Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಜಾತಕ, ರಾಶಿಚಕ್ರ, ಗ್ರಹಗತಿಗಳ ಆಧಾರದ ಮೇಲೆ ಹರಳು ಧರಿಸಿದರೆ- ದೇಹದ ತೂಕ ಇಳಿಸಬಹುದಂತೆ!
ತೂಕವನ್ನು ಇಳಿಸಲು ಹಲವಾರು ವಿಧಾನಗಳು ಇವೆ. ಈ ಹಿನ್ನೆಲೆಯಲ್ಲಿಯೇ ಅನೇಕರು ತಮ್ಮ ತೂಕದಲ್ಲಿ ಏರಿಕೆ ಹಾಗೂ ಇಳಿಕೆಯನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ಸಿನಿಮಾ ತಾರೆಯರು ಹಾಗೂ ರೂಪದರ್ಶಿಗಳು ತಮ್ಮ ದೇಹದ ವಿನ್ಯಾಸ ಅಥವಾ ತೂಕದ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸುತ್ತಾರೆ. ಅವರ ದೇಹದ ಆಕಾರ ಹಾಗೂ ವ್ಯಕ್ತಿತ್ವದ ಆಧಾರದ ಮೇಲೆಯೇ ವೃತ್ತಿ ಜೀವನ ನಿಂತಿರುತ್ತದೆ. ದೇಹದ ತೂಕ ಅತಿಯಾದರೆ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಅವರು ಸೇವಿಸುವ ಆಹಾರದ ಬಗ್ಗೆ ಸಾಕಷ್ಟು ಕಾಳಜಿಯನ್ನು ತೋರುವರು. ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಮಿತವಾದ ಆಹಾರ ಸೇವನೆಯಿಂದ ಪಡೆದುಕೊಳ್ಳುವರು.
ರೂಪದರ್ಶಿಗಳು ಹಾಗೂ ಸಿನಿಮಾ ತಾರೆಯರು ಸಾಮಾನ್ಯ ಜನರಿಗೆ ಪ್ರೇರಣಾ ವ್ಯಕ್ತಿಗಳು ಅಥವಾ ಮಾದರಿ ವ್ಯಕ್ತಿಗಳಾಗಿರುತ್ತಾರೆ. ತಮ್ಮ ನೆಚ್ಚಿನ ನಾಯಕ/ ನಾಯಕಿಯರಂತೆ ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಕೆಲವರು ಅಧಿಕ ತೂಕದಿಂದಾಗಿ ಅನುಭವಿಸುವ ಕೆಲವು ತೊಂದರೆಗಳನ್ನು ನಿವಾರಿಸಿಕೊಳ್ಳುವ ಉದ್ದೇಶದಿಂದ ತೂಕವನ್ನು ಇಳಿಸುತ್ತಾರೆ. ದೇಹದ ತೂಕವು ಅವರವರ ನಿಲುವಿಗೆ ಅಥವಾ ಎತ್ತರಕ್ಕೆ ಅನುಗುಣವಾಗಿ ಇದ್ದರೆ ಆರೋಗ್ಯಯುತವಾಗಿ ಇರುತ್ತಾರೆ. ಅದೇ ದೇಹದ ಎತ್ತರಕ್ಕೂ ಮಿಗಿಲಾದ ತೂಕವನ್ನು ಅಥವಾ ಅತೀ ಕಡಿಮೆ ತೂಕ ಹೊಂದುವುದರ ಪರಿಣಾಮದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು.
ದೇಹದ ಅತಿಯಾದ ತೂಕ
ದೇಹದ ಅತಿಯಾದ ತೂಕದಿಂದ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳು ಉಂಟಾಗುತ್ತವೆ. ರಕ್ತದೊತ್ತಡ, ಮಧುಮೇಹ, ಮೂಳೆ ಸವೆತ, ಮೂಳೆ ನೋವು, ಸಂಧು ನೋವು, ಆಯಾಸ, ಹೃದಯದ ಸಮಸ್ಯೆ, ಮೂತ್ರಕೋಶಗಳ ಸಮಸ್ಯೆ, ಜಠರದಲ್ಲಿ ಕೊಬ್ಬಿನಾಂಶ ಶೇಖರಣೆ ಸೇರಿದಂತೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ನಿಯಂತ್ರಿಸುವ ಉದ್ದೇಶಕ್ಕಾದರೂ ಕೆಲವರು ದೇಹದ ತೂಕವನ್ನು ಇಳಿಸಲು ಸಾಕಷ್ಟು ಪ್ರಯತ್ನ ಹಾಗೂ ಕ್ರಮವನ್ನು ಅನುಸರಿಸುತ್ತಾರೆ. ಅದಕ್ಕಾಗಿಯೇ ವ್ಯಾಯಾಮ, ದೇಹ ದಂಡನೆ, ಮಿತವಾದ ಆಹಾರ ಸೇವನೆ ಸೇರಿದಂತೆ ಇನ್ನಿತರ ಮಾರ್ಗಗಳ ಮೊರೆ ಹೋಗುವುದನ್ನು ಕಾಣಬಹುದು.
ದೇಹದ ಅತಿಯಾದ ತೂಕ
ದೇಹದ ತೂಕ, ಮಾನಸಿಕ ಸ್ಥಿತಿ, ಆರೋಗ್ಯ, ಕುಟುಂಬ, ವೃತ್ತಿ ಸೇರಿದಂತೆ ಅನೇಕ ಸಂಗತಿಗಳು ವ್ಯಕ್ತಿಯ ರಾಶಿಚಕ್ರ ಹಾಗೂ ಕುಂಡಲಿಗೆ ಅನುಗುಣವಾಗಿ ಇರುತ್ತವೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹರಳುಗಳು ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ವಿವಿಧ ಬಗೆಯ ಹರಳು ಹಾಗೂ ಮುತ್ತುಗಳು ವಿಶೇಷವಾದ ಧಾರ್ಮಿಕ ಶಕ್ತಿಯನ್ನು ಪಡೆದುಕೊಂಡಿರುತ್ತವೆ ಎನ್ನಲಾಗುವುದು. ಅಲ್ಲದೆ ಧನಾತ್ಮಕ ಶಕ್ತಿಯು ನಮ್ಮೆಡೆಗೆ ಒಲಿದು ಬರುವಂತೆ ಮಾಡುತ್ತದೆ ಎಂದು ಸಹ ಹೇಳಲಾಗುವುದು. ಈ ಸಂಗತಿಗಳ ಅನುಸಾರವೇ ಕೆಲವರು ತಮ್ಮ ಕುಂಡಲಿ ಹಾಗೂ ಗ್ರಹಗತಿಗಳಿಗೆ ಅನುಗುಣವಾಗಿ ಸೂಕ್ತ ಹರಳು ಅಥವಾ ಕಲ್ಲಿನ ಉಂಗುರು ಅಥವಾ ಆಭರಣಗಳ ರೂಪದಲ್ಲಿ ಧರಿಸುತ್ತಾರೆ. ಈ ಕ್ರಮದಿಂದ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಪರಿಸ್ಥಿತಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುವನು ಎಂದು ಹೇಳಲಾಗುತ್ತದೆ.
Most Read: ಜನ್ಮ ನಕ್ಷತ್ರಕ್ಕೆ ತಕ್ಕಂತೆ 'ಬರ್ತ್ ಸ್ಟೋನ್' ಧರಿಸಿ-ಕಷ್ಟ ದೂರವಾಗುತ್ತದೆ
ದೇಹದ ಅತಿಯಾದ ತೂಕ
ವಿಶೇಷ ಧಾರ್ಮಿಕ ಚಿಂತನೆಯ ಅನುಸಾರ ಕೆಲವು ಉಪಯುಕ್ತ ಹರಳುಗಳು ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯ ಮಾಡುವವು. ನಮ್ಮ ಗ್ರಹಗತಿ ಹಾಗೂ ಕುಂಡಲಿಗಳಿಗೆ ಅನುಗುಣವಾಗಿ ವಿಶೇಷ ಹರಳು ಅಥವಾ ಕಲ್ಲನ್ನು ಧರಿಸುವುದು ಅಥವಾ ನಮ್ಮ ದೇಹಕ್ಕೆ ಹತ್ತಿರವಾಗಿ ಇಟ್ಟುಕೊಳ್ಳುವುದರಿಂದ ಗಮನಾರ್ಹ ರೀತಿಯಲ್ಲಿ ತೂಕವನ್ನು ಇಳಿಸಬಹುದು ಎನ್ನಲಾಗುವುದು. ಇಂತಹ ಒಂದು ವಿಶೇಷ ಸಂಗತಿ ಅಥವಾ ಸುಲಭ ರೀತಿಯಲ್ಲಿ ದೇಹದ ತೂಕವನ್ನು ಇಳಿಸುವ ಪ್ರಯತ್ನವನ್ನು ಹುಡುಕುತ್ತಿದ್ದೀರಿ ಎಂದರೆ ನಿಮಗೆ ಈ ಲೇಖನ ಸೂಕ್ತ ಮಾಹಿತಿಯನ್ನು ನೀಡುವುದು. ಹರಳುಗಳನ್ನು ಧರಿಸುವ ಮುನ್ನ ನಿಮ್ಮ ಜಾತಕ, ರಾಶಿಚಕ್ರ ಹಾಗೂ ಗ್ರಹಗತಿಗಳ ಬಗ್ಗೆ ತಜ್ಞರಿಂದ ಸೂಕ್ತ ಮಾಹಿತಿಯನ್ನು ಪಡೆದು, ಹರಳನ್ನು ಧರಿಸಬೇಕು. ಅನುಚಿತವಾದ ಹರಳುಗಳ ಆಯ್ಕೆ ನಿಮ್ಮದಾಗಿದ್ದು, ಅದನ್ನು ನಿತ್ಯವೂ ಧರಿಸುತ್ತಿದ್ದೀರಿ ಎಂದಾದರೆ ಸಾಕಷ್ಟು ಋಣಾತ್ಮಕ ಪರಿಣಾಮಗಳನ್ನು ಅನುಭವಿಸಬೇಕಾಗುವುದು. ಹರಳುಗಳ ಸಹಾಯದಿಂದ ಹೇಗೆ ದೇಹದ ತೂಕ ಇಳಿಯುವುದು? ಅದರ ಪ್ರಯೋಜನವನ್ನು ನಾವು ಹೇಗೆ ಪಡೆದುಕೊಳ್ಳಬೇಕು ಎನ್ನುವಂತಹ ಸಂಗತಿಯನ್ನು ನೀವು ತಿಳಿಯಬೇಕು ಎಂದಾದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.
ಐಯೋಲೈಟ್ ಹರಳು/ಸ್ಫಟಿಕ
ಐಯೋಲೈಟ್ ಸ್ಫಟಿಕವು ಅಧಿಕ ಪ್ರಮಾಣದಲ್ಲಿ ಧನಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಈ ಸ್ಫಟಿಕವನ್ನು ಬಳಸಿಕೊಂಡು ಆಭರಣಗಳನ್ನು ತಯಾರಿಸಲಾಗುವುದು. ಧನಾತ್ಮಕ ಶಕ್ತಿಯನ್ನು ಹೊಂದಿರುವ ಈ ಸ್ಫಟಿಕವನ್ನು ಧರಿಸುವುದರಿಂದ ಅಥವಾ ದೇಹಕ್ಕೆ ಹತ್ತಿರವಾಗಿ ಇಟ್ಟುಕೊಳ್ಳುವುದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದು ದೇಹದಲ್ಲಿದ್ದ ಕೊಬ್ಬಿನಾಂಶವನ್ನು ಕರಗುವಂತೆ ಮಾಡುತ್ತದೆ. ಅಲ್ಲದೆ ನಮ್ಮ ಚಯಾಪಚಯ ಕ್ರಿಯೆಯು ಉತ್ತಮವಾಗಿ ನಡೆಯುವಂತೆ ಮಾಡುವುದು. ಸಮತೋಲಿತ ಆಹಾರವನ್ನು ಸೇವಿಸುವಂತೆ ಉತ್ತೇಜನ ನೀಡುವುದು. ಅಲ್ಲದೆ ಈ ಹರಳಿನಲ್ಲಿ ಇನ್ನಿತರ ಧನಾತ್ಮಕ ಗುಣಗಳು ಅಡಕವಾಗಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.
Most Read:ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!
ಪಿಕಾಸೊ ಮಾರ್ಬಲ್
ಇದೊಂದು ಬಗೆಯ ಅಮೂಲ್ಯವಾದ ಸ್ಫಟಿಕಗಳಲ್ಲಿ ಒಂದು. ಇದು ಸಹ ದೇಹದ ತೂಕ ನಿಯಂತ್ರಿಸಲು ಅಥವಾ ಇಳಿಸಲು ಸಹಾಯ ಮಾಡುತ್ತದೆ. ಈ ಸ್ಫಟಿಕದಿಂದ ಬರುವ ಶಕ್ತಿಯು ದೇಹದಲ್ಲಿ ಚಯಾಪಚಯ ಕ್ರಿಯೆ ಉತ್ತಮವಾಗುವಂತೆ ಪ್ರೇರೇಪಿಸುವುದು. ಅಲ್ಲದೆ ನಿಮ್ಮ ಸ್ವತ್ತು ಮತ್ತು ದೇಹದ ಆರೋಗ್ಯವು ಬಲ ವಾಗಿರುವಂತೆ ಅಥವಾ ಶಕ್ತಿಯುತವಾಗಿರುವಂತೆ ಮಾಡುವುದು. ಈ ಕಲ್ಲು/ಹರಳನ್ನು ಧರಿಸುವುದರಿಂದ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುತ್ತದೆ. ಇದನ್ನು ಪಿಕಾಸೊ ಸ್ಟೋನ್ ಮತ್ತು ಪಿಕಾಸೊ ಜಾಸ್ಪರ್ ಎಂದು ಸಹ ಕರೆಯುತ್ತಾರೆ.
Most Read: ಹರಳು: ಸ್ವಲ್ಪ ಎಡವಟ್ಟಾದರೂ, ಕಷ್ಟದ ಮೇಲೆ ಕಷ್ಟ ಬರಬಹುದು!
ಗ್ಯಾಸ್ಪೈಟ್
ತೂಕವನ್ನು ಇಳಿಸುವಲ್ಲಿ ಅಥವಾ ಕರಗಿಸುವುದರಲ್ಲಿ ಗ್ಯಾಸ್ಪೈಟ್ ಹರಳು ಮಹತ್ತರವಾದ ಪರಿಣಾಮ ಬೀರುವುದು. ಈ ಹರಳು/ಕಲ್ಲು ವ್ಯಕ್ತಿಯ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದು. ಜೊತೆಗೆ ದೇಹದಲ್ಲಿ ಸಮತೋಲನ ಇರುವಂತೆ ಮಾಡುತ್ತದೆ. ಆಹಾರ ಸೇವನೆಗೆ ನೀವು ಹೊಂದುವ ಗೊಂದಲದ ಮನಃಸ್ಥಿತಿಯನ್ನು ಸುಧಾರಿಸುವುದು. ಅನುಚಿತ ಹಾಗೂ ಅಧಿಕ ಆಹಾರ ಸೇವನೆಯನ್ನು ನಿಯಂತ್ರಣದಲ್ಲಿ ಇಡುವುದು. ಅಧಿಕ ನೀರು ಸೇವನೆಗೆ ಉತ್ತೇಜನ ನೀಡುವುದು. ಉತ್ತಮ ಧನಾತ್ಮಕ ಶಕ್ತಿಯನ್ನು ಹೀರಿಕೊಳ್ಳುವುದು. ದೇಹದಲ್ಲಿ ಇರುವ ಅನುಚಿತ ಕೊಬ್ಬನ್ನು ಕರಗುವಂತೆ ಮಾಡುತ್ತದೆ. ಪರಿಣಾಮವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಪಿಡೋಟ್
ಅತ್ಯುತ್ತಮ ಧನಾತ್ಮಕ ಹಾಗೂ ಆರೋಗ್ಯಕರ ಗುಣವನ್ನು ಉತ್ತೇಜಿಸುವ ಹರಳುಗಳಲ್ಲಿ ಎಪಿಡೋಟ್ ಸಹ ಒಂದು. ಇದು ಖಿನ್ನತೆ ಮತ್ತು ಅನಗತ್ಯ ತೂಕದ ಹೆಚ್ಚಳಕ್ಕೆ ಕಾರಣವಾಗುವ ಭಾವನಾತ್ಮಕ ಸ್ಥಿತಿಯನ್ನು ನಿಯಂತ್ರಿಸುತ್ತದೆ. ಭಾವನಾತ್ಮಕವಾಗಿ ಉತ್ತಮ ಸ್ಥಿತಿಯನ್ನು ಹೊಂದಲು ಅನುವು ಮಾಡಿಕೊಡುವುದು. ಅಲ್ಲದೆ ದೇಹದಲ್ಲಿ ಅನುಚಿತವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುವುದು. ಬಹುಬೇಗ ದೇಹದ ತೂಕ ಇಳಿಸಬೇಕು ಎನ್ನುವ ಹಂಬಲ ಇದ್ದವರಿಗೆ ಈ ಹರಳು ಬಹು ಸುಲಭವಾಗಿ ಸಹಾಯ ಮಾಡುವುದು. ಅಲ್ಲದೆ ಶೀಘ್ರದಲ್ಲಿಯೇ ದೇಹದ ತೂಕವನ್ನು ಇಳಿಸಬಹುದು.