For Quick Alerts
ALLOW NOTIFICATIONS  
For Daily Alerts

ಈ ವ್ಯಕ್ತಿ 382 ದಿನಗಳ ಕಾಲ ಉಪವಾಸ ಮಾಡಿದರೂ ಆರೋಗ್ಯವಾಗಿದ್ದಾನೆ!

|

ತೂಕ ಇಳಿಸಿಕೊಳ್ಳಬೇಕು ಎಂದು ಬಯಸಿದವರ ಮನಸ್ಸಿನಲ್ಲಿ ಮೊದಲಿಗೆ ಬರುವಂತಹ ಆಲೋಚನೆ ಎಂದರೆ ಅದು ಇಷ್ಟವಾಗಿರುವ ತಿಂಡಿತಿನಿಸು ಬಿಡುವುದು ಅಥವಾ ತೂಕ ಇಳಿಸಲು ಉಪವಾಸ ಮಾಡುವುದು. ನಮಗೆ ಇಷ್ಟವಾಗಿರುವಂತಹ ತಿಂಡಿತಿನಿಸುಗಳನ್ನು ಬಿಡುವುದು ತುಂಬಾ ಕಠಿಣ ಸವಾಲು. ಆದರೆ ಇದನ್ನು ಸ್ವಲ್ಪ ಸಮಯ ಕಾಲ ಮಾಡಬಹುದು. ಸಂಪೂರ್ಣವಾಗಿ ಆಹಾರವನ್ನು ತ್ಯಜಿಸಿ, ನೀವು ಬದುಕುಳಿಯುವ ಬಗ್ಗೆ ಆಲೋಚನೆ ಮಾಡಲು ಸಾಧ್ಯವೇ? ಆದರೆ ಇಲ್ಲೊಬ್ಬ ವ್ಯಕ್ತಿ 382 ದಿನಗಳ ಕಾಲ ಸಂಪೂರ್ಣವಾಗಿ ಆಹಾರ ತ್ಯಜಿಸಿದ್ದಾನೆ.

ಈ ಘಟನೆಯು ನಿಜವಾಗಿದ್ದು, ವ್ಯಕ್ತಿಯೊಬ್ಬ ಸುಮಾರು 382 ದಿನಗಳ ಕಾಲ ಆಹಾರ ತ್ಯಜಿಸಿ ಬದುಕುಳಿದಿರುವ ಬಗ್ಗೆ ವೈಜ್ಞಾನಿಕವಾಗಿ ಸಾಬೀತು ಆಗಿದೆ ಎಂದು ಹಿಂದಿನ ಮೆಡಿಕಲ್ ಜರ್ನಲ್ ನಲ್ಲಿ ಕೂಡ ವಿವರಣೆ ನೀಡಲಾಗಿದೆ. ವ್ಯಕ್ತಿಯು ತನ್ನ ಕಥೆಯನ್ನು ಹೇಳಿಕೊಳ್ಳಲು ಬದುಕುಳಿದಿದ್ದಾನೆ. 1973ರ ಪೋಸ್ಟ್ ಗ್ಯಾಡ್ಜುವೆಟ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಘಟನೆಯು ಇದಾಗಿದೆ. ಸ್ಕಾಟ್ ಲೆಂಡ್ ನ ವ್ಯಕ್ತಿಯು ತುಂಬಾ ಬೊಜ್ಜು ಹೊಂದಿದ್ದ ಕಾರಣದಿಂದಾಗಿ ಆತ ತನ್ನ ತೂಕ ಕಳೆದುಕೊಳ್ಳಲು ಸುಮಾರು 382 ದಿನಗಳ ಕಾಲ ಯಾವುದೇ ಆಹಾರ ಸೇವಿಸಲಿಲ್ಲ. ಆ ವ್ಯಕ್ತಿಯು ಒಳ್ಳೆಯ ಆರೋಗ್ಯ ಹೊಂದಿದ್ದು ಮಾತ್ರವಲ್ಲದೆ ತನ್ನ ತೂಕವನ್ನು 456 ಪೌಂಡನಿಂದ 180 ಪೌಂಡ್ ಗೆ ಇಳಿಸಿದ್ದ.

ದೀರ್ಘಕಾಲ ಉಪವಾಸ ಮಾಡಿದ ಬಳಿಕ ಈ ವ್ಯಕ್ತಿಯ ತೂಕವು ಐದು ವರ್ಷಗಳ ಕಾಲ 196 ಪೌಂಡ್ ಇತ್ತು ಎಂದು ಯೂನಿವರ್ಸಿಟಿ ಆಫ್ ಡ್ಯುಂಡೇ ಸ್ಕೂಲ್ ಆಫ್ ಮೆಡಿಸಿನ್ ನ ವೈದ್ಯರು ತಿಳಿಸಿದ್ದಾರೆ. 197ರ ಬಳಿಕ ಈ ವ್ಯಕ್ತಿಯ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಕೂಡ ದಾಖಲಾಗಿದೆ. ದೀರ್ಘಕಾಲ ಉಪವಾಸ ಮಾಡಿದ ವ್ಯಕ್ತಿಯೆಂಬ ದಾಖಲೆ ಈತನ ಹೆಸರಿನಲ್ಲಿದೆ. ಆ ವ್ಯಕ್ತಿಯು ಯಾವುದೇ ರೀತಿಯ ದ್ರವಾಹಾರವನ್ನು ಕೂಡ ಸೇವಿಸಲಿಲ್ಲ. ಈತ ತನ್ನ ದೇಹದಲ್ಲಿದ್ದ ಕೊಬ್ಬಿನಿಂದಲೇ ಬದುಕಿದ್ದ. ಇದರ ಹೊರತಾಗಿ ಆತ ಪೊಟಾಶಿಯಂ, ಸೋಡಿಯಂ ಮತ್ತು ಯಿಸ್ಟ್ ಸಪ್ಲಿಮೆಂಟ್ ಗಳನ್ನು ಸೇವನೆ ಮಾಡುತ್ತಿದ್ದ. ಇದು ದೇಹವು ಜೈವಿಕವಾಗಿ ಕಾರ್ಯನಿರ್ವಹಿಸಲು ಅತೀ ಅಗತ್ಯವಾಗಿರುವುದು. ಆತನ ಕರುಳಿನ ಕ್ರಿಯೆಗಳು ಎಷ್ಟು ಅಸಾಮಾನ್ಯವಾಗಿತ್ತು ಎಂದರೆ ಆತ 37-48 ದಿನಗಳಲ್ಲಿ ಒಂದು ಸಲ ಮಲ ವಿಸರ್ಜನೆ ಮಾಡುತ್ತಲಿದ್ದ.

ಆತ ತನ್ನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುತ್ತಿದ್ದ ಮತ್ತು ನಿರಂತರವಾಗಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸುತ್ತಿದ್ದ. ಇದರ ಪರೀಕ್ಷೆ ಬಳಸಿಕೊಂಡು ವೈದ್ಯರು ಆತನಿಗೆ ಬೇರೆ ಸಪ್ಲಿಮೆಂಟ್ ಗಳನ್ನು ನೀಡಿ, ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಚಿಕಾಗೋ ಟ್ರಿಬ್ಯೂನ್ ನಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ, ಆ ವ್ಯಕ್ತಿಯು ದೀರ್ಘಕಾಲದ ತನಕ ಉಪವಾಸ ಬಿಟ್ಟು ಮತ್ತೆ ಆಹಾರ ಸೇವನೆ ಮಾಡಿದ ವೇಳೆ ಆತನಿಗೆ ಆಹಾರದ ರುಚಿಯೇ ಮರೆತು ಹೋಗಿತ್ತು. ಇದು ತುಂಬಾ ವಿಚಿತ್ರ ಕೂಡ!

English summary

This Man Survived Without Eating Food For 382 Days

The first thing that strikes our mind while trying to lose weight is fasting or giving up our most favourite foods to lose weight. Though giving up favourite food seems to be a huge task, eating less food can be easy. But that is something that you can only do for a short span of time. But can you imagine of completely giving up food and surviving on just nothing? Well, this is a case of a man who apparently did not eat for straight 382 days!
X