Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ ಅಮ್ಮ ಮಗ ತಮ್ಮ ಬಟ್ಟೆಯನ್ನು ಹೊಂದಿಸಿಕೊಳ್ಳುವಲ್ಲಿ ಪ್ರಸಿದ್ಧರಾಗಿದ್ದಾರೆ
ಸುಂದರವಾದ ಬಟ್ಟೆಗಳನ್ನು ಆಯ್ಕೆ ಮಾಡುವುದು ಹಾಗೂ ಅದನ್ನು ಧರಿಸುವುದು ಎಂದರೆ ಅದೊಂದು ಕಲೆ ಹಾಗೂ ಸೃಜನ ಶೀಲತೆ ಎನ್ನಬಹುದು. ವಿವಿಧ ವಸ್ತ್ರ ವಿನ್ಯಾಸ ಮಾಡುವುದು ಎಂದರೆ ಅಷ್ಟು ಸುಲಭವಾದ ಸಂಗತಿಯಲ್ಲ. ನಮ್ಮ ನಿಲುವು, ನಿಲುವಿಗೆ ನಾದ ವಸ್ತ್ರ ವಿನ್ಯಾಸವನ್ನು ಹೊಂದಿದ್ದರೆ ಅದು ನಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವವನ್ನುಪ್ರತಿನಿಧಿಸುತ್ತದೆ. ಇತ್ತೀಚೆಗೆ ವಸ್ತ್ರಗಳ ವಿನ್ಯಾಸದಲ್ಲಿ ಮಕ್ಕಳೊಂದಿಗೆ ಪಾಲಕರು ಹೊಂದಿಸಿಕೊಳ್ಳುತ್ತಾರೆ. ಅದರಲ್ಲೂ ಕೆಲವು ಪಾರ್ಟಿ ಹಾಗೂ ಸಮಾರಂಭಗಳಲ್ಲಿ ಕುಟುಂಬದವರೆಲ್ಲಾ ಒಂದೇ ಬಗೆಯ ಉಡುಗೆಯನ್ನು ಧರಿಸುತ್ತಾರೆ. ಇದು ನೋಡುಗರಿಗೆ ಒಂದು ಬಗೆಯ ಸಂತೋಷ ಹಾಗೂ ಸಾಮ್ಯತೆಯನ್ನು ತೋರಿಸಿ ಕೊಡುವುದು.

ಪ್ರಸಿದ್ಧತೆಯನ್ನು ಹೊಂದಲು ಹಾಗೂ ಆಕರ್ಷಣೆಯನ್ನು ಪಡೆದುಕೊಳ್ಳಲು ವಸ್ತ್ರ ವಿನ್ಯಾಸವು ಸಹಾಯ ಮಾಡುವುದು. ಆದರೆ ಇತ್ತೀಚಿನ ದಿನದಲ್ಲಿ ಇಂಟರ್ನೆಟ್ ಬಳಕೆ , ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಬಹು ಬೇಗ ಪ್ರಸಿದ್ಧತೆಯನ್ನ ಪಡೆದುಕೊಳ್ಳುವರು. ಇಂತಹ ಒಂದು ಪರಿಯಲ್ಲಿಯೇ ಅನೇಕ ಜನರು ಬಹುಬೇಗ ಪ್ರಸಿದ್ಧತೆಯನ್ನು ಪಡೆದುಕೊಳ್ಳುವರು.
A post shared by ปิ๊บปี้ (ภัทรพล พึ่งบุญพระ) (@peepy_and_mother_lee) on
ತಾಯಿ ಮಗಳಿಬ್ಬರ ವಸ್ತ್ರ ವಿನ್ಯಾಸ
ನಿಜ, ಈ ರೀತಿಯಲ್ಲಿಯೇ ಅಂದರೆ ವಸ್ತ್ರ ವಿನ್ಯಾಸ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯಿಂದಲೇ ತಾಯಿ ಮಗ ತಮ್ಮ ವಸ್ತ್ರ ವಿನ್ಯಾಸ ಹಾಗೂ ಒಂದೇ ಬಗೆಯ ಸಾಮ್ಯತೆಯ ಉಡುಗೆ ಧರಿಸುವುದರ ಮೂಲಕ ಹೆಚ್ಚು ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದಾರೆ. ಅಂದರೆ ತಾಯಿ ಮತ್ತು ಮಗ ಒಂದೇ ಬಗೆಯ ಉಡುಗೆಯನ್ನು ಧರಿಸುವುದರ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಿನ ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದಾರೆ.
ತಾಯಿ ಮತ್ತು ಮಗ
ಪಾಥರಾಪೋಲ್ ಮತ್ತು ಲೀ ಪೆಂಗ್ಬೋನ್‍ಪ್ರಾ ಎನ್ನುವ ತಾಯಿ ಮಗ ಇದೀಗ ಇಂಟರ್ನೆಟ್ ಸಂವೇದನೆಯಾಗಿದ್ದಾರೆ. ಫ್ಯಾಷನ್ ಗೀಳು ಅಥವಾ ಇವರಿಗೆ ಇರುವ ಫ್ಯಾಷನ್ ಪ್ರೇಮದಿಂದ ಕಳೆದ ಆರು ವರ್ಷಗಳಿಂದಲೂ ಪ್ರಸಿದ್ಧತೆಗೆ ಒಳಗಾಗಿದ್ದಾರೆ. ಇಬ್ಬರ ಉಡುಗೆ-ತೊಡುಗೆಯಲ್ಲಿ ಒಂದೇ ಬಗೆಯ ಸಾಮ್ಯತೆ ಇರುತ್ತದೆ. ಜೊತೆಗೆ ಅದು ನವೀನತೆಯಿಂದ ಕೂಡಿರುತ್ತದೆ ಎಂದು ಹೇಳಲಾಗಿದೆ. ಇವರಿಬ್ಬರು ಅಸಾಧಾರಣವಾಗಿ ಹಾಗೂ ಸೊಗಸಾಗಿ ಸಂಘಟಿತ ಉಡುಗೆಯನ್ನು ಧರಿಸುವುದರಿಂದ ಆನ್ ಲೈನ್ ಹಾಗೂ ಆಫ್ ಲೈನ್ ಖ್ಯಾತಿಯನ್ನು ಸಹ ಪಡೆದುಕೊಂಡಿದ್ದಾರೆ.
ಹೇಗೆ ಪ್ರಸಿದ್ಧತೆಯನ್ನು ಪಡೆದುಕೊಂಡರು?
ಪೆಪಿ ಲೀ ಎಂದು ಕರೆಯಲ್ಪಡುವ ಪತಾರ್ರಾಪೋಲ್ ಇನ್‍ಸ್ಟ್ರಾ ಗ್ರಾಮ್‍ನಲ್ಲಿ ಸ್ವತಃ ತನ್ನ ಹಾಗೂ ತಾಯಿಯ ಛಾಯಾಚಿತ್ರವನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು. ಅದರಲ್ಲಿ ಅಲೌಕಿಕ ಹೊಂದಾಣಿಕೆಯ ಬಟ್ಟೆಯನ್ನು ಧರಿಸಿದ್ದರು. ಇವರ ಈ ಪರಿಯು ಶೀಘ್ರದಲ್ಲಿಯೇ ಇತರರಿಗೆ ಪ್ರೇರಣೆಯಾದರು.
ಸ್ವಂತ ಆಯ್ಕೆ ಆಗಿದೆ
ಇವರು ತಮ್ಮ ಉಡುಗೆಯಲ್ಲಿ ಸ್ವಂತ ಆಯ್ಕೆ ಹಾಗೂ ವಿನ್ಯಾಸವನ್ನು ಹೊಂದಿದ್ದಾರೆ. ಇವರ ವಸ್ತ್ರಗಳ ಆಯ್ಕೆ ಹಾಗೂ ವಿನ್ಯಾಸಗಳು ಅವರದ್ದೇ ಆದ ಪರಿ ಹಾಗೂ ಸಾಂಪ್ರದಾಯಿಕ ಪದ್ಧತಿಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಇವರ ಇನ್‍ಸ್ಟ್ರಾ ಗ್ರಾಮ್ ಪುಟದ ಹೆಸರು @peepy_and_mother_lee.ಈಗ ಈ ತಾಯಿ ಮತ್ತು ಮಗ ಇದು ಸುಮಾರು 130,000ದಷ್ಟು ಅನುಯಾಯಿಗಳನ್ನು ಒಳಗೊಂಡಿದೆ. ಈ ತಾಯಿ ಮಗನ ಜೋಡಿಯನ್ನು ವಿಶ್ವದ ಅತ್ಯುತ್ತಮ ತಾಯಿ-ಮಗನ ಜೋಡಿ ಎನ್ನುವ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ಸಂಗತಿಯ ಬಗ್ಗೆ ನೀವೇನು ಹೇಳಲು ಬಯಸುವಿರಿ ಎನ್ನುವುದನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.



Click it and Unblock the Notifications
