For Quick Alerts
ALLOW NOTIFICATIONS  
For Daily Alerts

ದಿನಗೂಲಿಗಾಗಿ ಗರ್ಭಾಶಾಯವನ್ನೇ ತೆಗೆಸಿಕೊಳ್ಳುತ್ತಿರುವ ಮಹಿಳೆಯರು!

|

ದೇಶ ಎಷ್ಟೇ ಸುಧಾರಣೆಯಾದರೂ ಕೆಲವೊಂದು ಕಡೆಗಳಲ್ಲಿ ಈಗಲೂ ಜನರು ತುಂಬಾ ಹೀನಾಯ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಬಹುದು. ಯಾಕೆಂದರೆ ಮಹಿಳೆಯರು ತಮ್ಮ ಜೀವನ ನಿರ್ವಹಣೆಗಾಗಿ ಗರ್ಭಾಶಯವನ್ನೇ ತೆಗೆಸಿಕೊಳ್ಳುತ್ತಿರುವಂತಹ ಘಟನೆಗಳು ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆಯುತ್ತಿದೆ. ಇದನ್ನು ಊಹಿಸುವುದು ನಮಗೆ ಸಾಧ್ಯವಿಲ್ಲದೆ ಇದ್ದರೂ ಕಬ್ಬಿನ ಗದ್ದೆಯಲ್ಲಿ ಕೂಲಿ ಮಾಡುವಂತಹ ಮಹಿಳೆಯರಿಗೆ ಗರ್ಭಾಶಾಯ ತೆಗೆಸಿಕೊಳ್ಳುವುದು ಅನಿವಾರ್ಯ ಎನ್ನುವಂತೆ ಆಗಿದೆ. ಈ ಬಗ್ಗೆ ಹಿಂದೂ ಪತ್ರಿಕೆಯಲ್ಲಿ ವರದಿಯು ಪ್ರಕಟವಾಗಿದೆ. ಮಹಾರಾಷ್ಟ್ರದ ಗ್ರಾಮದಲ್ಲಿ ತಮ್ಮ ಜೀವನ ನಿರ್ವಹಣೆಗಾಗಿ ಗರ್ಭಾಶಯವನ್ನೇ ತೆಗೆಸಿಕೊಳ್ಳುತ್ತಿದ್ದಾರೆ.

ಹಾಜಿಪುರ ಎನ್ನುವ ಗ್ರಾಮದಲ್ಲಿ

ಹಾಜಿಪುರ ಎನ್ನುವ ಗ್ರಾಮದಲ್ಲಿ

ಹಾಜಿಪುರ ಎನ್ನುವ ಗ್ರಾಮದಲ್ಲಿರುವಂತಹ ಸಮುದಾಯದವರು ಕಬ್ಬಿನಗದ್ದೆ ಕೂಲಿಯವರು ಮತ್ತು ಇವರೆಲ್ಲರೂ ಕಬ್ಬು ಕತ್ತರಿಸುವಂತಹ ಋತುವಿನಲ್ಲಿ ಮಹಾರಾಷ್ಟ್ರದ ಪಶ್ಚಿಮ ಭಾಗಕ್ಕೆ ತೆರಳುವರು. ಬರಗಾಲದಿಂದಾಗಿ ಇಲ್ಲಿ ವಲಸೆ ಹೋಗುವವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ ಎಂದು ವರದಿಗಳು ಹೇಳಿವೆ.

ಗರ್ಭಾಶಾಯವನ್ನು ತೆಗೆಸಿಕೊಳ್ಳುವ ಮಹಿಳೆಯರಿಗೆ ಇಲ್ಲಿ ಫುಲ್ ಡಿಮ್ಯಾಂಡ್

ಗರ್ಭಾಶಾಯವನ್ನು ತೆಗೆಸಿಕೊಳ್ಳುವ ಮಹಿಳೆಯರಿಗೆ ಇಲ್ಲಿ ಫುಲ್ ಡಿಮ್ಯಾಂಡ್

ಕಬ್ಬಿನ ಗೆದ್ದಗೆ ಕೂಲಿಗಳನ್ನು ಒದಗಿಸಿಕೊಡುವಂತಹ ಕಾಂಟ್ರಾಕ್ಟರ್ ಗರ್ಭಾಶಯ ಇಲ್ಲದೆ ಇರುವಂತಹ ಮಹಿಳೆಯರಿಗೆ ಹೆಚ್ಚಿನ ಪ್ರಾದ್ಯಾನ್ಯತೆ ನೀಡುತ್ತಾನೆ. ಯಾಕೆಂದರೆ ಋತುಚಕ್ರವಾಗುವಂತಹ ಮಹಿಳೆಯರಿಗಿಂತ ಇವರಿಗೆ ತುಂಬಾ ಕಡಿಮೆ ರಜೆ ಬೇಕಾಗಿರುತ್ತದೆ. 2-3 ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮಹಿಳೆಯು ತನ್ನ ಗರ್ಭಾಶಾಯವನ್ನು ತೆಗೆಸಿಕೊಳ್ಳುವುದು ಇಲ್ಲಿನ ಗ್ರಾಮದಲ್ಲಿ ನಡೆದುಕೊಂಡು ಬಂದಿರುವಂತಹ ಕ್ರಮವಾಗಿದೆ.

ಗರ್ಭಾಶಾಯವನ್ನು ತೆಗೆಸಿಕೊಳ್ಳುವ ಮಹಿಳೆಯರಿಗೆ ಇಲ್ಲಿ ಫುಲ್ ಡಿಮ್ಯಾಂಡ್

ಗರ್ಭಾಶಾಯವನ್ನು ತೆಗೆಸಿಕೊಳ್ಳುವ ಮಹಿಳೆಯರಿಗೆ ಇಲ್ಲಿ ಫುಲ್ ಡಿಮ್ಯಾಂಡ್

ಸತ್ಯಭಾಮ ಎನ್ನುವ ಕಬ್ಬು ಕತ್ತರಿಸುವ ಕೂಲಿ ಕಾರ್ಮಿಕೆಯೊಬ್ಬರ ಪ್ರಕಾರ, ಗರ್ಭಾಶಯ ತೆಗೆದುಕೊಳ್ಳುವ ಕಾರಣದಿಂದಾಗಿ ಮಹಿಳೆಯರು ವಿಶ್ರಾಂತಿ ಪಡೆಯುವುದು ಕಡಿಮೆ ಮತ್ತು ಕಬ್ಬು ಕತ್ತರಿಸುವಂತಹ ಮಹಿಳೆಯರಿಗೆ ಇಲ್ಲಿ ವಿಶ್ರಾಂತಿ ಸಿಗುವುದಿಲ್ಲ.ಪತಿ ಮತ್ತು ಪತ್ನಿಯನ್ನು ಇಲ್ಲಿ ಒಂದು ಗುಂಪು ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ರಜೆ ತೆಗೆದುಕೊಂಡರೆ ಆಗ ಅವರು 500 ರೂಪಾಯಿಯನ್ನು ದಿನವೊಂದಕ್ಕೆ ಕಾಂಟ್ರಾಕ್ಟರ್ ಗೆ ದಂಡ ನೀಡಬೇಕು. ವಾರ್ಷಿಕವಾಗಿ ಇದು ಅವರಿಗೆ ಇರುವಂತಹ ಏಕೈಕ ಆಯ್ಕೆ ಆಗಿರುವ ಕಾರಣದಿಂದಾಗಿ ಮಹಿಳೆಯರಿಗೆ ಬೇರೆ ಯಾವುದೇ ಆಯ್ಕೆ ಎನ್ನುವುದೇ ಇಲ್ಲ. ದರ ಬಳಿಕ ಅವರಿಗೆ ವರ್ಷಪೂರ್ತಿ ಯಾವುದೇ ಕೆಲಸ ಇರಲ್ಲ.

Most Read: ಈ ಹಳ್ಳಿಯ ಭಾಷೆ ನಾವ್ಯಾರು ಮಾತನಾಡುವಂತಿಲ್ಲ- ಪೊಲೀಸರು ಇಲ್ಲಿಗೆ ಬರುವಂತಿಲ್ಲ!

ವರದಿಗಳು ಹೇಳುವ ಪ್ರಕಾರ

ವರದಿಗಳು ಹೇಳುವ ಪ್ರಕಾರ

ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ನಾವು ಒತ್ತಾಯ ಮಾಡುವುದಿಲ್ಲ. ಆದರೆ ಇದು ಅವರು ತಮ್ಮ ಉಳಿವಿಗಾಗಿ ಕಂಡು ಕೊಂಡಿರುವಂತಹ ಆಯ್ಕೆಯಾಗಿದೆ ಎಂದು ಕಾಂಟ್ರಾಕ್ಟರ್ ದಾದಾ ಪಾಟೀಲ್ ಎಂಬಾತ ಹೇಳುತ್ತಾರೆ. ವರದಿಗಳು ಹೇಳುವ ಪ್ರಕಾರ ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕಾಂಟ್ರಾಕ್ಟರ್ ಗಳು ಮೊದಲೇ ಹಣ ನೀಡುವರು ಮತ್ತು ಅದನ್ನು ಅವರ ದಿನಗೂಲಿಯಲ್ಲಿ ಕಡಿತ ಮಾಡುವರು.

ವರದಿಗಳು ಹೇಳುವ ಪ್ರಕಾರ

ವರದಿಗಳು ಹೇಳುವ ಪ್ರಕಾರ

ತಾಥಪಿ ಎನ್ನುವ ಸಂಸ್ಥೆಯೊಂದು ನಡೆಸಿರುವಂತಹ ವರದಿಯೊಂದ ಪ್ರಕಾರ 25ರ ಹರೆಯದ ಮಹಿಳೆಯರು ಕೂಡ ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಗರ್ಭಾಶಯ ತೆಗೆಸಿಕೊಳ್ಳುವುದರಿಂದಾಗಿ ಹಾರ್ಮೋನು ವೈಪರಿತ್ಯ, ಮಾನಸಿಕ ಆರೋಗ್ಯದ ಸಮಸ್ಯೆ ಮತ್ತು ತೂಕ ಹೆಚ್ಚಳ ಉಂಟಾಗಬಹುದು. ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವಂತಹ ಮಹಿಳೆಯರು ಇಲ್ಲಿ ಯಾತನಮಯ ಜೀವನ ನಡೆಸುತ್ತಿದ್ದಾರೆ. ಯಾಕೆಂದರೆ ಗರ್ಭಾಶಾಯ ತೆಗೆಸಿಕೊಳ್ಳುವ ಜತೆಗೆ ಇವರನ್ನು ಕೆಲವೊಂದು ಕಾಂಟ್ರಾಕ್ಟರ್ ಗಳು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಶೌಚಾಲಯ ಮತ್ತು ಸ್ನಾನಗೃಹದ ಕೊರತೆಯಿಂದಾಗಿ ಇವರ ಜೀವನ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ವರದಿಗಳು ಹೇಳಿವೆ. ಯಾರಿಗೂ ಇಂತಹ ಜೀವನ ಸಿಗದೆ ಇರಲಿ ಎಂದು ಪ್ರಾರ್ಥಿಸುವ...

English summary

women in this maharashtra village wombless

Cane-cutting contractors are unwilling to hire women who menstruate, so hysterectomies have become the norm.
X
Desktop Bottom Promotion