For Quick Alerts
ALLOW NOTIFICATIONS  
For Daily Alerts

ನಿಮಗೆ ವಯಾಗ್ರ ಬಗ್ಗೆ ತಿಳಿಯದೇ ಇರುವ ಅಚ್ಚರಿಯ ಸಂಗತಿಗಳು

|

ಲೈಂಗಿಕ ಕ್ರಿಯೆಯಲ್ಲಿ ತುಂಬಾ ಆಸಕ್ತಿಯಿದ್ದರೂ ಕೆಲವೊಂದು ಸಲ ಲೈಂಗಿಕ ಆಸಕ್ತಿ ಮೂಡದೆ ಇರಬಹುದು ಅಥವಾ ಲೈಂಗಿಕ ಶಕ್ತಿಯು ಬರದೇ ಇರಬಹುದು. ಅದರಲ್ಲೂ ವಯಸ್ಸಾಗುತ್ತಾ ಇರುವಂತೆ ಲೈಂಗಿಕ ಶಕ್ತಿಯು ಕುಂದುತ್ತಾ ಹೋಗುವುದು. ಇದಕ್ಕಾಗಿ ವೈದ್ಯಕೀಯ ಜಗತ್ತು ಕೂಡ ಪರಿಹಾರವನ್ನು ಹುಡುಕುತ್ತದೆ. ಇದರಲ್ಲಿ ಮುಖ್ಯವಾಗಿ ವಯಾಗ್ರ ಎನ್ನುವುದು ಲೈಂಗಿಕ ಶಕ್ತಿ ನೀಡುವುದು.

viagra

ಆದರೆ ವಯಾಗ್ರ ತೆಗೆದುಕೊಂಡರೆ ಅದರಿಂದ ಕೆಲವೊಂದು ಅಡ್ಡ ಪರಿಣಾಮಗಳು ಕೂಡ ಇದೆ. ಇದನ್ನು ಸರಿಯಾಗಿ ಪರಿಗಣಿಸಬೇಕು. ಯಾಕೆಂದರೆ ವಯಾಗ್ರವು ಲೈಂಗಿಕ ಶಕ್ತಿ ನೀಡಿದರೂ ಅದರಿಂದ ದೇಹದ ಬೇರೆ ಭಾಗಗಳ ಮೇಲೆ ಪರಿಣಾಮ ಉಂಟಾಗುವುದು. ವಯಾಗ್ರದಿಂದ ಆಗುವಂತಹ ಅಡ್ಡ ಪರಿಣಾಮಗಳು ಏನು ಎಂದು ತಿಳಿಯಿರಿ.

ದೃಷ್ಟಿ ಮೇಲೆ ಪರಿಣಾಮ ಬೀರುವುದು

ದೃಷ್ಟಿ ಮೇಲೆ ಪರಿಣಾಮ ಬೀರುವುದು

ಅಧ್ಯಯನಗಳು ಹೇಳುವ ಪ್ರಕಾರ ವಯಾಗ್ರದಲ್ಲಿ ಪ್ರಮುಖವಾಗಿ ಬಳಸುವಂತಹ ಸಿಲ್ಡೆನಫಿಲ್ ಎನ್ನುವಂತಹ ಅಂಶವಿದ್ದು, ಇದು ದೇಹದಲ್ಲಿರುವ ಕಿಣ್ವದ ಮೇಲೆ ಪರಿಣಾಮ ಬೀರುವುದು. ಈ ಕಿಣ್ವವು ರೆಟಿನಾದಿಂದ ಮೆದುಳಿಗೆ ಸಂಕೇತ ಕಳುಹಿಸುವುದು. ವಯಾಗ್ರವನ್ನು ಅತಿಯಾದ ಪ್ರಮಾಣದಲ್ಲಿ ಬಳಸಿದರೆ ಆಗ ಅದು ಕಣ್ಣಿನ ಕ್ರಿಯೆಗಳ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ದೃಷ್ಟಿ ಮಂದವಾಗುವುದು, ದೃಷ್ಟಿಯಲ್ಲಿ ಬಣ್ಣ ಬರುವುದು ಮತ್ತು ಬೆಳಕಿಗೆ ಸೂಕ್ಷ್ಮತೆ ಸಮಸ್ಯೆ ಕಾಣಿಸಬಹುದು.

ವಯಾಗ್ರದಿಂದ ಕಣ್ಣು ಕಳಕೊಂಡ

ವಯಾಗ್ರದಿಂದ ಕಣ್ಣು ಕಳಕೊಂಡ

ಅತಿಯಾಗಿ ವಯಾಗ್ರ ಸೇವನೆ ಮಾಡಿದರೆ ಅದರಿಂದ ದೃಷ್ಟಿ ಕಳಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ. 86ರ ಹರೆಯದ ವ್ಯಕ್ತಿಯೊಬ್ಬರು ವಯಾಗ್ರದಿಂದಾಗಿ ಕಣ್ಣಿನ ದೃಷ್ಟಿ ಕಳಕೊಂಡಿದದ್ಆರೆ. 2012ರಿಂದ ವಯಾಗ್ರ ಸೇವನೆ ಮಾಡುತ್ತಿದ್ದೇನೆ ಮತ್ತು ಇದರ ಬಳಿಕ ದೃಷ್ಟಿ ಮಂದವಾಗಿದೆ ಎಂದು ಹೇಳಿರುವ ಅವರು ವಯಾಗ್ರ ಮಾತ್ರೆ ನಿಷೇಧಿಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. 2 ಮಿಲಿಯನ್ ಡಾಲರ್ ಪರಿಹಾರ ಬೇಕು ಎಂದು ಅವರು ಹೇಳಿದ್ದಾರೆ.

ಜನನೇಂದ್ರೀಯ ಕಳಕೊಂಡ ವ್ಯಕ್ತಿ

ಜನನೇಂದ್ರೀಯ ಕಳಕೊಂಡ ವ್ಯಕ್ತಿ

ತನ್ನ ಸ್ನೇಹಿತೆಯನ್ನು ಖುಷಿಗೊಳಿಸುವ ಸಲುವಾಗಿ ಅತಿಯಾಗಿ ವಯಾಗ್ರ ಸೇವನೆ ಮಾಡುತ್ತಿದ್ದ ಕೊಲಂಬಿಯಾದ 66ರ ಹರೆಯದ ರೈತನೊಬ್ಬ ತನ್ನ ಜನನೇಂದ್ರಿಯ ಕತ್ತರಿಸಿಕೊಂಡಿರುವ ಬಗ್ಗೆ ದೂರಿದ್ದಾನೆ. ವಯಾಗ್ರ ಸೇವನೆ ಬಳಿಕ ಜನನೇಂದ್ರಿಯು ಕೆಲವು ದಿನಗಳ ಕಾಲ ನಿಮಿರಿತ್ತು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಶಿಶ್ನವು ಸೋಂಕಿಗೆ ಒಳಗಾಗಿ ಅದಕ್ಕೆ ಹಾನಿಯಾಗಿದೆ ಮತ್ತು ಗ್ಯಾಂಗ್ರೀನ್ ನ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗ್ಯಾಂಗ್ರೀನ್ ತಡೆಯಲು ಆತನ ಜನನೇಂದ್ರೀಯವನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಿದರು.

ಮಹಿಳೆಯರಿಗೆ ವಯಾಗ್ರ

ಮಹಿಳೆಯರಿಗೆ ವಯಾಗ್ರ

ಮಹಿಳೆಯರಿಗೆ ಕೂಡ ವಯಾಗ್ರದಂತಹ ಔಷಧಿ ಕಂಡುಹುಡುಕಿರುವುದಾಗಿ ಕೆಲವೊಂದು ವೈದ್ಯಕೀಯ ಸಂಸ್ಥೇಗಳು ಹೇಳಿಕೊಂಡಿದೆ. ಇದರಿಂದ ಅವರಿಗೆ ಲೈಂಗಿಕ ಸುಖ ಸಿಗುವುದು ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವೂ ಸುಳ್ಳು. ಮಹಿಳೆಯರಿಗೆ ಲೈಂಗಿಕವಾಗಿ ಸುಖ ನೀಡುವಂತಹ ಯಾವುದೇ ಔಷಧಿಗೆ ಎಫ್ ಡಿಎ ಯಾವುದೇ ಅನುಮತಿ ನೀಡಲಿಲ್ಲ.

ಋತುಚಕ್ರದ ಸೆಳೆತ ತಡೆಯುವುದು

ಋತುಚಕ್ರದ ಸೆಳೆತ ತಡೆಯುವುದು

ಋತುಚಕ್ರದ ವೇಳೆ ಅತಿಯಾಗಿ ಸೆಳೆತ ಕಂಡುಬರುವಂತಹ ಮಹಿಳೆಯರು ವಯಾಗ್ರ ಸೇವನೆ ಮಾಡಿದರೆ ಅವರಿಗೆ ಇದರಿಂದ ಪರಿಹಾರ ಸಿಗುವುದು. ಸಿಲ್ಡೆನಫಿಲ್ ಸಿಟ್ರೇಟ್ ಎನ್ನುವ ಅಂಶವು ವಯಾಗ್ರದಲ್ಲಿದೆ. ಇದರು ರಕ್ತನಾಳಗಳನ್ನು ಶುದ್ಧೀಕರಿಸುವುದು ಮತ್ತು ಶ್ರೋಣಿ ಭಾಗದಲ್ಲಿನ ನೋವನ್ನು ಕಡಿಮೆ ಮಾಡಲು ಇದು ನೆರವಾಗುವುದು. ಈ ಔಷಧಿಯನ್ನು ಪ್ರಯೋಗ ಮಾಡಿದ ವೇಳೆ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ ಇರುವುದು ಕಂಡುಬಂದಿದೆ.

ಹೊಟ್ಟೆಯ ಕೊಬ್ಬು ಕರಗಿಸುವುದು

ಹೊಟ್ಟೆಯ ಕೊಬ್ಬು ಕರಗಿಸುವುದು

ಇದು ಲೈಂಗಿಕ ಕ್ರಿಯೆ ಸುಧಾರಣೆ ಮಾಡುವುದಲ್ಲದೆ ತೂಕ ಕಳೆದುಕೊಳ್ಳಲು ನೆರವಾಗುವುದು. ವಯಾಗ್ರವು ಹೊಟ್ಟೆಯ ಕೊಬ್ಬು ಕರಗಿಸುವುದು ಮತ್ತು ಬೊಜ್ಜಿನ ಅಪಾಯ ತಗ್ಗಿಸುವುದು. ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನದ ಪ್ರಕಾರ ತೊಡೆ ಹಾಗೂ ಹೊಟ್ಟೆ ಸುತ್ತಲು ಬೆಳೆದಿರುವಂತಹ ಬಿಳಿ ಕೊಬ್ಬಿನ ಕೋಶಗಳನ್ನು ವಿವಿಧ ಕೋಶಗಳಿಗೆ ಪರಿವರ್ತನೆಗೊಂಡು ಶಕ್ತಿಯಾಗಿ ಪರಿವರ್ತನೆ ಆಗುವುದು. ಇದರಿಂದಾಗಿ ತೂಕ ಇಳಿಸಿಕೊಳ್ಳಲು ವಯಾಗ್ರ ಪ್ರಮುಖ ಔಷಧಿ ಎಂದು ಪರಿಗಣಿಸಲಾಗಿದೆ. ವಯಾಗ್ರವು ತುಂಬಾ ಸುಲಭವಾಗಿ ಸಿಗುವುದು ಮತ್ತು ಸೆಕ್ಸ್ ಗೆ ಮೊದಲು ಇದನ್ನು ಒಂದು ಆಯ್ಕೆಯಾಗಿ ಬಳಸಿಕೊಳ್ಳಲಾಗುತ್ತದೆ. ಲ್ಯಾಟೆಕ್ಸ್ ಅಥವಾ ರಬ್ಬರ್ ನ ಪದರವನ್ನು ನಿಮಿರುವಂತಹ ಜನನೇಂದ್ರಿಯಕ್ಕೆ ಒಳನುಗ್ಗುವಿಕೆ ಮೊದಲು ಹಾಕಿರುವರು. ಕಾಂಡೋಮ್ ನಿಂದ ಯೋನಿಯೊಳಗೆ ವೀರ್ಯವು ಹೋಗುವುದು ತಪ್ಪುತ್ತದೆ ಮತ್ತು ಬೇಡದ ಗರ್ಭವನ್ನು ಇದು ತಡೆಯುವುದು ಮತ್ತು ಲೈಂಗಿಕ ರೋಗಗಳು ಹರಡದಂತೆ ಇದು ತಡೆಯುವುದು.

ವಯಾಗ್ರ ಐಸ್ ಕ್ರೀಮ್

ವಯಾಗ್ರ ಐಸ್ ಕ್ರೀಮ್

ಇಂತಹ ಐಸ್ ಕ್ರೀಮ್ ಒಂದು ಲಭ್ಯವಾಗಿದೆ. ಅರೋಸಲ್ ಎನ್ನುವಂತಹ ಐಸ್ ಕ್ರೀಮ್ ನ್ನು ಕಂಪೆನಿಯೊಂದು ತಯಾರಿಸಿದೆ. ಇದರಲ್ಲಿ 25 ಮಿ.ಗ್ರಾಂನಷ್ಟು ವಯಾಗ್ರವಿದೆ. ಈ ಐಸ್ ಕ್ರೀಮ್ ನ್ನು ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗಾಗಿ ತಯಾರಿಸಲಾಗಿದೆ ಮತ್ತು ಶಾಂಪೇನ್ ನಲ್ಲಿ ಐಸ್ ಕ್ರೀಮ್ ನ ರುಚಿ ನೀಡುವಂತಹ ಅಂಶವಿದೆ.

ವಯಾಗ್ರಾದ ಇತರ ಅಡ್ಡಪರಿಣಾಮಗಳು

ವಯಾಗ್ರಾದ ಇತರ ಅಡ್ಡಪರಿಣಾಮಗಳು

ವಯಾಗ್ರಾ ಸೇವನೆಯ ಇತರ ಅಡ್ಡಪರಿಣಾಮಗಳೆಂದರೆ ತಲೆನೋವು, ತಲೆಸುತ್ತು, ಹೃದಯಾಘಾತ,ಅಜೀರ್ಣ ಮತ್ತು ದೃಷ್ಟಿಯಲ್ಲಿ ಕುಂಠಿತತೆ. ಒಂದು ವೇಳೆ ವಯಾಗ್ರಾವನ್ನು ಸೇವಿಸುವ ವೇಳೆ ಹೃದಯ ತೊಂದರೆ ಮತ್ತು ಇತರ ಖಾಯಿಲೆಗಳಿಗೆ ಉಪಯೋಗಿಸುವ ಮಾತ್ರೆಗಳಲ್ಲಿ ನೈಟ್ರೇಟುಗಳ ಸಂಯೋಜನೆ ಇದ್ದರೆ ಈ ಅಡ್ಡಪರಿಣಾಮಗಳು ಅತಿಹೆಚ್ಚಾಗಿರುವುದು ಪ್ರಯೋಗಗಳ ಮೂಲಕ ಕಂಡುಬಂದಿದೆ. ಒಂದು ವೇಳೆ ಹೃದಯ ಸಂಬಂಧಿ ಕಾಯಿಲೆಗಳಿಗೆ ನಿಯಮಿತ ಮಾತ್ರೆಗಳನ್ನು ಸೇವಿಸುತ್ತಿರುವವರು ವೈದ್ಯರ ಸಲಹೆ ಪಡೆಯದೇ ವಯಾಗ್ರಾ ಸೇವಿಸಿದರೆ ಪ್ರಾಣಾಪಾಯವನ್ನೂ ಎದುರಿಸಬೇಕಾಗಿ ಬರಬಹುದು. ಆದ್ದರಿಂದ ವಯಾಗ್ರಾ ಸಹಿತ ಯಾವುದೇ ಔಷಧಿಯನ್ನು ಸೇವಿಸುವ ಮೊದಲು ವೈದ್ಯರನ್ನು ಭೇಟಿಯಾಗಿ ಅವರ ಸಲಹೆಯ ಮೇರೆಗೆ ಮಾತ್ರ ಸೇವಿಸುವುದು ಅತ್ಯಂತ ಅಗತ್ಯವಾಗಿದೆ.

English summary

Things you didn't know about Sildenafil Citrate

Viagra known as the drug that has spiced up the sex life of many, is the most widely used drugs to treat erectile dysfunction. Although it is the go to drug for long lasting erections there are many interesting things about Viagra you might not know.Can affect your vision: A study has revealed that the active ingredient in Viagra called sildenafil interferes with the action of an enzyme which transmits light signals from the retina to the brain.When used in high doses, the drug can cause disturbances in the vision of active users.Excessive use may cause blurred vision, altered colour vision and sensitivity to light
X
Desktop Bottom Promotion