Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಪೋಷಕರೇ ತಮ್ಮ ಅವಳಿ ಮಕ್ಕಳಿಗೆಯೇ ಮದುವೆ ಮಾಡಿಸಿಬಿಟ್ಟರು!
ಹಿಂದಿನ ಕಾಲದಲ್ಲಿ ಕೆಲವು ರಾಜರುಗಳು ತಮ್ಮ ರಾಜ್ಯವು ಬೇರೆಯವರಿಗೆ ಹೋಗಬಾರದು ಎನ್ನುವ ದೃಷ್ಟಿಯಿಂದಾಗಿ ತಮ್ಮ ಮಗಳನ್ನು ತಮ್ಮದೇ ರಕ್ತ ಸಂಬಂಧಿಗಳಿಗೆ ಕೊಟ್ಟು ಮದುವೆ ಮಾಡಿಕೊಡುತ್ತಾ ಇದ್ದರಂತೆ. ಇನ್ನು ಕೆಲವರು ತಮ್ಮ ಸಂಬಂಧದಲ್ಲೇ ಮದುವೆ ಮಾಡಿಕೊಡುತ್ತಿದ್ದರು. ಕೆಲವೊಂದು ಜನಾಂಗ ಹಾಗೂ ಸಮುದಾಯದಲ್ಲಿ ನಂಬಿಕೆಗಳಿಂದಾಗಿ ಸೋದರ ಹಾಗೂ ಸೋದರಿ ನಡುವೆಯೇ ವಿವಾಹ ಮಾಡಿಕೊಡಲಾಗುತ್ತಲಿತ್ತು.
ಇಂತಹ ಕೆಲವೊಂದು ಸಂಪ್ರದಾಯ ಹಾಗೂ ನಂಬಿಕೆಗಳು ಈಗಲೂ ಕೆಲವು ಬುಡಕಟ್ಟು ಜನಾಂಗದಲ್ಲಿ ಇದೆ. ಅದಾಗ್ಯೂ, ಇದು ತುಂಬಾ ವಿಚಿತ್ರ ಸಂಪ್ರದಾಯಗಳು ಎಂದು ಭಾವಿಸಲಾಗಿದೆ. ಈ ಲೇಖನದಲ್ಲಿ ನಾವು ನಿಮಗೆ ಅವಳಿಗಳಿಬ್ಬರು ಪರಸ್ಪರ ಮದುವೆಯಾಗಿರುವ ಬಗ್ಗೆ ತಿಳಿಸಿಕೊಡಲಿದ್ದೇವೆ. ಇಲ್ಲಿ ಪೋಷಕರೇ ತಮ್ಮ ಅವಳಿಗಳಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಯಾಕೆಂದರೆ ಅವರು ಹಿಂದಿನ ಜನ್ಮದಲ್ಲಿ ಪ್ರೇಮಿಗಳಾಗಿದ್ದರಂತೆ. ಈ ವಿಚಿತ್ರ ಘಟನೆ ಬಗ್ಗೆ ನೀವು ಓದುತ್ತಾ ಸಾಗಿ...

ಅವಳಿಗಳು ಮದುವೆಯಾಗುತ್ತಾರೆ ಎಂದು ಪೋಷಕರಿಗೆ ತಿಳಿದಿತ್ತು…
ಗಿಟಾರ್ ಮತ್ತು ಆತನ ಸೋದರಿ ಕಿವಿ 2012ರ ಸಪ್ಟೆಂಬರ್ ನಲ್ಲಿ ಜನಿಸಿದ್ದರು. ಥಾಯ್ಲೆಂಡ್ ನ ಅಮೋರ್ನ್ಸನ್ ಸನ್ಥಾರ್ನ್ ಮಲಿರತ್ ಮತ್ತು ಫಚಾರ್ಪೋರ್ನ್ ಇವರ ಪೋಷಕರು. ಇವರು ತಮ್ಮ ಅವಳಿಗಳಿಗೆ ಮದುವೆ ಮಾಡುತ್ತಾರೆಂದು ಆ ಕ್ಷಣವೇ ಆಲೋಚಿಸಿದ್ದರು. ಮದುವೆಯು ಸಂಪ್ರದಾಯಬದ್ಧ ಹಾಗೂ ವಿಧಿವಿಧಾನದಂತೆ ನಡೆಯಬೇಕೆಂದು ಅವರು ಬಯಸಿದ್ದರು.

ಬೌದ್ಧರ ನಂಬಿಕೆ
ಬೌದ್ಧರ ನಂಬಿಕೆ ಪ್ರಕಾರ ಗಂಡು ಹಾಗೂ ಹೆಣ್ಣು ಅವಳಿಗಳು ಹುಟ್ಟಿದರೆ ಅವರು ಹಿಂದಿನ ಜನ್ಮದ ಸಂಬಂಧದಿಂದ ಮಾಡಿದ ಕರ್ಮದಿಂದಾಗಿ ಹೀಗೆ ಜನಿಸುವರು ಮತ್ತು ಹಿಂದಿನ ಜನ್ಮದ ಸಾಲ ತೀರಿಸುವ ಸಲುವಾಗಿ ಅವರು ಹೀಗೆ ಜನ್ಮ ತಾಳುವರು. ಹಿಂದಿನಿಂದಲೂ ಇದನ್ನು ಬೌದ್ಧ ಧರ್ಮದವರು ನಂಬಿಕೊಂಡು ಬರುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಇದರಿಂದ ಮದುವೆಯೇ ಇದಕ್ಕೆ ಪರಿಹಾರ
ದಂಪತಿಯು ಈ ನಂಬಿಕೆಯನ್ನು ಪಾಲಿಸುವ ಸಲುವಾಗಿ ತಮ್ಮ ಅವಳಿ ಮಕ್ಕಳಿಗೆ ಆದಷ್ಟು ಬೇಗನೆ ಮದುವೆ ಮಾಡಲು ನಿರ್ಧರಿಸಿದರು. ಮಕ್ಕಳು ಸಣ್ಣವರಾಗಿದ್ದಾಗಲೇ ಮದುವೆ ಮಾಡಿದರೆ ಅದರಿಂದ ಮಕ್ಕಳು ಭವಿಷ್ಯದಲ್ಲಿ ದುರಾದೃಷ್ಟಕ್ಕೆ ಒಳಗಾಗುವುದು ತಪ್ಪುತ್ತದೆ ಎಂದು ಅವರು ನಂಬಿದ್ದಾರೆ.

ಭವ್ಯ ಸಮಾರಂಭದಲ್ಲಿ ಮದುವೆ ನೆರವೇರಿತು
ಅವಳಿಗಳಿಗೆ ಮದುವೆ ಮಾಡಿಕೊಡುವ ಸಮಾರಂಭದಲ್ಲಿ ಹಲವಾರು ಮಂದಿ ಭಾಗಿಯಾದರು. ಇದರಲ್ಲಿ ಸ್ನೇಹಿತರು, ಸಂಬಂಧಿಗಳು ಮತ್ತು ಸ್ಥಳೀಯರು ಭಾಗಿಯಾಗಿ ವಧುವರರನ್ನು ಆಶೀರ್ವದಿಸಿದರು. ಭವ್ಯವಾಗಿ ನಡೆದ ಮೆರವಣಿಗೆ ಬಲಿಕ ಸಂಪ್ರದಾಯದಂತೆ ನಡೆಯುವ ಆಟವೊಂದರಲ್ಲಿ ವರನು ವಿಭಿನ್ನವಾಗಿರುವಂತಹ 9 ಗೇಟ್ ಗಳನ್ನು ದಾಟಿಕೊಂಡು ಬಂದು ವಧುವನ್ನು ಭೇಟಿಯಾಗಬೇಕು. ಇದರ ಬಳಿಕ ಬಾಲಕನಿಗೆ ವರದಕ್ಷಿಣೆ ರೂಪದಲ್ಲಿ 2000,000 ಬಹ್ತ್ ನಗದು ಮತ್ತು ಸುಮಾರು 1000 ಪೌಂಡ್ ಮೌಲ್ಯದ ಚಿನ್ನಾಭರಣಗಳನ್ನು ನೀಡಲಾಯಿತು.

ಆದರೆ ಮದುವೆ ಕಾನೂನು ಬದ್ಧವಾಗಿಲ್ಲ
ತುಂಬಾ ಅದ್ಧೂರಿಯಾಗಿ ಅವಳಿಗಳ ಮದುವೆ ನಡೆದಿದ್ದರೂ ಇದು ಯಾವುದೇ ರೀತಿಯ ಕಾನೂನು ಮಾನ್ಯತೆ ಪಡೆದಿಲ್ಲವೆಂದು ಹೇಳಲಾಗಿದೆ. ವರದಿಗಳ ಪ್ರಕಾರ ಕೆಲವು ವರ್ಷಗಳ ಬಳಿಕ ಇವರಿಬ್ಬರು ಹದಿಹರೆಯಕ್ಕೆ ಬಂದ ಬಳಿಕ ತಮ್ಮದೇ ಆದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಇಂತಹ ನಂಬಿಕೆ ಬಗ್ಗೆ ನಿಮ್ಮ ಅನಿಸಿಕೆ ಏನು? ಇಂತಹ ಸಂಪ್ರದಾಯಗಳನ್ನು ಪಾಲಿಸಬೇಕೆಂದು ನಿಮಗೆ ಅನಿಸುತ್ತದೆಯಾ? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications