For Quick Alerts
ALLOW NOTIFICATIONS  
For Daily Alerts

ಈ ವರ್ಷ 2019ರಲ್ಲಿ ಈ ಮೂರು ರಾಶಿಯವರು ದುರಾದೃಷ್ಟದ ದಿನವನ್ನು ಎದುರಿಸಲಿದ್ದಾರಂತೆ!

|

ಅದೃಷ್ಟ ಎನ್ನುವುದು ಎಲ್ಲರಿಗೂ ಎಲ್ಲಾ ಸಮಯದಲ್ಲೂ ದೊರೆಯುವುದಿಲ್ಲ. ಅನಿರೀಕ್ಷಿತವಾಗಿ ದೊರೆಯುವ ಅದೃಷ್ಟಗಳು ನಮ್ಮ ಜೀವನದ ಪಥವನ್ನೇ ಬದಲಿಸಿಬಿಡುತ್ತವೆ. ದುರಾದೃಷ್ಟ ಎನ್ನುವುದು ಸಹ ಹಾಗೆಯೇ. ಅನಿರೀಕ್ಷಿತವಾಗಿ ಎದುರಾಗಿ, ನಾವು ಅಂದುಕೊಂಡಿರದ ರೀತಿಯಲ್ಲಿ ಬದಲಾವಣೆಗಳು ಉಂಟಾಗುವುದು. ಅದರಿಂದ ಸಾಕಷ್ಟು ನೋವು ಬೇಸರ ಎದುರಾಗಬಹುದು ಆದರೆ ಅನಿವಾರ್ಯ ಕಾರಣಗಳಿಗಾದರೂ ಅದನ್ನು ಸ್ವೀಕರಿಸಲೇ ಬೇಕು. ಅದರಿಂದ ಉಂಟಾಗುವ ಪರಿಣಾಮಗಳನ್ನು ಅನುಭವಿಸಬೇಕು. ಅದೃಷ್ಟ ಹಾಗೂ ದುರಾದೃಷ್ಟ ಎನ್ನುವುದು ಹಗಲು ರಾತ್ರಿ ಇದ್ದಂತೆ. ಒಂದಾದ ನಂತರ ಒಂದು ಎದುರಾಗಲೇ ಬೇಕು. ಅವು ಎದುರಾದ ಸಂದರ್ಭದಲ್ಲಿ ಸೂಕ್ತ ಚಿಂತನೆ ಹಾಗೂ ಯೋಜನೆಗಳನ್ನು ಕೈಗೊಳ್ಳುವುದರ ಮೂಲಕ ಜೀವನವನ್ನು ನಡೆಸಬೇಕಾಗುವುದು.

ಸಾಮಾನ್ಯವಾಗಿ ಅದೃಷ್ಟ ಒಲಿದಾಗ ನಾವು ಅಂದುಕೊಂಡಿದ್ದೆಲ್ಲಾ ನೆರವೇರಿತು ಎನ್ನುವ ಖಷಿಯಲ್ಲಿ ಇರುತ್ತೇವೆ. ಅಂತಹ ಸಂದರ್ಭದಲ್ಲಿ ನಮ್ಮ ಅಹಂ ಹಾಗೂ ಹೆಮ್ಮೆಯ ಭಾವನೆಗೆ ಒಳಗಾಗುತ್ತೇವೆ. ಆಗ ನಮ್ಮಿಂದ ಇತರರಿಗೆ ನೋವು ಅಥವಾ ಕಷ್ಟಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಅದೇ ದುರಾದೃಷ್ಟ ಎದುರಾದಾಗ ಮಾನಸಿಕವಾಗಿ ಸಾಕಷ್ಟು ನೋವನ್ನು ಹಾಗೂ ಹಿಂಸೆಯನ್ನು ಅನುಭವಿಸಬೇಕಾಗುವುದು. ಎಲ್ಲಾ ಕೆಲಸ ಕಾರ್ಯಗಳಲ್ಲೂ ಹಿನ್ನೆಡೆ ಉಂಟಾಗುವುದು. ಆಗ ಮನಸ್ಸು ಸಾಕಷ್ಟು ದಣಿಯುವುದು. ನಮ್ಮಲ್ಲಿರುವ ಅಹಂ ಕರಗುವುದು. ಅಸಹಾಯಕತೆ ಎನ್ನುವುದು ಜೀವನದಲ್ಲಿ ಸಾಕಷ್ಟು ಸತ್ಯದ ಪಾಠವನ್ನು ಕಲಿಸುವುದು.

ಕಷ್ಟದಲ್ಲಿ ಕಲಿತ ಪಾಠ ಹಾಗೂ ಸೋಲಿನಿಂದ ಅರಿತ ವಿಷಯಗಳು ಹೊಸ ಯೋಜನೆಯನ್ನು ಕೈಗೊಳ್ಳಲು ಸಹಾಯ ಮಾಡುವುದು. ಧರ್ಮದ ಹಾದಿಯಲ್ಲಿ ನಡೆಯಲು ಮುಂದಾಗುವರು. ಅದು ಅವರ ಜೀವನದ ಭವಿಷ್ಯದಲ್ಲಿ ಯಶಸ್ಸನ್ನು ಹೊಂದಲು ಮನಸ್ಸು ಸಿದ್ಧಗೊಳ್ಳುವುದು. ಜೀವನದಲ್ಲಿ ಕಷ್ಟ ಎದುರಾದಾಗ ಆತ್ಮ ವಿಶ್ವಾಸದಿಂದ ಹೇಗೆ ಎದುರಿಸಬೇಕು? ಯಾವ ರೀತಿಯ ಪರಿಹಾರ ಕ್ರಮ ಕೈಗೊಂಡರೆ ಸಮಸ್ಯೆಯಿಂದ ಪಾರಾಗಲು ಸಾಧ್ಯ ಎನ್ನುವುದನ್ನು ಕಲಿಯುತ್ತಾರೆ. ಜೊತೆಗೆ ತಮ್ಮಿಂದ ಇತರರಿಗೆ ತೊಂದರೆಯಾಗಬಾರದು ಎನ್ನುವುದನ್ನು ಕಲಿಯುವರು. ಅದರಂತೆಯೇ ನಡೆ ನುಡಿಯು ಇರುವುದರಿಂದ ನಿಧಾನವಾಗಿ ಸಮಾಜದಲ್ಲಿ ಪ್ರತಿಷ್ಠಿತ ಹಾಗೂ ಯಶಸ್ಸನ್ನು ಹೊಂದುವ ವ್ಯಕ್ತಿಯಾಗಿ ನಿಲ್ಲುವರು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬ್ರಹ್ಮಾಂಡದಲ್ಲಿ ನಡೆಯುವ ಬದಲಾವಣೆಗಳು ಹಾಗೂ ಗ್ರಹಗಳ ಚಲನ ವಲನದಿಂದ ಉಂಟಾಗುವ ಪ್ರಭಾವವು ವ್ಯಕ್ತಿಯ ಮೇಲೆ ಗಂಭೀರವಾದ ಪ್ರಭಾವ ಬೀರುತ್ತವೆ. ಅವು ಅನಿರೀಕ್ಷಿತ ರೂಪದಲ್ಲಿ ಇರುತ್ತವೆ. ಕೆಲವರಿಗೆ ಅನಿರೀಕ್ಷಿತವಾದ ಅದೃಷ್ಟ ಆಗಬಹುದು. ಇನ್ನೂ ಕೆಲವರಿಗೆ ಅನಿರೀಕ್ಷಿತವಾದ ದುರಾದೃಷ್ಟವಾಗಬಹುದು. ಪ್ರತಿಯೊಂದು ಫಲಗಳಿಗೂ ಸೂಕ್ತವಾದ ಮಾನದಂಡವನ್ನು ಪಡೆದುಕೊಳ್ಳುವನು. ಒಂದೇ ನಾಣ್ಯದ ಎರಡು ಮುಖದಂತಿರುವ ಅದೃಷ್ಟ ಹಾಗೂ ದುರಾದೃಷ್ಟವನ್ನು ಎದುರಿಸುವಾಗ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಪಾಠವನ್ನು ಕಲಿಯುವನು. ಜೊತೆಗೆ ಜೀವನದ ಮುಂದಿನ ಹೆಜ್ಜೆ ಇಡಲು ಅಣಿಯಾಗುವನು. 2019ರ ವರ್ಷದಲ್ಲಿ ಗ್ರಹಗಳ ಸಂಚಾರ ಅಥವಾ ಬದಲಾವಣೆಯಿಂದ ಕೆಲವು ರಾಶಿಚಕ್ರದವರು ಅತ್ಯಂತ ಅದೃಷ್ಟವನ್ನು ಹಾಗೂ ಇನ್ನೂ ಕೆಲವರು ಅತ್ಯಂತ ದುರಾದೃಷ್ಟವನ್ನು ಎದುರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದುರಾದೃಷ್ಟದ ಫಲವನ್ನು ಮೂರು ರಾಶಿಚಕ್ರದವರು ಹೆಚ್ಚು ಅನುಭವಿಸುವರು

ದುರಾದೃಷ್ಟದ ಫಲವನ್ನು ಮೂರು ರಾಶಿಚಕ್ರದವರು ಹೆಚ್ಚು ಅನುಭವಿಸುವರು

2019ರ ವರ್ಷದಲ್ಲಿ ದುರಾದೃಷ್ಟದ ಫಲವನ್ನು ಮೂರು ರಾಶಿಚಕ್ರದವರು ಹೆಚ್ಚು ಅನುಭವಿಸುವರು. ಇದಕ್ಕೆ ಕಾರಣ 2019ರಲ್ಲಿ ನಡೆಯುವ ಗ್ರಹಣಗಳು ಹಾಗೂ ಗ್ರಹಗಳ ಸಂಚಾರಗಳ ಬದಲಾವಣೆಗಳು ಎಂದು ಹೇಳಲಾಗುವುದು. ಗ್ರಹಣದ ಪ್ರಭಾವ ಮೂರು ರಾಶಿಯವರ ಮೇಲೆ ದುರಾದೃಷ್ಟಕರ ಪ್ರಭಾವ ಬೀರುತ್ತವೆ. ಹಾಗಾದರೆ ಆ ಮೂರು ರಾಶಿಚಕ್ರಗಳು ಯಾವವು? ಅವರ ಜೀವನದಲ್ಲಿ ಅಥವಾ ಭವಿಷ್ಯದಲ್ಲಿ ಯಾವ ಬಗೆಯ ಬದಲಾವಣೆಯನ್ನು ಕಾಣುವರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಕ್ರದ ವಿವರಣೆಯನ್ನು ಪರಿಶೀಲಿಸಿ.

ಮಿಥುನ

ಮಿಥುನ

ಮಿಥುನ: 2019ರ ವರ್ಷದಲ್ಲಿ ಹೆಚ್ಚಾಗಿ ಅಪಾಯಗಳು, ಅನಾಹುತಗಳು ಮತ್ತು ಆವರ್ತಗಳು ಉಂಟಾಗುತ್ತವೆ. ಅವಳಿ ಎನ್ನುವ ಸಂಕೇತವನ್ನು ಹೊಂದಿದ ರಾಶಿಚಕ್ರ ಎಂದರೆ ಮಿಥುನ ರಾಶಿ. ಈ ರಾಶೀಯವರು ಸಾಕಷ್ಟು ಬುದ್ಧಿವಂತಿಕೆ ಹಾಗೂ ಸೌಂದರ್ಯವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು 2019ರಲ್ಲಿ ಸಾಕಷ್ಟು ಋಣಾತ್ಮಕ ಫಲವನ್ನು ಅನುಭವಿಸಲಿದ್ದಾರೆ. ಇದು ಅವರ ದ್ವಿಮುಖ ವ್ಯಕ್ತಿತ್ವದ ಕಾರಣದಿಂದಲೂ ಸಂಭವಿಸುವುದು ಎಂದು ಹೇಳಲಾಗುವುದು. ಕೆಲವು ಸಂದರ್ಭಗಳು ಹಾಗೂ ಸನ್ನಿವೇಶಗಳು ಇವರ ಜೀವನದಲ್ಲಿ ಅನೇಕ ಅನುಮಾನಗಳನ್ನು ಸೃಷ್ಟಿಸುವುದು. ಈ ವರ್ಷದ ಕೆಲವು ತಿಂಗಳುಗಳ ಕಾಲ ಸಮತೋಲನವನ್ನು ಹೊಂದಿರುತ್ತಾರೆ.

ಮಿಥುನ

ಮಿಥುನ

ಹೂಡಿಕೆಯ ವಿಷಯವಾಗಿ ವ್ಯವಹಾರಕ್ಕೆ ಮುಂದಾಗುವರು. ಅಂತಹ ಸಂದರ್ಭದಲ್ಲಿ ಸಾಕಷ್ಟು ಸ್ಪಷ್ಟತೆಯ ಕೊರತೆಯನ್ನು ಅನುಭವಿಸುವರು. ಇದರಿಂದ ಸಾಕಷ್ಟು ತಪ್ಪುಗಳನ್ನು ಮಾಡುವರು. ಇಲ್ಲವೇ ಅನಗತ್ಯ ಅಪಾಯಗಳನ್ನು ತೆಗೆದುಕೊಲ್ಳುವರು. ಅಭದ್ರತೆ ಎನ್ನುವುದು ಪರಸ್ಪರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವದ ಜೀವನದಲ್ಲಿ ಅನೇಕ ಜನರಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುವುದು. ಸಾಕಷ್ಟು ಸಮಯದಲ್ಲಿ ಸಿಲುಕಿಕೊಳ್ಳುವರು. ತಮ್ಮ ಪಾಲುದಾರರಿಗೆ ಅಥವಾ ಆಪ್ತರಿಗೆ ಸಾಕಷ್ಟು ಸಮಯವನ್ನು ನೀಡಲು ಕಷ್ಟವಾಗುವುದು. ಅವರ ಅಗತ್ಯತೆಗಳನ್ನು ಅರಿತುಕೊಳ್ಳಲು ಕಷ್ಟವಾಗುವುದು. ಇದರಿಂದಲೂ ಸಾಕಷ್ಟು ಕಿರಿಕಿರಿ ಹಾಗೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುವುದು.

ಕನ್ಯಾ

ಕನ್ಯಾ

ಕನ್ಯಾ: 2019ರ ವರ್ಷದಲ್ಲಿ ಭಯ, ಗೀಳು ಮತ್ತು ಒತ್ತಡಕ್ಕೆ ಒಳಗಾಗುವರು. ಕನ್ಯಾರಾಶಿಯವರು ಸಾಮಾನ್ಯವಾಗಿ ಸಾಕಷ್ಟು ಸಕಾರಾತ್ಮಕ ಗುಣಲಕ್ಷಣವನ್ನು ಹೊಂದಿರುತ್ತಾರೆ. ಜೊತೆಗೆ ಸೂಕ್ಷ್ಮ ಪ್ರವೃತ್ತಿಯವರು ಎಂದು ಸಹ ಪರಿಗಣಿಸಲಾಗುವುದು. ಆದರೆ ಇವರ ಕೆಲವು ಗುಣಗಳೇ ಅವರ ಶತ್ರುವಿನ ರೂಪದಲ್ಲಿ ಬದಲಾವಣೆ ಯನ್ನು ಪಡೆದುಕೊಳ್ಳುವುದು. ವೈಯಕ್ತಿಕ ನಿಯಂತ್ರಣ ಮತ್ತು ಸ್ವಾತಂತ್ರ್ಯವನ್ನು ಬಯಸುವುದರ ವಿಷಯದಲ್ಲಿ ಭಯವನ್ನು ಅನುಭವಿಸುವರು. ವಿಶೇಷವಾಗಿ ತಮ್ಮ ಪ್ರೀತಿ ಪಾತ್ರರರ ಮೇಲೆ ನಿಯಂತ್ರಣವನ್ನು ಹೇರಲು ಮುಂದಾಗುವರು. ಅವರ ಭಯದ ಕಾರಣವು ಈ ರೀತಿಯ ಕೆಲಸಗಳಿಗೆ ಪ್ರಚೋದನೆ ನೀಡುವುದು. ಈ ಗುಣವು ಇತರರಿಗೆ ಸರ್ವಾಧಿಕಾರಿಯ ಲಕ್ಷಣದಂತೆ ತೋರುವುದು. 2019ರ ವರ್ಷದ ಬಹುತೇಕ ಸಂದರ್ಭ ಹಾಗೂ ಸನ್ನಿವೇಶಗಳು ಇವರಿಗೆ ಉದ್ವಿಘ್ನತೆಯನ್ನು ಸೃಷ್ಟಿಸುವುದು. ಸನ್ನಿವೇಶವು ಸಾಕಷ್ಟು ಕಷ್ಟದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

ಕನ್ಯಾ

ಕನ್ಯಾ

ವರ್ಷದ ಆರಂಭದಲ್ಲಿ ಕನ್ಯಾ ರಾಶಿಯವರು ತಮ್ಮ ಪಾಲುದಾರರ ಬಗ್ಗೆ ಸ್ವಲ್ಪ ಅತೃಪ್ತ ಮನಸ್ಸನ್ನು ಹೊಂದುವರು. ಆದರೆ ಕೆಲವು ಸಂಗತಿಗಳ ಮೇಲೆ ನಿಯಂತ್ರಣವನ್ನು ಹೊಂದುವರು. ಇವರಿಗೆ ಹಣಕಾಸು ಮತ್ತು ಕೆಲಸದ ಮೇಲೆ ಉತ್ಪಾದಕ ರೀತಿಯ ವರ್ತನೆಗಳು ಇರುತ್ತವೆ. ವರ್ಷದ ಮಧ್ಯದಲ್ಲಿ ಭಾಗಶಃ ತಂಪಾದ ಹಾಗೂ ಭಾವನಾತ್ಮಕ ಚೇತರಿಕೆಯನ್ನು ಕಂಡುಕೊಳ್ಳುವರು.ಅವರು ಸಾಕಷ್ಟು ರಕ್ಷಣಾತ್ಮಕ ಭಾವನೆಯನ್ನು ಪಡೆದುಕೊಳ್ಳುವರು. ಆದರೆ ಅಹಂ ಅಥವಾ ಪುನರಾವರ್ತಿತ ನಡವಳಿಕೆಯೊಂದಿಗೆ ಸಂಬಂಧಗಳಲ್ಲಿ ಹಾನಿಕಾರಕ ಸನ್ನಿವೇಶ ಅಥವಾ ವಿಷಯವು ಉದ್ಭವಿಸಬಹುದು. ನಿಮ್ಮವರ ಬಗ್ಗೆ ಹಾಗೂ ಸಹಚರರ ಬಗ್ಗೆ ಅಪನಂಬಿಕೆ ಉಂಟಾಗುವುದು. ತೀವ್ರವಾದ ಮಾನಸಿಕ ಚಟುವಟಿಕೆಗಳಿಗೆ ಕೊಂಚ ವಿಶ್ರಾಂತಿಯನ್ನು ನೀಡುವುದು ಉತ್ತಮ.

ಕರ್ಕ

ಕರ್ಕ

ಕರ್ಕ: 2019ರ ವರ್ಷದಲ್ಲಿ ಇವರು ಖಿನ್ನತೆ ಮತ್ತು ಅಸಮರ್ಥತೆಯನ್ನು ಅನುಭವಿಸುವರು. ಈ ರಾಶಿಚಕ್ರದವರು 2019ರ ವರ್ಷದಲ್ಲಿ ಉತ್ತೇಜನ ಪಡೆದುಕೊಳ್ಳಲು ಸಾಕಷ್ಟು ಸಕಾರಾತ್ಮಕ ಗುಣಲಕ್ಷಣವನ್ನು ಹೊಂದಿದ್ದಾರೆ. ಆದರೆ ಅವರ ಅದೃಷ್ಟ ಹಾಗೂ ಗ್ರಹಗತಿಗಳ ಪ್ರಭಾವ ಅನುಕೂಲಕರವಾಗಿರದೆ ಇರುವುದರಿಂದ ಅಂದುಕೊಂಡ ಕೆಲಸಕಾರ್ಯಗಳು ನಿರೀಕ್ಷೆಗೆ ತಕ್ಕಂತೆ ನಡೆಯುವುದಿಲ್ಲ. ಭಾವನಾತ್ಮಕ ಸಂಬಂಧಗಳಲ್ಲಿ ದುರ್ಬಲತೆಯ ಭಾವನೆಯೊಂದಿಗೆ ಕರ್ಕ ರಾಶಿಯವರಿಗೆ ವರ್ಷದ ಆರಂಭವಾಗುತ್ತದೆ. ಶನಿ ಮತ್ತು ಪ್ಲುಟೊ ಗ್ರಹಗಳ ಪ್ರಭಾವದಿಂದ ಇವರು ತಮ್ಮ ಭಾವನೆಗಳಿಗೆ ಅನುಗುಣವಾದ ಸಂಬಂಭದವನ್ನು ಪಡೆದುಕೊಳ್ಳಲು ಪ್ರಯತ್ನಿಸುವರು. ವ್ಯವಹಾರದಲ್ಲಿ ಅವರ ದೃಷ್ಟಿಕೋನವು ಸ್ವಲ್ಪ ಉತ್ತಮವಾಗಿರುತ್ತದೆ. ಆದರೂ ತಮ್ಮ ಸ್ವಂತ ವೃತ್ತಿಪರ ಅಭಿವೃದ್ಧಿಯ ಬಗ್ಗೆ ಕೆಲವು ಅನುಮಾನಗಳನ್ನು ಹೊಂದಿರುತ್ತಾರೆ.

ಕರ್ಕ

ಕರ್ಕ

2019ರಲ್ಲಿ ಇವರ ಆರೋಗ್ಯವು ಉತ್ತಮವಾಗಿ ಇರುತ್ತದೆ. ಆದರೆ ಅನಗತ್ಯ ಚಿಂತನೆ ಹಾಗೂ ಒತ್ತಡವು ಮಾನಸಿಕವಾಗಿ ಒತ್ತಡವನ್ನು ಸೃಷ್ಟಿಸುವುದು. ಅಲ್ಲದೆ ಪ್ರತಿಯೊಂದು ಕೆಲಸಗಳಿಗೆ ಹಾಗೂ ಯೋಜನೆಯನ್ನು ಕೈಗೊಳ್ಳುವಾಗ ನಿಮಗೆ ಇತರರನ್ನು ಅವಲಂಬಿಸಬೇಕು ಎನ್ನುವ ಭಾವನೆ ಕಾಡುವುದು. ಹಾಗಾಗಿ ನಿಮಗೆ ಸಂಬಂಧಿಸಿದ ಅನೇಕ ನಿರ್ಧಾರಗಳನ್ನು ಇತರರು ಕೈಗೊಳ್ಳುವರು ಅಥವಾ ಸಲಹೆ ನೀಡುವರು. ಕೆಲಸದಲ್ಲಿ ಬದಲಾವಣೆ ಹಾಗೂ ಸುಧಾರಣೆಯನ್ನು ಕಂಡುಕೊಳ್ಳಲು ಮನಸ್ಸು ಬಯಸುವುದು. ಈ ಹಿನ್ನೆಲೆಯಲ್ಲಿ ಸಾಕಷ್ಟು ನೋವು ಮತ್ತು ಒತ್ತಡ ಕಾಡುವುದು. ಪರಿಸ್ಥಿತಿಗಳನ್ನು ಎದುರಿಸಲು ವಿಶ್ರಾಂತ ಮನಸ್ಸಿನ ಚಿಂತನೆ ಕೈಗೊಳ್ಳುವುದರ ಮೂಲಕ ಸಾಕಷ್ಟು ಸಮಸ್ಯೆಗಳ ನಿವಾರಣೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

English summary

These 3 zodiac signs with the most bad luck in 2019

We’ve all had a period when everything goes wrong and in those situations we almost always blame our “bad luck”. In the zodiac there are years when some signs are more likely to have bad luck. Although many of the situations can be reversed, some astral influences are inevitable. Know the three signs with the most bad luck in 2019.
X
Desktop Bottom Promotion