For Quick Alerts
ALLOW NOTIFICATIONS  
For Daily Alerts

ಜನವರಿ 2019: ಈ ತಿಂಗಳ ಹುಣ್ಣಿಮೆಯಿಂದ 5 ರಾಶಿಚಕ್ರಗಳ ಮೇಲೆ ಆಗುವ ಪರಿಣಾಮಗಳು

|

ಹಳೆ ವರ್ಷವನ್ನು ಹಿಂದಿಕ್ಕಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ಹುರುಪು, ಉತ್ಸಾಹ ಹಾಗೂ ಶಕ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿರುವುದು ಆಯಿತು. ಹೊಸ ವರ್ಷದಲ್ಲಿ ಕೆಲವು ದಿನಗಳು ಕಳೆದಿರುವುದು ಆಗಿದೆ. ಇನ್ನು ಹೊಸ ವರ್ಷದಲ್ಲಿ ಹಲವಾರು ವಿದ್ಯಮಾನಗಳು ನಭೋ ಮಂಡಲದಲ್ಲಿ ನಡೆಯಲಿಕ್ಕಿದೆ. ಇದರಲ್ಲಿ ಮುಖ್ಯವಾಗಿ ಜನವರಿ ತಿಂಗಳಲ್ಲಿ ಹುಣ್ಣಿಮೆಯ ದಿನ ಸೂರ್ಯ ಗ್ರಹಣವು ಬರುತ್ತಿದೆ. ಇದರಿಂದಾಗಿ ಗ್ರಹಗತಿಯಲ್ಲೂ ಕೆಲವು ಬದಲಾವಣೆಗಳು ಆಗುವುದು. ಇದು ನಿಮ್ಮ ರಾಶಿಚಕ್ರದ ಮೇಲೆ ಕೂಡ ಪರಿಣಾಮ ಬೀರುವುದು.

ಗ್ರಹಗಳ ಚಲನೆಯಿಂದ ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು. ಸೂರ್ಯ ಗ್ರಹಣದಿಂದ ಯಾವೆಲ್ಲಾ ರಾಶಿಚಕ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ನಾವು ಈ ಲೇಖನ ಮೂಲಕ ತಿಳಿಸಿಕೊಡಲಿದ್ದೇವೆ. ಮೇಷ, ಮಿಥು, ಕನ್ಯಾ, ಧನು ಮತ್ತು ಮೀನ ರಾಶಿಯವರ ಮೇಲೆ 2019ರ ಹುಣ್ಣಿಮೆ ಯಿಂದ ಆಗುವ ಪರಿಣಾಮ ಬೀರಲಿದೆ. ಜನವರಿ 2019ರ ಹುಣ್ಣಿಮೆ ಮತ್ತು ಅಂಶಿಕ ಸೂರ್ಯಗ್ರಹಣವು ಮಕರ ರಾಶಿಯಲ್ಲಿ ನಡೆಯಲಿದೆ. ಇದು ಸಾರ್ವಜನಿಕ ಜೀವನದಲ್ಲಿ ಹೊಸತನ ತರಲಿದೆ ಮತ್ತು ಇದರ ಪರಿಣಾಮವು ಆರು ತಿಂಗಳುಗಳ ಕಾಲ ಇರಲಿದೆ. ಶನಿಯು ಅಧಿಪತಿಯಾಗಿರುವಂತಹ ಮಕರ ರಾಶಿಯಲ್ಲಿನ ಸಾರ್ವಜನಿಕ ಜೀವನ, ವೃತ್ತಿ, ಗೌರವ, ಸಾಧನೆ ಮತ್ತು ಹೊಣೆಗಾರಿಕೆಯು ಪ್ರಮುಖವಾಗಿ ಗಮನದಲ್ಲಿರಲಿದೆ. ಜ್ಯೋತಿಷಿಗಳ ಪ್ರಕಾರ ಇದು ಪ್ರಾಯೋಗಿಕ ಮತ್ತು ಸಾಧಿಸಬಹುದಾದ ಗುರಿಗಳನ್ನು ಇಟ್ಟುಕೊಳ್ಳಬಹುದು.

ಮೇಷ

ಮೇಷ

2019ರಲ್ಲಿ ಮೇಷ ರಾಶಿಯವರು ಹೊಸ ವೃತ್ತಿಯ ಅವಕಾಶಗಳನ್ನು ಹುಡುಕತ್ತಲಿದ್ದರೆ, ಆಗ 2019ರ ಹುಣ್ಣಿಮೆಯು ನಿಮಗೆ ಒಲಿತನ್ನು ಉಂಟು ಮಾಡಲಿದೆ. ಅಂಶಿಕ ಸೂರ್ಯಗ್ರಹಣ ಹಾಗೂ ಹುಣ್ಣಿಮೆಯ ಪರಿಣಾಮದಿಂದಾಗಿ ಕೊನೆಯ ಅವಕಾಶವು ಸಿಗಲಿದೆ. ಹುಣ್ಣಿಮೆಯು ನಿಮಗೆ ಕೊನೆಯ ಅವಕಾಶ ನೀಡಲಿದೆ. ನಿಮ್ಮ ಮಾರ್ಗದಲ್ಲಿ ಬರುವಂತಹ ಅವಕಾಶಗಳನ್ನು ಗಮನಿಸುತ್ತಾ ಇರಿ. ಇದರಿಂದ ನೀವು ಗಮನಹರಿಸಬಹುದು. ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ತುಂಬಾ ಆಕರ್ಷಣೀಯವಾಗಿರುವುದು ಸಿಗಲಿದೆ ಮತ್ತು ಇದರಿಂದಾಗಿ ನೀವು ತುಂಬಾ ಭದ್ರತೆ ಮತ್ತು ದೀರ್ಘಾಕಾಲಿಕ ಯಶಸ್ಸನ್ನು ಪಡೆಯುವಿರಿ.

ಮಿಥುನ

ಮಿಥುನ

2019ರ ಜನವರಿ ತಿಂಗಳಲ್ಲಿ ಆಗುವಂತಹ ಹುಣ್ಣಿಮೆಯು ನೀವು ಸಂಬಂಧದಲ್ಲಿ ಎಲ್ಲಿ ನೆಲೆಸಲಿದ್ದೀರಿ ಎಂದು ಗುರುತಿಸಬೇಕು ಎಂದು ಬಯಸುವುದು. ನಿಮಗೆ ಸಂಗಾತಿಯೊಂದಿಗೆ ಯಾವುದೇ ರೀತಿಯ ಪ್ರಾಮಾಣಿಕ ಸಂಪರ್ಕದ ಭಾವನೆಯಾಗದೆ ಇರದಿದ್ದರೆ ಆಗ ಹುಣ್ಣಿಮೆಯು ಈ ಹಾದಿಯಲ್ಲಿ ಬೆಳಕು ಹಾಗೂ ಪ್ರೀತಿಯನ್ನು ತೋರಿಸಲಿದೆ. ಇತರರೊಂದಿಗೆ ನೀವು ಇಟ್ಟುಕೊಂಡಿರುವ ಸಂಬಂಧ,ನೈಜ ಅನ್ಯೋನ್ಯತೆಯು ನಿಮಗೆ ಸಿಗಲಿದೆ. ಇದಕ್ಕಾಗಿ ನೀವು ಸೂರ್ಯಗ್ರಹಣಕ್ಕೆ ನೀವು ಧನ್ಯವಾದ ಹೇಳಬೇಕು. ಅಂಧಕಾರದಿಂದ ನೀವು ಆತಂಕಪಡಬೇಡಿ. ನಿಮಗೆ ಬೆಳಕು ಕಾಣುವುದು ಎಂದು ಜ್ಯೋತಿಷ್ಯವು ಹೇಳುತ್ತದೆ.

Most Read:ಒಟ್ಟು 12 ರಾಶಿಗಳಲ್ಲಿ, ಈ 5 ರಾಶಿಯವರು ತುಂಬಾನೇ ಸ್ಪರ್ಧಾತ್ಮಕವಾದ ರಾಶಿಚಕ್ರಗಳು

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ತುಂಬಾ ಸುರಕ್ಷಿತವಾಗಿ ಆಡುತ್ತಲಿದ್ದರೆ, ಆಗ ನೀವು ಮೊದಲಾಗಿ ಆರಾಮ ವಲಯದಿಂದ ಹೊರಬರಬೇಕು ಮತ್ತು ನಿಮಗೆ ಏನು ಬೇಕೋ ಅದರ ಬಗ್ಗೆ ತುಂಬಾ ಚಟುವಟಿಕೆಯಿಂದ ಕೆಲಸ ಮಾಡಿ. ಇದು ತುಂಬಾ ಭೀತಿ ಉಂಟು ಮಾಡುವುದು ಎಂದು ತಿಳಿದಿದೆ. ಆದರೆ ಜನವರಿ 2019ರ ಹುಣ್ಣಿಮೆಯು ನಿಮಗೆ ದೊಡ್ಡ ಮಟ್ಟದಲ್ಲಿ ಬೆಂಬಲವಾಗಿ ನಿಲ್ಲಲಿದೆ. ನಿಮ್ಮನ್ನು ತಡೆಯುತ್ತಿ ರುವುದು ಏನು? ನಿಮಗೆ ಏನು ಬೇಕು ಎಂದು ಪ್ರಾಮಾಣಿ ಕವಾಗಿ ನಿರ್ಧರಿಸಿಕೊಳ್ಳಿ. ನಿಮ್ಮಿಂದ ಏನು ನಿರೀಕ್ಷೆ ಮಾಡಲಾಗುತ್ತಿದೆ ಎಂದು ನಿಮಗೆ ಈಗ ತಿಳಿದಿರಬಹುದು. ಮಕರ ರಾಶಿಯಲ್ಲಿ ನಡೆಯುವಂತಹ ಹುಣ್ಣಿಮೆ ಮತ್ತು ಅಂಶಿಕ ಸೂರ್ಯ ಗ್ರಹಣವು ನಿಮ್ಮ ಕುಂಟು ನೆಪ ಮತ್ತು ಒಳಗಿನ ಮಗುವನ್ನು ಮರುಪಡೆಯಲು 18 ತಿಂಗಳ ಸಮಯ ನೀಡಲಿದೆ.

ಧನು

ಧನು

ಧನು ರಾಶಿಯವರಿಗೆ ಯಾವಾಗಲೂ ಸಂಬಂಧದಲ್ಲಿ ಹೂವಿನ ಹಾದಿಯಿದೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬೇರೆಯವರ ಮೇಲೆ ಅವಲಂಬಿಸುವ ಬದಲು ನೀವಾಗಿಯೇ ಅದನ್ನು ನಿಭಾಯಿಸಿಕೊಳ್ಳಬೇಕು. ನಿಮ್ಮದೇ ಹಾದಿಯಲ್ಲಿ ನಡೆಯಲು ಹೊಸ ಹೆಜ್ಜೆಗಳನ್ನು ಇಡುವುದರಿಂದ 2019ರ ಜನವರಿ ತಿಂಗಳ ಹುಣ್ಣಿಮೆಯು ನಿಮಗೆ ತುಂಬಾ ನೆರವಾಗಲಿದೆ. ಹುಣ್ಣಿಮೆ ಮತ್ತು ಅಂಶಿಕ ಸೂರ್ಯಗ್ರಹಣದಿಂದಾಗಿ 18 ತಿಂಗಳ ಅವಧಿಯಲ್ಲಿ ನಿಮಗೆ ಭಾವನಾತ್ಮಕ ಹಾಗೂ ಆರ್ಥಿಕ ಭದ್ರತೆಯು ಸಿಗುವುದು. ಆಳವಾಗಿ ಅಗೆಯಿರಿ ಮತ್ತು ಪ್ರತಿಫಲ ಪಡೆಯಿರಿ ಎಂದು ಜ್ಯೋತಿಷ್ಯವು ಹೇಳುತ್ತದೆ.

ಮೀನ

ಮೀನ

2018ರ ವರ್ಷವನ್ನು ನೀವು ತುಂಬಾ ಖಾಸಗಿಯಾಗಿ ಗೂಡಿನೊಳಗೆ ಕಳೆದಿದ್ದರೆ ಈಗ ನೀವು 2019ರಲ್ಲಿ ಚಿಟ್ಟೆಯಂತೆ ಹಾರುವ ಸಮಯವು ಬಂದಿದೆ. ನೀವು ಚಿಟ್ಟೆಯಂತೆ ಇರಬೇಕೆಂದು ಕೂಡ ಇದು ಹೇಳುತ್ತದೆ. ಮಕರ ರಾಶಿಯಲ್ಲಿ ಆಗುವಂತಹ ಹುಣ್ಣಿಮೆ ಮತ್ತು ಅಂಶಿಕ ಸೂರ್ಯಗ್ರಹಣವು ಶ್ರೇಷ್ಠ ದೃಷ್ಟಿ ಮತ್ತು ಪರಹಿತ ಚಿಂತನೆ ಆಕಾಂಕ್ಷೆ ಇಟ್ಟುಕೊಳ್ಳಬೇಕು ಎಂದು ಹೇಳುತ್ತದೆ.

Most Read: 2019ರಲ್ಲಿ ಈ 5 ರಾಶಿ ಚಕ್ರದವರು ತಾವು ಬಯಸಿದ ಪ್ರೀತಿಯನ್ನು ಪಡೆದುಕೊಳ್ಳುವರು

ಮೀನ

ಮೀನ

ನಿಮ್ಮ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಹೊಂದಿಕೊಂಡಿರಿ ಮತ್ತು ನೀವು ಇದರಿಂದ ಮಿಂಚುವಿರಿ. ನಿಮಗೆ ತುಂಬಾ ದೀರ್ಘ ಪ್ರಯಾಣ ಮಾಡಬೇಕಾಗಿದೆ ಮತ್ತು ಕೆಲವೊಂದು ಕಠಿಣ ಪರಿಸ್ಥಿತಿಯಿಂದಾಗಿ ಮೂಲೆ ಸೇರಿದ್ದೀರಿ. 2019ರ ಹುಣ್ಣಿಮೆಯು ಮಕರ ರಾಶಿಯಲ್ಲಿ ಸಂಭವಿಸುತ್ತಿದ್ದು, ಇದು ಹೆಚ್ಚಿನ ಎಲ್ಲಾ ರಾಶಿಗಳಿಗೂ ಒಳ್ಳೆಯದನ್ನು ಉಂಟು ಮಾಡಲಿದೆ. ನೀವು ಇದನ್ನು ಗಮನಿಸುತ್ತಾ ಇರಿ. ಖಗೋಳದಲ್ಲಿನ ಬದಲಾವಣೆಯು ನಿಮಗೂ ಶುಭ ಉಂಟು ಮಾಡುವುದು.

English summary

Zodiac Signs in January 2019 New Moon Will Affect The Most

If you're ready to leave behind the bajiggity energy of 2018, the January 2019 new moon (which is also happening in conjunction with a partial solar eclipse at the same time!) is an ideal time to turn things around. Some signs will feel the effects more than others, and Aries, Gemini, Virgo, Sagittarius, and Pisces are the zodiac signs the January 2019 new moon will affect the most, according to astrology forecasts.
Story first published: Thursday, January 17, 2019, 16:35 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more