For Quick Alerts
ALLOW NOTIFICATIONS  
For Daily Alerts

2020ರಲ್ಲಿ ಅಮಾವಾಸ್ಯೆ ದಿನಗಳು ಹೀಗಿವೆ

|

ಚಂದ್ರಮಾಸದಲ್ಲಿ ಚಂದ್ರನು ಕಾಣದೇ ಇರುವ ದಿನವನ್ನು ಅಮಾವಾಸ್ಯೆ ಎಂದು ಕರೆಯುವ ರೂಢಿ ಇದೆ. ಈ ದಿನದಂದು ಆಕಾಶದಲ್ಲಿ ಚಂದ್ರ ಕಾಣುವುದಿಲ್ಲ ಅದ್ದರಿಂದ ಈ ದಿನವನ್ನು 'ಚಂದ್ರ ಇಲ್ಲದ ದಿನ' ಅಥವಾ 'ಹೊಸ ಚಂದ್ರನ ದಿನ' ಎಂದು ಕರೆಯುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಎಂದರೆ ವಿಶೇಷ ಪ್ರಾಧಾನ್ಯತೆ ಇದೆ. ಈ ಅಮಾವಾಸ್ಯೆಯು ತಿಂಗಳಿಗೆ ಒಂದು ದಿನ ಬರಲಿದ್ದು, ಒಟ್ಟಾರೆ ವರ್ಷದಲ್ಲಿ 12 ಬಾರಿ ಅಮಾವಾಸ್ಯೆಯ ದಿನ ಇರುತ್ತದೆ.

2020 Amavasye Dates

ಅಮಾವಾಸ್ಯೆಯಂದು ಚಂದ್ರನ ಮೇಲೆ ಸೂರ್ಯನ ಪ್ರಕಾಶವು ಬೀಳುವುದಿಲ್ಲ. ಸೋಮವಾರದಂದು ಅಮಾವಾಸ್ಯೆ ಇದ್ದರೆ ಇದನ್ನು ಸೋಮ್ವಾತಿ ಅಮಾವಾಸ್ಯೆ ಎಂದು ಹಾಗೂ ಶನಿವಾರ ಇದ್ದರೆ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಅಮಾವಾಸ್ಯೆಗಳು ತುಂಬ ಪವಿತ್ರ ಎಂದು ಹೇಳಲಾಗುತ್ತದೆ.
ಹಿಂದೂ ಸಂಪ್ರದಾಯದ ಒಂದು ನಂಬಿಕೆಯ ಪ್ರಕಾರ ಅಮಾವಾಸ್ಯೆಯಂದು ಮಾಡುವ ಅಥವಾ ಆರಂಭಿಸುವ ಯಾವುದೇ ಕೆಲಸಗಳು ಯಶಸ್ವಿಯಾಗುವುದಿಲ್ಲ. ಆದ್ದರಿಂದ ಈ ದಿನದಂದು ಯಾರೂ ಸಹ ಶುಭ ಕಾರ್ಯಗಳನ್ನು ಮಾಡುವುದಿಲ್ಲ.

2020ನೇ ಸಾಲಿನ ಅಮಾವಾಸ್ಯೆಯ ದಿನ ಮತ್ತು ಸಮಯ

ದಿನಾಂಕ ತಿಂಗಳು ಅಮಾವಾಸ್ಯೆ ಆರಂಭ ಅಮಾವಾಸ್ಯೆ ಅಂತ್ಯ

  1. 24 ಶುಕ್ರವಾರ ಜನವರಿ 24ರ ಮಧ್ಯರಾತ್ರಿ 2.17ರಿಂದ 25ರ ಮುಂಜಾನೆ 3.11ರವರೆಗೆ
  2. 23 ಭಾನುವಾರ ಫೆಬ್ರವರಿ 22ರ ಸಂಜೆ 7.02ರಿಂದ 23ರ ರಾತ್ರಿ 9.01ರವರೆಗೆ
  3. 23 ಸೋಮವಾರ ಮಾರ್ಚ್‌ 23ರ ಮಧ್ಯಾಹ್ನ 12.30ರಿಂದ 24ರ ಮಧ್ಯಾಹ್ನ 2.57ರವರೆಗೆ
  4. 22 ಬುಧವಾರ ಏಪ್ರಿಲ್ 22ರ ಬೆಳಿಗ್ಗೆ 5.37ರಿಂದ 23ರ ಬೆಳಿಗ್ಗೆ 7.05ರವರೆಗೆ
  5. 22 ಶುಕ್ರವಾರ ಮೇ 21ರ ರಾತ್ರಿ 9.35ರಿಂದ 22ರ ರಾತ್ರಿ 11.08ರವರೆಗೆ
  6. 20 ಶನಿವಾರ ಜೂನ್ 20ರ ಬೆಳಿಗ್ಗೆ 11.52ರಿಂದ 21ರ ಮಧ್ಯಾಹ್ನ 12.10ರವರೆಗೆ
  7. 20 ಸೋಮವಾರ ಜುಲೈ 20ರ ಮಧ್ಯರಾತ್ರಿ 12.10ರಿಂದ 20ರ ರಾತ್ರಿ 11.02ರವರೆಗೆ
  8. 18 ಗುರುವಾರ ಆಗಸ್ಟ 18ರ ಬೆಳಿಗ್ಗೆ 10.39ರಿಂದ 19ರ ಬೆಳಿಗ್ಗೆ 8.11ರವರೆಗೆ
  9. 17 ಗುರುವಾರ ಸೆಪ್ಟೆಂಬರ್ 16ರ ಸಂಜೆ 7.56ರಿಂದ 17ರ ಸಂಜೆ 4.29ರವರೆಗೆ
  10. 16 ಶುಕ್ರವಾರ ಅಕ್ಟೋಬರ್ 16ರ ಮುಂಜಾನೆ 4.52ರಿಂದ 17ರ ಮಧ್ಯರಾತ್ರಿ 1.00ರವರೆಗೆ
  11. 14 ಶನಿವಾರ ನವೆಂಬರ್‌ 14ರ ಮಧ್ಯಾಹ್ನ 2.17ರಿಂದ 15ರ ಬೆಳಿಗ್ಗೆ 10.36ರವರೆಗೆ
  12. 14 ಸೋಮವಾರ ಡಿಸೆಂಬರ್‌ 14ರ ಮಧ್ಯರಾತ್ರಿ 12.44ರಿಂದ 14ರ ರಾತ್ರಿ 9.46ರವರೆಗೆ

ಅಮಾವಾಸ್ಯೆಯಂದು ಈ ಕೆಲಸಗಳನ್ನು ತಪ್ಪದೇ ಮಾಡಿ
* ಧನ ಸಂಪತ್ತು , ಧಾನ್ಯ, ಐಶ್ವರ್ಯ, ಧೈರ್ಯ, ಜ್ಞಾನ ಹೀಗೆ ಅಷ್ಟೈಶ್ವರ್ಯಗಳೂ ನಿಮ್ಮದಾಗಬೇಕೆಂದರೆ ಅಮಾವಾಸ್ಯೆ ದಿನ ಸಂಜೆ ಧನಲಕ್ಷ್ಮೀ ಪೂಜೆ ಮಾಡಿದರೆ ಒಳ್ಳೆಯದು.
* ನಕಾರಾತ್ಮಕತೆಯಿಂದ ದೂರವಿರಲು ಹಾಗೂ ದೈವವನ್ನು ಒಲಿಸಿಕೊಳ್ಳಲು ಅವಾವಾಸ್ಯೆಯಂದು ಉಪವಾಸ ಮಾಡಿದರೆ ಶುಭ ಪ್ರಾಪ್ತಿಯಾಗುತ್ತದೆ.
* ಈ ದಿನ ರಕ್ತದಾನ ಮಾಡಿ, ಇದರಿಂದ ನೀವು ಮಾನಸಿಕ ಅಸ್ವಸ್ಥತೆಯಿಂದ ಮುಕ್ತರಾಗುವಿರಿ.
* ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ನೆನೆದು ದಾನ, ತರ್ಪಣ ಬಿಟ್ಟರೆ ಪೂರ್ವಜರಿಂದ ಆಶೀರ್ವಾದ ಸಿಗುತ್ತದೆ.
* ನೀವು ಸದಾ ಸರ್ವ ಸುಮಂಗಲಿಯಾಗಬೇಕೆಂದು ಬಯಸಿದರೆ ಈ ದಿನದಂದು ಅಶ್ವಥ ಪೂಜೆಯನ್ನು ಮಾಡಬೇಕು. ಅಶ್ವಥ ಮರವನ್ನು ಮುಟ್ಟಿ ಪೂಜೆ ಮಾಡುವುದರಿಂದ ಪಾಪ ನಾಶವಾಗಿವಾಗುತ್ತದೆ ಅಲ್ಲದೇ, ಪತಿಯ ಆಯುಷ್ಯ ಸಹ ಹೆಚ್ಚಾಗುತ್ತದೆ.
* ನಿಧನರಾದ ಹಿರಿಯರಿಗೆ ಈ ದಿನದಂದು ಪೂಜೆ-ಪುನಸ್ಕಾರ ಸಲ್ಲಿಸಿದರೆ ಅವರ ಆಶೀರ್ವಾದ ಸಿಗಲಿದೆ.
* ಸಾಧ್ಯವಿದ್ದಷ್ಟು ಈ ದಿನಗಳಂದು ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ.
* ನಿಮ್ಮ ಕುಲದೇವತೆ, ಇಷ್ಟದೇವತೆಯ ನಾಮಜಪನ್ನು ಹೆಚ್ಚು ಹೆಚ್ಚು ಮಾಡಿ.

English summary

2020 Amavasye Dates And What Should Do

Amavasya holds a great significance in the Hindu mythology. It is known as a ‘No Moon day’ or ‘New Moon Day’ as the Moon is not visible in the sky for this particular day. Amavasya occurs once in every month and so, falls twelve times a year. The day is regarded as the first fortnight of Shukla Paksha or waxing of the moon as per the Hindu calendar. Amavasya holds a great significance in the Hindu mythology. It is known as a ‘No Moon day’ or ‘New Moon Day’ as the Moon is not visible in the sky for this particular day. Amavasya occurs once in every month and so, falls twelve times a year. The day is regarded as the first fortnight of Shukla Paksha or waxing of the moon as per the Hindu calendar.
X
Desktop Bottom Promotion