Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಇಂದು ಆಕಾಶದಲ್ಲಿ ತುಂಬಾ ಪ್ರಕಾಶಮಾನ ಹಾಗೂ ಅತೀ ದೊಡ್ಡ ಚಂದ್ರನನ್ನು ಕಾಣಬಹುದು!
ಇಂದು ಆಕಾಶದಲ್ಲಿ ತುಂಬಾ ಪ್ರಕಾಶಮಾನ ಹಾಗೂ ಅತೀ ದೊಡ್ಡ ಚಂದ್ರನನ್ನು ಕಾಣಬಹುದಾಗಿದೆ. ಇದನ್ನು ವರ್ಷದ ಅತೀ ದೊಡ್ಡ ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಇದನ್ನು ಫೆಬ್ರವರಿಯ ಸೂಪರ್ ಸ್ನೋ ಮೂನ್ ಎಂದು ಕರೆಯಲಾಗುತ್ತದೆ.
ಯಾಕೆಂದರೆ ಇದು ವರ್ಷದ ಅತೀ ಚಳಿಯ ಸಮಯದಲ್ಲಿ ನಮಗೆ ಗೋಚರಿಸಲಿದೆ. ಮಂಗಳವಾರ ತಡರಾತ್ರಿ 1 ಗಂಟೆ ವೇಳೆಗೆ ಈ ಸೂಪರ್ ಸ್ನೋ ಮೂನ್ ನ್ನು ನೋಡಬಹುದಾಗಿದೆ ಎಂದು ವರದಿಗಳು ಹೇಳಿವೆ. ವರ್ಷದ ಅತೀ ದೊಡ್ಡ ಮತ್ತು ಪ್ರಕಾಶಮಾನವಾದ ಸೂಪರ್ ಮೂನ್ ಬಗ್ಗೆ ನೀವು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ....

ಸೂಪರ್ ಮೂನ್ ಬಗ್ಗೆ
ಚಂದ್ರನು ತುಂಬಾ ಬೃಹತ್ ಆಕಾರದಲ್ಲಿ ಕಾಣಿಸಿಕೊಂಡಾಗ ಅದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಚಂದ್ರನು ಈ ಸಮಯದಲ್ಲಿ ತನ್ನ ಕಕ್ಷೆಯಲ್ಲಿ ಭೂಮಿಗೆ ತುಂಬಾ ಹತ್ತಿರವಾಗಿ ಇರುವನು. ಪ್ರತೀ ತಿಂಗಳಲ್ಲಿ ಒಂದು ಸಲ ಸೂಪರ್ ಮೂನ್ ಕಾಣಿಸಿಕೊಳ್ಳುವುದು. ಈ ಸಮಯದಲ್ಲಿ ಚಂದ್ರನು ಬೃಹತ್ ಆಕಾರ ಮತ್ತು ಪ್ರಕಾಶಮಾನವಾಗಿ ಕಾಣಿಸುವನು.

ಇದನ್ನು ಸೂಪರ್ ಸ್ನೋ ಮೂನ್ ಎಂದು ಕರೆಯಲಾಗುವುದು
ನಾಸಾದ ಪ್ರಕಾರ ಇದನ್ನು ಸೂಪರ್ ಸ್ನೋ ಮೂನ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇದು ಚಳಿಗಾಲದ ಎರಡನೇ ಹುಣ್ಣಿಮೆಯಾಗಿರುವುದು. ಅಮೆರಿಕಾದಲ್ಲಿನ ಬುಡಕಟ್ಟು ಜನಾಂಗದವರು ಇದಕ್ಕೆ ಈ ಹೆಸರನ್ನು ನೀಡಿರುವರು. ಇದರ ಹೊರತಾಗಿ ಇದು ಚಳಿಗಾಲದಲ್ಲಿ ಹಿಮಪಾತ ಆಗುವ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಕಾರಣದಿಂದಲೂ ಹೀಗೆ ಹೇಳುವರು.

ಜನರು ಸೂಪರ್ ಸ್ನೋ ಮೂನ್ ನ್ನು ಯಾವಾಗ ನೋಡಬಹುದು?
ಚಂದ್ರನು ಬೃಹತ್ ಆಗಿ ಕಾಣಿಸುವಂತಹ ಸಮಯವೆಂದರೆ ಅದು ಫೆ.19, ಪೂರ್ವಾಹ್ನ 10.54 ಕಾಣಿಸುವುದು. ಆದರೆ ದುರಾದೃಷ್ಟದಿಂದ ಅಮೆರಿಕಾದಲ್ಲಿ ಈ ಸಮಯದಲ್ಲಿ ಚಂದ್ರನು ಕಾಣಿಸಲು ಸಿಗದು.

ಮುಂದಿನ ಸೂಪರ್ ಮೂನ್ ಯಾವಾಗ?
ಮುಂದಿನ ಸೂಪರ್ ಮೂನ್ ಯಾವಾಗ ಎಂದು ಕಾತರದಿಂದ ಇರುವಂತಹ ವ್ಯಕ್ತಿಗಳಿಗೆ ನಾಸಾವು ಅದರ ದಿನಾಂಕವನ್ನು ನೀಡಿದೆ. ಮುಂದಿನ ಸೂಪರ್ ಮೂನ್ ಮಾರ್ಚ್ 20, 2019ರಲ್ಲಿ ನಡೆಯಲಿದೆ. ಆದರೆ ಫೆಬ್ರವರಿಯ ಸೂಪರ್ ಮೂನ್ ಈ ವರ್ಷದ ಅತೀ ದೊಡ್ಡ ಸೂಪರ್ ಮೂನ್ ಆಗಿದೆ ಎಂದು ಹೇಳಲಾಗುತ್ತದೆ.



Click it and Unblock the Notifications
