗುವುದು, ಪಿತೃ ತರ್ಪಣ ನೀಡಲಾಗುವುದು. ಆಷಾಢ ಮಾಸ ಎಂಬುವುದು ಕನ್ನಡದ ನಾಲ್ಕನ ತಿಂಗಳಾಗಿದೆ. ಆಷಾಢ ಮಾಸದಲ್ಲಿ ಕುಮಾರ ಷಷ್ಠಿ, ಬಾನು ಸಪ್ತಮಿ, ಚಾತುರ್ಮಾಸ ವ್ರತ, ಆಷಾಢ ಅಮವಾಸ್ಯೆ ಹೀಗೆ ವಿಶೇಷ ದಿನಗಳಿವೆ.

ಕರ್ನಾಟಕದಲ್ಲಿ ಆಷಾಢ ಯಾವಾಗ ಪ್ರಾರಂಭ, ಆಷಾಢ ಅಮವಾಸ್ಯೆ ಯಾವಾಗ? ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಕರ್ನಾಟಕದಲ್ಲಿ ಆಷಾಢ ಮಾಸ ಪ್ರಾರಂಭ

ಕರ್ನಾಟಕದಲ್ಲಿ ಆಷಾಢ ಮಾಸ ಪ್ರಾರಂಭ

ಜೂನ್‌ 30ರಿಂದ -ಜುಲೈ 28

ಈ ಬಾರಿ ಕರ್ನಾಟಕದಲ್ಲಿ ಆಷಾಢ ಅಮವಾಸ್ಯೆ ಯಾವಾಗ?

ಉತ್ತರ ಭಾರತದ ಕಡೆ ಜೂನ್ 28ಕ್ಕೆ ಆಷಾಢ ಅಮವಾಸ್ಯೆ ಆಚರಿಸಲಾಗುತ್ತಿದೆ, ಕರ್ನಾಟಕದಲ್ಲಿ ಜುಲೈ 28ಕ್ಕೆ ಆಷಾಢ ಅಮವಾಸ್ಯೆ.

ಆಷಾಢ ಅಮವಾಸ್ಯೆಯ ಮಹತ್ವ

ಆಷಾಢ ಅಮವಾಸ್ಯೆಯ ಮಹತ್ವ

ಆಷಾಢ ಅಮವಾಸ್ಯೆಯಂದು ಪಿತೃಗಳಿಗೆ ತರ್ಪಣ ನೀಡಲಾಗುವುದು. ಪಿತೃ ದೋಷವಿದ್ದರೆ ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗುವುದು. ಪಿತೃಗಳ ಆಶೀರ್ವಾದ ನಮ್ಮ ಮೇಲಿದ್ದರೆ ಸಂತಾನ ಭಾಗ್ಯ ಉಂಟಾಗುವುದು, ಕಷ್ಟಗಳು ದೂರಾಗುವುದು, ಜೀವನದಲ್ಲಿ ಖುಷಿ, ನೆಮ್ಮದಿ ಇರುತ್ತದೆ. ಆದ್ದರಿಂದ ಪಿತೃಗಳಿಗೆ ಮೋಕ್ಷ ಕೊಡಿಸಿ ಅವರ ಆಶೀರ್ವಾದ ಪಡೆಯಲು ಈ ದಿನ ಅವರಿಗೆ ತರ್ಪಣ ನೀಡಲಾಗುವುದು.

ಆಷಾಢ ಅಮಾವಾಸ್ಯೆ ಮುಹೂರ್ತ

ಆಷಾಢ ಅಮಾವಾಸ್ಯೆ ಮುಹೂರ್ತ

ಅಮವಾಸ್ಯೆ ತಿಥಿ ಆರಂಭ: ಜುಲೈ 27 ರಾತ್ರಿ 09:12ಕ್ಕೆ

ಅಮವಾಸ್ಯೆ ದಿನಾಂಕ ಕೊನೆಗೊಳ್ಳುತ್ತದೆ: ಜುಲೈ 28 ರಾತ್ರಿ 11:25ಕ್ಕೆ

ಆಷಾಢ ಅಮಾವಾಸ್ಯೆಯಂದು ಈ ಕೆಲಸ ಮಾಡಿ

ಆಷಾಢ ಅಮಾವಾಸ್ಯೆಯಂದು ಈ ಕೆಲಸ ಮಾಡಿ

* ಧಾರ್ಮಿಕ ಗ್ರಂಥಗಳಲ್ಲಿ ಹೇಳಿರುವ ಪ್ರಕಾರ ಪವಿತ್ರ ನದಿಯಲ್ಲಿ ಸ್ನಾನ ಮಾಡಿ.

* ನಂತರ ಉಪವಾಸವಿದ್ದು ಪೂರ್ವಜರ ಆತ್ಮಕ್ಕೆ ಶಾಂತಿಗಾಗಿ ತರ್ಪಣವನ್ನು ನೀಡಿ. ಇದಲ್ಲದೆ ನಿಮ್ಮ ಜಾತಕದಲ್ಲಿ ಪಿತ್ರದೋಷವಿದ್ದರೆ ಆಷಾಢ ಅಮವಾಸ್ಯೆಯಂದು ಪಿತೃಗಳಿಗೆ ತರ್ಪಣ ಮಾಡುವುದರಿಂದ ನಿಮ್ಮನ್ನು ಆವರಿಸಿದ ದೋಷ ದೂರಾಗುವುದು.

* ಆಷಾಢ ಅಮಾವಾಸ್ಯೆಯಂದು ಸೂರ್ಯ, ಶಿವ, ಮಾತೆ ಗೌರಿ ಮತ್ತು ತುಳಸಿಯನ್ನು 11 ಬಾರಿ ಪ್ರದಕ್ಷಿಣೆ ಮಾಡಬೇಕು. ಇದಲ್ಲದೇ ಆಷಾಢ ಅಮಾವಾಸ್ಯೆಯಂದು ಬಡವರಿಗೆ ಅಥವಾ ನಿರ್ಗತಿಕರಿಗೆ ದಾನ-ದಕ್ಷಿಣೆ ನೀಡಿ.

* ಈ ದಿನದಂದು ನಿರ್ಗತಿಕರಿಗೆ ಆಹಾರ ನೀಡಿ. ಅಮವಾಸ್ಯೆಯಂದು ಮರ, ಗಿಡಗಳನ್ನು ನೆಡಲಾಗುತ್ತದೆ. ಹೀಗೆ ಮಾಡುವುದರಿಂದ ತಿಳಿದೋ ತಿಳಿಯದೆಯೋ ಮಾಡಿದ ಅನೇಕ ರೀತಿಯ ದೋಷಗಳು ಮತ್ತು ಪಾಪಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.

ಈ ದಿನದಂದು ಯಾವುದೇ ಶುಭ ಕಾರ್ಯವನ್ನು ದೇವರಿಗೆ ಸ್ತೋತ್ರಗಳು ಮತ್ತು ಸ್ತುತಿಗಳೊಂದಿಗೆ ಪ್ರಾರಂಭಿಸಬೇಕು. ಹಾಗೆಯೇ ನಿತ್ಯ ಜೀವನದಲ್ಲಿ ಬಳಕೆಯಾಗುವ ವಸ್ತುಗಳಿಗೆ ಸೂಕ್ತ ಗೌರವ ನೀಡಬೇಕು.

English summary

Ashadha Amavasya 2022 date, time, muhurta, rituals and significance in Kannada

Ashadha Amavasya 2022 date, time, muhurta, rituals and significance in Kannada, read on....
X
Desktop Bottom Promotion