For Quick Alerts
ALLOW NOTIFICATIONS  
For Daily Alerts

ಬ್ರಹ್ಮಚಾರಿ ಹುಡುಗರು ಲೈಂಗಿಕ ಕ್ರಿಯೆ ವೇಳೆ ತಿಳಿಯಬೇಕಾದ ವಿಚಾರಗಳು

|

ಬ್ರಹ್ಮಚಾರಿಗಳು ಎಂದು ಕರೆಯಲ್ಪಡುವಂತಹ ಬ್ಯಾಚುಲರ್ಸ್ ಗಳು ಮುಂದೊಂದು ದಿನ ಮದುವೆಗೆ ತಯಾರಾಗುವರು. ಮದುವೆ ಬಳಿಕ ಅವರು ಲೈಂಗಿಕ ಜೀವನದಲ್ಲಿ ಕೂಡ ನಿರಂತರವಾಗಿ ಪಾಲ್ಗೊಳ್ಳಬೇಕು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಮದುವೆಗಿಂತ ಮೊದಲೇ ಹುಡುಗರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು. ಆದರೆ ಈ ವೇಳೆ ಹುಡುಗರು ಕೆಲವೊಂದು ಅಂಶಗಳನ್ನು ಸರಿಯಾಗಿ ಗಮನಿಸಿಕೊಳ್ಳಬೇಕು. ಅದೇನೆಂದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮೊದಲು ಹುಡುಗರು ಈ ಲೇಖನದಲ್ಲಿ ನೀಡುವಂತಹ ಅಂಶಗಳನ್ನು ಪಾಲಿಸಿಕೊಂಡು ಹೋದರೆ ಅವರು ಆರೋಗ್ಯಕರ ಲೈಂಗಿಕ ಜೀವನ ಸಾಗಿಸಬಹುದು.

ಲೈಂಗಿಕ ಕ್ರಿಯೆ ಅನ್ನುವುದು ಮನುಷ್ಯ ಜೀವನದ ಅದ್ಭುತವಾದ ವಿಚಾರ ಮತ್ತು ಆರೋಗ್ಯಕರ ಲೈಂಗಿಕ ಜೀವನ ನಡೆಸುವುದು ಪ್ರತಿಯೊಬ್ಬರಿಗೂ ಒಳ್ಳೆಯದು. ಅದಾಗ್ಯೂ, ಬ್ರಹ್ಮಚಾರಿ ಹುಡುಗರ ಬಗ್ಗೆ ಕೆಲವೊಂದು ತಪ್ಪು ಕಲ್ಪನೆಗಳು ಇವೆ ಮತ್ತು ಇದು ಅವರಿಗೆ ಲೈಂಗಿಕ ಕ್ರಿಯೆಯನ್ನು ಆನಂದಿಸಲು ತುಂಬಾ ಕಷ್ಟವಾಗಬಹುದು. ನೀವು ಕೂಡ ಈಗಲೂ ಬ್ರಹ್ಮಚಾರಿಯಾಗಿದ್ದರೆ ಆಗ ಈ ವಿಚಾರ ತಿಳಿಯಿರಿ.

ನಿಮಿರುವಿಕೆ

ನಿಮಿರುವಿಕೆ

ನಿಮಿರುವಿಕೆಯು 3-5 ನಿಮಿಷಕ್ಕಿಂತ ಹೆಚ್ಚು ಇರುವುದಿಲ್ಲ. ನೀವು ಪೋರ್ನ್ ವಿಡಿಯೋಗಳಲ್ಲಿ ಪುರುಷರು 40 ನಿಮಿಷಗಳ ಕಾಲ ಒಳನುಗ್ಗುಸುವಿಕೆಯನ್ನು ನೋಡಬಹುದು. ಆದರೆ ಇದು ನಿಜ ಜೀವನದಲ್ಲಿ ಆಗಲ್ಲ. ಅಧ್ಯಯನಗಳ ಪ್ರಕಾರ ಪುರುಷರು ಒಳನುಗ್ಗಿಸಿದ ಬಳಿಕ 3-5 ನಿಮಿಷದಲ್ಲಿ ಸ್ಖಲನ ಮಾಡುವರು.

Most Read: ಜನನಾಂಗ ನಿಮಿರುವಿಕೆ ಸಮಸ್ಯೆಗೆ 15 ಪ್ರಾಕೃತಿಕ ಪರಿಹಾರಗಳು

ಒಳನುಗ್ಗುವಿಕೆಯ ಮೊದಲು

ಒಳನುಗ್ಗುವಿಕೆಯ ಮೊದಲು

ಒಳನುಗ್ಗುವಿಕೆಗೆ ಮೊದಲಿಗೆ ಸ್ವಲ್ಪ ಮಟ್ಟಿನ ಆಟವಾಡುವುದು ಅತೀ ಅಗತ್ಯವಾಗಿರುವುದು. ಯಾಕೆಂದರೆ ಇದರಿಂದ ಮಹಿಳೆಗೆ ಸರಿಯಾಗಿ ಪರಾಕಾಷ್ಠೆ ತಲುಪಲು ಸಾಧ್ಯವಾಗುವುದು. ನೀವು ಒಳ್ಳೆಯ ಗೆಳೆಯನಾಗಿದ್ದರೆ ಆಗ ನಿಮಗೆ ಇದರ ಮೂಲ ತಿಳಿದಿರುವುದು. ಮೊದಲಿಗೆ ಚುಂಬನ ಮತ್ತು ಇದರ ಬಳಿಕ ಸ್ತನದೊಂದಿಗೆ ಆಟವಾಡುವುದು.

ಮೊದಲ ಸಲ ನಿಮ್ಮ ನಿರೀಕ್ಷೆಯಂತೆ ಇರದೆ ಇರಬಹುದು!

ಮೊದಲ ಸಲ ನಿಮ್ಮ ನಿರೀಕ್ಷೆಯಂತೆ ಇರದೆ ಇರಬಹುದು!

ಮೊದಲ ಸಲ ನಿಮ್ಮ ನಿರೀಕ್ಷೆಯಂತೆ ಇರದೆ ಇರಬಹುದು. ನೀವು ಈ ದಿನಕ್ಕಾಗಿ ಕನಸು ಕಂಡಿರಬಹುದು. ಆದರೆ ಇದು ನಡೆದ ವೇಳೆ ನಿಮಗೆ ಆಗ ರೀತಿಯಲ್ಲಿನ ಪ್ರದರ್ಶನ ನೀಡಲು ಸಾಧ್ಯವಾಗದೆ ಇರಬಹುದು. ಇದರಿಂದ ನಿರಾಶೆಗೊಳಗಾಗಬೇಡಿ. ಪ್ರತಿಯೊಂದರಂತೆ ಸೆಕ್ಸ್ ಕೂಡ ಸಮಯ ಸಾಗಿದಂತೆ ಒಳ್ಳೆಯದಾಗುತ್ತಾ ಸಾಗುವುದು.

ಗಾತ್ರದ ಬಗ್ಗೆ ಚಿಂತೆ ಬೇಡ

ಗಾತ್ರದ ಬಗ್ಗೆ ಚಿಂತೆ ಬೇಡ

ಗಾತ್ರವು ಯಾವುದೇ ರೀತಿಯ ಪರಿಣಾಮ ಬೀರದು. ನೀವು ನಿಮ್ಮ ಶಿಶ್ನದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಪೋರ್ನ್ ವಿಡಿಯೋಗಳಲ್ಲಿ ನೀವು ದೊಡ್ಡ ಗಾತ್ರದ ಶಿಶ್ನಗಳನ್ನು ನೋಡಿಬಹುದು. ಆದರೆ ಇದು ನಕಲಿ ಮತ್ತು ಗಾತ್ರವು ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರದು. ನಿಮಿರಿದ ವೇಳೆ ಶಿಶ್ನದ ಗಾತ್ರವು ಮೂರು ಇಂಚಿಗಿಂತ ಕಡಿಮೆ ಇದ್ದರೆ ಮಾತ್ರ ಆಗ ಸಮಸ್ಯೆಯಾಗುವುದು.

ಕಾಂಡೋಮ್

ಕಾಂಡೋಮ್

ಕಾಂಡೋಮ್ ಧರಿಸುವುದು ಕೂಡ ಒಂದು ರೀತಿಯ ಹೊಸ ಅನುಭವ. ಮತ್ತು ಇದು ಸುರಕ್ಷಿತ ಸೆಕ್ಸ್ ಗೆ ಅತೀ ಅಗತ್ಯವಾಗಿ ಇರುವುದು. ಬೇಡದ ಗರ್ಭ ತಡೆಯಲು ನೀವು ಕಾಂಡೊಮ್ ಧರಿಸಬೇಕು. ಆದರೆ ನೀವು ಎರಡು ಧರಿಸಬಾರದು. ಯಾಕೆಂದರೆ ಇದು ಜಾರಬಹುದು ಅಥವಾ ಅದರಿಂದ ವೀರ್ಯವು ಹೊರಗೆ ಬಂದು ಸುರಕ್ಷಿತದ ಬದಲು ಅಸುರಕ್ಷಿತವಾಗಬಹುದು.

ಹಸ್ತಮೈಥುನ

ಹಸ್ತಮೈಥುನ

ಹಸ್ತಮೈಥುನದಿಂದ ಯಾವುದೇ ರೀತಿಯ ಹಾನಿಗಳು ಇಲ್ಲ ಮತ್ತು ಇದು ಲೈಂಗಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಒಳ್ಳೆಯ ವಿಧಾನವಾಗಿದೆ. ಇದು ವೀರ್ಯವನ್ನು ಪುನರ್ಶ್ಚೇತನಗೊಳಿಸುವುದು, ಒತ್ತಡ ನಿವಾರಣೆ ಮಾಡುವುದು ಮತ್ತು ಅಧ್ಯಯನಗಳ ಪ್ರಕಾರ ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುವುದು.

ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆ

ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆ

ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆ ಮಾಡಿದರೆ ಕೆಲವೊಂದು ಸಮಯದಲ್ಲಿ ಗರ್ಭ ಧಾರಣೆ ಸಾಧ್ಯತೆಯು ತುಂಬಾ ಕಡಿಮೆ ಇರುವುದು ಎಂದು ಹೇಳಲಾಗುತ್ತದೆ. ಇದು ಸರಿಯಲ್ಲ. ಋತುಚಕ್ರದ ವೇಳೆ ಲೈಂಗಿಕ ಕ್ರಿಯೆ ನಡೆಸಿದರೆ ಆಗ ಗರ್ಭ ಧರಿಸುವಂತಹ ಸಾಧ್ಯತೆಯು ತುಂಬಾ ಕಡಿಮೆ ಇರುವುದು ಎಂದು ಕೆಲವರು ಹೇಳುತ್ತಾರೆ. ಇದರ ಸಾಧ್ಯತೆ ಕಡಿಮೆ ಆದರೂ ಕಾಂಡೋಮ್ ಧರಿಸುವುದು ಅತೀ ಅಗತ್ಯವಾಗಿದೆ. ಇದರಿಂದ ಲೈಂಗಿಕ ರೋಗಗಳನ್ನು ತಡೆಯಬಹುದು.

ಮೊದಲ ಸಲ ಲೈಂಗಿಕ ಕ್ರಿಯೆ

ಮೊದಲ ಸಲ ಲೈಂಗಿಕ ಕ್ರಿಯೆ

ಮೊದಲ ಸಲ ಲೈಂಗಿಕ ಕ್ರಿಯೆ ವೇಳೆ ನೀವು ತುಂಬಾ ಆತಂಕದಲ್ಲಿ ಸಿಲುಕಬಹುದು. ಲೈಂಗಿಕ ಕ್ರಿಯೆ ವೇಳೆ ಕೇವಲ ನಿಮ್ಮ ಜನನೇಂದ್ರೀಯ ಮಾತ್ರ ಇದರಲ್ಲಿ ಒಳಗೊಳ್ಳುವುದಿಲ್ಲ. ನೀವು ಭೀತಿ ಪಡುವಂತಹ ಅಗತ್ಯವೇ ಇಲ್ಲ ಮತ್ತು ನೀವು ಯಾರಿಗೂ ಏನೂ ಸಾಬೀತು ಮಾಡಬೇಕಾಗಿಲ್ಲ.

English summary

Things all virgins men should know about

Sex is definitely one of the best things about being human, and a healthy sex life is key to one’s wellbeing. However, there are several myths surrounding it, and men who’ve never experienced the joys of intercourse are more susceptible to these myths. If you are virgin too, then here are some things you must know.
Story first published: Monday, May 27, 2019, 19:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more