For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ 7 ರಾಶಿಯವರು ಒಳ್ಳೆಯ ಮಾಜಿ ಪ್ರೇಮಿಗಳಲ್ಲವಂತೆ!

|

ಪ್ರತಿಯೊಬ್ಬರು ಜೀವಮಾನದಲ್ಲಿ ಒಂದು ಸಲವಾದರೂ ಪ್ರೀತಿಯ ವಿಚಾರದಲ್ಲಿ ಹೃದಯ ಛಿದ್ರ ಮಾಡಿಕೊಂಡಿರಬಹುದು. ಇಂತಹ ಪರಿಸ್ಥಿತಿ ಬರದೆ ಇರುವವರು ತುಂಬಾ ಅದೃಷ್ಟವಂತು ಎಂದು ಹೇಳಬಹುದು. ಯಾಕೆಂದರೆ ಪ್ರೀತಿಸುವವರಿಗೆ ಏನಾದರೊಂದು ಸಮಸ್ಯೆಯು ಬಂದೇ ಬರುವುದು. ಅದರಲ್ಲೂ ಹಲವಾರು ಧರ್ಮ ಹಾಗೂ ಜಾತಿಯನ್ನು ಒಳಗೊಂಡಿರುವಂತಹ ಭಾರತದಂತಹ ದೇಶದಲ್ಲಿ ಇಂತಹ ಸಮಸ್ಯೆಯು ಸಾಮಾನ್ಯ. ಇದರಿಂದಾಗಿ ಹೆಚ್ಚಿನವರಿಗೆ ಮೊದಲ ಪ್ರೀತಿ ಎನ್ನುವುದು ಸಿಗುವುದೇ ಇಲ್ಲ. ಇನ್ನು ಕೆಲವರು ಹಲವಾರು ಪ್ರೀತಿಯ ಸಂಬಂಧ ಕಡಿದುಕೊಂಡು ಜೀವಮಾನವಿಡಿ ಪರಿತಪಿಸುತ್ತಾ ಇರುವರು.

ಆದರೆ ಜೀವನ ಎನ್ನುವುದು ಪ್ರೀತಿಯನ್ನು ಮೀರಿದ್ದಾಗಿದೆ ಎಂದು ಅರ್ಥ ಮಾಡಿಕೊಂಡು ಮುಂದೆ ಸಾಗಬೇಕು. ಕೆಲವು ಭಗ್ನ ಪ್ರೇಮಿಗಳಿಗೆ ಇದು ಸಾಧ್ಯವಾಗುವುದೇ ಇಲ್ಲ. ಇದಕ್ಕೆ ನಾವು ನೇರವಾಗಿ ಅವರನ್ನು ದೂರಿದರೆ ಖಂಡಿತವಾಗಿಯೂ ಯಾವುದೇ ಪ್ರಯೋಜನವಿಲ್ಲ. ಅವರ ರಾಶಿಚಕ್ರವು ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು. ಪ್ರೀತಿಯ ಸಂಬಂಧ ಮುರಿದು ಬಿದ್ದ ವೇಳೆ ಕೆಲವು ಜನರು ಒಂದು ವಾರದಲ್ಲಿ ಇದರಿಂದ ಭಾವನಾತ್ಮಕವಾಗಿ ಮೇಲೆದ್ದು ಬರುವರು. ಇನ್ನು ಕೆಲವರಿಗೆ ಹೆಚ್ಚು ಸಮಯ ಬೇಕಾಗುವುದು. ತುಂಬಾ ಕಡಿಮೆ ಜನರು ಇದನ್ನು ತಕ್ಷಣವೇ ಮರೆತು ಬಿಟ್ಟು ಜೀವನದಲ್ಲಿ ಮುಂದೆ ಸಾಗುವರು. ರಾಶಿ ಚಕ್ರ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಈ ಏಳು ರಾಶಿಯವರು ಯಾವತ್ತಿಗೂ ಒಳ್ಳೆಯ ಮಾಜಿ ಪ್ರೇಮಿಗಳಾಗಿರಲ್ಲ ಎಂದು ಹೇಳಲಾಗಿದೆ. ಈ ರಾಶಿಗಳು ಯಾವುದು ಎಂದು ನೀವು ತಿಳಿಯಿರಿ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ತುಂಬಾ ಪ್ರೀತಿಯ ಹಾಗೂ ಪ್ರಾಮಾಣಿಕ ಸಂಗಾತಿಗಳು ಆಗಿರುವರು. ವಾಸ್ತವಿಕವಾಗಿ ಪ್ರೀತಿಯ ಸಂಬಂಧ ಕಡಿದುಕೊಳ್ಳುವುದು ಪರಸ್ಪರರ ಒಪ್ಪಿಗೆ ಮೇರೆಗೆ ಮತ್ತು ಸ್ನೇಹಪರವಾಗಿದ್ದರೆ ಅವರು ಇದನ್ನು ಒಪ್ಪಿಕೊಳ್ಳುವರು. ಆದರೆ ಒಂದು ವೇಳೆ ಸಂಗಾತಿಯು ಅವರಿಗೆ ಮೋಸ ಮಾಡಿದ್ದರೆ ಎಂದು ತಿಳಿದರೆ ಆಗ ಅವರು ಊಹಿಸಲಾಗದ ಮಾಜಿ ಪ್ರೇಮಿಯಾಗುವರು. ತಮ್ಮ ಜತೆ ಮಾಜಿ ಪ್ರೇಮಿಯು ಏನು ಮಾಡಿದ್ದಾರೆ ಎಂದು ಹೇಳಲು ಸಾಕ್ಷ್ಯ ಸಂಗ್ರಹ ಮಾಡುವರು ಮತ್ತು ಅವರು ಇದಕ್ಕೆ ಸೇಡು ತೀರಿಸಿಕೊಳ್ಳಲು ಪ್ರಯತ್ನ ಮಾಡುವರು. ಇವರು ಯಾವಾಗಲೂ ತಮ್ಮ ಮಾಜಿ ಜತೆಗೆ ಸಂಪರ್ಕದಲ್ಲಿ ಇರಲು ಬಯಸುವರು ಮತ್ತು ಏನು ನಡೆದಿದೆಯಾ ಅದಕ್ಕೆಲ್ಲಕ್ಕೂ ಅವರೇ ಕಾರಣ ಎಂದು ದೂಷಿಸುವರು. ಹೀಗೆ ಮಾಡದೆ ಇದ್ದರೆ, ಎಲ್ಲಾ ಸಂಪರ್ಕವನ್ನು ಕಡಿದುಕೊಂಡು ತಮ್ಮದೇ ಆಗಿರುವಂತಹ ಪ್ರಪಂಚದಲ್ಲಿ ಜೀವನ ಸಾಗಿಸುವರು. ನಾವು ಈ ಮೊದಲೇ ಹೇಳಿದಂತೆ ವೃಶ್ಚಿಕ ರಾಶಿಯವರು ಯಾರೂ ಊಹಿಸದೆ ಇರುವ ರೀತಿಯಲ್ಲಿ ಮಾಜಿ ಪ್ರೇಮಿಯಾಗುವರು.

ಸಿಂಹ

ಸಿಂಹ

ಸಿಂಹ ರಾಶಿಯವರು ಕೆಲವೊಂದು ಸಲ ದುರಂಹಕಾರಿಯಾಗ ಬಹುದು. ಸಂಗಾತಿಯು ತಮ್ಮಿಂದ ದೂರವಾಗಲು ಬಯಸಿದರೆ, ಆಗ ಅವರು ಇದನ್ನು ತಿರಸ್ಕಾರವೆಂದು ಭಾವಿಸುವರು ಮತ್ತು ಈ ವೇಳೆ ತುಂಬಾ ಖಿನ್ನ ಹಾಗೂ ದುಃಖಿತರಾಗುವರು. ಸಿಂಹ ರಾಶಿಯವರು ತಮ್ಮ ಸಂಗಾತಿ ಬಗ್ಗೆ ತುಂಬಾ ನಕಾರಾತ್ಮಕವಾಗಿ ಆಲೋಚನೆ ಮಾಡಲು ಆರಂಭಿಸಬಹುದು (ಆದರೆ ಇದು ನಿಜವಾಗಿರಲ್ಲ). ಇದರಿಂದ ಅವರಿಗೆ ಪರಿಸ್ಥಿತಿಯಿಂದ ಮೇಲೆದ್ದು ಬಂದು ಶಾಂತಿ ಹಾಗೂ ಗೆಲುವು ಸಿಕ್ಕಿದಂತೆ ಆಗುವುದು.

ಮೇಷ

ಮೇಷ

ಮೇಷ ರಾಶಿಯವರು ಕೆಲವೊಂದು ಸಂದರ್ಭದಲ್ಲಿ ತುಂಬಾ ಅಸೂಯೆ ಪಟ್ಟುಕೊಳ್ಳುವರು. ಸಾಮಾಜಿಕ ಜಾಲತಾಣಗಳಲ್ಲಿ ಇವರು ತಮ್ಮ ಮಾಜಿ ಪ್ರೇಮಿಗೆ ಅವಮಾನ ಮಾಡಬಹುದು ಅಥವಾ ಅವರಿಬ್ಬರ ಸ್ನೇಹಿತರಿಂದ ಕೆಲವೊಂದು ಮಾಹಿತಿ ಸಂಗ್ರಹಿಸಲು ಪ್ರಯತ್ನ ಮಾಡಬಹುದು. ತಮ್ಮ ಮಾಜಿ ಪ್ರೇಮಿಯು

ತಮಗಿಂತ ಹೆಚ್ಚು ಸಂತೋಷದಲ್ಲಿ ಮತ್ತು ಹಿಂದಿನದನ್ನು ಬೇಗನೆ ಮರೆತರೆ, ಆಗ ಇವರು ತುಂಬಾ ಹೊಟ್ಟೆಕಿಚ್ಚು ಪಟ್ಟುಕೊಳ್ಳುವರು ಮತ್ತು ಅವರ ಮನಸ್ಸಿನ ಶಾಂತಿ ಕೆಡಿಸಿಕೊಳ್ಳುವರು.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರು ತುಂಬಾ ಭಾವನಾತ್ಮಕ ವ್ಯಕ್ತಿಗಳು. ಸಂಬಂಧವು ಕಡಿದು ಬಿದ್ದ ಬಳಿಕ ಅವರು ತಮ್ಮ ಮಾಜಿ ಸಂಗಾತಿಗೆ ನೋವುಂಟು ಮಾಡುವ ಅಥವಾ ಅವರನ್ನು ದೂಷಿಸುವ ಬಗ್ಗೆ ಆಲೋಚನೆ ಮಾಡಲ್ಲ. ಆದರೆ ಇವರು ತಮ್ಮ ಭಾವನೆಗಳನ್ನು ಸರಿಪಡಿಸಲು ತುಂಬಾ ಕಷ್ಟಪಡುವರು. ಇವರಿಗೆ ಹಿಂದಿನ ನೆನಪು ಮರುಕಳಿಸುವುದು ಮತ್ತು ಅದನ್ನು ವಿಶ್ಲೇಷಣೆ ಮಾಡಿ, ಏನು ತಪ್ಪಾಗಿದೆ ಮತ್ತು ಇದನ್ನು ಭಿನ್ನವಾಗಿ ಹೇಗೆ ನಿಭಾಯಿಸಬಹುದಿತ್ತು ಎಂದು ಆಲೋಚನೆ ಮಾಡುವರು. ಇವರು ತುಂಬಾ ಭಾವನಾತ್ಮಕ ವಾಗಿ ಇರುವಂತಹ ವ್ಯಕ್ತಿಗಳು. ಇದರಿಂದ ಸಾಮಾನ್ಯ ಜೀವನಕ್ಕೆ ಮರಳಿ ಬರುವುದು ಅವರಿಗೆ ಅಷ್ಟು ಸುಲಭದ ಮಾತಾಗಿರಲ್ಲ.

ಮಿಥುನ

ಮಿಥುನ

ಮಿಥುನ ರಾಶಿಯವರು ಅವಳಿ ನಡವಳಿಕೆಯಿಂದಾಗಿ ಅವರನ್ನು ಊಹಿಸುವುದು ತುಂಬಾ ಕಷ್ಟದ ವಿಚಾರ. ಅವರು ತುಂಬಾ ಸಾಮಾನ್ಯವಾಗಿ ಇರುವಂತೆ ತೋರಿಸಿಕೊಳ್ಳಬಹುದು ಮತ್ತು ನಾನು ಯಾರನ್ನೂ ಕ್ಯಾರ್ ಮಾಡಲ್ಲವೆಂದು ತೋರಿಸಬಹುದು. ಆದರೆ ವಾಸ್ತವ ಬೇರೆಯೇ ಆಗಿರುವುದು. ಇವರು ಯಾರಿಗೂ ತಿಳಿಯದಂತೆ ರಾತ್ರಿ ವೇಳೆ ತುಂಬಾ ಅಳುವರು. ಪರಿಸ್ಥಿತಿಯಿಂದ ಹೊರಗೆ ಬರಲು ಇವರಿಗೆ ಹೆಚ್ಚು ಸಮಯ ಬೇಕಾಗುವುದು. ಇವರು ತಮ್ಮ ಯಾವುದೇ ಸಮಸ್ಯೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಹೋಗುವುದಿಲ್ಲ.

ತುಲಾ

ತುಲಾ

ನಿರ್ಣಯಿಸಲು ಆಗದೆ ಇರುವಂತಹ ತಮ್ಮ ಗುಣದಿಂದಾಗಿ ಇವರಿಗೆ ತುಂಬಾ ಕಷ್ಟವಾಗುವುದು. ಸಂಬಂಧವನ್ನು ಕಡಿದು ಕೊಂಡಿರುವುದು ಸರಿಯಾದ ನಿರ್ಧಾರವೇ ಅಥವಾ ಅಲ್ಲವೇ ಎನ್ನುವುದನ್ನು ಇವರಿಗೆ ನಿರ್ಧರಿಸಲು ಸಾಧ್ಯವೇ ಆಗದು. ತಮ್ಮ ಮನಸ್ಸಿನಲ್ಲಿ ಏನು ಆಗುತ್ತಿದೆಯೋ ಅದನ್ನು ಇಟ್ಟುಕೊಂಡು

ಇವರು ತಮ್ಮ ಮಾಜಿ ಪ್ರೇಮಿಯನ್ನು ಕಾಡುವರು ಮತ್ತು ತಮ್ಮೊಂದಿಗೆ ಮಾತನಾಡಬೇಕು ಎಂದು ಅವರು ಬಯಸುವರು. ಇವರಿಗೆ ಒಂದು ನಿರ್ಣಯಕ್ಕೆ ಬರಲು ತುಂಬಾ ಕಷ್ಟವಾಗುವುದು ಮತ್ತು ಇವರು ಯಾವಾಗಲೂ ಒಂದು ರೀತಿಯ ಗೊಂದಲದಲ್ಲೇ ಸಿಲುಕಿಕೊಂಡು ಇರುವರು.

ಕನ್ಯಾ

ಕನ್ಯಾ

ಪರಿಪೂರ್ಣತೆ ಬಯಸುವ ವ್ಯಕ್ತಿಗಳು ಎಂದು ಕನ್ಯಾ ರಾಶಿಯವರನ್ನು ಕರೆಯಲಾಗುತ್ತದೆ. ಇವರು ಯಾವುದೇ ಸಂಬಂಧದಲ್ಲಿ ಭಾಗಿಯಾದರೆ ಆಗ ಅವರು ಇದರಲ್ಲಿ ಪರಿಪೂರ್ಣತೆಯನ್ನು ಬಯಸುವರು. ಇವರು ನಿರೀಕ್ಷಿಸಿದಂತೆ ವಿಚಾರವು ಸಾಗದೆ ಇದ್ದರೆ ಆಗ ಇವರು ಅತಿಯಾಗಿ ಪ್ರತಿಕ್ರಿಯಿಸುವರು. ಇವರು ತಮ್ಮನ್ನು ತಾವೇ ದೂಷಿಸಿಕೊಳ್ಳುವರು ಮತ್ತು ಕೆಲವೊಂದು ಸಲ ತಮಗೆ ಹಿಂಸೆ ಮಾಡಿಕೊಳ್ಳುವರು. ಮಾಜಿ ಪ್ರೇಮಿಯು ಸಂಪರ್ಕ ಸಾಧಿಸಲು ಪ್ರಯತ್ನಿಸಿದರೆ, ಆಗ ಇವರು ನಡೆದಿರುವಂತಹ ತಪ್ಪನ್ನೆಲ್ಲವನ್ನು ಅವರಿಗೆ ಅರ್ಥ ಮಾಡಿಸಿ ಕೊಡುವರು ಮತ್ತು ಮಾಜಿ ಪ್ರೇಮಿಗೆ ತನ್ನ ತಪ್ಪು ಅರಿವಾಗಿದೆ ಎಂದು ಮನವರಿಕೆ ಆಗುವ ತನಕ ಇವರು ಅವರನ್ನು ಬಿಡಲ್ಲ.

English summary

Seven zodiac signs that make not-so-good ex-partners

Every person has his or her own way of dealing with a break up. While some get emotional and takes weeks (even months) to get over it, some might become revengeful and others might make peace with the situation in no time. Interestingly, zodiac signs say a lot about how one handles a testing situation and a few of these make not-so-good ex-partners. Which one are those? Read on…
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more