For Quick Alerts
ALLOW NOTIFICATIONS  
For Daily Alerts

ಲೆನ್ಸ್ ತೆಗೆಯದ ಮಲಗಿದ ಮಹಿಳೆಯ ಕಣ್ಣುಗಳಿಗೆ ಏನಾಯಿತು ಗೊತ್ತೇ ?

|

ಆಧುನಿಕತೆಯಲ್ಲಿ ನಾವು ಮುಳುಗಿ ಹೋಗಿರುವಾಗ ಕೆಲವೊಂದು ಎಚ್ಚರಿಕೆ ವಹಿಸುವುದು ಕೂಡ ಅತೀ ಅಗತ್ಯವಾಗಿರುವುದು. ಯಾಕೆಂದರೆ ನಾವು ಇಂದಿನ ದಿನಗಳಲ್ಲಿ ಪ್ರತಿಯೊಂದು ಆಧುನಿಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದೇವೆ. ಇದರಲ್ಲಿ ಕಣ್ಣಿನ ಲೆನ್ಸ್ ಕೂಡ ಒಂದಾಗಿದೆ. ಹೆಚ್ಚಾಗಿ ಕಣ್ಣಿನ ದೃಷ್ಟಿದೋಷವಿರುವಂತಹ ವ್ಯಕ್ತಿಗಳು ಕನ್ನಡಕ ಧರಿಸುವ ಬದಲಿಗೆ ಲೆನ್ಸ್ ಧರಿಸುವರು. ಇದರಿಂದ ಪದೇ ಪದೇ ಕನ್ನಡಕ ಧರಿಸುವುದು ಅಥವಾ ತೆಗೆಯುವ ಕೆಲಸವು ಉಳಿಯುವುದು.

Wearing Contacts To Sleep Can Cause This

ಲೆನ್ಸ್ ಬೆಳಗ್ಗೆ ಹಾಕಿಕೊಂಡರೆ, ಮತ್ತೆ ರಾತ್ರಿ ವೇಳೆ ಮಲಗುವಾಗ ತೆಗೆಯಬೇಕು. ಆದರೆ ಇಂದಿನ ದಿನಗಳಲ್ಲಿ ಕೆಲವೊಂದು ಜನರು ತಮ್ಮ ಫ್ಯಾಷನ್ ಗಾಗಿಯೂ ಲೆನ್ಸ್ ಹಾಕಿಕೊಳ್ಳುವರು. ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ಕಡಿಮೆ ಬೆಲೆಯ ಲೆನ್ಸ್ ಗಳು ಕಣ್ಣಿಗೆ ಹಾನಿ ಉಂಟು ಮಾಡಬಹುದು. ಅದೇ ರೀತಿ ಇದರ ಸ್ವಚ್ಛತೆ ಬಗ್ಗೆ ಕೂಡ ಗಮನಹರಿಸಬೇಕು. ಇಲ್ಲೊಬ್ಬಳು ಮಹಿಳೆಯು ರಾತ್ರಿ ವೇಳೆ ಮಲಗುವಾಗ ಲೆನ್ಸ್ ನ್ನು ಹಾಕಿ ಹಾಕಿಕೊಂಡು ಮಲಗಿರುವಳು. ಇದರಿಂದ ಅದರಲ್ಲಿದ್ದ ಕೆಲವು ಬ್ಯಾಕ್ಟೀರಿಯಾಗಳು ಆಕೆಯ ಕಣ್ಣಿನ ಕಾರ್ನಿಯಾವನ್ನೇ ತಿಂದು ಹಾಕಿದೆ. ಈ ದುರಂತ ಘಟನೆಯ ಬಗ್ಗೆ ನೀವು ಓದಿಕೊಳ್ಳಿ.

ಕಾಂಟೆಕ್ಟ್ ಲೆನ್ಸ್ ಹಾಕಿಕೊಂಡು ಮಲಗಿದ್ದಳು

ಕಾಂಟೆಕ್ಟ್ ಲೆನ್ಸ್ ಹಾಕಿಕೊಂಡು ಮಲಗಿದ್ದಳು

ಆಕೆ ರಾತ್ರಿ ವೇಳೆ ತುಂಬಾ ಬಳಲಿದ್ದ ಕಾರಣದಿಂದಾಗಿ ಕಾಂಟೆಕ್ಟ್ ಲೆನ್ಸ್ ನ್ನು ತೆಗೆದು ಮಲಗಬೇಕು ಎಂದು ಅನಿಸಲಿಲ್ಲ. ಉದಾಸೀನ ದಿಂದಾಗಿ ಆಕೆ ಹಾಗೆ ಮಲಗಿದಳು. ಆದರೆ ಇದು ಆಕೆಯ ಜೀವನದಲ್ಲಿ ತುಂಬಲಾರದ ನಷ್ಟ ಮಾಡಿದೆ. ಸೂಡೊಮೊನಾ ಎನ್ನುವ ಬ್ಯಾಕ್ಟೀರಿಯಾವು ಆಕೆಯ ಕಣ್ಣಿನ ಕಾರ್ನಿಯಾವನ್ನೇ ತಿಂದು ಹಾಕಿದೆ.

Most Read: ಸಿಕ್ಸ್ ಪ್ಯಾಕ್ ಆಬ್ಸ್ ಬೇಕೇ? ಹಾಗಾದರೆ ಈ ಆಸ್ಪತ್ರೆಗೆ ಹೋಗಿ...

ಮಹಿಳೆಯ ಗುರುತು ಗೌಪ್ಯವಾಗಿಡಲಾಗಿದೆ

ಮಹಿಳೆಯ ಗುರುತು ಗೌಪ್ಯವಾಗಿಡಲಾಗಿದೆ

ಕಣ್ಣಿನಲ್ಲಿ ಸಮಸ್ಯೆ ಕಂಡುಬಂದ ವೇಳೆ ಆಕೆ ವೈದ್ಯರ ಬಳಿಗೆ ಹೋಗುತ್ತಾರೆ. ಆದರೆ ಕಣ್ಣಿನಲ್ಲಿ ಸಣ್ಣ ಅಲ್ಸರ್ ಕಾಣಿಸಿದೆ. ಇನ್ನಷ್ಟು ಪರಿಶೀಲನೆ ಮಾಡಿದ ವೇಳೆ ದೊಡ್ಡ ಮಟ್ಟದ ಅಲ್ಸರ್ ಕಂಡುಬಂದಿದೆ. ಬೆಳಕಿನ ಗ್ರಹಿಕೆಗೆ ಮಾತ್ರ ಆಕೆಯ ದೃಷ್ಟಿಯು ಕಡಿಮೆಯಾಗಿತ್ತು ಎಂದು ನಂಬಲಾಗಿತ್ತು.

ವೈದ್ಯರು ಹೇಳುವ ಪ್ರಕಾರ

ವೈದ್ಯರು ಹೇಳುವ ಪ್ರಕಾರ

ಚಿತ್ರದಲ್ಲಿ ನೋಡುತ್ತಿರುವಂತಹ ಮಹಿಳೆಯ ಕಣ್ಣುಗಳು ತುಂಬಾ ಹಸಿರು ಬಣ್ಣಕ್ಕೆ ತಿರುಗಿದ್ದವು. ಯಾಕೆಂದರೆ ಇದು ಒಂದು ರೀತಿಯ ಫ್ಲೋರೆಸಿನ್ ಡೈ ಆಗಿತ್ತು. ಇದರ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸಿದ ವೇಳೆ ಆಕೆ ಕಣ್ಣಿನ ಭಾಗದಲ್ಲಿ ಇನ್ನಷ್ಟು ಕಂಡುಬಂದಿದೆ ಮತ್ತು ಇದು ಅಲ್ಸರ್ ನ ಮೂಲ ಎಂದು ತಿಳಿದಿದೆ. ಇದು ಕೇವಲ 36 ಗಂಟೆಗಳಲ್ಲಿ ರಚನೆಯಾಗಿದೆ.

Most Read: ತಪ್ಪಾದ ಅಭ್ಯರ್ಥಿಗೆ ಮತ ನೀಡಿರುವುದಕ್ಕೆ ತನ್ನ ಬೆರಳನ್ನೇ ಕತ್ತರಿಸಿಕೊಂಡ ವ್ಯಕ್ತಿ

ಜೀವನಪೂರ್ತಿ ಮಹಿಳೆಯ ಕಣ್ಣುಗಳಿಗೆ ಹಾನಿಯಾಗಬಹುದು

ಜೀವನಪೂರ್ತಿ ಮಹಿಳೆಯ ಕಣ್ಣುಗಳಿಗೆ ಹಾನಿಯಾಗಬಹುದು

ಮಹಿಳೆಯ ಕಣ್ಣುಗಳಿಗೆ ಚಿಕಿತ್ಸೆ ನೀಡಿದ ಬಳಿಕ ಕೂಡ ಆಕೆಯ ಕಣ್ಣುಗಳು ಜೀವನಪೂರ್ತಿ ದೃಷ್ಟಿ ದೋಷವನ್ನು ಉಂಟು ಮಾಡಲಿದೆ ಎನ್ನುತ್ತಾರೆ ವೈದ್ಯರು.

English summary

Wearing Contacts To Sleep Can Cause This

An ophthalmologist from the United States had shared a patient's case on his Facebook page. The post has gone incredibly viral as it has garnered over 275,000 shares in a span of just four days! He posted pictures of a patient's cornea that was eaten away by bacteria after she slept with her contact lenses in!
X
Desktop Bottom Promotion