For Quick Alerts
ALLOW NOTIFICATIONS  
For Daily Alerts

ಸುಮಾರು 14 ವರ್ಷ ಕಾಲ ಕೋಮಾ ಸ್ಥಿತಿಯಲ್ಲಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದಳು!

|

ಅರುಣಾ ಶಾನುಭಾಗ್ ಅವರ ಕಥೆಯನ್ನು ನೀವು ಓದಿರಬಹುದು. ಮುಂಬಯಿಯಲ್ಲಿನ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ ಆಕೆಯ ಮೇಲೆ ವಾರ್ಡ್ ಬಾಯ್ ಒಬ್ಬ ಅತ್ಯಾಚಾರವೆಸಗಿದ್ದ. ಇದರ ಬಳಿಕ ಆಕೆ ಕೋಮಾಗೆ ತೆರಳಿದ್ದರು. ಇಂತಹ ಹಲವಾರು ಘಟನೆಗಳು ಭಾರತ ಮಾತ್ರವಲ್ಲದೆ ವಿಶ್ವದ ವಿವಿಧಡೆಗಳಲ್ಲಿ ನಡೆದಿದೆ. ಇದರಿಂದಾಗಿ ಮಹಿಳೆಯರು ಅಥವಾ ಹುಡುಗಿಯರು ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾದಾಗ ಅವರ ಬಗ್ಗೆ ಮನೆಯವರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಆಸ್ಪತ್ರೆಯಲ್ಲಿನ ಸಿಬ್ಬಂದಿ ಹಾಗೂ ಬೇರೆ ರೋಗಿಗಳನ್ನು ನೋಡಿಕೊಳ್ಳಲು ಬರುತ್ತಿರುವ ವ್ಯಕ್ತಿಗಳು ಕೂಡ ಕೆಲವೊಂದು ಕುಕೃತ್ಯಗಳನ್ನು ನಡೆಸಬಹುದು. ಲೈಂಗಿಕ ಪೀಡನೆಯಂತಹ ಘಟನೆಗಳು ಎಷ್ಟೋ ಆಸ್ಪತ್ರೆಗಳಲ್ಲಿ ನಡೆದಿರುವುದು ಇದೆ.

Woman who has been in coma for 14 years gives birth

ಕೆಲವೊಂದು ಗಮನಕ್ಕೆ ಬಂದರೆ ಇನ್ನು ಕೆಲವು ಹಾಗೆ ಮುಚ್ಚಿ ಹೋಗಿರುವುದು ಇದೆ. ಅದರಲ್ಲೂ ಮಾತು ಬಾರದೆ ಇರುವ ಮತ್ತು ತಮಗೆ ಆಗಿರುವಂತಹ ಕಿರುಕುಳವನ್ನು ಕೇಳಿಕೊಳ್ಳಲು ಸಾಧ್ಯವಾಗದೆ ಇರುವಂತಹ ಮಹಿಳೆಯರ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಈ ಲೇಖನದಲ್ಲಿ ನಿಮಗೆ ಹೀಗೆ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಬಗ್ಗೆ ಹೇಳಲಿದ್ದೇವೆ. ಆಕೆ ಮಗುವಿಗೆ ಜನ್ಮ ನೀಡುವ ತನಕ ಈ ಘಟನೆಯು ಬೆಳಕಿಗೆ ಬಂದೇ ಇರಲಿಲ್ಲ. ಈ ದುರಂತದ ಬಗ್ಗೆ ನೀವು ತಿಳಿಯಿರಿ.

ಮಹಿಳೆಯು ಕಳೆದ 14 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದಾಳೆ…

ಮಹಿಳೆಯು ಕಳೆದ 14 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದಾಳೆ…

ಅಮೆರಿಕಾದ ಅರಿಜೋನಾದಲ್ಲಿ ಈ ಘಟನೆಯು ನಡೆದಿದೆ. ಅರಿಜೋನಾದಲ್ಲಿ ಇರುವ ಹಕೆಂಡಾ ಹೆಲ್ತ್ ಕೇರ್ ನಲ್ಲಿ ಕಳೆದ 14 ವರ್ಷದಿಂದ ಕೋಮಾ ಸ್ಥಿತಿಯಲ್ಲಿ ಇರುವಂತಹ ಮಹಿಳೆಯರು ಮಗುವಿನ ಜನ್ಮ ನೀಡಿ ಎಲ್ಲರನ್ನು ನಿಬ್ಬೆರೆಗಾಗಿಸಿದ್ದಾರೆ.

Most Read: ಇಂತಹ ಆಹಾರಗಳನ್ನು ಚಳಿಗಾಲದಲ್ಲಿ ತಪ್ಪದೇ ಮಿಸ್ ಮಾಡದೇ ಸೇವಿಸಿ

ಯಾರಿಗೂ ಆಕೆ ಗರ್ಭಿಣಿ ಎಂದು ತಿಳಿದಿರಲಿಲ್ಲ!

ಯಾರಿಗೂ ಆಕೆ ಗರ್ಭಿಣಿ ಎಂದು ತಿಳಿದಿರಲಿಲ್ಲ!

ಆಸ್ಪತ್ರೆಯಲ್ಲಿ ಇರುವಂತಹ ಯಾವ ಸಿಬ್ಬಂದಿಗೂ ಆಕೆ ಗರ್ಭಿಣಿ ಎಂದು ತಿಳಿದೇ ಇರಲಿಲ್ಲ. ಆಕೆ ಕೋಮಾ ಸ್ಥಿತಿಯಲ್ಲಿ ವರ್ಷಗಳ ಕಾಲ ಇದ್ದಳು ಮತ್ತು ಇದರಿಂದ ಆಕೆ ಗರ್ಭಿಣಿ ಎನ್ನುವ ವಿಚಾರವು ಸಿಬ್ಬಂದಿ ಮತ್ತು ವೈದ್ಯರಿಗೆ ತಿಳಿಯಲಿಲ್ಲ.

ನರ್ಸ್ ಆಕೆಯನ್ನು ಪರೀಕ್ಷಿಸಿದ ವೇಳೆ ನರಳುತ್ತಿದ್ದಳು

ನರ್ಸ್ ಆಕೆಯನ್ನು ಪರೀಕ್ಷಿಸಿದ ವೇಳೆ ನರಳುತ್ತಿದ್ದಳು

ಮಹಿಳೆಯನ್ನು ನರ್ಸ್ ಪರೀಕ್ಷೆ ಮಾಡಿದ ವೇಳೆ ಆಕೆ ನರಳಲು ಆರಂಭಿಸಿದಳು. ಆದರೂ ಆಕೆ ಗರ್ಭಿಣಿ ಎನ್ನುವ ಬಗ್ಗೆ ಅವರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆಕೆಗೆ ಏನೋ ಆಗಿದೆ ಎನ್ನುವುದನ್ನು ತಿಳಿಯಲು ಅವರಿಗೆ ತುಂಬಾ ಸಮಯ ಬೇಕಾಯಿತು. ಮಹಿಳೆಯು ಆರೋಗ್ಯಕರ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

Most Read: ಬಡತನ ನಿವಾರಣೆ ಮಾಡಲು ಕೃಷ್ಣನ ಈ ಐದು ಸಂದೇಶಗಳನ್ನು ಪಾಲಿಸಿ

ತನಿಖೆಯು ಆರಂಭವಾಗಿದೆ…

ತನಿಖೆಯು ಆರಂಭವಾಗಿದೆ…

ಕೋಮಾ ಸ್ಥಿತಿಯಲ್ಲಿ ಇರುವಂತಹ ಮಹಿಳೆಯು ತನ್ನ ಗರ್ಭಕ್ಕೆ ಕಾರಣ ಯಾರು ಎಂದು ಹೇಳಲು ಸಾಧ್ಯವಿಲ್ಲದೆ ಇರುವ ಕಾರಣದಿಂದಾಗಿ ಈ ಬಗ್ಗೆ ಈಗಲೇ ತನಿಖೆಯನ್ನು ಆರಂಭಿಸಲಾಗಿದೆ. ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಇರುವ ಮಹಿಳೆಯನ್ನು ಯಾರು ಅತ್ಯಾಚಾರ ಮಾಡಿದರು ಎನ್ನುವ ಬಗ್ಗೆ ತನಿಖೆಯು ನಡೆಯುತ್ತಲಿದೆ.

ಇಂತಹ ಹಲವಾರು ಘಟನೆಗಳು ನಡೆದಿದೆ

ಇಂತಹ ಹಲವಾರು ಘಟನೆಗಳು ನಡೆದಿದೆ

ಯಾವುದೇ ಪ್ರತಿರೋಧ ತೋರಿಸಲು ಸಾಧ್ಯವಾಗದೆ ಇರುವಂತಹ ಮಹಿಳಾ ರೋಗಿಗಳ ಮೇಲೆ ನಡೆದಿರುವಂತಹ ಲೈಂಗಿಕ ಕಿರುಕುಳಗಳಲ್ಲಿ ಇದು ಒಂದಾಗಿದೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮಾತ್ರ ಮರೆಯಬೇಡಿ.

English summary

Woman who has been in coma for 14 years gives birth

A woman who was reportedly in a vegetative state for 14 long years gave birth to a healthy baby boy after the nurses found her to be moaning in pain. The woman was apparently raped in the hospital premises, and an investigation is in progress.Leaving your loved one in the hospital while they are admitted is often a concern to the family members
X
Desktop Bottom Promotion