For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಅನುಸಾರ ಈ ಕೆಲಸಗಳನ್ನು ಮಾಡಲು, ನೀವು ಯಾವತ್ತೂ ಮುಂದಾಗುವುದಿಲ್ಲವಂತೆ!

|

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಆದರ್ಶ ಮತ್ತು ಗುರಿ ಎನ್ನುವುದು ಬಹಳ ಪ್ರಮುಖವಾದದ್ದು. ಯಾರು ಉತ್ತಮವಾದ ಗುರಿ ಹಾಗೂ ಧ್ಯೇಯವನ್ನು ಹೊಂದಿರುತ್ತಾರೋ ಅಂತಹವರು ತಮ್ಮ ಗುರಿ ಸಾಧನೆಯ ಎಡೆಗೆ ಚಲಿಸುತ್ತಾರೆ. ದುಷ್ಟ ಕೆಲಸ ಹಾಗೂ ಚಿಂತನೆಯ ಕಡೆಗೆ ಗಮನವನ್ನು ಹರಿಸುವುದಿಲ್ಲ. ಅದೇ ಯಾರು ಜೀವನದಲ್ಲಿ ಒಂದು ಗುರಿ ಹಾಗೂ ಧ್ಯೇಯವನ್ನು ಹೊಂದಿರುವುದಿಲ್ಲವೋ ಅಂತಹವರು ಸದಾ ಇತರರ ನಿಂದನೆ, ಇತರರಿಗೆ ತೊಂದರೆಗಳನ್ನು ನೀಡುತ್ತಾ ಕಿರಿಕಿರಿಯ ಜೀವನವನ್ನು ನಡೆಸುವರು. ತಮ್ಮ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವುದರ ಜೊತೆಗೆ ಇತರರ ನೆಮ್ಮದಿಯನ್ನು ಹಾಳುಮಾಡುತ್ತಾರೆ.

ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕೆಲವು ಪ್ರಮುಖ ತತ್ವಗಳನ್ನು, ನಿಯಮಗಳನ್ನು ಹಾಗೂ ಮಿತಿಯನ್ನು ಹೊಂದಿರುತ್ತಾರೆ. ತಮಗಿರುವ ಮಿತಿ ಹಾಗೂ ತತ್ವಗಳ ಅನುಸಾರವೇ ವರ್ತನೆ ಹಾಗೂ ಸಂವಹನವನ್ನು ನಡೆಸುತ್ತಾರೆ. ತಾವು ಹಾಕಿಕೊಂಡ ಗಡಿಯನ್ನು ಎಂದಿಗೂ ದಾಟಬಾರದು ಎನ್ನುವಂತಹ ಸಂಕಲ್ಪ ಅವರ ಮನಸ್ಸಿನಲ್ಲಿ ಆಳವಾಗಿ ಇರುತ್ತದೆ. ಜೊತೆಗೆ ಆ ರೀತಿ-ನೀತಿಯ ಅಡಿಯಲ್ಲಿ ಜೀವನ ಸುಂದರ ಹಾಗೂ ಸುಖಮಯವಾಗಿರಬೇಕು ಎಂದು ಬಯಸುವುದು ಸಹಜ..

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಕೆಲವೊಮ್ಮೆ ಜೀವನದಲ್ಲಿ ಸಂದರ್ಭಕ್ಕೆ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿಯೂ ನಮ್ಮ ಸ್ವಭಾವದಲ್ಲಿ ಕೊಂಚ ಬದಲಾವಣೆ ಹಾಗೂ ಹೊಂದಾಣಿಕೆಯ ಭಾವನೆ ಇರಬೇಕು. ಆಗಲೇ ನಾವು ನಮ್ಮವರೊಂದಿಗೆ ಅತ್ಯಂತ ಸಂತೋಷ ಹಾಗೂ ಖುಷಿಯಿಂದ ಇರಲು ಸಾಧ್ಯ. ಇಲ್ಲವಾದರೆ ಒಂಟಿ ಹಾಗೂ ಬೇಸರದ ಅನುಭವವನ್ನು ಅನುಭವಿಸಬೇಕಾಗುವುದು. ಆದರೆ ಕೆಲವರು ಅತ್ಯಂತ ಪ್ರಭಲವಾದ ಸಂಕಲ್ಪವನ್ನು ಹೊಂದಿರುತ್ತಾರೆ. ತಮ್ಮ ಸಂಕಲ್ಪವನ್ನು ಎಂದಿಗೂ ಮುರಿಯುವುದಿಲ್ಲ. ಯಾರು ಏನೇ ಎಂದರೂ ನಾವು ಇರುವುದೇ ಹೀಗೆ ಎನ್ನುವಂತೆ ವರ್ತಿಸುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರವರ ರಾಶಿಚಕ್ರಗಳಿಗೆ ಅನುಗುಣವಾಗಿ ಕೆಲವು ವಿಶೇಷ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ. ಅದು ಅವರ ಹುಟ್ಟು ಸ್ವಭಾವವಾಗಿರುತ್ತದೆ. ಅದರಲ್ಲಿ ಯಾವ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಅವರವರ ರಾಶಿಚಕ್ರದಿಂದ ಪ್ರಭಾವಿತರಾಗಿರುತ್ತರೆ. ರಾಶಿ ಚಕ್ರಕ್ಕೆ ಅನುಗುಣವಾಗಿಯೇ ಕೆಲವೊಂದು ಕೆಲಸವನ್ನು ಅವಶ್ಯವಾಗಿ ಮಾಡುವರು. ಅಂತೆಯೇ ಕೆಲವು ವರ್ತನೆಯನ್ನು ಮತ್ತು ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದು ಹೇಳಲಾಗುವುದು. ಹಾಗಾದರೆ ಆ ವರ್ತನೆಗಳು ಅಥವಾ ಕೆಲಸ-ಕಾರ್ಯಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯ ವ್ಯಕ್ತಿಗಳು ನೈಸರ್ಗಿಕವಾಗಿಯೇ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಹುಟ್ಟು ನಾಯಕರು ಎನ್ನಬಹುದು. ಬಹುತೇಕ ಕೆಲಸ-ಕಾರ್ಯಗಳಲ್ಲಿ ಯಾವುದೇ ಅನುಮತಿಯನ್ನು ಅವರು ಕೇಳುವುದಿಲ್ಲ. ತಮ್ಮ ಮನಸ್ಸಿಗೆ ಸರಿಯಾದ ವರ್ತನೆ ಎಂದು ತೋರಿದರೆ ಸಾಕು. ಅದಕ್ಕೆ ಯಾರ ಪರವಾನಗಿ ಕೇಳದೆಯೇ ಮುನ್ನುಗ್ಗಿ ಮಾಡುತ್ತಾರೆ. ಅದೇ ರೀತಿ ಕೆಲವು ಅಂತರ್ಗತ ನಿಯಂತ್ರಣ ಹೊಂದಿದ್ದಾರೆ. ಅಂತಹ ಕೆಲಸ ಕಾರ್ಯಗಳನ್ನು ಮಾಡಿದರೆ ಇತರರಿಗೆ ನೋವು ಅಥವಾ ಬೇಸರ ಉಂಟಾಗಬಹುದು ಎನ್ನುವ ಕಲ್ಪನೆಯನ್ನು ಹೊಂದಿರುತ್ತಾರೆ. ಅಂತಹ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಲು ಮುಂದಾಗುವುದಿಲ್ಲ. ಜೀವನ ದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಬಯಸುವ ಇವರು ಧನಾತ್ಮಕ ಮಾರ್ಗದಲ್ಲಿಯೇ ನಡೆಯುವರು.

ವೃಷಭ ರಾಶಿ

ವೃಷಭ ರಾಶಿ

ಇವರು ಮೇಷ ರಾಶಿಯಂತಹ ವ್ಯಕ್ತಿತ್ವದವರು ಅಲ್ಲ. ಇವರಿಗೆ ಪರವಾನಗಿ ಇಲ್ಲದೆ ಮುನ್ನುಗ್ಗಿ ಕೆಲಸ ಮಾಡುವುದನ್ನು ಇಷ್ಟಪಡುವುದಿಲ್ಲ. ಅಂತಹ ಜನರನ್ನು ದ್ವೇಷಿಸುತ್ತಾರೆ. ಇವರು ತಮ್ಮೊಂದಿಗೆ ಬೆರೆಯದವರ ಹಾಗೂ ಯಾವ ಸಂಗತಿಯನ್ನು ಹಂಚಿಕೊಳ್ಳದವರ ಜೊತೆಗೆ ಅಷ್ಟಾಗಿ ಬೆರೆಯುವುದಿಲ್ಲ. ಇವರು ಅನಗತ್ಯ ಸಂಗತಿಗಳಿಗೆ ಮನರಂಜಿಸುವುದಿಲ್ಲ. ಜೊತೆಗೆ ಅವರು ತಾವೇನು ಅಂದುಕೊಂಡಿದ್ದೇವೋ ಆ ಹಳೆಯ ಕಲ್ಪನೆಗಳನ್ನು ಅಥವಾ ಚಿಂತನೆಗಳನ್ನು ಎಂದಿಗೂ ಬದಲಿಸಿಕೊಳ್ಳುವುದಿಲ್ಲ.

ಮಿಥುನ ರಾಶಿ

ಮಿಥುನ ರಾಶಿ

ಇತರರ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಪ್ರೀತಿಯನ್ನು ತೋರುವ ವ್ಯಕ್ತಿಗಳು ಎಂದು ಹೇಳಬಹುದು. ನೀವು ಮಿಥುನ ರಾಶಿಯವರನ್ನು ಟೀಕಿಸುತ್ತಿದ್ದರೆ ಅದನ್ನು ಸೂಕ್ತ ರೀತಿಯಲ್ಲಿ ಅವರು ಪರಿಗಣಿಸುವರು. ಕೆಲವೊಮ್ಮೆ ದ್ವಂದ್ವ ಭಾವನೆಯನ್ನು ಹೊಂದಿರುತ್ತಾರೆ. ಕೆಲವೊಂದು ವಿಷಯದಲ್ಲಿ ಇವರಿಗೆ ಯಾರೇನೇ ಹೇಳಿದರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕೆಲವೊಮ್ಮೆ ಹಾಸ್ಯದ ಜೀವನ ನಡೆಸಲು ಬಯಸುವರು.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರ ದೃಷ್ಟಿಯಲ್ಲಿ ಮೊದಲ ಆದ್ಯತೆ ಕುಟುಂಬ ಹಾಗೂ ಸ್ನೇಹಿತರು. ಅವರಿಗಾಗಿಯೇ ಜೀವನವನ್ನು ಮುಡುಪಾಗಿ ಇಡುತ್ತಾರೆ. ಇವರಿಗೆ ಮುಖ್ಯವಾದ ಸಂಗತಿಯನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಅಲ್ಲದೆ ಇವರು ಎಂದಿಗೂ ಕೆಲಸದಲ್ಲಿ ಮುಳುಗುವುದಿಲ್ಲ. ಎಲ್ಲದರಲ್ಲೂ ಒಂದು ಮಿತಿಯನ್ನು ಹೊಂದಿರುತ್ತಾರೆ. ಸಂದರ್ಭಕ್ಕೆ ತಕ್ಕ ಕೆಲಸವನ್ನು ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿ

ಸಾಧನೆ ಹಾಗೂ ಪ್ರಗತಿಯ ಅಗತ್ಯತೆಯ ನಡುವೆ ಇವರಿಗೆ ಬೇರೆ ಯಾವುದನ್ನೂ ತರಲು ಇಷ್ಟ ಇರುವುದಿಲ್ಲ. ಅವರು ಯಾವುದೇ ಮಾಹಿತಿ ಇಲ್ಲದ ಸಂಗತಿಯ ಬಗ್ಗೆ ಹೆಚ್ಚಿಗೆ ಆಸಕ್ತಿ ತೋರುವುದಿಲ್ಲ. ಅಲ್ಲದೆ ಯಾವುದೇ ಮಾಹಿತಿಯನ್ನು ಅವರು ಅಷ್ಟು ಸುಲಭವಾಗಿ ನಿರ್ಲಕ್ಷಿಸುವುದಿಲ್ಲ. ಎಲ್ಲವೂ ಪ್ರಮುಖ ಸಂಗತಿಗಳು ಎಂದು ಪರಿಗಣಿಸುವರು. ಸದಾ ಕ್ರಿಯಾಶೀಲರು ಹಾಗೂ ಸಹಾಯ ಮಾಡುವ ವ್ಯಕ್ತಿಗಳಾಗಿ ನಿಲ್ಲುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿ

ಅತ್ಯಂತ ಸೂಕ್ಷ್ಮ ಪ್ರವೃತ್ತಿಯವರು ಹಾಗೂ ಸಹಕಾರ ಮನೋವೃತ್ತಿ ಯವರು ಎಂದು ಹೇಳಬಹುದು. ಇವರು ತಾವು ನಡೆದು ಬಂದ ದಾರಿ, ತಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನು ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ಇವರು ಜೀವನದಲ್ಲಿ ಆದಷ್ಟು ಸರಳವಾದ ಸಂಗತಿಗಳನ್ನು ಆನಂದಿಸುತ್ತಾರೆ. ಅನುಚಿತ ಸಂಗತಿಗಳ ಬಗ್ಗೆ ಆಸಕ್ತಿ ತೋರುವುದು ಅಥವಾ ಆ ವಿಷಯದ ಕುರಿತು ಕೆಲಸ ಕೈಗೊಳ್ಳುವ ಗೋಜಿಗೆ ಹೋಗುವುದಿಲ್ಲ. ವಿಮರ್ಷಾತ್ಮಕ ಭಾವನೆ ಹೆಚ್ಚಾಗಿರುವುದರಿಂದ ಪ್ರತಿಯೊಂದು ಸಂಗತಿಯನ್ನು ಹೆಚ್ಚು ಪರಿಶೀಲನೆಗೆ ಒಳಪಡಿಸುತ್ತಾರೆ ಎನ್ನಬಹುದು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯ ವ್ಯಕ್ತಿಗಳು ಅತ್ಯಂತ ಸ್ನೇಹ ಶೀಲ ಪ್ರವೃತ್ತಿಯವರು ಎನ್ನಬಹುದು. ಇವರು ಎಂತಹ ಸಂಗತಿ ಅಥವಾ ವಿಷಯದಲ್ಲಿಯೇ ಆದರೂ ತಪ್ಪು ಹಾಗೂ ವಿಷಯುಕ್ತ ಸಂಗತಿಯನ್ನು ಪರಿಶೀಲಿಸುತ್ತಾರೆ. ಜೊತೆಗೆ ಅವುಗಳನ್ನು ದೂರ ಇಡಲು ಪ್ರಯತ್ನಿಸುವರು. ಜೀವನದಲ್ಲಿ ಮುಂದುವರಿಯಲು ಹಾಗೂ ವ್ಯಕ್ತಿಗಳೊಂದಿಗೆ ಸ್ನೇಹವನ್ನು ಬೆಳೆಸುವ ಮುನ್ನ ಸಮತೋಲನವನ್ನು ಕಾಯ್ದುಕೊಳ್ಳುವರು. ಸಾಮರಸ್ಯ ಹಾನಿಗೊಳಗಾದರೂ ಅದನ್ನು ಸರಿಪಡಿಸಲು ಮುಂದಾಗುವರು. ಅದರಲ್ಲಿ ಯಾವುದೇ ಹಿನ್ನೆಡೆಯನ್ನು ತೋರುವುದಿಲ್ಲ ಎಂದು ಹೇಳಲಾಗುವುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಶ್ರಮ ಜೀವಿಗಳು ಹಾಗೂ ನಿರಂತರವಾಗಿ ಕೆಲಸದಲ್ಲಿ ತೊಡಗಿಕೊಳ್ಳಲು ಬಯಸುವ ಇವರು ತಪ್ಪುಗಳನ್ನು ಅಷ್ಟು ಸುಲಭವಾಗಿ ಮನ್ನಿಸುವುದಿಲ್ಲ. ಇವರೊಂದಿಗೆ ನೀವು ಸುಳ್ಳು ಹೇಳುತ್ತಿದ್ದೀರಿ ಅಥವಾ ತಪ್ಪು ವರ್ತನೆಯನ್ನು ತೋರುವ ಸಿದ್ಧತೆಯಲ್ಲಿ ಇದ್ದರೆ ಆದಷ್ಟು ಬೇಗ ಅಲ್ಲಿಂದ ಹೊರ ಬನ್ನಿ. ಏಕೆಂದರೆ ತಪ್ಪುಗಳನ್ನು ಹಾಗೂ ಮೋಸವನ್ನು ಅಷ್ಟು ಸುಲಭವಾಗಿ ಕ್ಷಮಿಸುವ ವ್ಯಕ್ತಿಗಳಲ್ಲ. ಆದರೆ ತಮ್ಮ ಪ್ರೀತಿ ಪಾತ್ರರೊಂದಿಗೆ ಅದ್ಭುತ ಪ್ರೀತಿ ಹಾಗೂ ವಿಶ್ವಾಸವನ್ನು ತೋರುವರು ಎಂದು ಹೇಳಲಾಗುವುದು. ತಮ್ಮವರಿಗಾಗಿ ಎಂತಹ ಕೆಲಸವನ್ನಾದರೂ ಮಾಡಲು ಮುಂದಾಗುವರು.

ಧನು ರಾಶಿ

ಧನು ರಾಶಿ

ಈ ರಾಶಿಯ ವ್ಯಕ್ತಿಗಳು ಏನನ್ನಾದರೂ ಹೇಳಲು ಬಯಸಿದರೆ ಅದನ್ನು ಹೇಳದೆ ಹೋಗುವುದಿಲ್ಲ. ಇವರು ತಮ್ಮ ಮನಸ್ಸಿನಲ್ಲಿ ಅಥವಾ ಗುಪ್ತ ಭಾವನೆಯ ರೂಪದಲ್ಲಿ ಯಾವುದನ್ನೂ ಅಡಗಿಸಿ ಇಟ್ಟುಕೊಳ್ಳುವುದಿಲ್ಲ. ಎಲ್ಲವನ್ನೂ ಸುಲಭವಾಗಿ ಹೇಳಿಬಿಡುತ್ತಾರೆ. ತಾವು ಹೇಳುವ ಮಾತುಗಳಿಂದ ಇತರರಿಗೆ ಯಾವ ಬಗೆಯಲ್ಲಿ ನೋವುಂಟಾಗುವುದು ಎನ್ನುವುದನ್ನು ಚಿಂತಿಸುವುದಿಲ್ಲ. ಮನಸ್ಸಿಗೆ ಸೂಚಿಸಿದನ್ನು ಹೇಳಿಯೇ ಬಿಡುತ್ತಾರೆ. ತಪ್ಪು-ಸರಿ ಎನ್ನುವ ಯಾವುದೇ ಕಲ್ಪನೆಯ ಬಗ್ಗೆ ಯೋಚನೆಯನ್ನು ಮಾಡುವುದಿಲ್ಲ ಎಂದು ಹೇಳಲಾಗುವುದು.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರು ಚಿಂತನೆಗಳು ಎಂದರೆ ಕಠಿಣವಾದ ಬೀಜವನ್ನು ಒಡೆದಂತೆ ಎಂದು ಹೇಳಲಾಗುವುದು. ತೊಂದರೆ ಅಥವಾ ಅಪಘಾತಗಳ ಬಗ್ಗೆ ಎಂದಿಗೂ ಅಧಿಕ ಚಿಂತನೆ ನಡೆಸುವುದಿಲ್ಲ. ಎಂತಹ ಪರಿಸ್ಥಿತಿ ಅಥವಾ ಸಂದರ್ಬ ಎದುರಾದರೂ ಅದನ್ನು ಧೈರ್ಯದಿಂದ ಎದುರಿಸುವ ಹಾಗೂ ಅದಕ್ಕೆ ಸೂಕ್ತವಾದ ನಿರ್ಣಯವನ್ನು ಕೈಗೊಳ್ಳುವ ಶಕ್ತಿ ಇರುತ್ತದೆ. ಇವರು ಎಂತಹ ಸಂದರ್ಭದಲ್ಲೂ ಚಂಡ ಮಾರುತದ ರೀತಿಯಲ್ಲಿಯೇ ವರ್ತನೆಯನ್ನು ಅಥವಾ ಧೈರ್ಯವನ್ನು ತೋರುತ್ತಾರೆ ಎಂದು ಹೇಳಬಹುದು.

 ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯ ವ್ಯಕ್ತಿಗಳು ಯಾವಾಗಲೂ ತಮ್ಮ ಅತ್ಯುತ್ತಮ ಅಭಿಪ್ರಾಯ ಹಾಗೂ ವರ್ತನೆಯನ್ನು ತೋರುತ್ತಾರೆ. ಇವರಿಗೆ ತಮ್ಮ ಸಾಮಥ್ರ್ಯ ಏನು ಎನ್ನುವುದು ಸುಲಭವಾಗಿ ತಿಳಿದಿದೆ. ಹಾಗಾಗಿ ಏನನ್ನಾದರೂ ಮಾಡುವಾಗ ಸರಿಯಾದ ಕೆಲಸ ಮಾಡುವುದರ ಮೂಲಕ ಮುಕ್ತಾಯಗೊಳಿಸುತ್ತಾರೆ. ಇವರು ತಾವು ಅಂದುಕೊಂಡ ಕೆಲಸ ಅಥವಾ ಗುರಿಯನ್ನು ತಲುಪಲು ಎಂತಹ ಸಾಧನೆಯನ್ನಾದರೂ ಮಾಡಲು ಮುಂದಾಗುತ್ತಾರೆ. ಅದರಲ್ಲಿ ಯಾವುದೇ ಅಂಜಿಕೆ ಅಥವಾ ಹಿಂದೇಟನ್ನು ಹಾಕುವುದಿಲ್ಲ ಎಂದು ಹೇಳಲಾಗುವುದು.

 ಮೀನ ರಾಶಿ

ಮೀನ ರಾಶಿ

ಕನಸುಗಾರರು ಹಾಗೂ ಸದಾ ಕಲ್ಪನೆಯ ಲೋಕದಲ್ಲಿ ತೇಲುವವರು ಎಂದು ಮೀನ ರಾಶಿಯ ವ್ಯಕ್ತಿಗಳನ್ನು ಹೋಲಿಸಲಾಗುವುದು. ಇವರು ಋಣಾತ್ಮಕ ಸಂಗತಿಯನ್ನು ನಿವಾರಿಸಲು ಅಥವಾ ತೊಡೆದು ಹಾಕಲು ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಯಾವುದಾದರೂ ಅವಕಾಶಗಳು ಕೈತಪ್ಪಿ ಹೋದರೆ ಅದನ್ನು ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನ ಹಾಗೂ ಸಾಹಸಗಳನ್ನು ಮಾಡುತ್ತಾರೆ. ತಾವು ಅಂದುಕೊಂಡಿದ್ದನ್ನು ಪಡೆದುಕೊಳ್ಳದೆ ಹೋಗುವುದಿಲ್ಲ. ಒಂದು ರೀತಿಯ ವಿಶೇಷ ಛಲವನ್ನು ಹೊಂದಿರುವ ವ್ಯಕ್ತಿಗಳು ಎನ್ನಲಾಗುವುದು.

English summary

Things your zodiac sign will never do!

We all have some principles, rules and boundaries in life. Come what may, these are never to be crossed. Nor do we cross them ourselves nor do we let others walk all over us.There should be certain things in life which cannot be negotiated or compromised upon in life. Each one of us a list of such things and they are sacrosanct for us.
Story first published: Saturday, May 25, 2019, 10:23 [IST]
X
Desktop Bottom Promotion