For Quick Alerts
ALLOW NOTIFICATIONS  
For Daily Alerts

ಇಂಡೋನೇಷಿಯಾದಲ್ಲಿ ಇರುವ ಕಾಮ ಪ್ರಚೋದಕ ಉತ್ಸವದ ಬಗ್ಗೆ ತಿಳಿದಿದ್ದೀರಾ?

|

ಆರೋಗ್ಯವಂತ ಜೀವ ಒಂದು ಇದ್ದರೆ ಪ್ರಪಂಚದಲ್ಲಿ ನಡೆಯುವ ಎಲ್ಲಾ ಸಂಗತಿಯನ್ನು ನೋಡಬಹುದು ಅಲ್ಲವೇ? ಅಚ್ಚರಿ ಮೂಡಿಸುವಂತಹ ಸಾಂಪ್ರದಾಯಿಕ ಆಚರಣೆಗಳು, ಆಧುನಿಕತೆಯ ತಂತ್ರಜ್ಞಾನವು ಮನುಷ್ಯನ ಜೀವನವನ್ನು ವಿಸ್ಮಯಗೊಳಿಸಿವೆ. ಯಾವುದು ನಮಗೆ ಬೇಕು ಅನಿಸುತ್ತದೆಯೋ ಅದೆಲ್ಲವನ್ನೂ ಈ ಪ್ರಪಂಚದಲ್ಲಿ ಪಡೆದುಕೊಳ್ಳಬಹುದು. ಹಣವೊಂದಿದ್ದರೆ ಸದಾ ಮೆರವಣಿಗೆಯಂತಹ ಜೀವನವನ್ನೇ ನಡೆಸುತ್ತಾನೆ ಮನುಷ್ಯ ಎಂದರೆ ತಪ್ಪಾಗಲಾರದು.

ನಿಜ, ಮನುಷ್ಯ ತನ್ನ ಜೀವನದ ಅವಧಿಯಲ್ಲಿ ಯಾವೆಲ್ಲಾ ಬಗೆಯ ಸುಖ ಸಂತೋಷವನ್ನು ಪಡೆದುಕೊಳ್ಳಬಹುದೋ ಅಂತಹ ಅನುಕೂಲತೆಯನ್ನೆಲ್ಲಾ ಬಹುಬೇಗ ಮಾಡಿಕೊಳ್ಳುತ್ತಾನೆ. ಅದಕ್ಕಾಗಿಯೇ ಕೆಲವು ಸಾಂಪ್ರದಾಯಿಕ ಆಚರಣೆಗಳು ಹಾಗೂ ಮನೋರಂಜನೆಯ ಪದ್ಧತಿಗಳಿವೆ ಎನ್ನಬಹುದು. ಹಿಂದಿನ ಕಾಲದಲ್ಲಿ ಸಾರಿಗೆ ಮತ್ತು ಸಂಪರ್ಕಗಳ ಕೊರತೆ ಇದ್ದಿದ್ದುದರಿಂದ ಅನೇಕ ಮನೋರಂಜನಾ ಕಾರ್ಯವನ್ನು ಉತ್ಸವ, ಆಚರಣೆ ಹಾಗೂ ಪದ್ಧತಿ ಮಾಡುವುದರ ಮೂಲಕಪಡೆದುಕೊಳ್ಳುತ್ತಿದ್ದರು. ಈ ಮೂಲಕವೇ ಜೀವನದಲ್ಲಿ ಸಂತೋಷವನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗುವುದು.

Understanding the paradoxical Festival of Indonesia

ಅಂತಹ ಒಂದು ಮನೋ ರಂಜಿತ ಹಾಗೂ ಜನರನ್ನು ಹುಚ್ಚೆಬ್ಬಿಸುವ ಆಚರಣೆಯೊಂದು ಇಂದಿಗೂ ಇಂಡೋನೇಷಿಯಾದಲ್ಲಿ ಇರುವುದನ್ನು ಕಾಣಬಹುದು. ಕಾಮವನ್ನು ಪ್ರಚೋದನೆಗೊಳಿಸುವ ಈ ಆಚರಣೆಯು ಅಲ್ಲಿಯ ಜನರ ಒಂದು ಉತ್ಸವ. ಯುವಕರಿಂದ ಹಿಡಿದು ವೃದ್ಧರ ವರೆಗಿನ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಕಾಮ ಪ್ರಚೋದನೆ ಪಡೆದುಕೊಳ್ಳುವುದರ ಮೂಲಕ ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಎನ್ನಲಾಗುವುದು. ಇಂತಹ ಒಂದು ಆಚರಣೆಯನ್ನು ಅಥವಾ ಪದ್ಧತಿಯ ಕುರಿತು ನೀವಿನ್ನೂ ಕೇಳಿರಲಿಕ್ಕೆ ಸಾಧ್ಯವಿಲ್ಲ. ಈ ಸಂಗತಿ ಒಂದು ಬಗೆಯ ಆಶ್ಚರ್ಯ ಮತ್ತು ಮುಜುಗರವನ್ನು ಉಂಟುಮಾಡಬಹುದು. ಆದರೆ ಈ ಆಚರಣೆ ಇಂದಿಗೂ ಇರುವುದನ್ನು ಸತ್ಯ.

Most Read: ಸಂತಾನಹರಣ ಚಿಕಿತ್ಸೆ ಮಾಡಿಸಿಯೂ ಪತ್ನಿ ಗರ್ಭಿಣಿಯಾದಳು!

ಇಂಡೋನೇಷಿಯಾದ ಜಾವಾ ದ್ವೀಪದಲ್ಲಿ ಕಾಮ ಪ್ರಚೋದನೆಯ ಉತ್ಸವವನ್ನು ಆಚರಿಸಲಾಗುತ್ತದೆ. ಇದು ಇಂಡೋನೇಷಿಯಾದವರ ಒಂದು ಸಾಂಪ್ರದಾಯಿಕ ಆಚರಣೆಯಲ್ಲಿ ಅಥವಾ ಉತ್ಸವದಲ್ಲಿ ಒಂದು. ಇದನ್ನು ಪೊನ್ ಫೆಸ್ಟಿವಲ್ ಎಂದು ಕರೆಯುತ್ತಾರೆ. ಈ ಸಂಭ್ರಮದ ಆಚರಣೆಯು ಗುವಾಂಗ್ ಕೆಮುಕುಸ್ ಎಂಬ ಬೆಟ್ಟದ ತುದಿಯಲ್ಲಿ ಆಚರಿಸಲಾಗುವುದು. ಇದು ಜಾವಾ ದ್ವೀಪದಲ್ಲಿ ಇರುವ ಒಂದು ಬೆಟ್ಟ. ಈ ಉತ್ಸವದ ಆಚರಣೆಯಲ್ಲಿ ವ್ಯಕ್ತಿ ಕಾಮ ಪ್ರಚೋದನೆಯನ್ನು ಪಡೆದುಕೊಳ್ಳುತ್ತಾನೆ. ಅಲ್ಲದೆ ಲೈಂಗಿಕತೆಯನ್ನು ಇಲ್ಲಿ ಪಡೆದುಕೊಳ್ಳುವುದು ಒಂದು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.

ಉತ್ಸವದಲ್ಲಿ ಭಾಗವಹಿಸುವವರು:

ಉತ್ಸವದಲ್ಲಿ ಭಾಗವಹಿಸುವವರು ಉತ್ಸವದ ದಿನ ಪರ್ವತದ ತುದಿಯಲ್ಲಿ ಆ ರಾತ್ರಿಯನ್ನು ಕಳೆಯಬೇಕು. ಭವಿಷ್ಯದಲ್ಲಿ ಅದೃಷ್ಟವನ್ನು ಪಡೆದುಕೊಳ್ಳಲು ಬಯಸಿದರೆ ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆಯನ್ನು ಧಾರ್ಮಿಕ ಸಂಭೋಗ ಎನ್ನುವ ರೀತಿಯಲ್ಲಿ ನಡೆಸಬೇಕು. ಪುರುಷ ಮತ್ತು ಮಹಿಳೆ ಈಗಾಗಲೇ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರೂ ನಡೆಸಬಹುದು. ಉತ್ಸವದಲ್ಲಿ ಪಡೆದುಕೊಳ್ಳುವ ಅಪರಿಚಿತರೊಂದಿಗೆ ನಡೆಸುವ ಲೈಂಗಿಕ ಕ್ರಿಯೆಗೆ ಮುಕ್ತ ಅವಕಾಶ ದೊರೆಯುವುದು.

ಒಂದೇ ವ್ಯಕ್ತಿ ಸಿಕ್ಕರೆ ಅದೃಷ್ಟ

ಪ್ರತಿ ವರ್ಷದ 35 ದಿನಗಳಲ್ಲಿ ನಡೆಯುವ ಈ ಉತ್ಸವದಲ್ಲಿ ಕೈಗೊಳ್ಳುವ ಲೈಂಗಿಕ ಕ್ರಿಯೆಯಲ್ಲಿ ಏಳು ಬಾರಿಯೂ ಅದೇ ಅಪರಿಚಿತ ವ್ಯಕ್ತಿ ಸಿಕ್ಕಿದ್ದಾನೆ/ಸಿಕ್ಕಿದ್ದಾಳೆ ಎಂದರೆ ಅದು ಅತ್ಯಂತ ಅದೃಷ್ಟದ ಸಂಗತಿ ಎಂದು ಪರಿಗಣಿಸಲಾಗುವುದು. ಈ ಆಚರಣೆಯಲ್ಲಿಪಾಲ್ಗೊಂಡ ಬಳಿಕ ಮಧ್ಯದಲ್ಲಿಯೇ ಕೈಬಿಡುವಂತಿಲ್ಲ. ಆಚರಣೆಯನ್ನು ಸಂಪೂರ್ಣವಾಗಿ ಪರಿಗಣಿಸಬೇಕಾಗುವುದು. ಹೀಗೆ ಮಾಡುವುದರಿಂದ ವರ್ಷ ಪೂರ್ತಿ ಅತ್ಯುತ್ತಮವಾದ ಲೈಂಗಿಕ ಜೀವನ ನಡೆಸುತ್ತಾರೆ ಎನ್ನಲಾಗುವುದು.

ಧರ್ಮದ ಆಚರಣೆ:

ಈ ಉತ್ಸವದ ಆಚರಣೆಯಲ್ಲಿ ಸೇರಿರುವ ಇನ್ನೊಂದು ಸಂಗತಿಯೆಂದರೆ, ಜವಾನೀಸ್ ರಾಜನ ಪುತ್ರನಾದ ಪಂಗೇಂಗರ್ ಸಾಮೋದ್ರನ ಸಮಾಧಿಯ ಸ್ಥಳದಲ್ಲಿ ಪ್ರಾರ್ಥನೆ ಹಾಗೂ ಹೂವನ್ನು ಅರ್ಪಿಸುವುದರ ಮೂಲಕ ಆಚರಣೆಯನ್ನು ಮಾಡಬೇಕು. ನಂತರ ಪಾಲ್ಗೊಳ್ಳುವ ಅಭ್ಯರ್ತಿಗಳು ವಸಂತಕಾಲದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಹುಡುಕಬೇಕು ಎನ್ನುವ ನಿಯಮವಿದೆ.

ಈ ಉತ್ಸವವು ವಿರೋಧಾಭಾಸವನ್ನು ಪಡೆದುಕೊಂಡಿದೆ:

ಈ ಸ್ಥಳದಲ್ಲಿ ಕೆಲವು ಪುರುಷರು ಹಾಗೂ ಮಹಿಳೆಯರು ವ್ಯಭಿಚಾರದ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂದು ಸಹ ಹೇಳಲಾಗುವುದು. ಕೆಲವು ಜನಾಂಗದವರು ಈ ಕೆಲಸದಲ್ಲಿ ನಿರತರಾಗಿರುತ್ತಾರೆ ನ್ನುವ ವಿರೋಧವನ್ನೂ ಸಹ ಈ ಉತ್ಸವ ಪಡೆದುಕೊಂಡಿದೆ.

Most Read: ದಿನಗೂಲಿಗಾಗಿ ಗರ್ಭಾಶಾಯವನ್ನೇ ತೆಗೆಸಿಕೊಳ್ಳುತ್ತಿರುವ ಮಹಿಳೆಯರು!

ಸಂಬಂಧ ಎನ್ನುವುದು ಪರಸ್ಪರ ಎರಡು ವ್ಯಕ್ತಿಗಳ ನಡುವೆ ಏರ್ಪಡುವ ಬದ್ಧತೆ ಹಾಗೂ ಕಾಳಜಿಯ ಸಂಗತಿಯಾಗಿರುತ್ತದೆ. ಆದರೆ ಈ ಆಚರಣೆಯು ಕೆಲವು ಗೊಂದಲ ಹಾಗೂ ವಿರೋಧಾಭಾಸವನ್ನು ಮೂಡಿಸುತ್ತದೆ. ಆದರೂ ಶತಮಾನಗಳಿಂದ ನಡೆದು ಬಂದ ಉತ್ಸವ ಹಾಗೂ ಆಚರಣೆ ಎನ್ನುವುದನ್ನು ನಾವು ಮನಗೊಳ್ಳಬೇಕು.

ದೇವಾಲಯದ ಹಿನ್ನೆಲೆ:

ಈ ದೇವಾಲಯವು 16ನೇ ಶತಮಾನದ ಜವಾನೀಸ್ ರಾಜನ ಮಗನಾದ ಪಂಗೇಂಜನ್ ಸಮುದ್ರ ಎಂಬ ರಾಜಕುಮಾರನ ಅವಶೇಷವನ್ನು ಹೊಂದಿದೆ. ನಂತರ ಅವನ ಮಲತಾಯಿಯಾದ ನೈಯ್ ಆಂಟ್ರೊವುಲಾನ್ ಅವರ ಅವಶೇಷವನ್ನು ಇಡಲಾಗಿದೆ ಎನ್ನಲಾಗುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಕಥೆಗಳು ಹೆಣೆದುಕೊಂಡಿವೆ. ಸಮುದ್ರೊ ಮತ್ತು ಆಂಟ್ರೊವುಲನ್ ಅವರ ನಡುವೆ ಇದ್ದ ಸಂಬಂಧವು ಕೆಲವರಿಗೆ ಇಷ್ಟವಿರಲಿಲ್ಲ. ಇವರ ಸಂಬಂಧ ಇದೆ ಎನ್ನುವುದು ತಿಳಿದ ನಂತರ ಮನೆಗೆ ತೆರಳಿದರು. ಇವರ ಜೋಡಿಯನ್ನು ಸೊಲೊದಲ್ಲಿ ನೋಡಿದರು. ಮಿಡ್ ಕೊಯಿಟಸ್ ಹಳ್ಳಿಗರು ಅವರನ್ನು ಕೊಂದರು ಎನ್ನಲಾಗುವುದು.

ಮುಂದೆ ಏನಾಯಿತು ಎನ್ನುವುದರ ಬಗ್ಗೆ ಅಭಿಪ್ರಾಯವು ವಿಭಿನ್ನತೆಯನ್ನು ಪಡೆದುಕೊಂಡಿತು:

ಸಮೊದ್ರೋ ಮತ್ತು ಆಂಟ್ರೊವುಲಾನ್ ಸಾವಿಗಿಂತಲೂ ಮೊದಲು ಪಾನ್ ಶುಕ್ರವಾರದಂದು ವ್ಯಭಿಚಾರದ ಸಂಭೋಗವನ್ನು ಪಡೆದುಕೊಂಡಿದ್ದರು ಎನ್ನಲಾಗುತ್ತದೆ. ಸಮೊದ್ರೋ ಮತ್ತು ಆಂಟ್ರೊವುಲಾನ್ ಕೆಲವು ಹಗರಣವನ್ನು ಹೊಂದಿದ್ದರು. ನಂತರ ತಮ್ಮ ಅದೃಷ್ಟವನ್ನು ಪಡೆದುಕೊಳ್ಳಲು ಸಂಬಂಧವನ್ನು ಹೊಂದಿದ್ದರು ಎಂದು ಸಹ ಹೇಳಲಾಗುವುದು. ಇವರ ಸಮಾಧಿಯಲ್ಲೂ ಲೈಂಗಿಕವಾಗಿಯೇ ಇರಬೇಕು ಎಂದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಕೆಲವು ಕಥೆಗಳು ವಿವರಣೆಯನ್ನು ಪಡೆದುಕೊಂಡಿದೆ.

ಯಾತ್ರಿಕರು ಬರುತ್ತಾರೆ:

ನಿಜವಾದ ಕಥೆ ಏನೇ ಇರಲಿ. ಸಾವಿರಾರು ಯಾತ್ರಿಕರು ಅಥವಾ ಪ್ರವಾಸಿಗರು ಈ ಸ್ಥಳಕ್ಕೆ ಬರುತ್ತಾರೆ. ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲದೆ ಅಪರಿಚಿತರೊಂದಿಗೆ ಸಂಭೋಗವನ್ನು ಪಡೆದುಕೊಳ್ಳುತ್ತಾರೆ. ಎಲ್ಲರೂ ಈ ರೀತಿಯ ಸಂಭೋಗವು ಅದೃಷ್ಟವನ್ನು ತರುವುದು ಎಂದು ನಂಬುತ್ತಾರೆ. ಈ ಉತ್ಸವದಲ್ಲಿ ಪಾಲ್ಗೊಂಡು ಸಂಬಂಧ ಹೊಂದಿದವರ ಜೀವನದಲ್ಲಿ ಯಶಸ್ಸು ದೊರೆಯುವುದು. ವ್ಯವಹಾರಗಳು ಮತ್ತು ಕೆಲಸ ಕಾರ್ಯಗಳು ಅತ್ಯಂತ ಯಶಸ್ಸನ್ನು ಪಡೆದುಕೊಳ್ಳುತ್ತದೆ. ವೈಯಕ್ತಿಕವಾಗಿ ಇರುವ ಸಾಲಗಳು ಬಹುಬೇಗ ತೀರುತ್ತವೆ ಎಂಬ ನಂಬಿಕೆ ಇದೆ.

ಉತ್ಸವದ ಆಚರಣೆ:

ಉತ್ಸವವು ಮುಂಜಾನೆಯ ಪ್ರಾರ್ಥನೆಯಿಂದ ಆರಮಭವಾಗುವುದು. ಫಿಲ್‍ಗ್ರಿಮ್ಸ್ ರಾಜ ಕುಮಾರನ ಸಮಾಧಿಗೆ ಭೇಟಿ ನೀಡಿ ಅಲ್ಲಿ ಸಮಾದಿಗೆ ಹಾಗೂ ಅವನ ಮಲತಾಯಿಯ ಸಮಾಧಿಗೆ ಹೂವನ್ನು ಅರ್ಪಿಸುವುದರ ಮೂಲಕ ಪ್ರಾರ್ಥನೆ ಮಾಡಲಾಗುವುದು. ನಂತರ ಪಾಲ್ಗೊಳ್ಳುವವರು ಅಲ್ಲಿಯ ಒಂದು ನೀರಿನ ಬುಗ್ಗೆಯಲ್ಲಿ ತಾವೇ ಸ್ನಾನ ಮಾಡಿಕೊಂಡು ಪಾಲುದಾರರ ಹುಡುಕಾಟವನ್ನು ಮಾಡಬೇಕು. ಸೂರ್ಯಾಸ್ತದ ಒಳಗೆ ಪಾಲುದಾರರನ್ನು ಹುಡುಕ ಬೇಕು. ಹಾಗಾಗಿಯೇ ಪಾಲುದಾರರ ಹುಡುಕಾಟದಲ್ಲಿ ಪರ್ವತವು ತುಂಬಿರುತ್ತದೆ. ರಾತ್ರಿಯ ಸಮಯವು ಪುನರ್ಮಿಲನವನ್ನು ಹೊಂದುವ ಸಮಯವಾಗಿರುತ್ತದೆ. ಸಾಂಪ್ರದಾಯಿಕವಾಗಿ ಲೈಂಗಿಕತೆಯು ತೆರೆದಿರುತ್ತದೆ. ದಂಪತಿಗಳು ಬೆಟ್ಟದ ತೊಟ್ಟಿಯಲ್ಲಿ ಇರುವ ಒಂದೊಂದು ಮರದ ಕೆಳಗೆ ರಾತ್ರಿಯ ಉಳಿದ ಸಮಯವನ್ನು ಕಳೆಯುತ್ತಾರೆ.

ನಿಷೇದಕ್ಕೆ ಮುಂದಾಗಿತ್ತು:

2014ರ ನವೆಂಬರ್ ಸಮಯದಲ್ಲಿ ಸೆಂಟ್ರಲ್ ಜಾವಾ ಗವರ್ನರ್ ಗನ್ಜರ್ ಪ್ರನೌವ್ ಅವರು ಈ ಧಾರ್ಮಿಕ ವಿಧಿ ಹಾಗೂ ನಿಯಮಗಳನ್ನು ನಿಷೇಧಿಸಲು ಮುಂದಾಗಿತ್ತು. ಶ್ರೀಮಂತರಾಗಲು ಬಯಸುವುದಕ್ಕೆ ಅನೈತಿಕ ಸಂಭೋಗವನ್ನು ಹೊಂದಬೇಕು? ಎನ್ನುವ ಚಿಂತನೆಯನ್ನು ಮುಂದಿಟ್ಟು ವಿರೋಧಕ್ಕೆ ಮುಮದಾಗಿದ್ದರು. ಆದರೆ ಅದು ಯಾವುದೇ ಯಶಸ್ಸನ್ನು ತಂದುಕೊಡಲಿಲ್ಲ.

ಲಾಭದಾಯಕವಾಗಿದೆ:

ಸ್ಥಳೀಯ ಸರ್ಕಾರವು ಪರ್ವತದ ಮೇಲೆ ಅಂಗಡಿಗಳನ್ನು ತೆರೆಯಲು ಸ್ಥಳೀಯರಿಗೆ ಅವಕಾಶವನ್ನು ಕಲ್ಪಿಸಿತು. ಜೊತೆಗೆ ಭಾರಿ ಶುಲ್ಕವನ್ನು ಪಡೆಯುವುದರ ಮೂಲಕ ಅಧಿಕ ಲಾಭವನ್ನು ಪಡೆದುಕೊಳ್ಳುತ್ತಿದೆ.

ಇಂದಿಗೂ ಆಚರಣೆ ಇದೆ:

ಈ ಉತ್ಸವದ ಸಮಯದಲ್ಲಿ ಪ್ರಯಾಣಿಕರು ರಾಜಕುಮಾರನ ಸಮಾಧಿಯ ಬಳಿ ನೂರಾರು ಮೈಲಿಗಳಿಂದ ಆಗಮಿಸುತ್ತಾರೆ. ಆಚರಣೆಗಳನ್ನು ಕೈಗೊಳ್ಳುವುದರ ಮೂಲಕ ಧಾರ್ಮಿಕ ಪ್ರಾಮುಖ್ಯತೆಯನ್ನು ಮೆರೆಯುತ್ತಾರೆ. ತಪ್ಪು ಸರಿಗಳ ಚಿಂತನೆ ವೈಯಕ್ತಿಕವಾಗಿ ಅವರವರ ಮನೋಭಾವಕ್ಕೆ ಬಿಡಲಾಗಿದೆ.

English summary

Understanding the paradoxical Festival of Indonesia

In the Indonesian tradition is a celebration called Pon. The revellers will hike up Gunung Kemukus, a hilltop shrine, found on the island of Java to take part in a holy ceremony to ensure good luck and fortune by having sex.Yes, that’s right!Participants in the festival of Pon, have to spend the night atop the mountain and have ritualistic sex with a stranger if they want good luck and fortune to befall them in the future – even if both parties are married to other people.
X
Desktop Bottom Promotion