For Quick Alerts
ALLOW NOTIFICATIONS  
For Daily Alerts

ಮೊಸಳೆ ಸಾವಿನ ದುಃಖದಲ್ಲಿ ಅಡುಗೆ ಮಾಡದ ಗ್ರಾಮಸ್ಥರು!

|

ಮನುಷ್ಯರು ಸಂಘಜೀವಿ, ಹೀಗಾಗಿ ತಮ್ಮದೇ ಆಗಿರುವ ಒಂದು ಗುಂಪನ್ನು ಕಟ್ಟಿಕೊಂಡು ಇರುವರು. ಅದೇ ರೀತಿಯಾಗಿ ಕೆಲವೊಂದು ಪ್ರಾಣಿಗಳು ಕೂಡ ಗುಂಪಿನಲ್ಲಿ ಇರುವುದು. ಇನ್ನು ಕೆಲವು ಒಂಟಿಯಾಗಿರುವುದು. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧವು ತುಂಬಾ ಹಿಂದಿನಿಂದಲೂ ಬೆಸೆದುಕೊಂಡಿದೆ. ಮನುಷ್ಯ ತನ್ನ ಕೆಲವೊಂದು ಕೆಲಸಕಾರ್ಯಗಳಿಗೆ ಪ್ರಾಣಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಈಗಲೂ ಇದನ್ನು ಮಾಡುತ್ತಿದ್ದಾನೆ. ಇನ್ನು ಕೆಲವು ಮಂದಿ ಪ್ರಾಣಿಗಳೊಂದಿಗೆ ಗಾಢ ಸಂಬಂಧ ಹೊಂದಿರುವರು. ಹೀಗಾಗಿ ಅವರು ಅವುಗಳನ್ನು ತುಂಬಾ ಪ್ರೀತಿಸುವರು. ಸಾಕು ಪ್ರಾಣಿಗಳನ್ನು ಪ್ರೀತಿಸುವುದು ಸಹಜ. ಆದರೆ ಕೆಲವು ಜನರು ಕಾಡು ಪ್ರಾಣಿಗಳನ್ನು ಕೂಡ ಪ್ರೀತಿ ಮಾಡುವರು.

crocodile death

ಇಂತಹ ಎಷ್ಟೋ ಘಟನೆಗಳನ್ನು ನಾವು ಕೇಳಿದ್ದೇವೆ. ಇಲ್ಲೊಂದು ಗ್ರಾಮದಲ್ಲಿ ಮೊಸಳೆಯಿಂದು ಸಹಜವಾಗಿ ಸಾವನ್ನಪ್ಪಿದೆ. ಆದರೆ ಸಂಪೂರ್ಣ ಗ್ರಾಮವೇ ಅದರ ಬಗ್ಗೆ ಶೋಕಾರಣೆ ಮಾಡಿದೆ ಎಂದರೆ ಆ ಗ್ರಾಮದ ಜನರ ಪ್ರೀತಿ ಎಷ್ಟರ ಮಟ್ಟಿಗೆ ಇತ್ತು ಎನ್ನುವುದು ನಮಗೆ ತಿಳಿಯುವುದು. ಸುಮಾರು 130 ವರ್ಷಗಳಿಂದಲೂ ಮೊಸಳೆಯು ಈ ಗ್ರಾಮದ ಜನರೊಂದಿಗೆ ಬೆಸೆದು ಕೊಂಡಿತ್ತು. ಮೊಸಳೆ ಸಾವಿನಿಂದ ಗ್ರಾಮದ ಜನರು ತುಂಬಾ ದುಃಖಿತರಾದರು. ಅವರು ತಮ್ಮ ಮನೆಗಳಲ್ಲಿ ಅಡುಗೆ ಮಾಡಲಿಲ್ಲ ಮತ್ತು ಮೊಸಳೆಗೆ ಅಂತ್ಯಸಂಸ್ಕಾರವನ್ನು ಕೂಡ ಮಾಡಿದರು. ಈ ಗ್ರಾಮದಲ್ಲಿನ ಜನರು ಮೊಸಳೆಯು ತಮ್ಮ ರಕ್ಷಕನೆಂದು ತಿಳಿದಿದ್ದರು. ಮೊಸಳೆ ಹಾಗೂ ಈ ಗ್ರಾಮದ ಜನರ ಮಧ್ಯೆ ಇದ್ದ ಸಂಬಂಧದ ಬಗ್ಗೆ ನೀವು ಈ ಲೇಖನವನ್ನು ಮುಂದೆ ಓದುತ್ತಾ ಸಾಗಿದರೆ ತಿಳಿಯುವುದು.

ಗ್ರಾಮಸ್ಥರು ಈ ಮೊಸಳೆಗೆ `ಗಂಗಾರಾಮ್’ಎಂದು ಹೆಸರು ಇಟ್ಟಿದ್ದರು

ಗ್ರಾಮಸ್ಥರು ಈ ಮೊಸಳೆಗೆ `ಗಂಗಾರಾಮ್’ಎಂದು ಹೆಸರು ಇಟ್ಟಿದ್ದರು

ಗ್ರಾಮಸ್ಥರು ಈ ಮೊಸಳೆಗೆ ಗಂಗಾರಾಮ್ ಎಂದು ಹೆಸರನ್ನು ಇಟ್ಟಿದ್ದರು ಮತ್ತು ಸಂಪೂರ್ಣ ಗ್ರಾಮವು ಮೊಸಳೆಯನ್ನು ದೇವರಂತೆ ಪೂಜಿಸುತ್ತಿತ್ತು. ಕೆರೆಯಲ್ಲಿ ಮೊಸಳೆಯು ಸತ್ತಿರುವುದನ್ನು ಗ್ರಾಮಸ್ಥರು ನೋಡಿದರು.

ಪಶುವೈದ್ಯರು ಮೊಸಳೆಯ ಮರಣೋತ್ತರ ಪರೀಕ್ಷೆ ನಡೆಸಿದರು

ಪಶುವೈದ್ಯರು ಮೊಸಳೆಯ ಮರಣೋತ್ತರ ಪರೀಕ್ಷೆ ನಡೆಸಿದರು

ಮೊಸಳೆಯು ಕೆರೆಯಲ್ಲಿ ಸತ್ತ ಬಳಿಕ ಗ್ರಾಮಸ್ಥರು ಪಶುವೈದ್ಯರನ್ನು ಕರೆಸಿಕೊಂಡು ಅದರ ಮರಣೋತ್ತರ ಪರೀಕ್ಷೆ ಮಾಡಿಸಿದರು. ಮೊಸಳೆಯು ಸಹಜವಾಗಿ ಸಾವನ್ನಪ್ಪಿತ್ತು ಮತ್ತು ಇದು ಸುಮಾರು 250 ಕೆಜಿ ತೂಕ ಹೊಂದಿತ್ತು. ಗ್ರಾಮಸ್ಥರು ಇದರ ಬಳಿಕ ಮೊಸಳೆಯ ಅಂತ್ಯಸಂಸ್ಕಾರ ನಡೆಸಿದರು.

Most Read: ಅದೃಷ್ಟವಂತರಿಗೆ ಮಾತ್ರ ಈ 'ಸಸ್ಯಹಾರಿ ಮೊಸಳೆ'ಯ ದರ್ಶನ ಆಗುವುದು!

ಸುಮಾರು 500 ಜನರು ಉಪಸ್ಥಿತರಿದ್ದರು

ಸುಮಾರು 500 ಜನರು ಉಪಸ್ಥಿತರಿದ್ದರು

ಮೊಸಳೆ ಸಾವಿನಿಂದಾಗಿ ಸಂಪೂರ್ಣ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತು. ಹೆಚ್ಚಿನ ಎಲ್ಲಾ ಮನೆಗಳಲ್ಲಿ ಅಡುಗೆ ಮಾಡದೆ ಶೋಕಾಚರಣೆ ಮಾಡಲಾಯಿತು. ಮೊಸಳೆಯ ಅಂತ್ಯಸಂಸ್ಕಾರದಲ್ಲಿ ಸುಮಾರು 500 ಮಂದಿ ಭಾಗಿಯಾಗಿದ್ದರು ಎಂದು ವರದಿಗಳು ಹೇಳಿವೆ.

ಮೊಸಳೆಯು ಅಪಾಯಕಾರಿಯಾಗಿರಲಿಲ್ಲ

ಮೊಸಳೆಯು ಅಪಾಯಕಾರಿಯಾಗಿರಲಿಲ್ಲ

ಮೊಸಳೆಗಳು ತುಂಬಾ ಅಪಾಯಕಾರಿ ಎಂದು ಪರಿಗಣಿಸಲ್ಪಡುವುದು. ಆದರೆ ಗಂಗಾರಾಮ್ ಮಾತ್ರ ತುಂಬಾ ಶಾಂತ ಮತ್ತು ತನ್ನದೇ ಆದ ಲೋಕದಲ್ಲಿ ಇರುತ್ತಿದ್ದ. ಗ್ರಾಮಸ್ಥರು ಈ ಮೊಸಳೆಗೆ ಅನ್ನ ಮತ್ತು ಬೇಳೆ ಸಾರು ನೀಡುತ್ತಿದ್ದರು. ಮೊಸಳೆಯು ಕೆರೆಯಲ್ಲಿ ಆಡುತ್ತಿದ್ದ ಮಕ್ಕಳಿಗೆ ಯಾವತ್ತೂ ಹಾನಿ ಮಾಡುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಮೊಸಳೆ ಮತ್ತು ಮೊಸಳೆ ಹಾಗೂ ಗ್ರಾಮಸ್ಥರ ಮಧ್ಯೆ ಒಂದು ಅವಿನಾಭಾವ ಸಂಬಂಧ ಬೆಳೆದಿತ್ತು.

Most Read: ಥೈಲ್ಯಾಂಡ್‌ನಲ್ಲಿ ಮೊಸಳೆಯ ಚರ್ಮಕ್ಕೆ ಭಾರೀ ಬೇಡಿಕೆಯಂತೆ! ಯಾಕೆ ಗೊತ್ತೇ?

ಮೊಸಳೆಗೆ ಮಂದಿರ ನಿರ್ಮಾಣ ಮಾಡಲು ಗ್ರಾಮಸ್ಥರು ನಿರ್ಧರಿಸಿರುವರು

ಮೊಸಳೆಗೆ ಮಂದಿರ ನಿರ್ಮಾಣ ಮಾಡಲು ಗ್ರಾಮಸ್ಥರು ನಿರ್ಧರಿಸಿರುವರು

ಗ್ರಾಮದ ಸರಪಂಚ ಹೇಳುವಂತೆ ಗ್ರಾಮಸ್ಥರು ಸತ್ತಿರುವ ಮೊಸಳೆಗೆ ಮಂದಿರವೊಂದನ್ನು ನಿರ್ಮಾಣ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಮೊಸಳೆಯನ್ನು ದಫನ ಮಾಡಿರುವಂತಹ ಕೆರೆಯ ದಡದಲ್ಲಿ ಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಚಿಂತನೆ ನಡೆಸುತ್ತಿದ್ದಾರೆ.

English summary

Villagers Did Not Cook Food When This Crocodile Died!

In a village in Chhattisgarh, India, the villagers assembled to bid an emotional goodbye to a crocodile, that the entire village had been worshipping since the past 130 years. They believed the crocodile was their protector. The villagers had even fondly named it as ''Gangaram'', and it was next to God.
X
Desktop Bottom Promotion