For Quick Alerts
ALLOW NOTIFICATIONS  
For Daily Alerts

ಜ್ಯೋತಿಶಾಸ್ತ್ರದ ಪ್ರಕಾರ 2020ರಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹೇಗಿರಲಿದೆ

|

ಇಡೀ ಜಗತ್ತು ನಿಂತಿರುವುದೇ ಪ್ರೀತಿ, ವಿಶ್ವಾಸ, ನಂಬಿಕೆಯ ಮೇಲೆ ಎಂದು ಹಲವರು ಹೇಳಿದರೆ, ಇನ್ನೂ ಕೆಲವರು ಪ್ರಪಂಚ ಓಡುತ್ತಿರುವುದೇ ಹಣದಿಂದ ಎಂದು ವಾದಿಸುತ್ತಾರೆ. ನಾವೀಗ ಇದರ ಬಗ್ಗೆ ವಾದ ಮಾಡುವುದು ಬೇಡ ಆದರೆ, ಒಬ್ಬ ಆಗರ್ಭ ಶ್ರೀಮಂತನಿಂದ ದಿನಗೂಲಿ ಕಾರ್ಮಿಕನವರೆಗೂ ಎಲ್ಲರೂ ನಿತ್ಯ ದುಡಿಯುವುದು ವಿಟಿಮಿನ್ ಎಂ(ಮನಿ-ಹಣ)ಗಾಗಿಯೇ. ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತೆ, ದುಡ್ಡಿದ್ದವನೇ ದೊಡ್ಡಪ್ಪ ಎಂಬೆಲ್ಲಾ ಗಾದೆಗಳು ಹಣ ಜೀವನಕ್ಕೆ ಎಷ್ಟು ಪ್ರಾಮುಖ್ಯ ಎಂಬುದನ್ನು ಜಗತ್ತಿಗೆ ಸಾರುತ್ತದೆ.

ಹಣಕ್ಕೆ ಇಷ್ಟೆಲ್ಲಾ ಪ್ರಾಧಾನ್ಯತೆ ಇರುವಾಗ ನಿಮ್ಮ ವಿಟಮಿನ್ ಎಂ ಸ್ಥಿತಿ ಹೇಗಿರಲಿದೆ ಎಂದು ತಿಳಿಯುವ ಕುತೂಹಲ ನಿಮಗೂ ಇರುತ್ತದೆ ಅಲ್ಲವೇ?. ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ 2020 ನೂತನ ಸಂವತ್ಸರದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹೇಗಿರಲಿದೆ, ಹಣದ ವಿಚಾರದಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗಲಿದೆ ಎಂಬ ಕುತೂಹಲಕಾರಿ ಸಂಗತಿಗಳನ್ನು ಈ ಲೇಖನ ನಿಮಗೆ ತಿಳಿಸಿಕೊಡಲಿದೆ. ಬೋಲ್ಡ್ ಸ್ಕೈ ಕನ್ನಡ ನಿಮಗಾಗಿ ಜ್ಯೋತಿಶಾಸ್ತ್ರದ ಪ್ರಕಾರ 2020 ನೂತನ ವರ್ಷದಲ್ಲಿ 12 ರಾಶಿಗಳಿಗೆ ಅನುಗುಣವಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಹೇಗಿರಲಿದೆ ಎಂದು ಸವಿವರವಾಗಿ ನೀಡಿದೆ.

ಮೇಷ ರಾಶಿ

ಮೇಷ ರಾಶಿ

2020ರ ಆರ್ಥಿಕ ವರ್ಷವು ಮೇಷ ರಾಶಿಯ ವ್ಯಕ್ತಿಗಳಿಗೆ ಉತ್ತಮವಾಗಿದೆ ಎಂದು ಹಲವು ಸಂದರ್ಭಗಳೇ ನಿಮಗೆ ಸಾಬೀತುಪಡಿಸುತ್ತದೆ. ಹಣ ಸಂಪಾದಿಸಲು ನೀವು ಅನೇಕ ಉತ್ತಮ ಅವಕಾಶಗಳನ್ನು ಪಡೆಯಬಹುದು. ಆದರೂ, ಈ ಅವಕಾಶಗಳ ಲಾಭವನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಈ ವರ್ಷ ನೀವು ಯಾವುದೇ ಹಣಕಾಸಿನ ಸಮಸ್ಯೆಗಳು ಎದುರಾದರೂ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ನಿಮಗೆ ಸರಿಯಾದ ಸಮಯದಲ್ಲಿ ಸಹಾಯ ಮಾಡುತ್ತಾರೆ. ವರ್ಷದ ಮಧ್ಯದಲ್ಲಿ, ಆರ್ಥಿಕವಾಗಿ ಕೆಲವು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಈ ವರ್ಷ, ನೀವು ಅನೇಕ ಪ್ರವಾಸಗಳನ್ನು ಮಾಡಲಿದ್ದೀರಿ, ಇದು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುತ್ತದೆ.

ವೃಷಭ ರಾಶಿ

ವೃಷಭ ರಾಶಿ

ಈ ವರ್ಷವು ಹಣದ ವಿಷಯದಲ್ಲಿ ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ವರ್ಷದ ಆರಂಭದಲ್ಲೇ ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ, ಆದರೆ ಜತೆಯಲ್ಲೆ, ಹಣ ನಷ್ಟವಾಗಲಿದ್ದು, ಈ ಪರಿಸ್ಥಿತಿಯನ್ನು ಸಹ ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕು. ಅಲ್ಲದೆ, ಯಾವುದೇ ಪ್ರಮುಖ ಹೂಡಿಕೆ ಮಾಡುವುದನ್ನು ತಪ್ಪಿಸಿ. ವರ್ಷದ ಆರಂಭದಲ್ಲಿ ಮತ್ತು ಸೆಪ್ಟೆಂಬರ್ ನಂತರ ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ಅಗತ್ಯವಿದ್ದಾಗಲೆಲ್ಲಾ ನಿಮಗೆ ಆರ್ಥಿಕ ಸಹಾಯ ಸಿಗುತ್ತದೆ, ಆದರೂ ಅದು ನಿಮ್ಮ ಹೊರೆಯನ್ನು ಹೆಚ್ಚಿಸಬಹುದು.

ಮಿಥುನ ರಾಶಿ

ಮಿಥುನ ರಾಶಿ

ಈ ವರ್ಷ ಹಣದ ವಿಷಯದಲ್ಲಿ ಸವಾಲುಗಳು ತುಂಬಿರುತ್ತವೆ. ಗ್ರಹಗಳ ಸ್ಥಾನ ಬದಲಾವಣೆಯಿಂದ ನೀವು ನಷ್ಟವನ್ನು ಅನುಭವಿಸುವ ಮುನ್ಸೂಚನೆ ಇರುವುದರಿಂದ ಆರ್ಥಿಕ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಆದರೆ, ಈ ಸಮಯದಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುವುದರಿಲ್ಲ, ಆದ್ದರಿಂದ ವರ್ಷದ ಪ್ರಾರಂಭವು ನಿಮಗೆ ಒಳ್ಳೆಯದಾಗಲಿದೆ. ಆದರೂ, ನಂತರದ ಸಮಯವು ನಿಮಗೆ ಕಷ್ಟದ ಪರಿಸ್ಥಿತಿ ಎದುರಾಗಬಹುದು. ನಿರಂತರ ಏರಿಳಿತದ ಸ್ಥಿತಿ ಇರುತ್ತದೆ ಮತ್ತು ನೀವು ಉತ್ತಮ ಲಾಭವನ್ನು ನಿರೀಕ್ಷಿಸಿದ ವಿಷಯಗಳಲ್ಲಿ ನಿರಾಶೆಯನ್ನು ಎದುರಿಸಬೇಕಾಗುತ್ತದೆ ಎಚ್ಚರ.

ಕರ್ಕ ರಾಶಿ

ಕರ್ಕ ರಾಶಿ

ವರ್ಷವು ಆರ್ಥಿಕವಾಗಿ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಖರ್ಚಿನಲ್ಲಿ ನಿರಂತರ ಹೆಚ್ಚಳ ಆಗುವುದರಿಂದ ಅನೇಕ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಯಾವುದೇ ಅಡೆತಡೆಯಿಲ್ಲದೆ ಸ್ವಲ್ಪ ಹಣವನ್ನು ಸಂಪಾದಿಸಲು ಸಾಧ್ಯವಾಗುವುದರಿಂದ ತಿಂಗಳ ಆರಂಭವು ನಿಮಗೆ ಉತ್ತಮವಾಗಿರುತ್ತದೆ. ಆದರೆ ಈ ಅವಧಿಯ ನಂತರ, ಸಾಕಷ್ಟು ಕಷ್ಟಪಡಬೇಕಾಗಬಹುದು, ಈ ಬಗ್ಗೆ ಗಮನವಿರಲಿ. ಯಾವುದೇ ದೊಡ್ಡ ಆರ್ಥಿಕ ವಹಿವಾಟು ಅಥವಾ ಹೂಡಿಕೆಯನ್ನು ಬಹಳ ಚಿಂತನಶೀಲವಾಗಿ ಮಾಡಿ. ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ ಇಲ್ಲದಿದ್ದರೆ ಹಣವು ದೀರ್ಘಕಾಲದವರೆಗೆ ಸಿಲುಕಿಕೊಳ್ಳಬಹುದು.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯ ವ್ಯಕ್ತಿಗಳು ಈ ವರ್ಷ ಹಣ ಸಂಪಾದಿಸುವಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರ ಹೊರತಾಗಿಯೂ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಉತ್ತಮ ಪ್ರಯೋಜನಗಳನ್ನು ಪಡೆಯಲು ನೀವು ತುಂಬಾ ಶ್ರಮಿಸುತ್ತೀರಿ. ಅಂತಹ ಸಮಸ್ಯೆಗಳನ್ನು ತಪ್ಪಿಸಲು ಯೋಜನೆಗಳನ್ನು ಅನುಸರಿಸಿ. ಈ ವರ್ಷ ಅನೇಕ ದೊಡ್ಡ ವೆಚ್ಚಗಳು ಉಂಟಾಗುವ ಸಾಧ್ಯತೆ ಇದೆ. ಜುಲೈನಿಂದ ನವೆಂಬರ್ ನಿಮಗೆ ಉತ್ತಮ ಸಮಯವಾಗಿದೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯ ವ್ಯಕ್ತಿಗಳಿಗೆ ಈ ವರ್ಷ ಆರ್ಥಿಕ ಪ್ರಗತಿ ಉತ್ತಮವಾಗಿದೆ. ಲಾಭ ಗಳಿಸಲು ನಿಮಗೆ ಅನೇಕ ಅವಕಾಶಗಳು ಸಿಗುತ್ತವೆ ಮತ್ತು ಆರ್ಥಿಕವಾಗಿ ಸುರಕ್ಷಿತವಾಗಿರುತ್ತೀರಿ. ನಿಮ್ಮ ಅನೇಕ ಆಸೆಗಳನ್ನು ಈ ವರ್ಷ ಈಡೇರುತ್ತದೆ. ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ ಈ ವರ್ಷ ನೀವು ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಹಣಕಾಸಿನ ಯೋಜನೆಗಳಿಗೆ ಅನುಗುಣವಾಗಿ ಮುಂದುವರಿಯುತ್ತೀರಿ ಮತ್ತು ಸಾಕಷ್ಟು ಉಳಿಸುತ್ತೀರಿ. ಬಹುಶಃ ನೀವು ಲಾಟರಿ, ಷೇರು ಮಾರುಕಟ್ಟೆ ಇತ್ಯಾದಿಗಳಿಂದ ಉತ್ತಮ ಹಣವನ್ನು ಪಡೆಯಬಹುದು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಗೆ 2020 ವರ್ಷವು ಆರ್ಥಿಕವಾಗಿ ಪ್ರಯೋಜನಕಾರಿಯಾಗುವುದಿಲ್ಲ. ಆದರೂ, ನೀವು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು ಅದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ಇದು ವರ್ಷದ ಆರಂಭದಲ್ಲಿ ಮಾತ್ರ ಸಾಧ್ಯ. ನಂತರ, ಪರಿಸ್ಥಿತಿ ಕಷ್ಟವಾಗಬಹುದು ಮತ್ತು ನೀವು ಸಾಕಷ್ಟು ಕಷ್ಟಪಡಬೇಕಾಗುತ್ತದೆ ಈ ಬಗ್ಗೆ ಎಚ್ಚರವಾಗಿರಿ. ನಿಮ್ಮ ಖರ್ಚಿನ ಮೇಲೆ ಹಿಡಿತ ಸಾಧಿಸುವ ಮೂಲಕ ನೀವು ಅಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ನೀವು ಹಳೆಯ ಸಾಲವನ್ನು ಹೊಂದಿದ್ದರೆ, ಈ ವರ್ಷ ನೀವು ಅದನ್ನು ಮರುಪಾವತಿಸಲು ಸಾಧ್ಯವಾಗುತ್ತದೆ.

ವೃಶ್ಚಿಕ ರಾಶಿ -

ವೃಶ್ಚಿಕ ರಾಶಿ -

ಆರ್ಥಿಕ ದೃಷ್ಟಿಯಿಂದ ವರ್ಷವು ನಿಮಗೆ ತುಂಬಾ ಒಳ್ಳೆಯದು. ಹಣದ ಲಾಭಗಳನ್ನು ಗಳಿಸಲು ನೀವು ಅನೇಕ ಸಣ್ಣ ಮತ್ತು ದೊಡ್ಡ ಅವಕಾಶಗಳನ್ನು ಪಡೆಯುತ್ತೀರಿ, ಅದು ನಿಮ್ಮನ್ನು ಆರ್ಥಿಕವಾಗಿ ಸದೃಢವಾಗಿರಿಸುತ್ತದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಂಡರೆ ಸಾಕಷ್ಟು ಉಳಿಸಲು ಸಾಧ್ಯವಾಗುತ್ತದೆ. ಹಣಕಾಸಿನ ಬಿಕ್ಕಟ್ಟಿನಿಂದಾಗಿ ಯಾವುದೇ ಕೆಲಸ ನಿಲ್ಲುವುದಿಲ್ಲ. ಹಣವನ್ನು ಮರಳಿ ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆ ಇರುವುದರಿಂದ ಸಾಲ ನೀಡುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದರೆ, ಈ ವರ್ಷ ನೀವು ಅದರಿಂದ ಮುಕ್ತಿಪಡೆಯಬಹುದು.

ಧನು ರಾಶಿ

ಧನು ರಾಶಿ

ಧನು ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಈ ವರ್ಷ ಉತ್ತಮ ಫಲಿತಾಂಶಗಳು ಸಿಗಲಿದೆ. ಆದರೂ, ಪ್ರಯೋಜನಗಳನ್ನು ಪಡೆಯಲು ನೀವು ತುಂಬಾ ಶ್ರಮಿಸಬೇಕು. ನೀವು ಎಷ್ಟು ಹೆಚ್ಚು ಕೆಲಸ ಮಾಡುತ್ತೀರೋ ಅಷ್ಟು ಉತ್ತಮವಾಗಿ ಹಣ ಪಡೆಯುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ಈ ವರ್ಷ ಖರ್ಚಿನಲ್ಲಿ ಅನಿರೀಕ್ಷಿತ ಹೆಚ್ಚಳವಾಗಬಹುದು. ಅನಗತ್ಯ ವಿಷಯಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ವರ್ಷದ ಮಧ್ಯದಲ್ಲಿ ಸಮಯವು ನಿಮಗೆ ಬದಲಾಗುತ್ತದೆ, ಏಕೆಂದರೆ ನೀವು ಉಳಿಸಲು ಸಾಧ್ಯವಾಗುತ್ತದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಸಮಸ್ಯೆಯನ್ನು ಈ ವರ್ಷ ಪರಿಹರಿಸಬಹುದು. ನಿಮ್ಮ ಸರಿಯಾದ ನಿರ್ಧಾರದಿಂದ ದೊಡ್ಡ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.

ಮಕರ ರಾಶಿ

ಮಕರ ರಾಶಿ

ಹಣಕಾಸಿನ ವಿಷಯಗಳಲ್ಲಿ ನೀವು ಈ ವರ್ಷ ಬಹಳ ಜಾಗರೂಕರಾಗಿರಬೇಕು ಇಲ್ಲದಿದ್ದರೆ ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಬೇರೆಡೆ ಸಿಲುಕಿಕೊಂಡಿರುವ ಹಣದಿಂದಾಗಿ ತೊಂದರೆಗಳೂ ಉದ್ಭವಿಸಬಹುದು. ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗುತ್ತವೆ. ಹಣಕಾಸಿನ ತೊಂದರೆಗಳು ನಿಮ್ಮ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳಿಂದ ತುಂಬಿಸಬಹುದು ಮತ್ತು ಹಣವನ್ನು ಸಂಪಾದಿಸಲು ಶಾರ್ಟ್‌ಕಟ್ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ದೊಡ್ಡ ತೊಂದರೆಗೆ ಸಿಲುಕುವಂತಹ ಯಾವುದೇ ಸೂಕ್ತವಲ್ಲದ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ. ಹಣದ ವಿಷಯದಲ್ಲಿ ಈ ವರ್ಷ ನೀವು ಅದೃಷ್ಟವಂತರಲ್ಲದಿದ್ದರೂ, ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ವಿಷಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.

ಕುಂಭ ರಾಶಿ

ಕುಂಭ ರಾಶಿ

ಹಣಕಾಸಿನ ದೃಷ್ಟಿಯಿಂದ ಈ ವರ್ಷ ಸಾಮಾನ್ಯವಾಗಿರಲಿದೆ. ಸಣ್ಣ ಪ್ರಯೋಜನಗಳನ್ನು ಪಡೆಯಬಹುದಾದರೂ, ಹಣಕಾಸಿನ ವಿಷಯದಲ್ಲಿ ಯಾವುದೇ ರೀತಿಯ ಅಪಾಯ ತೆಗೆದುಕೊಳ್ಳುವುದನ್ನು ತಪ್ಪಿಸಿ, ವಿಶೇಷವಾಗಿ ದೊಡ್ಡ ಹೂಡಿಕೆ ಮಾಡುವಾಗ. ನೀವು ಹಣವನ್ನು ಪಡೆಯುತ್ತೀರಿ ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೆ ಈ ವರ್ಷ ವೇತನ ಹೆಚ್ಚಳ ಪಡೆಯುವ ಸಾಧ್ಯತೆಗಳಿವೆ. ಆದರೆ ಇದಕ್ಕಾಗಿ ನೀವು ಶ್ರಮಿಸಬೇಕು. ಉತ್ತಮ ಲಾಭ ಪಡೆಯುವ ಸಾಧ್ಯತೆ ಇರುವುದರಿಂದ ಜೂನ್‌ನಿಂದ ನವೆಂಬರ್‌ವರೆಗೆ ನಿಮಗೆ ಆರ್ಥಿಕವಾಗಿ ಉತ್ತಮ ಸಮಯ ಇದೆ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯ ವ್ಯಕ್ತಿಗಳು ಈ ವರ್ಷ ನಿರೀಕ್ಷಿತ ಆರ್ಥಿಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳು ಫಲ ನೀಡುತ್ತವೆ ಮತ್ತು ನಿಮಗೆ ಉತ್ತಮ ಸಂಪತ್ತು ಸಿಗುತ್ತದೆ. ವರ್ಷದ ಆರಂಭವು ತುಂಬಾ ಒಳ್ಳೆಯದಾಗಲಿದೆ. ಭಾರಿ ಲಾಭದ ಕಾರಣ ದೊಡ್ಡ ಆರ್ಥಿಕ ಜಿಗಿತ ಇರುತ್ತದೆ. ದೀರ್ಘಕಾಲದವರೆಗೆ ಸಿಲುಕಿಕೊಂಡ ಹಣವು ಈ ವರ್ಷ ಹಿಂತಿರುಗುತ್ತದೆ. ಮನೆಯಲ್ಲಿ ಶುಭ ಕೆಲಸದಿಂದಾಗಿ ನೀವು ವರ್ಷದ ಮಧ್ಯದಲ್ಲಿ ಕೆಲವು ಪ್ರಮುಖ ಖರ್ಚುಗಳನ್ನು ಎದುರಿಸಬೇಕಾಗುತ್ತದೆ.

English summary

Arthika Bhavishya 2020 | Finance Horoscope in Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Thursday, December 12, 2019, 18:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X