For Quick Alerts
ALLOW NOTIFICATIONS  
For Daily Alerts

ಸಂಖ್ಯಾಶಾಸ್ತ್ರ: 2 ನಂಬರ್ ಹೊಂದಿರುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರಲಿದೆ?

|

ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಗೂ ತನ್ನದೇ ಆಗಿರುವಂತಹ ಮಹತ್ವವಿದೆ. ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಹುಟ್ಟಿದ ದಿನಾಂಕವನ್ನು ಲೆಕ್ಕ ಹಾಕಿಕೊಂಡು ಅದರಿಂದ ಬರುವಂತಹ ಒಂದು ಅಂಕೆಯಿಂದ ನಿಮ್ಮ ವ್ಯಕ್ತಿತ್ವ ಹಾಗೂ ಭವಿಷ್ಯದ ಬಗ್ಗೆ ಹೇಳಬಹುದಾಗಿದೆ. ಜನಪ್ರಿಯ ಸಿನಿಮಾ ನಟರು, ಆಟಗಾರರು ಹಾಗೂ ರಾಜಕಾರಣಿಗಳು ಕೂಡ ಸಂಖ್ಯಾಶಾಸ್ತ್ರವನ್ನು ನಂಬಿಕೊಂಡಿರುವರು. ಒಂದೊಂದು ಅಂಕೆಗೂ ಅದರದ್ದೇ ಆಗಿರುವ ಮಹತ್ವವಿದೆ. ಎರಡು ಅಂಕೆಯು ಬೇರ್ಪಡಿಸುವಿಕೆ ಹಾಗೂ ಏಕಾಂಗಿತನವನ್ನು ದೂರ ಮಾಡುವುದು. ಎರಡು ಸಂಖ್ಯೆಯಲ್ಲಿ ಹುಟ್ಟಿರುವಂತಹ ಜನರು ತಮ್ಮದೇ ಆಗಿರುವ ಪ್ರಾಮುಖ್ಯತೆ ಹೊಂದಿರುವರು ಮತ್ತು ಇದು ಬೇರೆ ಎಲ್ಲಾ ಸಂಖ್ಯೆಗಳಿಂತ ಇವರನ್ನು ಭಿನ್ನವಾಗಿಡುವುದು. ಈ ಲೇಖನದಲ್ಲಿ ನಾವು ನಿಮಗೆ 2 ಅಂಕೆಯ ವಿವರ ಹಾಗೂ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲಿದ್ದೇವೆ.

ತಜ್ಞರ ಪ್ರಕಾರ ಎರಡು ಅಂಕೆಗೆ ತನ್ನದೇ ಆಗಿರುವಂತಹ ಕೆಲವು ಮಹತ್ವವಿದೆ. 2 ಅಂಕೆಯು ವ್ಯಕ್ತಿಯ ವ್ಯಕ್ತಿತ್ವನ್ನು ಹೇಳುವುದು. ಈ ಅಂಕೆಯಲ್ಲಿ ಜನಿಸಿರುವಂತಹ ವ್ಯಕ್ತಿಗಳು ತಮ್ಮದೇ ಆಗಿರುವಂತಹ ಆದ್ಯತೆ ಹೊಂದಿರುವರು. ಇದೇ ಕಾರಣದಿಂದ ಅವರು ಬೇರೆ ಜನರಿಗಿಂತ ತುಂಬಾ ಭಿನ್ನವಾಗಿ ನಿಲ್ಲುವರು. ಈ ವ್ಯಕ್ತಿಗಳು ತಾವು ಹೋಗುವ ಜಾಗಗಳಲ್ಲಿ ಶಾಂತಿ ಹಾಗೂ ಸೌಹಾರ್ದತೆ ನಿರ್ಮಿಸುವರು. ಎರಡು ಅಂಕೆಯ ವ್ಯಕ್ತಿಗಳ ವ್ಯಕ್ತಿತ್ವ ಬಗ್ಗೆ ತಿಳಿಯಲು ನೀವು ಮುಂದಾಗಿ.(ನಿಮ್ಮ ಅಂಕೆಯನ್ನು ಪತ್ತೆ ಮಾಡಲು ನೀವು ಈ ಕೆಳಗೆ ಸೂಚಿಸಿರುವ ವಿಧಾನದ ಮೂಲಕ ಹುಟ್ಟಿದ ದಿನಾಂಕವನ್ನು ಲೆಕ್ಕಹಾಕಬೇಕು.)

ನಿಮ್ಮ ಹುಟ್ಟಿದ ದಿನಾಂಕವು ಜನನದ ಪ್ರಮುಖ ಹಾದಿಯಾಗಿರುವುದು ಮತ್ತು ಇದರ ಬಳಿಕ ತಿಂಗಳು ಮತ್ತು ವರ್ಷವು ಎರಡನೇ ಪ್ರಮುಖ ಹಾದಿಯನ್ನು ತೋರಿಸುವುದು. ಇದೆಲ್ಲವನ್ನು ಕೂಡಿಸಿದ ಬಳಿಕ ಬರುವ ಒಂಟಿ ಅಂಕೆಯನ್ನು ನೀವು ಪಡೆಯಬಹುದು. ಉದಾಹರಣೆಗೆ:(16-10-1986=1+6+1+0+1+9+8+6=32, 3+2=5). ಈ ವ್ಯಕ್ತಿಗಳು ತಾವು ಹೋದಕಡೆ ಶಾಂತಿ ಸ್ಥಾಪಿಸುವರು, ಎರಡು ಅಂಕೆ ಹೊಂದಿರುವಂತಹ ಜನರು ಪ್ರಬಲ ವ್ಯಕ್ತಿತ್ವ ಹೊಂದಿರುವರು. ಇವರು ಹೋದ ಕಡೆ ಮಾನವೀಯತೆ ಯಿಂದಾಗಿ ಶಾಂತಿ ನೆಲೆಸುವಂತೆ ಮಾಡುವರು. ಇದು ನಿಮ್ಮ ಅಂಕೆಯಿದ್ದರೆ ಆಗ ನೀವು ಒಳ್ಳೆಯ ಕೇಳುಗರಾಗಿ ಮಾಹಿತಿ ಸಂಗ್ರಹಿಸುವ ಶ್ರೇಷ್ಠ ಸಾಮರ್ಥ್ಯ ಹೊಂದಿರುವಿರಿ. ನೀವು ಪ್ರತಿಯೊಂದರ ಬಗ್ಗೆಯೂ ಸಣ್ಣ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವಿರಿ ಮತ್ತು ಇದನ್ನು ಜೀವನದ ಕೆಲವೊಂದು ಹಂತಗಳಲ್ಲಿ ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಿರಿ.

ನೀವು ತುಂಬಾ ಸಹಾನುಭೂತಿಯುಳ್ಳವರು

ನೀವು ತುಂಬಾ ಸಹಾನುಭೂತಿಯುಳ್ಳವರು

2 ಅಂಕೆಯು ನಿಮ್ಮದಾಗಿದ್ದರೆ ಆಗ ನೀವು ತುಂಬಾ ಸಹಾನುಭೂತಿಯುಳ್ಳವರು ಮತ್ತು ರಾಜತಾಂತ್ರಿಕ ವ್ಯಕ್ತಿಯಾಗಿರುವಿರಿ. ನೀವು ಬಳಲಿಕೆ ಇಲ್ಲದ ಸೇವೆ, ಮಾರ್ಗದರ್ಶನ ಮತ್ತು ಇತರರಿಗೆ ಪೋಷಣೆ ಪ್ರವೃತ್ತಿ ಹೊಂದಿರುವಿರಿ. ನೀವು ಒಳ್ಳೆಯ ಶಾಂತಿದೂತರಾಗಿರುವಿರಿ. ಆದರೆ ಇದೇ ವೇಳೆ ತುಂಬಾ ಸಂತೋಷವಾಗಿರಲು ತುಂಬಾ ಕಠಿಣ ಹಾದಿ ಹಿಡಿಯಬೇಕು ಎಂದು ನೀವು ಮನವರಿಕೆ ಮಾಡಿಕೊಳ್ಳುವಿರಿ.

Most Read: ಈ ವರ್ಷ 2019ರಲ್ಲಿ ಈ ಮೂರು ರಾಶಿಯವರು ದುರಾದೃಷ್ಟದ ದಿನವನ್ನು ಎದುರಿಸಲಿದ್ದಾರಂತೆ!

ನೀವು ಸಂವೇದನೀಯ ವ್ಯಕ್ತಿ

ನೀವು ಸಂವೇದನೀಯ ವ್ಯಕ್ತಿ

ನೀವು ವ್ಯಕ್ತಿಯಾಗಿ ತುಂಬಾ ಸಂವೇದನೀಯ, ಆಕರ್ಷಕ ಹಾಗೂ ಸಂಗಾತಿಗೆ ತುಂಬಾ ಪ್ರಾಮಾಣಿಕ ವ್ಯಕ್ತಿಯಾಗಿರುವಿರಿ. ಕೆಲವೊಂದು ಸಂದರ್ಭಗಳಲ್ಲಿ ನೀವು ತುಂಬಾ ಬೇಡಿಕೆ ಸಲ್ಲಿಸುವಿರಿ. ಆದರೆ ಇದು ತೊಂದರೆಗೆ ಸರಿಯಾದ ಮೌಲ್ಯ ನೀಡುವುದು.

ನೀವು ತುಂಬಾ ಪ್ರಾಮಾಣಿಕ ಸಂಬಂಧ ಬಯಸುವಿರಿ

ನೀವು ತುಂಬಾ ಪ್ರಾಮಾಣಿಕ ಸಂಬಂಧ ಬಯಸುವಿರಿ

2 ಅಂಕೆಯ ವ್ಯಕ್ತಿಗಳು ಯಾವಾಗಲೂ ತಾತ್ಕಾಲಿಕವಾದ ಸಂಬಂಧಗಳಿಗೆ ಮಹತ್ವ ನೀಡಲ್ಲ. ನೀವು ಯಾವಾಗಲೂ ದೀರ್ಘಕಾಲ ಬಾಳುವಂತಹ ಪರಸ್ಪರ ನಿಷ್ಠೆ ಹಾಗೂ ವಿಶ್ವಾಸದಿಂದ ಮೂಡಿರುವಂತಹ ಸಂಬಂಧ ಬಯಸುವಿರಿ. ನೀವು ನೈಜ ಪ್ರೇಮದಲ್ಲಿ ನಂಬಿಕೆಯಿಟ್ಟಿರುವಂತಹ ವ್ಯಕ್ತಿಯಾಗಿರುವಿರಿ.

ನಿಮ್ಮ ದೌರ್ಬಲ್ಯಗಳು

ನಿಮ್ಮ ದೌರ್ಬಲ್ಯಗಳು

ಎರಡು ಅಂಕೆಯ ವ್ಯಕ್ತಿಗಳು ಅತೀ ಸೂಕ್ಷ್ಮವಾಗಿರುವರು. ನೀವು ತುಂಬಾ ಸೂಕ್ಷ್ಮ ಅಹಂ ಹೊಂದಿರುವಿರಿ ಮತ್ತು ನಿಮ್ಮ ಮನಸ್ಸಿಗೆ ತುಂಬಾ ಬೇಗ ನೋವುಂಟಾಗುವುದು. ಕೆಲವೊಂದು ಸಮಯದಲ್ಲಿ ನೀವು ಅಂಜುಬುರುಕರಾಗಿರುವಿರಿ.

Most Read: ಸಂಖ್ಯಾಶಾಸ್ತ್ರ: ಹುಟ್ಟಿದ ವರ್ಷದ ಸಂಖ್ಯೆಯು ಹೀಗಿದ್ದರೆ ನಡವಳಿಕೆ ಹೀಗಿರಲಿದೆ...

2 ಅಂಕೆಯ ವ್ಯಕ್ತಿಗಳಿಗೆ ಕೆಲವೊಂದು ಅದೃಷ್ಟದ ಅಂಶಗಳು

2 ಅಂಕೆಯ ವ್ಯಕ್ತಿಗಳಿಗೆ ಕೆಲವೊಂದು ಅದೃಷ್ಟದ ಅಂಶಗಳು

*ಅಂಶ: ನೀರು

*ಅದೃಷ್ಟದ ದಿನಗಳು: ಸೋಮವಾರ ಮತ್ತು ಶುಕ್ರವಾರ

*ಅದೃಷ್ಟದ ಬಣ್ಣ: ಬಿಳಿ

*ಅದೃಷ್ಟದ ರತ್ನ: ಮುತ್ತು

*ಅದೃಷ್ಟ ಸಂಖ್ಯೆ: 2,3,7,8 ಮತ್ತು 29

*ಅದೃಷ್ಟದ ತಿಂಗಳು: ಫೆಬ್ರವರಿ, ಎಪ್ರಿಲ್, ಅಗಸ್ಟ್ ಮತ್ತು ನವಂಬರ್

*ಅದೃಷ್ಟದ ಲೋಹ: ಬೆಳ್ಳಿ

*ಅದೃಷ್ಟದ ಇಂಗ್ಲಿಷ್ ಅಕ್ಷರಗಳು: ಬಿ, ಡಿ, ಕೆ, ಎಂ, ಆರ್, ಒ, ಟಿ ಮತ್ತು ಝಡ್

*ಶುಭ ದಿಕ್ಕು: ವಾಯುವ್ಯ

English summary

What Is The Significance Of Number Two In Numerology?

The number two brings an end to separation and loneliness. Individuals who are born under number two have their own priorities, and this is something that differs from the rest of the numbers. Here in this article, we are revealing you the details about the number 2 and its significance.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more