For Quick Alerts
ALLOW NOTIFICATIONS  
For Daily Alerts

ತಂದೆಯ ಪ್ರಾಣ ರಕ್ಷಣೆಗಾಗಿ ತೂಕ ಹೆಚ್ಚಿಸಲು ನಿರ್ಧರಿಸಿದ ಮಗ!

|

ಅಪ್ಪ-ಮಗ, ತಾಯಿ-ಮಗಳು ಈ ಸಂಬಂಧವು ಯಾವಾಗಲೂ ತುಂಬಾ ಅನ್ಯೋನ್ಯವಾದದ್ದು. ಕುಟುಂಬ ಸದಸ್ಯರ ನಡುವಿನ ಪ್ರೀತಿಯನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಅವರ ಸುಖದುಃಖದಲ್ಲಿ ಪ್ರತಿಯೊಬ್ಬರು ಭಾಗಿಯಾಗುವರು. ಏನೇ ಕಷ್ಟ ಬಂದರೂ ಜತೆಯಾಗಿ ಇರುವರು. ತಮ್ಮ ತಂದೆ ತಾಯಿಯು ಯಾವಾಗಲೂ ಆರೋಗ್ಯವಾಗಿರಬೇಕು ಎಂದು ಮಕ್ಕಳು ಬಯಸಿದರೆ, ಅದೇ ರೀತಿಯಾಗಿ ಮಕ್ಕಳು ತಮ್ಮ ತಂದೆಯ ಆರೋಗ್ಯವು ಚೆನ್ನಾಗಿ ಇರಲಿ ಎಂದು ಬಯಸುವರು.

ಈ ಘಟನೆಯನ್ನು ಓದಿದರೆ ಖಂಡಿತವಾಗಿಯೂ ನಿಮ್ಮ ಕಣ್ಣೀರು ಸುರಿಸಲಿದ್ದೀರಿ. ಅನಾರೋಗ್ಯಕ್ಕೆ ಒಳಗಾಗಿರುವ ತಂದೆಗೆ ಚಿಕಿತ್ಸೆಗಾಗಿ ಮತ್ತು ಜೀವ ಉಳಿಯಲು ಮೂಳೆ ಮಜ್ಜೆಯ ಅಗತ್ಯವಿತ್ತು ಮತ್ತು ಇದಕ್ಕಾಗಿ ಆತನ ಮಗ ಇದನ್ನು ನೀಡಲು ತನ್ನ ದೇಹದ ತೂಕವನ್ನೇ ಹೆಚ್ಚಿಸಿಕೊಂಡ!
ಚೀನಾದಲ್ಲಿ ಕ್ಸಿನ್ ಕ್ಸಿಯಾಂಗ್ ನಗರದಲ್ಲಿರುವ 11ರ ಹರೆಯದ ಬಾಲಕನೇ ತನ್ನ ತಂದೆಯ ಪ್ರಾಣ ಕಾಪಾಡುವ ಸಲುವಾಗಿ ತನ್ನ ದೇಹದ ತೂಕ ಹೆಚ್ಚಿಸಿಕೊಂಡಿದ್ದಾನೆ. ಆತ ತನ್ನ ತಂದೆಯ ರಕ್ಷಣೆಗಾಗಿ ಆದಷ್ಟು ತಿಂದಿದ್ದಾನೆ. ಲೂ ಝಿಕ್ಯುನ್ ಎನ್ನುವ ಬಾಲಕನ ತಂದೆ ಕೆಲವು ವರ್ಷಗಳ ಮೊದಲು ರಕ್ತದ ಕ್ಯಾನ್ಸರ್ ಕಾಣಿಸಿಕೊಂಡಿತ್ತು ಮತ್ತು ಇದರ ಬಳಿಕ ಅವರಿಗೆ ನಿರಂತರವಾಗಿ ಔಷಧಿ ನೀಡುತ್ತಾ ಬರಲಾಗುತ್ತಿದೆ. ಆದರೆ ಇತ್ತೀಚೆಗೆ ಸಮಯದಲ್ಲಿ ಅವರ ಆರೋಗ್ಯವು ತೀರ ಹದಗೆಟ್ಟಿತ್ತು ಮತ್ತು ಅಸ್ಥಿಮಜ್ಜೆಯ ಕಸಿ ನಡೆಸಬೇಕು ಎಂದು ವೈದ್ಯರು ಸೂಚಿಸಿದರು.

Fathers Life

ಈ ಕುಟುಂಬವು ಸಾಧ್ಯತೆಯ ಎಲ್ಲಾ ಪರೀಕ್ಷೆ ಮಾಡಿಸಿಕೊಂಡು ಯಾರದ್ದಾದರೂ ಮೂಳೆಮಜ್ಜೆ ಹೊಂದಾಣಿಕೆ ಆಗುತ್ತದೆಯಾ ಎಂದು ನೋಡಿದರು. ಆದರೆ ಕುಟುಂಬದಲ್ಲಿ ಹಿರಿಯ ಪುತ್ರನಾಗಿದ್ದ ಲೂ ಝಿಕ್ಯುನ್ ಅವರ ಮೂಳೆ ಮಜ್ಜೆ ಮಾತ್ರ ಹೊಂದಾಣಿಕೆ ಆಗಿದೆ ಮತ್ತು ಆತನಿಗೆ ಆಗ ಕೇವಲ 10 ವರ್ಷ ಮಾತ್ರ ಆಗಿತ್ತು.

ಆತನಿಗೆ ಕೇವಲ ಹತ್ತು ವರ್ಷವಾಗಿದ್ದರೂ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಆ ಬಾಲಕ ಶಸ್ತ್ರಚಿಕಿತ್ಸೆಗೆ ಒಳಗಾಗಲು ಧೈರ್ಯ ತೋರಿಸಿದ. ಆದರೆ ಒಂದು ಸಮಸ್ಯೆ ಎಂದರೆ ಬಾಲಕನ ದೇಹದ ತೂಕ ಕೇವಲ 30 ಕೆಜಿ ಮಾತ್ರ ಇತ್ತು ಮತ್ತು ಇನ್ನು 15 ಕೆಜಿ ದೇಹದ ತೂಕವು ಹೆಚ್ಚಾಗದೆ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದರು.

ಈ ವೇಳೆ ಬಾಲಕನು ತನ್ನ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದ ಮತ್ತು ಹೊಟ್ಟೆ ತುಂಬಾ ತಿನ್ನಲು ನಿರ್ಧಾರ ಮಾಡಿದ. ದಿನದಲ್ಲಿ ಐದು ಸಲ ಆತ ಊಟ ಮಾಡಲು ನಿರ್ಧರಿಸಿದ ಮತ್ತು ಹೆಚ್ಚಿನ ಆಹಾರದಲ್ಲಿ ಕೊಬ್ಬಿನ ಅಂಶವಿರುವ ಮಾಂಸ ಮತ್ತು ಅನ್ನ ಇತ್ತು. ಕುಟುಂಬವು ಆರ್ಥಿಕವಾಗಿ ತುಂಬಾ ಸದೃಢರಾಗಿರದೆ ಇದ್ದ ಕಾರಣದಿಂದಾಗಿ ಆಹಾರಕ್ಕಾಗಿ ಖರ್ಚು ಮಾಡಲು ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ತುಂಬಾ ಕಷ್ಟಪಡುತ್ತಿದ್ದರು.

ಬಾಲಕನ ತಾಯಿಯು ತಿಂಗಳಿಗೆ 2000 ಯುವಾನ್ ಮಾತ್ರ ಸಂಪಾದನೆ ಮಾಡುತ್ತಲಿದ್ದರು. ಆಕೆ ಒಂದು ಅಂಗಡಿಯಲ್ಲಿ ಕೆಲಸ ಮಾಡುತ್ತಲಿದ್ದರು ಮತ್ತು ತನ್ನ ಮಗನಿಗಾಗಿ ಮಾಂಸವನ್ನು ತನ್ನ ಅಂಗಡಿಯಿಂದಲೇ ಸ್ವಲ್ಪ ಕಡಿಮೆ ಬೆಲೆಗೆ ಖರೀದಿಸಿ ತರುತ್ತಿದ್ದರು. ತನ್ನ ತಂದೆಯ ಪ್ರಾಣ ಕಾಪಾಡಲು ತುಂಬಾ ಬದ್ಧತೆ ಪ್ರದರ್ಶಿಸುತ್ತಿದ್ದ ಬಾಲಕನನ್ನು ನೋಡಿದ ಶಾಲೆಯು ಹಣ ಸಂಗ್ರಹಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಿತು ಮತ್ತು ಕುಟುಂಬದ ಖರ್ಚುವೆಚ್ಚಕ್ಕಾಗಿ ನೆರವು ನೀಡಲು ದಾನಿಗಳನ್ನು ಹುಡುಕಿತು. ಆದರೆ ಈ ಬಾಲಕನು ತನ್ನ ಕುಟುಂಬ, ಶಾಲೆ ಮತ್ತು ಊರಿನ ಗಮನ ಸೆಳೆದಿರುವುದು ಮಾತ್ರವಲ್ಲದೆ, ಸಂಪೂರ್ಣ ವಿಶ್ವದ ಗಮನ ಸೆಳೆದಿದ್ದಾನೆ.

English summary

Story Of A Son Who Gained Weight To Save Father's Life

There is nothing great than loving your parents. Family love remains unconditional and this case is a perfect example of it. A father was diagnosed with a serious illness where only a bone marrow transplant could save his life. The man's son has been gaining weight since he wants to save his dad's life.
X
Desktop Bottom Promotion