Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 10 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
31-3-2019- ಭಾನುವಾರದ ದಿನ ಭವಿಷ್ಯ
ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅದೇನೋ ಒಂದು ಬಗೆಯ ನಿರಾಳ. ದಿನವಿಡೀ ವಿಶ್ರಾಂತಿ ಪಡೆಯಬಹುದು ಎನ್ನುವ ಖುಷಿ. ಉಳಿದ ದಿನಗಳಲ್ಲಿ ಮಾಡಲಾಗದೇ ಇಟ್ಟಿರುವ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಹಲವರಿಗೆ ಶುಭದಿನವಾಗಿ ಪರಿಣಮಿಸುತ್ತದೆ. ವಾರವಿಡೀ ಕೆಲಸದ ಒತ್ತಡದಲ್ಲಿ ಇರುವವರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಕೊಂಚ ಸಮಯವನ್ನು ಕಳೆಯಲು ಅವಕಾಶ ಕಲ್ಪಿಸಿಕೊಡುವ ಸುಂದರವಾದ ದಿನ ಇದು.
ಹಿಂದೂ ಪಂಚಾಗದ ಪ್ರಕಾರ ಭಾನುವಾರವನ್ನು ಶುಭದಿನವೆಂದು ಕರೆಯುತ್ತಾರೆ. ಕೆಲವು ಪ್ರಮುಖ ಕೆಲಸಗಳನ್ನು ಕೈಗೊಳ್ಳಲು ಈ ದಿನ ಶುಭಕರವಾದ್ದು ಎಂದು ಹೇಳುತ್ತಾರೆ. ಭಾನುವಾರ, ರವಿವಾರ, ಆದಿತ್ಯವಾರ ಎಂತಲೂ ಈ ದಿನವನ್ನು ಕರೆಯುತ್ತಾರೆ. ರವಿವಾರ ಎಂದು ಕರೆಯುವ ಈ ದಿನ ಎಲ್ಲರ ಬಾಳು ಬೆಳಗಲಿ ಎನ್ನುವುದುಬೋಲ್ಡ್ ಸ್ಕೈನ ಆಶಯ. ವಿಶ್ರಾಂತಿಗೆ ಅವಕಾಶ ಕಲ್ಪಿಸುವ ಈ ದಿನ ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ನೀಡಬಹುದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಕೆಳಗಿರುವ ರಾಶಿ ಭವಿಷ್ಯವನ್ನು ಪರಿಶೀಲಿಸಿ.

ಮೇಷ (31 ಮಾರ್ಚ್ 2019)
ನಿಮ್ಮ ಶಕ್ತಿಯ ವಿಚಾರದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮ ಸರಳತೆಯ ಜೀವನದಿಂದ ನೀವು ಪರರಿಗೆ ಮಾರ್ಗಸೂಚಕ ರಾಗುವಿರಿ. ನಿಮ್ಮ ನಾಯಕತ್ವದ ಗುಣಗಳನ್ನು ಕಂಡು ಜನ ನಿಮ್ಮ ಸುತ್ತ ತಿರುಗುವರು. ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಸಕಲ ದುರಿತಗಳು ನಾಶವಾಗುವವು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಕೆಮ್ಮು ಕಫದಂತಹ ತೊಂದರೆಗಳು ಕಾಡುವ ಸಾಧ್ಯತೆ ಇದೆ. ಇದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. 9845743807 ಅದೃಷ್ಟ ಸಂಖ್ಯೆ:2

ವೃಷಭ
ಕೊರತೆಯಲ್ಲಿನ ಹಣಕಾಸಿನ ವೃದ್ಧಿಗೆ ಒಂಟಿ ಹೋರಾಟ ಬೇಡ. ಎಲ್ಲಾ ವಿಚಾರದಲ್ಲೂ ಬಾಳಸಂಗಾತಿಯ ಸಹಕಾರ ಪಡೆದು ಮುಂದುವರಿಯಿರಿ. ಕೆಲವು ವಿಷಯಗಳಲ್ಲಿ ಸಂಗಾತಿಯ ತೀರ್ಮಾನವೇ ಅಂತ್ಯವಾಗುವುದು.ನಿಮ್ಮ ಪ್ರತಿಭಾವಂತಿಕೆಯನ್ನು ಸಕಾರಾತ್ಮಕವಾಗಿ ನಿರೂಪಿಸಿ ಯಶ ಗಳಿಸಲು ಸೂಕ್ತ ಸಮಯ ವಾಗಿದೆ. ಆಕಸ್ಮಿಕವಾಗಿ ಹಣಕಾಸು ಬರುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು.9845743807 ಅದೃಷ್ಟ ಸಂಖ್ಯೆ:1

ಮಿಥುನ
ಆಪ್ತ ಗೆಳೆಯನ ಭೇಟಿ ಸಾಧ್ಯತೆ ಇದೆ. ಆತನ ಕರುಣಾಜನಕ ಕಥೆ ಕೇಳಿ ಮನಸ್ಸು ಮರುಗುವುದು. ಆತನಿಗೆ ನಿಮ್ಮಿಂದ ಸಹಾಯ ಬೇಕಾಗಿರುತ್ತದೆ. ನಿಸ್ವಾರ್ಥದಿಂದ ಆತನಿಗೆ ಸಹಾಯ ಹಸ್ತ ನೀಡಿ. ಮುಂದೆ ಆತನಿಂದ ಅನುಕೂಲವಾಗುವುದು.ವ್ಯಾಜ್ಯದ ವಿಚಾರದಲ್ಲಿ ಸೋತು ಗೆಲ್ಲುವ ಯೋಚನೆ ಇರಲಿ. ಮುಂದಿನ ದಾರಿ ಯಶಸ್ಸಿಗೆ ಮುಖ ಮಾಡಲಿದೆ. ಮುಷ್ಠಿಕಾಳು ಚೆಲ್ಲಿ ಮೂಟೆ ಕಾಳು ಬಾಚುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸನ್ನು ಹೊಂದಲು ಹಣವನ್ನು ಚೆಲ್ಲುವುದು ಅನಿವಾರ್ಯವಾಗಲಿದೆ.9845743807 ಅದೃಷ್ಟ ಸಂಖ್ಯೆ:6

ಕಟಕ
ವ್ಯಾಪಾರ ವ್ಯವಹಾರದಲ್ಲಿ ಮುಂದಾಲೋಚನೆಯಿಲ್ಲದೆ ಹಣ ಹೂಡಿದ ಪರಿಣಾಮ ನಷ್ಟ ಎದುರಿಸುವಿರಿ. ನಷ್ಟ ಸರಿದೂಗಿಸಲು ಸಾಲ ಮಾಡಬೇಕಾದ ಪ್ರಸಂಗ ಬರುವುದು. ಆದರೆ ಈಗಾಗಲೇ ಮಾಡಿರುವ ಸಾಲವೇ ಬಹಳಷ್ಟು ಇರುವಾಗ ನಿಮಗೆ ಬೇರೆಯವರು ಸಾಲ ನೀಡಲಾರರು.ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಜನ್ಮಶನಿಯಿಂದ ಬಿಡುಗಡೆ ಆಗಿದ್ದರೂ ಸಾಡೇಸಾತ್ ಶನಿಯ ಕಾಟ ಇದ್ದೇ ಇರುತ್ತದೆ. ಹಾಗಾಗಿ ಮಹತ್ತರ ಕಾರ್ಯಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು. ಹಣ ಉಳಿತಾಯ ಮಾಡಲಾಗುವುದಿಲ್ಲ.9845743807 ಅದೃಷ್ಟ ಸಂಖ್ಯೆ:4

ಸಿಂಹ
ನಿಮ್ಮನ್ನು ಪರರಿಗೆ ಹೋಲಿಸಿಕೊಂಡು ಖಿನ್ನರಾಗದಿರಿ. ಭಗವಂತ ಪ್ರತಿಯೊಬ್ಬರಿಗೂ ತನ್ನದೇ ಆದ ಒಂದು ವ್ಯಕ್ತಿತ್ವ ನೀಡಿರುವನು. ಆ ಪ್ರತ್ಯೇಕತೆಯ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಲ್ಪಡುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಶಕ್ತಿದೇವಿಯ ಆರಾಧನೆಗೆ ಒಳ್ಳೆಯ ದಿನ. ಹಾಗಾಗಿ ಶಕ್ತಿದೇವಿಯನ್ನು ಅನನ್ಯವಾಗಿ ಭಜಿಸಿ. ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಿ.ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ. 9845743807 ಅದೃಷ್ಟ ಸಂಖ್ಯೆ:8

ಕನ್ಯಾ
ಹಣಕಾಸಿನ ಮುಗ್ಗಟ್ಟು ಅನುಭವಿಸುವಿರಿ. ಆದರೆ ಸಕಾಲದಲ್ಲಿ ನೆಂಟರ ಅಥವಾ ಸ್ನೇಹಿತರಿಂದ ಸಹಕಾರ ದೊರೆಯುವುದು. ಹಾಗಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ವಿಷ್ಣು ಸಹಸ್ರನಾಮ ಪಠಿಸಿ. ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧರಿಸುತ್ತಾರೆ ಎಂದು ತಿಳಿದು ಕಾರ್ಯದಿಂದ ಹಿಂದೆ ಸರಿಯಬೇಡಿ. ಮುನ್ನುಗ್ಗಿ ಪ್ರವೃತ್ತರಾದಲ್ಲಿ ದೈವಕೃಪೆಯಿಂದ ಇಚ್ಛಿತ ಗುರಿ ತಲುಪುವಿರಿ. 9845743807 ಅದೃಷ್ಟ ಸಂಖ್ಯೆ:5

ತುಲಾ
ನಿಮ್ಮ ಇತ್ತೀಚಿನ ಕಾರ್ಯಕ್ರಮ ಜನಮನ್ನಣೆ ಗಳಿಸಿದೆ. ಆದರೆ ಕೆಲವರು ಅದರಲ್ಲೂ ತಪ್ಪು ಹುಡುಕುವವರಿದ್ದಾರೆ. ಅನ್ಯರು ನಿಮ್ಮನ್ನು ಹೊಗಳಲಿ ಅಥವಾ ತೆಗಳಲಿ ಎಲ್ಲವನ್ನೂ ನಗು ಮುಖದಿಂದ ಸ್ವಾಗತಿಸುವಿರಿ. ಇದರಿಂದ ನಿಮ್ಮ ಘನತೆ ಹೆಚ್ಚುವುದು. ಹಲವು ದಿನಗಳಿಂದಲೂ ಒಂದು ಸ್ಪಷ್ಟ ಸ್ವರೂಪ ಕೊಡಲು ಸಾಧ್ಯವಾಗದ ಒಂದು ಸಂಗತಿಗೆ ನಿಶ್ಚಿತ ರೂಪ ದೊರೆಯಲಿದೆ. ಇದರಿಂದ ಆರ್ಥಿಕ ಸಂಕಷ್ಟ ಕಡಿಮೆ ಆಗಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು. 9845743807 ಅದೃಷ್ಟ ಸಂಖ್ಯೆ:4

ವೃಶ್ಚಿಕ
ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬಂತೆ ನೀವು ಆಡುವ ಮಾತು ನಿಮ್ಮ ಹತ್ತಿರದ ವೃಕ್ತಿಗೆ ಘಾಸಿಯನ್ನುಂಟು ಮಾಡುವುದು. ಅದರಿಂದ ಆತ ಕುಪಿತನಾಗಿ ನಿಮ್ಮ ಮೇಲೆ ಜಗಳಕ್ಕೆ ಬರುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ಇರಿ.ನಿಮ್ಮ ವಿಶೇಷವಾದ ಪ್ರವಾಸ ಕಾರ್ಯಕ್ರಮ ನಿಗದಿಗೊಳ್ಳಲು ಅವಕಾಶ ದಿಢೀರಾಗಿ ಕೂಡಿಬರುತ್ತದೆ. ಇದನ್ನು ಉಪಯೋಗಿಸಿಕೊಂಡಲ್ಲಿ ನಿಮ್ಮ ಜ್ಞಾನಾರ್ಜನೆ ಹೆಚ್ಚಿಸಿ ಕೊಳ್ಳಲು ಅನುಕೂಲವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:2

ಧನುಸ್ಸು
ಅನವಶ್ಯಕ ಖರ್ಚುಗಳು ನಿಮ್ಮನ್ನು ಹೈರಾಣ ಮಾಡುವುದು. ಬರಬೇಕಾದ ಹಣ ಸಕಾಲದಲ್ಲಿ ಬರದೆ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗುವುದು. ಮನೋನಿಯಾಮಕ ರುದ್ರದೇವರನ್ನು ಮನಸಾ ಸ್ಮರಿಸಿ ಒಳಿತಾಗುವುದು.ನೀವು ನಿಮ್ಮ ಮಕ್ಕಳಿಗೆ ತಿಳಿಸಬೇಕೆಂದಿರುವ ಮಹತ್ವದ ವಿಷಯವನ್ನು ತಿಳಿಸಲು ಉತ್ತಮ ದಿನವಾಗಿದೆ. ಇದರಿಂದ ಮುಂದಿನ ದಿನಗಳನ್ನು ಸರಾಗವಾಗಿ ರೂಪಿಸಿಕೊಳ್ಳಲು ಸಹಾಯವಾಗುವುದು. ಮಕ್ಕಳಿಗೂ ಸ್ವಲ್ಪ ಜವಾಬ್ದಾರಿಯನ್ನು ಕಲಿಸಿಕೊಡಿ.9845743807 ಅದೃಷ್ಟ ಸಂಖ್ಯೆ:6

ಮಕರ
ಏನೋ ಆತಂಕ ಎದುರಾಗಲಿದೆ ಎಂದು ವಿಚಲಿತರಾಗುವ ಸಾಧ್ಯತೆ ಇದ್ದು ಎಲ್ಲವೂ ದೈವಕೃಪೆಯಿಂದ ಪರಿಹಾರವಾಗಲಿದೆ ಮತ್ತು ಆತಂಕದಿಂದ ದೂರ ಉಳಿಯುವಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅಜೀರ್ಣ ಅಥವಾ ವಾಯು ಪ್ರಕೋಪದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಮನೆ ವೈದ್ಯರ ಸೂಕ್ತ ಸಲಹೆಯಂತೆ ಔಷಧೋಪಚಾರ ಪಡೆಯಿರಿ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ.9845743807 ಅದೃಷ್ಟ ಸಂಖ್ಯೆ:3

ಕುಂಭ
ಕುಟುಂಬಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಟಿಲ ಸಮಸ್ಯೆಗಳು ಎದುರಾಗುವವು. ಭಗವಂತನ ಮೊರೆ ಹೋಗಿ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಸ್ನೇಹಿತರ ಹಣಕಾಸು ವಿಚಾರದಲ್ಲಿ ಮಧ್ಯವರ್ತಿಯಾಗಿ ಕಾಗದ ಪತ್ರಗಳಿಗೆ ಸಹಿ ಮಾಡದಿರಿ. ನಿಮಗೆ ಸಂಬಂಧಪಡದ ವ್ಯಕ್ತಿಗಳು ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಮೂಗು ತೂರಿಸುವುದರಿಂದ ಮುಜುಗರಕ್ಕೆ ಒಳಗಾಗುವಿರಿ. ಅಂತಹ ವ್ಯಕ್ತಿಗಳಿಗೆ ಕಠಿಣ ಪದಗಳನ್ನು ಉಪಯೋಗಿಸಿ ದೂರ ಇರಲು ತಿಳಿಸಿ. ಇದರಿಂದ ಅನುಕೂಲ ವಾಗುವುದು. 9845743807 ಅದೃಷ್ಟ ಸಂಖ್ಯೆ:2

ಮೀನ
ಯಾರೇ ನಿಮ್ಮ ನಿಲುವನ್ನು ಟೀಕಿಸಲಿ, ನಿಮ್ಮ ಹೆಜ್ಜೆ ತರ್ಕಪೂರ್ಣವಾಗಿದ್ದಲ್ಲಿ ಹಿಂದಡಿ ಇಡಲೇ ಬೇಡಿ. ಸಾಹಸವಂತನಿಗೆ ಭಗವಂತನೂ ಸಹಾಯಹಸ್ತ ನೀಡುವನು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.ನಿಮ್ಮ ವಿಚಾರದಲ್ಲಿ ಸ್ವಜನರು ತಿಳಿದುಕೊಂಡ ತಪ್ಪು ಗ್ರಹಿಕೆಗಳು ದೂರವಾಗಲು ಶುಭದಿನವಾಗಿದೆ. ಹಾಗಾಗಿ ನಿಮ್ಮ ಮನಸ್ಸು ಹಕ್ಕಿಯಂತೆ ಹಾರಾಡುವುದು. ನೂತನ ಕೆಲಸ ಮಾಡಲು ಹೊಸ ಉತ್ಸಾಹ ಮೂಡುವುದು. 9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ, ಸಂತಾನಕೊರತೆ ,ಶತ್ರುಕಾಟ, ಕುಜದೋಷಪರಿಣಾಮ,ಮಕ್ಕಳು ತೊಂದರೆ, ಸ್ತ್ರೀ ಪುರುಷ ಪ್ರೇಮವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ,ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp