For Quick Alerts
ALLOW NOTIFICATIONS  
For Daily Alerts

ಹಲ್ಲು ನೋವಿನಿಂದ ಬಳಲುತ್ತಿದ್ದ 'ಹುಲಿಗೆ ರೂಟ್ ಕ್ಯಾನಲ್ 'ಚಿಕಿತ್ಸೆ ಮಾಡುತ್ತಿರುವ ವಿಡಿಯೋ ವೈರಲ್!

|

ಹಲ್ಲು ನೋವೆಂದರೆ ಅದು ದೊಡ್ಡ ಮಟ್ಟದ ಸಮಸ್ಯೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವುದು. ಮನುಷ್ಯರಾದರೆ ಹಲ್ಲು ನೋವಿದ್ದರೆ ಹೋಗಿ ದಂತವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ಪ್ರಾಣಿಗಳು ತಮ್ಮ ನೋವನ್ನು ಹೇಳಿಕೊಳ್ಳದೆ ಅದೇ ನೋವಿನಲ್ಲಿ ಜೀವ ಕೂಡ ಕಳೆದುಕೊಳ್ಳಬಹುದು. ಯಾಕೆಂದರೆ ಪ್ರಾಣಿಗಳಿಗೆ ಹಲ್ಲು ನೋವಿದ್ದರೆ ಅದರಿಂದ ಯಾವುದೇ ಆಹಾರ ಸೇವನೆ ಮಾಡುವುದು ಕಷ್ಟ. ಇದರಿಂದ ಪ್ರಾಣಿಗಳು ಆಹಾರವಿಲ್ಲದೆ ಸೊರಗಿ ಪ್ರಾಣ ಕಳೆದುಕೊಳ್ಳಬಹುದು.

Tiger Undergoing Root Canal Video Viral

ಕೆಲವೊಂದು ಸಂದರ್ಭದಲ್ಲಿ ಪ್ರಾಣಿಗಳ ಅನಾರೋಗ್ಯವನ್ನು ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲೊಂದು ಹುಲಿಗೆ ಹಲ್ಲು ನೋವಿದ್ದು, ಅದಕ್ಕೆ ರೋಟ್ ಕ್ಯಾನಲ್ ಚಿಕಿತ್ಸೆ ಮಾಡಲಾಗಿದೆ. ಇದನ್ನು ಕೇಳಿ ನೀವು ಒಂದು ಕ್ಷಣ ದಂಗಾಗಿ ಹೋಗಬಹುದು. ಯಾಕೆಂದರೆ ಮನುಷ್ಯರಿಗೆ ರೂಟ್ ಕ್ಯಾನಲ್ ಚಿಕಿತ್ಸೆ ಮಾಡುವಾಗ ತುಂಬಾ ಕಷ್ಟವಾಗುತ್ತದೆ. ಅದು ಹುಲಿಗೆ ಮಾಡಿದರೆ ಹೇಗಿರಬಹುದು ಎಂದು? ಈ ಚಿಕಿತ್ಸೆಯ ಸಂಪೂರ್ಣ ವಿಡಿಯೋ ಮಾಡಲಾಗಿದೆ. ಈ ರೂಟ್ ಕ್ಯಾನಲ್ ಚಿಕಿತ್ಸೆ ಬಗ್ಗೆ ನೀವು ಓದುತ್ತಾ ಸಾಗಿ...

11 ವರ್ಷದ ಹುಲಿ

11 ವರ್ಷದ ಹುಲಿ

11 ವರ್ಷದ ಫಾಬಿ ಎನ್ನುವ ಹುಲಿಯು ಕಳೆದ ಕೆಲವು ಸಮಯದಿಂದ ಹಲ್ಲು ನೋವಿನಿಂದ ಬಳಲುತ್ತಾ ಇತ್ತು. ವ್ಯಾಘ್ರನಿಗೆ ಹಲ್ಲಿನ ಚಿಕಿತ್ಸೆ ಮಾಡಬೇಕಾಗಿತ್ತು. ಯಾಕೆಂದರೆ ಅದು ತನ್ನ ಕೆಳಭಾಗದ ಮೂರು ಇಂಚಿನಷ್ಟು ದೊಡ್ಡ ಹಲ್ಲಿಗೆ ಹಾನಿ ಮಾಡಿಕೊಂಡಿತ್ತು. ಇದರ ಪರಿಣಾಮವಾಗಿ ತೀವ್ರ ನೋವಿತ್ತು. ಹೀಗಾಗಿ ಅದಕ್ಕೆ ಸರಿಯಾಗಿ ಆಹಾರ ಸೇವಿಸಲು ಕೂಡ ಸಾಧ್ಯವಾಗುತ್ತಾ ಇರಲಿಲ್ಲ.

Most Read: ಈ ವರ್ಷ 2019ರಲ್ಲಿ ಈ ಮೂರು ರಾಶಿಯವರು ದುರಾದೃಷ್ಟದ ದಿನವನ್ನು ಎದುರಿಸಲಿದ್ದಾರಂತೆ!

ವ್ಯಾಘ್ರ ಆರೋಗ್ಯವಾಗಿದೆ ಎಂದು ಪಶುವೈದ್ಯರು ಹೇಳಿದ್ದಾರೆ

ವ್ಯಾಘ್ರ ಆರೋಗ್ಯವಾಗಿದೆ ಎಂದು ಪಶುವೈದ್ಯರು ಹೇಳಿದ್ದಾರೆ

ಫಾಬಿ ತುಂಬಾ ಆರೋಗ್ಯವಾಗಿರುವಂತಹ ಗಂಡು ಹುಲಿ. ಹುಲಿ ಆರೋಗ್ಯವಾಗಿದ್ದು, ಅದನ್ನು ಸಂತಾನೋತ್ಪತ್ತಿಗೆ ಬಳಸಬೇಕೆಂದು ಅದನ್ನು ಸಾಕುವವರು ಬಯಸಿದ್ದಾರೆ. ಇದರಿಂದ ಅದರ ನೋವಿಗೆ ಕಾರಣ ಪತ್ತೆ ಹಚ್ಚುವುದು ಮುಖ್ಯವಾಗಿತ್ತು ಮತ್ತು ಇದರಿಂದ ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಯಿತು.

Most Read: ಸಂಖ್ಯಾಶಾಸ್ತ್ರ: 2 ನಂಬರ್ ಹೊಂದಿರುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರಲಿದೆ?

ಚಿಕಿತ್ಸೆ ವೇಳೆ ಆಯುಧದೊಂದಿಗೆ ಅಲ್ಲೊಬ್ಬ ಕಾವಲು ಕಾಯುತ್ತಿದ್ದ!

ಚಿಕಿತ್ಸೆ ವೇಳೆ ಆಯುಧದೊಂದಿಗೆ ಅಲ್ಲೊಬ್ಬ ಕಾವಲು ಕಾಯುತ್ತಿದ್ದ!

ಪ್ರಾಣಿಗಳ ದಂತ ವೈದ್ಯರಾದ ಮ್ಯಾಥ್ಯೂ ಆಕ್ಸಫರ್ಡ್ ಅವರು ಫಾಬಿಗೆ ಚಿಕಿತ್ಸೆ ನೀಡುವ ವೇಳೆ ಹುಲಿಗೆ ಅರವಳಿಕೆ ಮದ್ದನ್ನು ನೀಡಲಾಗಿತ್ತು. ಈ ಚಿಕಿತ್ಸೆ ವೇಳೆ ಆಯುಧವನ್ನು ಹಿಡಿದುಕೊಂಡು ಒಬ್ಬ ಕಾವಲು ಕಾಯುತ್ತಲಿದ್ದ.

ಶಸ್ತ್ರಚಕಿತ್ಸೆಯ ಯಶಸ್ವಿಯಾಯಿತು

ಶಸ್ತ್ರಚಕಿತ್ಸೆಯ ಯಶಸ್ವಿಯಾಯಿತು

ನೂರು ಕೆಜಿಗಿಂತಲೂ ಹೆಚ್ಚು ತೂಗುತ್ತಿದ್ದ 11ರ ಹರೆಯದ ಫಾಬಿ ಸುಮಾರು ಎರಡು ಮೀಟರ್ ನಷ್ಟು ಉದ್ದವಿದ್ದ. ಆದರೆ ಚಿಕಿತ್ಸೆ ವೇಳೆ ಆತನ ಪ್ರಜ್ಞೆ ಸಂಪೂರ್ಣವಾಗಿ ತಪ್ಪಿತ್ತು. ಆತನ ಕೋರೆ ಹಲ್ಲುಗಳು ಎಂಟು ಸೆಂಟಿ ಮೀಟರ್ ನಷ್ಟು ಉದ್ದವಾಗಿದ್ದವು ಮತ್ತು ಅದನ್ನು ಸುರಕ್ಷಿತವಾಗಿ ಸುತ್ತಲಾಗಿತ್ತು. ಶಸ್ತ್ರಚಿಕಿತ್ಸೆ ವೇಳೆ ಯಾವುದೇ ಹಾನಿಯಾಗದಂತೆ ತಪ್ಪಿಸಲು ಹೀಗೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ವಿಡಿಯೋ ನೀವು ನೋಡಬಹುದು.

English summary

Tiger Undergoing Root Canal Video Viral

An 11-year-old male Sumatran tiger named Fabi underwent a root canal treatment and the entire procedure video has gone viral. The tiger who is over 2 metres long and weighs over 100 kilograms is reported to have rotten root. The tiger is being operated on by veterinary dentist Matthew Oxford.Treating animals is quite a risky job, especially when you try to get
X
Desktop Bottom Promotion