For Quick Alerts
ALLOW NOTIFICATIONS  
For Daily Alerts

ಜ್ಯೋತಿಶಾಸ್ತ್ರದ ಪ್ರಕಾರ ಯಾವ ಉದ್ಯಮ ಅಥವಾ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುವುದು?

|

ಉದ್ಯೋಗವೆನ್ನುವುದು ಜೀವನದ ಒಂದು ಅವಿಭಾಜ್ಯ ಅಂಗ. ಉದ್ಯೋಗವಿಲ್ಲದೆ ಖಂಡಿತವಾಗಿಯೂ ಜೀವನ ನಿರ್ವಹಣೆ ಸಾಧ್ಯವಿಲ್ಲ. ನಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಉದ್ಯೋಗದ ಆಯ್ಕೆಯು ಪ್ರಮುಖವಾಗಿರುವುದು. ಕೆಲವರು ತಮಗೆ ಇಷ್ಟವಿರುವಂತಹ ಉದ್ಯೋಗ ಮಾಡಿಕೊಂಡು ಬದುಕುತ್ತಿರುವರು. ಇನ್ನು ಕೆಲವರು ಜೀವನ ಸಾಗಿಸಲು ಯಾವುದಾದರೂ ಒಂದು ಉದ್ಯೋಗದಲ್ಲಿರುವರು.

ಆದರೆ ಜ್ಯೋತಿಷ್ಯಶಾಸ್ತ್ರ, ಜನ್ಮಕುಂಡಲಿಗೆ ಅನುಗುಣವಾಗಿ ಉದ್ಯೋಗ ಮಾಡಿದರೆ ಅದರಲ್ಲಿ ಹೆಚ್ಚಿನ ಯಶಸ್ಸು ಹಾಗೂ ಸಮೃದ್ಧಿ ಸಿಗುವುದು ಎಂದು ಹೇಳಲಾಗುತ್ತದೆ. ನೀವು ಯಾವುದೇ ಉದ್ಯೋಗ ಅಥವಾ ಉದ್ಯಮ ಮಾಡುತ್ತಲಿದ್ದರೆ ಜ್ಯೋತಿಷ್ಯದ ಪ್ರಭಾವವು ಪ್ರಮುಖ ಪಾತ್ರ ವಹಿಸುವುದು. ಇಂದಿನ ದಿನಗಳಲ್ಲಿ ನಾವು ಹೆಚ್ಚಿನವರನ್ನು ನೋಡಿದರೆ ಅವರು ಕಲಿಯುವ ವಿದ್ಯೆಯೇ ಬೇರೆ ಮತ್ತು ಮಾಡುವಂತಹ ಉದ್ಯೋಗ ಅಥವಾ ವ್ಯಾಪಾರವೇ ಭಿನ್ನವಾಗಿರುವುದು. ಇದಕೆಲ್ಲಾ ಕಾರಣವೇನು? ಜನ್ಮಕುಂಡಲಿಯಲ್ಲಿ ಇರುವಂತಹ ಐದನೇ ಮನೆಯ ದೇವರು, ಇದು ಆದಾಯಕ್ಕೆ ಸಂಬಂಧಿಸಿದ್ದಾಗಿದೆ. ಜ್ಯೋತಿಷ್ಯದ ಪ್ರಕಾರ 2, 5, 9 ಮತ್ತು 11ನೇ ಮನೆಯು ಆದಾಯಕ್ಕೆ ಸಂಬಂಧಿಸಿದ್ದಾಗಿದೆ.

Astrology

ಐದನೇ ಮನೆಯ ದೇವರಿಗೆ ಈ ಮನೆಗಳ ಸಂಪರ್ಕವಿದ್ದರೆ ಆಗ ಅವರು ಕಲಿತಿರುವಂತಹ ವಿದ್ಯೆಯಿಂದ ಹೆಚ್ಚಿನ ಸಂಪಾದನೆ ಮಾಡಲು ಸಾಧ್ಯತೆಯಿದೆ. ಆದರೆ ಐದನೇ ಮನೆಯ ದೇವರು ಈ ಮನೆಗೆ ಸಂಪರ್ಕದಲ್ಲಿ ಇರದೇ ಇದ್ದರೆ ಆಗ ಖಂಡಿತವಾಗಿಯೂ ಆದಾಯದ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಗಳೂ ಇವೆ. ಯಾವ ಉದ್ಯೋಗ ಅಥವಾ ವ್ಯಾಪಾರವು ಯಾರಿಗೆ ಹೊಂದಿಕೊಳ್ಳುವುದು ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮಕುಂಡಲಿಯ 2, 5, 9 ಮತ್ತು 11ನೇ ಮನೆಯು ಸಂಪರ್ಕದಲ್ಲಿದ್ದರೆ ಆಗ ಆದಾಯವು ಹೆಚ್ಚಾಗುವುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಗ್ರಹದ ಮಹತ್ವವೇನು?

ಎಲ್ಲಕ್ಕಿಂತಲೂ ಮೊದಲು ಈ ಮನೆಗಳಲ್ಲಿ ಯಾವ ಗ್ರಹವು ತುಂಬಾ ಪ್ರಬಲವಾಗಿದೆ ಎಂದು ತಿಳಿಯಬೇಕು. ಈ ಗ್ರಹಗಳು ಆದಾಯಕ್ಕೆ ಒಳ್ಳೆಯ ಆಯ್ಕೆ ನಿರ್ಮಿಸುವುದು.

ಸೂರ್ಯ ಪ್ರಬಲವಾಗಿದ್ದರೆ

ಸೂರ್ಯ ಪ್ರಬಲವಾಗಿದ್ದರೆ

ಸರ್ಕಾರಿ ಸಂಬಂಧಿ ಉದ್ಯೋಗ, ಆಮದು ಮತ್ತು ರಫ್ತು, ಸ್ವರ್ಣೋದ್ಯಮ, ಇಂಧನ ವ್ಯಾಪಾರ, ನರ್ಸರಿಯಂತಹ ಉದ್ಯಮ, ಬಟ್ಟೆಗೆ ಸಂಬಂಧಿಸಿದ ಯಾವುದೇ ಉದ್ಯಮ, ಔಷಧಿ ಮತ್ತು ಆಹಾರಧ್ಯಾನ ಉದ್ಯಮಗಳು ಒಳ್ಳೆಯ ಘನತೆ ಮತ್ತು ಪ್ರಸಿದ್ಧಿ ನೀಡುವುದು.

ಪ್ರಬಲ ಚಂದ್ರನ ಪ್ರಭಾವ

ಪ್ರಬಲ ಚಂದ್ರನ ಪ್ರಭಾವ

ಹಾಲಿಗೆ ಸಂಬಂಧಿಸಿದ ವ್ಯಾಪಾರ, ಬಿಸಿ ಮತ್ತು ತಂಪಾದ ಪಾನೀಯಗಳು, ನೀರು, ಬೆಳ್ಳಿಗೆ ಸಂಬಂಧಿಸಿದ ವ್ಯಾಪಾರ, ಟೂರ್ಸ್ ಅಂಡ್ ಟ್ರಾವೆಲ್ಸ್ ಉದ್ಯಮ, ಸಿದ್ಧ ಉಡುಪುಗಳ ಗಾರ್ಮೆಂಟ್ಸ್ ಉದ್ಯಮ, ಕೃಷಿ, ನರ್ಸರಿ, ಆಟಿಕೆ, ಋತುಮಾನಕ್ಕೆ ಅನುಗುಣವಾಗಿ ಉದ್ಯಮ, ಸಾರಿಗೆ, ಉಪ್ಪು, ಸಿಲ್ಕ್, ಪಾಲಿಸ್ಟರ್ ಬಟ್ಟೆ, ಎಲ್ಲಾ ರೀತಿಯ ಡಿಸೈನಿಂಗ್ ಕ್ಷೇತ್ರ, ಬರಹ, ಕಲೆ, ಮಕ್ಕಳು ಮತ್ತು ವೈದ್ಯರಿಗೆ ಸಂಬಂಧಿಸಿದ ಶಿಕ್ಷಣ.

ಮಂಗಳ ಗ್ರಹವು ಪ್ರಬಲವಾಗಿದ್ದರೆ

ಮಂಗಳ ಗ್ರಹವು ಪ್ರಬಲವಾಗಿದ್ದರೆ

ಕಠಿಣ ಪರಿಶ್ರಮಕ್ಕೆ ಸಂಬಂಧಿಸಿದ ವ್ಯಾಪಾರ, ಎಲ್ಲಾ ರೀತಿಯ ಯಂತ್ರೋಪಕರಣಗಳು, ವಿದ್ಯುತ್ ಮತ್ತು ವಿದ್ಯುತ್ ಉಪಕರಣಗಳು, ಚಿನ್ನ, ರಾಸಾಯನಿಕ, ಕೃಷಿ, ರಸಗೊಬ್ಬರ ಮತ್ತು ಕೀಟನಾಶಕ, ಸೇನೆ, ಶಸ್ತ್ರಚಿಕಿತ್ಸೆ, ವಾಹನ, ಬಿಡಿಭಾಗಗಳು ಇತ್ಯಾದಿಗಳಿಗೆ ಸಂಬಂಧಿಸಿದ ವ್ಯಾಪಾರ, ಎಲ್ಲಾ ರೀತಿಯ ಸಲಕರಣೆಗಳು, ಕ್ರೀಡಾ ಸಲಕರಣೆಗಳು, ಸಾಹಸಪ್ರವೃತ್ತಿಗೆ ಸೇರಿದ ವ್ಯಾಪಾರ, ಇಂಧನ ಮತ್ತು ಗಣಿಗೆ ಸಂಬಂಧಿತ ಉದ್ಯಮ.

ಪ್ರಬಲ ಬುಧನಿದ್ದರೆ

ಪ್ರಬಲ ಬುಧನಿದ್ದರೆ

ಸಲಹೆಗಾರರಿಗೆ ಸಂಬಂಧಿಸಿದ ಉದ್ಯಮ, ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಉದ್ಯಮ, ಮಾಧ್ಯಮ ಮತ್ತು ಸಿನಿಮಾ ಕ್ಷೇತ್ರ, ಜಾಹೀರಾತು, ಸಾರಿಗೆ, ಪ್ರಕಾಶಕ, ಪುಸ್ತಕ ಮಾರಾಟ ಉದ್ಯಮ ಮಾಡಬಹುದು. ಬೆಳ್ಳಿ, ಎಲ್ಲಾ ರೀತಿಯ ಧಾನ್ಯಗಳು, ತರಕಾರಿ ಮತ್ತು ಹಣ್ಣುಗಳಿಗೆ ಸಂಬಂಧಿತ ಉದ್ಯಮ. ಷೇರುಮಾರುಕಟ್ಟೆ, ಸರಕಿಗೆ ಸಂಬಂಧಿಸಿದ ವ್ಯಾಪಾರ, ವಿತ್ತ ಮತ್ತು ಕಾನೂನಿಗೆ ಸಂಬಂಧಿಸಿದ ವ್ಯಾಪಾರ. ಟೆಲಿಫೋನಿಕ್ ಕೆಲಸಗಳಿಗೆ ಸಂಬಂಧಿಸಿದ ಉದ್ಯೋಗ, ಕಾಲ್ ಸೆಂಟರ್, ಸಾರ್ವಜನಿಕ ಸಂಪರ್ಕ ಮತ್ತು ಪೇಪರ್ ಗೆ ಸಂಬಂಧಿಸಿದ ಉದ್ಯಮವನ್ನು ಮಾಡಬಹುದು.

ಗುರು ಪ್ರಬಲನಾಗಿದ್ದರೆ

ಗುರು ಪ್ರಬಲನಾಗಿದ್ದರೆ

ಧಾರ್ಮಿಕ ಆಚರಣೆಗಳು, ಧಾರ್ಮಿಕ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರ ಮತ್ತು ನಿಮ್ಮನ್ನು ಹಿಂಬಾಲಿಸುವಂತಹ ತುಂಬಾ ಜನರು ಇರುವ ಕೆಲಸ. ಹೋಟೆಲ್ ಮತ್ತು ರೆಸ್ಟೋರೆಂಟ್ ಗೆ ಸಂಬಂಧಿಸಿದ ಕೆಲಸ, ಶಿಕ್ಷಣ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಸೇರಿದ ವ್ಯಾಪಾರ, ಆಹಾರಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಉದ್ಯಮ, ಹಾಲಿನ ಉತ್ಪನ್ನಗಳು, ಎಣ್ಣೆಗೆ ಸಂಬಂಧಿಸಿದ ಉದ್ಯಮ, ಬ್ಯಾಂಕ್, ಲೆಕ್ಕ ಪರಿಶೋಧಕರಿಗೆ ಸಂಬಂಧಿಸಿದ ಉದ್ಯಮ, ಪ್ರಕಾಶನ ಕೆಲಸಕ್ಕೆ ಸಂಬಂಧಿಸಿದ ಉದ್ಯಮ ಮಾಡಬಹುದು.

ಶುಕ್ರ ಪ್ರಬಲನಾಗಿದ್ದರೆ

ಶುಕ್ರ ಪ್ರಬಲನಾಗಿದ್ದರೆ

ಐಷಾರಾಮಿ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರ, ಸಿನಿಮಾ, ನಟನೆ, ನಾಟಕ, ಕಥೆ ಬರೆಯುವುದು, ನಿರ್ದೇಶನ, ನೃತ್ಯ ನಿರ್ದೇಶಕ ಉದ್ಯೋಗಗಳು, ಎಲೆಕ್ಟ್ರಾನಿಕ್ ವಸ್ತುಗಳು, ಔಷಧಿಗಳು, ಸಾರ್ವಜನಿಕ ಸಂಪರ್ಕ, ರಾಜಕೀಯ, ಹೋಟೆಲ್, ರೆಸ್ಟೋರೆಂಟ್, ಪೈಟಿಂಗ್ ಗೆ ಸಂಬಂಧಿಸಿದ ಉದ್ಯಮ, ಸಂಗೀತ, ನೃತ್ಯ, ಕವನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಉದ್ಯಮ ಮಾಡಬಹುದು. ಕಾರ್ಯಕ್ರಮ ಸಂಯೋಜನೆ, ಫ್ಯಾಷನ್, ಸೌಂದರ್ಯ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರ, ಆಭರಣ, ಡೆಕೋರೇಷನ್, ಇಂಟೀರಿಯರ್ ಡಿಸೈನ್, ಆರ್ಕಿಟೆಕ್ಚರ್, ರೆಡಿಮೇಡ್ ಬಟ್ಟೆಗಳು ಮತ್ತು ಬ್ರಾಂಡೆಡ್ ಬಟ್ಟೆಗಳ ಉದ್ಯಮ ಮಾಡಬಹುದು.

ಶನಿಯು ಈ ಮನೆಗಳಲ್ಲಿ ಪ್ರಬಲನಾಗಿದ್ದರೆ

ಶನಿಯು ಈ ಮನೆಗಳಲ್ಲಿ ಪ್ರಬಲನಾಗಿದ್ದರೆ

ಎಲ್ಲಾ ರೀತಿಯ ಲೋಹಗಳ ಉದ್ಯಮ, ಉತ್ಪಾದನೆ, ಜಾಬ್ ವರ್ಕ್ಸ, ಸಬ್ ಕಾಂಟ್ರಾಕ್ಟರ್, ಕೂಲಿ, ವಾಸ್ತುಶಿಲ್ಪ, ಕಾಮಗಾರಿ ಕೆಲಸಗಳು, ಕಟ್ಟಡದ ಸಲಕರಣೆಗಳು, ಪ್ಲಬಿಂಗ್, ಕೂಲಿ ಕೆಲಸಕ್ಕೆ ಸಂಬಂಧಿಸಿದ ಉದ್ಯಮ, ನ್ಯಾಯ, ಸಿಮೆಂಟ್, ಗಣಿ, ಕಲ್ಲಿದ್ದಲು, ಪುರಾತತ್ವ, ಸಂಶೋಧನೆ ಕೆಲಸ, ವಿತ್ತ, ಆರ್ಥಿಕ, ರಖಂ ವ್ಯಾಪಾರಿ, ಮಾಲ್ಸ್ ಮತ್ತು ಸೂಪರ್ ಮಾರ್ಕೆಟ್ ಗಳು, ಪ್ರಾವಿಷನ್ ಸ್ಟೋರ್, ಕೃಷಿ, ಬ್ಯಾಂಕಿಂಗ್, ಭೂಮಿ ಅಭಿವೃದ್ಧಿ, ಪ್ಯಾಕೇಜಿಂಗ್, ಕಾರ್ಪೆಂಟರ್, ಚಮ್ಮಾರ, ಪ್ರಾಥಮಿಕ ಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗ, ಎಣ್ಣೆ, ಪೆಟ್ರೋಲ್, ಗ್ಯಾಸೋಲಿನ್, ಕಚ್ಚಾ ತೈಲ, ಮೆಕ್ಯಾನಿಕಲ್ ಕೆಲಸ, ಲೆಕ್ಕ ಪರಿಶೋಧಕ, ವಾಣಿಜ್ಯ ಉದ್ಯಮ, ಶೇರು, ಶೇರು ಮಾರುಕಟ್ಟೆ ಮತ್ತು ಸರಕು ಉದ್ಯಮ ಮಾಡಬಹುದು.

ರಾಹು ತುಂಬಾ ಬಲವಾಗಿದ್ದಾಗ

ರಾಹು ತುಂಬಾ ಬಲವಾಗಿದ್ದಾಗ

ಆಟೋಮೊಬೈಲ್, ಇಂಜಿನಿಯರಿಂಗ್, ತಾಂತ್ರಿಕ ಕೆಲಸ, ವಿಷಕಾರಿ ಡ್ರಗ್ಸ್, ಕೀಟನಾಶಕ, ರಸಗೊಬ್ಬರ, ಅನೆಸ್ತೇಶಿಯಾ, ರಾಸಾಯನಿಕ, ಆ್ಂಟಿಬಯೋಟಿಕ್, ಫಾರ್ಮಸಿ, ಪ್ಯಾಥಾಲಜಿ, ಲ್ಯಾಬ್ ಟೆಕ್ನಿಶಿಯನ್, ಮದ್ಯ, ಸಮಾಜ ವಿರೋಧಿ ಚಟುವಟಿಕೆಗಳು, ಮೋಸದ ಕೆಲಸಗಳು, ಅತೀಂದ್ರಿಯ, ಗಣಿ, ಸ್ಮಗ್ಲಿಂಗ್, ಐಷಾರಾಮಿ ವಸ್ತುಗಳು, ಜೂಜು, ಊಹೆ, ಲಾಟರಿ, ವಿದೇಶಿ ಭಾಷೆಗಳು, ರಫ್ತು ಮತ್ತು ಆಮದು.

ಕೇತು ಈ ಮನೆಗಳಲ್ಲಿ ಪ್ರಬಲನಾಗಿದ್ದರೆ

ಕೇತು ಈ ಮನೆಗಳಲ್ಲಿ ಪ್ರಬಲನಾಗಿದ್ದರೆ

ಋತುವಿಗೆ ಸಂಬಂಧಿಸಿದ ಕೆಲಸಗಳು, ಬಹು ಉದ್ಯಮ, ಧಾರ್ಮಿಕ ವಿಚಾರಗಳು, ಗ್ಯಾಸ್, ಬೆಂಕಿ, ಎಲ್ಲಾ ಲೋಹಗಳಿಗೆ ಸಂಬಂಧಿಸಿದ ಕೆಲಸ, ಸಂಸ್ಕರಣ ಕೆಲಸ, ಜಾನುವಾರು ತಳಿ, ಕೃಷಿ, ಸಾಕುಪ್ರಾಣಿಗಳು, ಡ್ರಗ್ಸ್ ಮತ್ತು ಸಾಧನಗಳು, ಜಿಮ್, ಅರಣ್ಯಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳು, ರಾಸಾಯನಿಕಗಳು, ಧಾರ್ಮಿಕ ಕೆಲಸಗಳು, ಪ್ರಬಲ ಸುಗಂಧವಿರುವ ಕೆಲಸಗಳು, ವೈದ್ಯಕೀಯ, ಕಂಪ್ಯೂಟರ್, ಬಹು ಉತ್ಪಾದನೆ, ರಖಂ ವ್ಯಾಪಾರ, ಜ್ಯೋತಿಷ್ಯ, ಶಿಕ್ಷಣ ಹೊರತಾದ ಧಾರ್ಮಿಕ ಕ್ಷೇತ್ರ, ಕ್ರೀಡಾ ಉತ್ಪನ್ನಗಳು, ಸಾರಿಗೆ ಮತ್ತು ಭಾರೀ ವಾಹನಗಳು.

English summary

As Per Astrology Which Business Is Preferable For You

Determining the nature of your profession or the sources of income is a very tough task for any astrologer. Selection of a business is a very important decision of life. There are many astrological factors which need to be considered. Astrological readings can also suggest whether you can enjoy smooth success in your business ventures. You must have heard of some people studying in one field with distinction, but later doing some other business. What is the reason behind this? We all know in astrology, the fifth lord in natal chart indicates what to study. This planetary position may is connected with the source of income. In astrology, 2nd house, 5th house, 9th house and 11th house indicates the source of income.
X
Desktop Bottom Promotion