For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: ಎದೆ ಮೇಲೆ ಹೆಚ್ಚುವರಿ ಅಂಗದೊಂದಿಗೆ ಬದುಕಿದ ಬಾಲಕಿ!

|

ವಿಕಲಚೇತನರಾಗಿ ಹುಟ್ಟುವುದು ದೊಡ್ಡ ಮಟ್ಟಿನ ಸವಾಲು. ಯಾಕೆಂದರೆ ಕೆಲವೊಂದು ಅಂಗಾಂಗ ಊನ ಅಥವಾ ಇನ್ನು ಕೆಲವೊಮ್ಮೆ ಹೆಚ್ಚುವರಿ ಅಂಗಗಳೊಂದಿಗೆ ಜೀವನ ಸಾಗಿಸಬೇಕಾಗುತ್ತದೆ. ಇದು ತುಂಬಾ ಸವಾಲಿನ ಕೆಲಸ. ಯಾವುದೇ ರೀತಿಯ ವ್ಯಕ್ತಿಯೂ ವಿಕಲಚೇತನರಾಗುವುದು ಬೇಡ ಎಂದು ಬಯಸುವರು. ಅವರು ಪಡುವಂತಹ ಕಷ್ಟವನ್ನು ನೋಡಿ ಪ್ರತಿಯೊಬ್ಬರು ಕರುಣೆ ತೋರಿಸುವರು. ಆದರೆ ಇಲ್ಲೊಬ್ಬಳು ಹುಡುಗಿಯ ಎದೆ ಹಾಗೂ ಹೊಟ್ಟೆಯಲ್ಲಿ ಹೆಚ್ಚುವರಿ ಅಂಗಗಳು ಬೆಳೆದಿದೆ.

Extra Limbs

ಸುಮಾರು 14 ವರ್ಷಗಳಿಂದ ಈ ಬಾಲಕಿ ತನ್ನ ಪರಾವಲಂಬಿ ಅವಳಿ ಜತೆಗೆ ಜೀವನ ಸವೆಸಿದ್ದಾಳೆ ಮತ್ತು ಅಂತಿಮವಾಗಿ ಆಕೆಯ ಪರಾವಲಂಬಿ ಅವಳಿಯನ್ನು ಚಿಕಿತ್ಸೆ ಮೂಲಕ ತೆಗೆದ ಬಳಿಕ ಈಗ ಆಕೆ ತುಂಬಾ ಸಂಭ್ರಮದಲ್ಲಿದ್ದಾಳೆ ಮತ್ತು ಸಾಮಾನ್ಯ ಜೀವನ ಸಾಗಿಸುವಂತಾಗಿದೆ. 14 ವರ್ಷಗಳ ಕಾಲ ಈ ಬಾಲಕಿ ಆ ಹೆಚ್ಚುವರಿ ಅಂಗದೊಂದಿಗೆ ಹೇಗೆ ಇದ್ದಳು ಮತ್ತು ಅವಳ ಜೀವನ ಹೇಗಿತ್ತು. ಅಂತಿಮವಾಗಿ ಆಕೆಗೆ ಶಸ್ತ್ರಚಿಕಿತ್ಸೆ ಹೇಗೆ ಮಾಡಲಾಯಿತು ಎನ್ನುವ ಸಂಪೂರ್ಣ ವಿವರವು ನಿಮಗೆ ಈ ಲೇಖನವನ್ನು ಓದುತ್ತಾ ಸಾಗಿದಂತೆ ತಿಳಿಯಲಿದೆ.

ಆಕೆ ಪರಾವಲಂಬಿ ಅವಳಿ ಜತೆಗೆ ಜನಿಸಿದಳು

ಆಕೆ ಪರಾವಲಂಬಿ ಅವಳಿ ಜತೆಗೆ ಜನಿಸಿದಳು

14ರ ಹರೆಯದ ವೆರೊನಿಕಾ ಕೊಮಿಂಗುಜ್ಯ್ ಎಂಬ ಬಾಲಕಿಗೆ ಹುಟ್ಟುವಾಗಲೇ ಹೆಚ್ಚುವರಿ ಅಂಗಾಂಗಳು ಇದ್ದವು. ಆದರೆ ಫಿಲಿಫೈನ್ಸ್ ನ ಐಲಿಗನ್ ನಗರದಲ್ಲಿ ವಾಸಿಸುತ್ತಿದ್ದಾಳೆ. ಆಕೆಯ ಎದೆ ಹಾಗೂ ಹೊಟ್ಟೆಯಲ್ಲಿ ಎರಡು ಹೆಚ್ಚುವರಿ ಅಂಗ ಮತ್ತು ಆಯತಾಕಾರದ ಅಂಗವೊಂದು ಬೆಳೆಯುತ್ತಲಿದೆ.

Most Read: 2019ರ ಸೂರ್ಯ ಗ್ರಹಣ ಈ ನಾಲ್ಕು ರಾಶಿಚಕ್ರದವರ ಮೇಲೆ ಗಂಭೀರ ಪ್ರಭಾವ ಬೀರುವುದು!

ಪರಾವಲಂಬಿ ಅವಳಿಯು ಬೆಳೆಯುತ್ತಲಿದೆ

ಪರಾವಲಂಬಿ ಅವಳಿಯು ಬೆಳೆಯುತ್ತಲಿದೆ

ವೆರೋನಿಕಾ ದೇಹದಲ್ಲಿ ಇರುವಂತಹ ಹೆಚ್ಚುವರಿ ಅಂಗಗಳು ಹಲವಾರು ವರ್ಷಗಳಿಂದಲೂ ಬೆಳೆಯುತ್ತಲೇ ಇದೆ. ಆಕೆ ಬೆಳೆದಂತೆ ಈ ಪರಾವಲಂಬಿ ಅವಳಿಯು ಬೆಳೆಯುತ್ತಲಿದೆ. ಆಕೆ ಈ ಪರಾವಲಂಬಿ ಅವಳಿಯ ಉಗುರುಗಳನ್ನು ಕತ್ತರಿಸುವಳು ಮತ್ತು ಹೊಟ್ಟೆ ಭಾಗದಲ್ಲಿ ಅದರಿಂದ ಬರುವಂತಹ ದ್ರವನ್ನು ಸ್ವಚ್ಛಗೊಳಿಸುವಳು. ಆಕೆಯ ನಾಭಿಯು ಯಾವಾಗಲೂ ದ್ರವ ಹೊರಬರುವ ಕಾರಣದಿಂದಾಗಿ ಒದ್ದೆಯಾಗಿರುವುದು ಎಂದು ಆಕೆ ಹೇಳುವಳು. ಕೆಲವೊಂದು ಸಲ ಇದರಿಂದ ರಕ್ತ ಕೂಡ ಹೊರಬರುತ್ತದೆ ಎಂದು ಆಕೆ ವಿವರಿಸುತ್ತಾಳೆ.

ಆಕೆಗೆ ಕೊನೆಗೂ ಪರಿಹಾರ ಸಿಕ್ಕಿತು

ಆಕೆಗೆ ಕೊನೆಗೂ ಪರಿಹಾರ ಸಿಕ್ಕಿತು

ಎರಡು ಹೆಚ್ಚುವರಿ ಅಂಗ ಮತ್ತು ಅದರ ಬೆರಳುಗಳೊಂದಿಗೆ ಬದುಕುತ್ತಿದ್ದ ಬಾಲಕಿಗೆ ಅಂತಿಮವಾಗಿ ವೈದ್ಯಕೀಯ ನೆರವು ಸಿಕ್ಕಿದೆ. ಹೆಚ್ಚುವರಿ ಬೆರಳುಗಳು ಆಕೆಯು ಎದೆಯ ಭಾಗದಲ್ಲಿ ನೇತಾಡುತ್ತಿದ್ದವು.

Most Read: ಈ ಮೂರು ರಾಶಿಚಕ್ರದವರಿಗೆ ಹೊಸ ವರ್ಷವು ಊಹೆಗೂ ಮಿಗಿಲಾದ ಹೊಸ ಬದಲಾವಣೆಯನ್ನು ತಂದುಕೊಡುವುದು

ಸಂಪೂರ್ಣ ಗ್ರಾಮವು ಆಕೆಗ ಸಾಮಾನ್ಯ ಜೀವನ ಸಾಗಿಸಲು ನೆರವಾಗುತ್ತಲಿದೆ

ಸಂಪೂರ್ಣ ಗ್ರಾಮವು ಆಕೆಗ ಸಾಮಾನ್ಯ ಜೀವನ ಸಾಗಿಸಲು ನೆರವಾಗುತ್ತಲಿದೆ

ವೆರೋನಿಕಾ ತನ್ನ ದೈನಂದಿಕ ಕೆಲಸಗಳನ್ನು ಮಾಡಲು ತುಂಬಾ ಕಷ್ಟಪಡುವ ಕಾರಣದಿಂದಾಗಿ ಸ್ಥಳೀಯರು ಜತೆಗೆ ಸೇರಿ ಎಲ್ಲರಿಂದ ಹಣ ಸಂಗ್ರಹಿಸಿಕೊಂಡು ಆಕೆಗೆ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚುವರಿ ಅಂಗಗಳನ್ನು ತೆಗೆಯಲು ಆಕೆ ಥಾಯ್ಲೆಂಡ್ ಗೆ ಹೋಗಬೇಕಾಯಿತು. ಬಾಲಕಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಮತ್ತು ಆಕೆಯ ಭವಿಷ್ಯವು ಉಜ್ವಲವಾಗಲಿ ಎಂದು ನಾವು ಹಾರೈಸುತ್ತೇವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

English summary

This Girl Had Extra Limbs On Her Chest

Imagine being born as a special child. It has its own norms and clauses. What if you had an extra hand or a limb, life becomes a challenge then as these particular body features become a hurdle in our daily life chores. This is one such case of a girl who has struggled with her parasitic twin for 14 long years, and she can finally breathe in peace as she is getting operated to get rid of her parasitic twin.
Story first published: Thursday, January 3, 2019, 17:47 [IST]
X
Desktop Bottom Promotion