For Quick Alerts
ALLOW NOTIFICATIONS  
For Daily Alerts

ಪ್ರಾಯೋಗಿಕ ಚಿಂತನೆಯಿಂದ ಕೂಡಿರುವ ಆರು ರಾಶಿಚಕ್ರಗಳು

|

ಕೆಲವರ ವರ್ತನೆ ಹಾಗೂ ಮಾತುಗಳು ಅತ್ಯಂತ ಹಿತಕರವಾಗಿರುತ್ತವೆ. ಅವರು ನಮ್ಮ ಜೀವನದಲ್ಲಿ ಸಾಕಷ್ಟು ಧನಾತ್ಮಕ ಅನುಭವವನ್ನು ತಂದುಕೊಡುತ್ತಾರೆ. ಹಾಗಂತ ಅವರು ಯಾವುದೇ ಮಾಂತ್ರಿಕ ಪ್ರಯೋಗ ಅಥವಾ ಬಾಹ್ಯ ವಸ್ತುಗಳ ಉಡುಗೊರೆ ಕೊಡುವುದರ ಮೂಲಕ ಮನ ಸೆಳೆಯುವುದಿಲ್ಲ. ಕೇವಲ ತಮ್ಮ ಉತ್ತಮ ಭಾವನೆ ಹಾಗೂ ವರ್ತನೆಯ ಮೂಲಕವೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಜೊತೆಗೆ ಕೇಂದ್ರೀಕೃತ ಮತ್ತು ಸಮತೋಲಿತ ಭಾವನೆಯನ್ನು ಹೊಂದುವುದರ ಮೂಲಕ ಸುತ್ತಲು ಇರುವ ವಸ್ತು ಹಾಗೂ ವ್ಯಕ್ತಿಗಳ ಮೇಲೆ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ.

Six down to earth zodiac signs

ಮನುಷ್ಯರಾದ ನಾವು ಇತರರ ಮೇಲೆ ಅವಲಂಭಿತರಾಗಿರುವುದು ಸಾಮಾನ್ಯ. ಹಾಗಾಗಿಯೇ ಮನೆಯ ಸದಸ್ಯರ ಮೇಲೆ ಹಾಗೂ ಸ್ನೇಹಿತರ ಮೇಲೆ ಹೆಚ್ಚು ಅವಲಂಬಿತರಾಗಿರುತ್ತೇವೆ. ನಮ್ಮ ಭಾವನೆಗಳಿಗೆ ಹಾಗೂ ಆಸಕ್ತಿಗಳಿಗೆ ಯಾರು ಹೆಚ್ಚು ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಾರೆ? ಯಾರು ನಮಗೆ ಹೆಚ್ಚು ಆರಾಮದಾಯಕ ಅನುಭವ ನೀಡಲು ಸಹಕರಿಸುತ್ತಾರೆ ಅಂತಹವರು ನಮಗೆ ಹೆಚ್ಚು ಪ್ರಿಯವಾದ ವ್ಯಕ್ತಿಗಳಾಗುತ್ತಾರೆ. ಜೊತೆಗೆ ನಮ್ಮ ಸುತ್ತಲು ಇರುವ ಅಂತಹ ಅದ್ಭುತ ಗುಣದ ವ್ಯಕ್ತಿಗಳು ನಮ್ಮ ಮನಸ್ಸು ಹಾಗೂ ವರ್ತನೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ. ಅದಕ್ಕೆ ಅವರ ನಕ್ಷತ್ರ ಹಾಗೂ ರಾಶಿ ಚಕ್ರಗಳೇ ಕಾರಣವಾಗಿರುತ್ತವೆ.

ಆರಾಮದಾಯಕ ಸ್ಥಿತಿಯನ್ನು ಕಲ್ಪಿಸಿಕೊಡಬಲ್ಲ ಆರು ರಾಶಿಚಕ್ರಗಳು

ಆರಾಮದಾಯಕ ಸ್ಥಿತಿಯನ್ನು ಕಲ್ಪಿಸಿಕೊಡಬಲ್ಲ ಆರು ರಾಶಿಚಕ್ರಗಳು

ವ್ಯಕ್ತಿ ತನ್ನಲ್ಲಿ ವಿಭಿನ್ನವಾದ ಗುಣಗಳನ್ನು, ಹವ್ಯಾಸಗಳನ್ನು, ವರ್ತನೆಗಳನ್ನು ಹಾಗೂ ಇತರರ ಮೇಲೆ ಪ್ರಭಾವ ಬೀರುವಷ್ಟು ಅದ್ಭುತ ಗುಣವನ್ನು ಹೊಂದಿದ್ದಾರೆ ಎಂದರೆ ಅದು ಅವರ ರಾಶಿ ಚಕ್ರದ ಪ್ರಭಾವ ಎಂದು ಪರಿಗಣಿಸಲಾಗುವುದು. ಅವರಲ್ಲಿರುವ ಅದ್ಭುತ ಗುಣಗಳು ಅವರ ಗ್ರಹಗತಿಗಳ ಪ್ರಭಾವ ಹೇಗಿದೆ? ಜೀವನದಲ್ಲಿ ಯಾವ ಬಗೆಯ ಅನುಭವಗಳನ್ನು ಹೊಂದಿದ್ದರು? ಅದರಿಂದ ಯಾವ ಬಗೆಯ ಪಾಠವನ್ನು ಕಲಿತಿದ್ದಾರೆ? ಎನ್ನುವುದು ಸಹ ಪ್ರಮುಖ ವಿಷಯವಾಗಿರುತ್ತದೆ. ಇವರು ಎಂದಿಗೂ ಅನಗತ್ಯ ವಿಷಯಗಳಿಗೆ ಚಿಂತನೆ ಹಾಗೂ ಅದರ ಕಾರ್ಯಗಳಿಗಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ತಮ್ಮ ತನ ಹಾಗೂ ಕೆಲಸವನ್ನು ತಲೆಯಲ್ಲಿ ಇರಿಸಿಕೊಂಡಿರುತ್ತಾರೆ. ಈ ರೀತಿಯ ಅತ್ಯುತ್ತಮ ಗುಣವನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಜೀವನದಲ್ಲಿ ಕಾಲ್ಪನಿಕ ಕನಸು ಅಥವಾ ಕನಸಿನ ಲೋಕದಲ್ಲಿ ಜೀವಿಸುವುದಿಲ್ಲ. ಅವರೇನೆ ಇದ್ದರೂ ವಾಸ್ತವಿಕ ಚಿಂತನೆ ಹಾಗೂ ಜೀವನದ ಬಗ್ಗೆ ಹೆಚ್ಚು ಒತ್ತು ನೀಡುತ್ತಾರೆ. ಇವರು ಜೀವನದಲ್ಲಿ ಬದಲಾವಣೆಯನ್ನು ತರಲು ಬಯಸುತ್ತಾರೆ. ಅದು ಅಧಿಕ ಸಮಯವನ್ನು ತೆಗೆದುಕೊಮಡರೂ ಸರಿ. ಆದರೂ ಬದಲಾವಣೆ ಹಾಗೂ ಹೊಸತನವನ್ನು ಪಡೆದುಕೊಳ್ಳಲು ಸಾಕಷ್ಟು ಶ್ರಮ ಮತ್ತು ಚಿಂತನೆಯನ್ನು ಹೊಂದಿರುತ್ತಾರೆ. ಇಂತಹ ಗುಣದ ವ್ಯಕ್ತಿಗಳು ಸದಾ ತಮ್ಮ ಸುತ್ತಲಿನ ವ್ಯಕ್ತಿಗಳ ಮೇಲೆ ಹೆಚ್ಚು ಪ್ರಭಾವ ಬೀರುವುದರ ಜೊತೆಗೆ ಅವರ ಜೀವನವನ್ನು ಸುಧಾರಿಸುತ್ತಾರೆ.

ಆರಾಮದಾಯಕ ಸ್ಥಿತಿಯನ್ನು ಕಲ್ಪಿಸಿಕೊಡಬಲ್ಲ ಆರು ರಾಶಿಚಕ್ರಗಳು

ಆರಾಮದಾಯಕ ಸ್ಥಿತಿಯನ್ನು ಕಲ್ಪಿಸಿಕೊಡಬಲ್ಲ ಆರು ರಾಶಿಚಕ್ರಗಳು

ನಮ್ಮ ಜೀವನದಲ್ಲಿ ಕೆಲವೊಮ್ಮೆ ನಾವು ನಿರೀಕ್ಷಿಸದ ವ್ಯಕ್ತಿಗಳಿಂದ ಸಹಾಯ ಹಾಗೂ ಸಹಕಾರವನ್ನು ಪಡೆದುಕೊಳ್ಳುತ್ತೇವೆ. ಕೆಲವೊಮ್ಮೆ ಅವರು ನಮ್ಮ ಜೀವನದ ಹೊಸ ತಿರುವಿಗೆ ಹಾಗೂ ಆದರ್ಶದ ಬದುಕಿಗೆ ಮಾದರಿಯಾಗುತ್ತಾರೆ. ಅವುಗಳಿಗೆ ಕಾರಣವೆಂದರೆ ಆ ವ್ಯಕ್ತಿಯ ರಾಶಿಚಕ್ರವಾಗಿರುತ್ತದೆ. ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ದ್ವಾದಶ ಅಥವಾ ರಾಶಿಚಕ್ರಗಳಲ್ಲಿ ಕೆಲವು ರಾಶಿಚಕ್ರವು ವಾಸ್ತವಿಕ ಚಿಂತನೆಯೊಂದಿಗೆ ಉತ್ತಮ ಗುಣಗಳಿಂದ ಕೂಡಿರುತ್ತದೆ. ಅಂತಹ ರಾಶಿಚಕ್ರಗಳು ಯಾವವು? ಆ ರಾಶಿಚಕ್ರದ ವ್ಯಕ್ತಿಗಳು ನಿಮಗೆ ಯಾವ ರೀತಿಯ ಧನಾತ್ಮಕ ಪ್ರಭಾವ ಬೀರುವರು? ಆ ರಾಶಿಚಕ್ರದ ವ್ಯಕ್ತಿ ನೀವಾಗಿದ್ದೀರೆ? ಎನ್ನುವ ಅನೇಕ ವಿಷಯಗಳನ್ನು ತಿಳಿಯಲು ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

Most Read: ನಂಬಿಕೆಯ ವಿಚಾರದಲ್ಲಿ ಸೋಲುತ್ತಿರುವ ಆರು ರಾಶಿಚಕ್ರದವರು!

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯು ಭೂಮಿ ಚಿಹ್ನೆಯನ್ನು ಒಳಗೊಂಡಿರುವ ರಾಶಿಚಕ್ರ. ಈ ರಾಶಿಚಕ್ರದ ವ್ಯಕ್ತಿಗಳು ಸಾಮಾನ್ಯವಾಗಿ ಮೃದು ಹಾಗೂ ಸಹನಾ ಶೀಲರಾಗಿರುತ್ತಾರೆ. ತಮ್ಮ ನಡೆ-ನುಡಿ, ಚಿಂತನೆ, ಜೀವನ ಹಾಗೂ ವರ್ತನೆಗಳ ಮೇಲೆ ಸಾಕಷ್ಟು ಹತೋಟಿಯನ್ನು ಹೊಂದಿರುತ್ತಾರೆ. ಜೊತೆಗೆ ತಾವು ಕೈಗೊಂಡ ಕೆಲಸದಲ್ಲಿ ಒಂದು ಪರಿಪೂರ್ಣತೆ ಸಾಧಿಸಲು ಬಯಸುತ್ತಾರೆ. ಜೊತೆಗೆ ಅದರಿಂದ ಯಾರಿಗೂ ತೊಂದರೆ ಉಂಟಾಗದಂತೆ ಕಾಯ್ದುಕೊಳ್ಳುವರು. ಅಲ್ಲದೆ ಅದರಿಂತ ಇತರರಿಗೆ ಅನುಕೂಲವಾಗುವಂತೆ ಕೆಲಸ ಕೈಗೊಳ್ಳುವರು. ಎಂತಹ ಸಂದರ್ಭದಲ್ಲಿ ಇರಲಿ ಶಾಂತವಾಗಿ ಕೆಲಸವನ್ನು ಮಾಡುವರು. ಯಾವುದೇ ಸಂಗತಿಗಳಿಗೆ ಅಥವಾ ಅನುಚಿತ ವ್ಯಕ್ತಿಯ ಕಾರಣಕ್ಕಾಗಿ ಭಯಭೀತರಾಗುವುದಿಲ್ಲ. ಕರುಣೆ ಹಾಗೂ ವಾತ್ಸಲ್ಯದ ವಿಷಯದಲ್ಲಿ ಬಹುಬೇಗ ಕರಗುವರು. ಕೆಲವು ಸಂದರ್ಭ ಹಾಗೂ ಸನ್ನಿವೇಶಗಳಿಗೆ ಬಹುಬೇಗ ಕರಗುವರು. ಪರಿಸ್ಥಿತಿಯನ್ನು ಅತುತ್ತಮವಾಗಿ ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಇವರು ಬಹುಬೇಗ ಇತರರಿಗೆ ಸಹಾಯ ಮಾಡುವರು. ಜೊತೆಗೆ ಇತರರ ಬದುಕಲ್ಲಿ ಬೆಳಕನ್ನು ನೀಡಲು ಸಹಾಯ ಮಾಡುವರು. ಹಾಗಾಗಿ ಈ ರಾಶಿ ಚಕ್ರದ ವ್ಯಕ್ತಿಗಳು ಇತರರಿಗೆ ಆದರ್ಶ ಹಾಗೂ ಸಹಾಯಕ ವ್ಯಕ್ತಿಗಳಾಗಿ ನಿಲ್ಲುತ್ತಾರೆ ಎಂದು ಹೇಳಲಾಗುವುದು.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯ ವ್ಯಕ್ತಿಗಳು ಅತ್ಯಂತ ಶ್ರಮ ಹಾಗೂ ಉತ್ತಮ ಗುರಿಯನ್ನು ಹೊಂದಿರುವ ವ್ಯಕ್ತಿಗಳು ಎಂದು ಪರಿಗಣಿಸಲಾಗುವುದು. ಕುಟುಂಬಗಳಿಗೆ ಹೆಚ್ಚಿನ ಆದ್ಯತೆ ನೀಡುವ ಇವರು ಜೀವನದಲ್ಲಿ ಹೆಚ್ಚು ಸಂತೋಷ ಹಾಗೂ ಹೊಸತನವನ್ನು ಪಡೆಯಲು ಬಯಸುವ ವ್ಯಕ್ತಿಗಳು. ಹಾಗಂತ ತಮ್ಮ ಆಸೆಯ ಪೂರೈಕೆಗಾಗಿ ಇತರರನ್ನು ಕಡೆಗಣಿಸುವುದಿಲ್ಲ. ಬದಲಿಗೆ ಇತರರಿಗೆ ಅನಾನುಕೂಲ ಉಂಟಾಗದಂತೆ ನಡೆದುಕೊಳ್ಳುವರು. ಇತರರಿಗೆ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ ನಿಲ್ಲುತ್ತಾರೆ. ಎಂತಹ ಸಂದರ್ಭದಲ್ಲೂ ಇವರು ಇತರರನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದಿಲ್ಲ. ಜೊತೆಗೆ ಸುಳ್ಳು ಮೋಸ ಮಾಡುವುದರ ಮೂಲಕ ಯಾವುದೇ ಕೆಲಸವನ್ನು ಮುಕ್ತಾಯ ಗೊಳಿಸುವುದಿಲ್ಲ. ಇತರರಿಗೆ ಸಹಾಯ ಮಾಡಲು ನಿಂತರ ಸಾಕಷ್ಟು ಸಹಕಾರ ಹಾಗೂ ಸಹಾಯ ಮಾಡುವುದರ ಮೂಲಕ ಅವರ ಜೀವನದಲ್ಲಿ ಬೆಳಕನ್ನು ಚಲ್ಲುತ್ತಾರೆ. ಜೊತೆಗೆ ಇತರರಿಗೆ ಬೇಕಾದ ವ್ಯಕ್ತಿಯಾಗಿ ನಿಲ್ಲುವರು. ಜೀವನದಲ್ಲಿ ಏನು ಮಾಡಬೇಕು ಎನ್ನುವ ವಿಷಯದಲ್ಲಿ ಸಾಕಷ್ಟು ಯೋಜನೆ ಹಾಗೂ ಯೋಚನೆ ಹೊಂದಿರುವುದರಿಂದ ಕಾರ್ಯಗಳನ್ನು ಸರಿಯಾಗಿ ಮಾಡುವರು. ಕೆಲವೊಮ್ಮೆ ಇವರು ವಿನೋದ ಹಾಗೂ ವಿಚಿತ್ರ ರೀತಿಯ ವರ್ತನೆ ತೋರಬಹುದು. ಆದರೆ ಯಾವುದೇ ರೀತಿಯಲ್ಲೂ ಇತರರಿಗೆ ಹಿಂಸೆ ನೀಡುವ ಮನಸ್ಸನ್ನು ಹೊಂದಿರುವುದಿಲ್ಲ.

ಸಿಂಹ ರಾಶಿ

ಸಿಂಹ ರಾಶಿ

ನಾಯಕತ್ವ ಗುಣವನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವ ರಾಶಿಚಕ್ರ ಎಂದು ಹೇಳಲಾಗುವುದು. ಇವರು ಪ್ರತಿಯೊಂದು ಸಂಗತಿಯಲ್ಲೂ ತಮ್ಮದೇ ಆದ ರೀತಿ ನೀತಿಯನ್ನು ಹೊಂದಿದ್ದಾರೆ. ಇವರ ಕಲ್ಪನೆ ಹಾಗೂ ಯೋಜನೆಗೆ ವಿರುದ್ಧವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ನೈತಿಕತೆಗೆ ವಿರುದ್ಧವಾದ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಜನರ ನಡುವೆ ಆಕರ್ಷಕ ವ್ಯಕ್ತಿಯಾಗಿ ನಿಲ್ಲಲು ಬಯಸುವ ಇವರು ಇತರರಿಗೆ ಸಾಕಷ್ಟು ಸಹಕಾರ ಹಾಗೂ ಸಹಾಯ ಮಾಡಲು ಮುಂದೆ ನಿಲ್ಲುತ್ತಾರೆ. ನಿಷ್ಠಾವಂತ ವ್ಯಕ್ತಿಗಳಾದ ಇವರು ಇತರರಿಗೆ ಹೆಚ್ಚು ನಿಷ್ಠೆಯಿಂದ ಇರಲು ಬಯಸುತ್ತಾರೆ. ನಾಯಕ ಗುಣವನ್ನು ಹೊಂದಿರುವ ಇವರು ಯಾವುದೇ ಸಂದರ್ಭದಲ್ಲಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯವನ್ನು ತೋರುವುದಿಲ್ಲ. ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಕೈಗೊಳ್ಳುವರು. ತಮ್ಮ ಕೆಲಸ ಕಾರ್ಯಗಳಿಂದ ಇತರರಿಗೆ ಒಳ್ಳೆಯದಾಗುವಂತೆ ಮಾಡುವರು. ಒಂದು ಗುಂಪು ಹಾಗೂ ಸಮೂಹದಲ್ಲಿ ಇರಲು ಬಯಸುವ ಇವರು ಇತರರಿಗೆ ಮಾರ್ಗದರ್ಶಕರು ಹಾಗೂ ನಿಷ್ಠಾವಂತರಾಗಿರುತ್ತಾರೆ. ಇವರಿಂದ ಸಾಕಷ್ಟು ಜನರು ಪ್ರಯೋಜನವನ್ನು ಪಡೆದುಕೊಳ್ಳುವರು. ಜೊತೆಗೆ ಮಾರ್ಗದರ್ಶಕ ವ್ಯಕ್ತಿಯಾಗಿ ನಿಲ್ಲುವರು.

Most Read: 2019ರಲ್ಲಿ ಜೀವನದಲ್ಲಿ ಹಲವಾರು ಬದಲಾವಣೆಗಳು ಕಾಣಲಿರುವ 5 ರಾಶಿಚಕ್ರದವರು

ಕನ್ಯಾ ರಾಶಿ

ಕನ್ಯಾ ರಾಶಿ

ಈ ರಾಶೀಯ ವ್ಯಕ್ತಿಗಳು ಅತ್ಯಂತ ಸರಳ ಹಾಗೂ ಮೃದು ಸ್ವಭಾವದ ವ್ಯಕ್ತಿಗಳು ಸದಾ ವಿಶ್ಲೇಷಣೆ ಹಾಗೂ ತರ್ಕವನ್ನು ಮಾಡುವ ವ್ಯಕ್ತಿಗಳು ಸಹ ಆಗಿರುತ್ತಾರೆ. ಆದರೆ ಸತ್ಯದ ವರ್ತನೆ ಹಾಗೂ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವರು. ಸುಳ್ಳು ಹಾಗೂ ಮೋಸದ ಸಂಗತಿಗಳಿಗೆ ಯಾವುದೇ ರೀತಿಯಲ್ಲೂ ಬೆಲೆಯನ್ನು ನೀಡುವುದಿಲ್ಲ. ಇವರು ತಾವು ಹೇಗಿರಬೇಕು ಎನ್ನುವುದರ ಬಗ್ಗೆ ತಮ್ಮದೇ ಆದ ನಿಲುವು ಹಾಗೂ ಚಿಂತನೆಯನ್ನು ಹೊಂದಿದ್ದಾರೆ. ಅದನ್ನು ಯಾವ ಕಾರಣಕ್ಕೂ ಬದಲಿಸಿಕೊಳ್ಳರು. ಅದು ಅವರ ವಿಶೇಷತೆಯನ್ನು ಸೂಚಿಸುವುದು. ಎಂತಹ ಸಂದರ್ಭ ಹಾಗೂ ಪರಿಸ್ಥಿತಿ ಎದುರಾದರೂ ಸಹ ಅದನ್ನು ಬಹಳ ಸುಲಭ ಹಾಗೂ ಸಂತೋಷದಿಂದ ನಿರ್ವಹಿಸುತ್ತಾರೆ. ಕೊಂಚ ಚಿಂತೆ ಹಾಗೂ ಭಯಕ್ಕೆ ಒಳಗಾದರೂ ಅದನ್ನು ನಿರ್ವಹಿಸುವುದು ಹೇಗೆ ಎನ್ನುವ ಜಾಣ್ಮೆ ಹೊಂದಿರುತ್ತಾರೆ. ವಿಶ್ವಾಸಾರ್ಹ ವ್ಯಕ್ತಿಗಳಾದ ಇವರು ತಮ್ಮವರಿಗೆ ಹಾಗೂ ತಮ್ಮನ್ನು ನಂಬಿ ಬಂದವರಿಗೆ ಸಾಕಷ್ಟು ಸಹಕಾರ ಹಾಗೂ ಆಸರೆಯನ್ನು ನೀಡುವರು. ಸ್ವಾರ್ಥದ ಕಾರಣಕ್ಕೆ ಇತರರನ್ನು ಬಳಸಿಕೊಳ್ಳುವುದಿಲ್ಲ. ಬದಲಿಗೆ ಇತರರಿಗೆ ಸಹಾಯ ಹಾಗೂ ಅವರ ಜೀವನದಲ್ಲಿ ಆಸೆ ಆಕಾಂಕ್ಷೆಯನ್ನು ಬೆಳೆಸಲು ಮುಂದಾಗುವರು. ಸಹಾಯ ಬಯಸಿದವರಿಗೆ ಎಂತಹ ಸ್ಥಿತಿಯಲ್ಲಿ ಇದ್ದರೂ ಸಹಕಾರ ನೀಡಲು ಮುಂದಾಗುವರು. ಅವರು ಬಯಸಿದನ್ನು ಸಹ ನೀಡುವರು. ಇವರ ಮೃದು ಹಾಗೂ ಸಹಕಾರದ ವರ್ತನೆಯು ಇವರನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಪ್ರತಿಬಿಂಬಿಸುವುದು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯು ಸದಾ ಸಮಾನತೆ ಹಾಗೂ ಸತ್ಯವನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ ಈ ರಾಶಿಯ ಅಡಿಯಲ್ಲಿ ಜನಿಸಿದ ವ್ಯಕ್ತಿಗಳಲ್ಲೂ ಈ ಗುಣಗಳು ಇರುತ್ತವೆ ಎಮದು ಹೇಳಲಾಗುವುದು. ಇತರರಿಗಿಂತ ವಿಭಿನ್ನ ಚಿಂತನೆ ಹಾಗೂ ಆಕರ್ಷಣೆಯನ್ನು ಪಡೆದುಕೊಳ್ಳುವರು. ವಿಶ್ವಾಸಾರ್ಹ ವ್ಯಕ್ತಿಗಳಾದ ಇವರು ಪ್ರತಿಯೊಂದು ವಿಷಯದಲ್ಲೂ ಹೆಚ್ಚು ನಿಷ್ಠೆ ಹಾಗೂ ನ್ಯಾಯಧೀಶ ವ್ಯಕ್ತಿಯಾಗಿರುತ್ತಾರೆ. ಜೀವನದ ಪ್ರತಿಯೊಂದು ಸಂಗತಿಗಳಿಗೂ ನ್ಯಾಯ-ನೀತಿಯನ್ನು ಕಾಣಲು ಬಯಸುವರು. ತಮ್ಮ ಸುತ್ತಲಲ್ಲಿ ಇರುವ ವ್ಯಕ್ತಿಗಳಿಗೂ ಇದೇ ನಿಯಮ ಅನ್ವಯವಾಗುವಂತೆ ಮಾಡುವರು. ಇವರ ಈ ಸಮಾನತೆಯ ಗುಣವೇ ಹೆಚ್ಚು ಆಕರ್ಷಣೆಗೆ ಕಾರಣವಾಗುವುದು. ಈ ರಾಶಿಯ ವ್ಯಕ್ತಿಗಳು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಆಕ್ರಮಣ ಶೀಲ ಗುಣವನ್ನು ತೋರುವುದಿಲ್ಲ. ನ್ಯಾಯದ ಪರವಾಗಿ ನಿಲ್ಲುವ ಇವರು ನಾಟಕದ ಪ್ರವೃತ್ತಿ ಹಾಗೂ ನಾಟಕವನ್ನು ಸಹ ದೂಷಿಸುವರು. ನಾಟಕೀಯ ವರ್ತನೆ ತೋರುವವರಿಗೆ ಯಾವುದೇ ಬೆಲೆಯನ್ನು ನೀಡರು. ವ್ಯಕ್ತಿ, ವಸ್ತು, ವಿಷಯ ಏನೇ ಆಗಿದ್ದರೂ ಎಲ್ಲದರಲ್ಲೂ ನ್ಯಾಯ ಹಾಗೂ ನಿಷ್ಠೆಯನ್ನು ಕಾಣಲು ಬಯಸುವರು. ಜೊತೆಗೆ ತನ್ನನ್ನು ನಂಬಿಸವರಿಗೆ ಹಾಗೂ ತನ್ನವರ ಸಂತೋಷಕ್ಕೆ ಸಾಕಷ್ಟು ಶ್ರಮವನ್ನು ಕೈಗೊಳ್ಳುವರು. ಇತರರಿಗೆ ಸಂತೋಷ ಕಲ್ಪಿಸುವುದು ಹಾಗೂ ನ್ಯಾಯ ಕೊಡಿಸುವುದರಲ್ಲಿಯೇ ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳುವರು.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯ ವ್ಯಕ್ತಿಗಳು ಅತ್ಯಂತ ಮೃದು ಹಾಗೂ ಸಂವೇದನಾ ಶೀಲರು ಎಂದು ಪರಿಗಣಿಸಲಾಗುವುದು. ಇವರು ತಮ್ಮಂತೆಯೇ ಇತರರು ಎಂದು ಭಾವಿಸುತ್ತಾರೆ. ಇತರರಿಗೆ ಒಳ್ಳೆಯದಾಗಲು ಹಾಗೂ ಯಶಸ್ಸು ದೊರೆಯಲು ಸಾಕಷ್ಟು ಶ್ರಮ ಹಾಗೂ ಪ್ರಮುಖ ಒತ್ತನ್ನು ನೀಡುವರು. ಇತರರು ಯಶಸ್ವಿಯಾಗಲು ಉತ್ತೇಜನ ನೀಡುವರು. ಸುರಕ್ಷಿತ ಭಾವನೆಯನ್ನು ತಳೆಯುವ ಈ ವ್ಯಕ್ತಿಗಳು ತಮ್ಮವರಿಗೆ ಹಾಗೂ ತಮ್ಮನ್ನು ನಂಬಿದವರಿಗೆ ಸಾಕಷ್ಟು ರಕ್ಷಣೆಯನ್ನು ಒದಗಿಸುವುದರ ಮೂಲಕ ಭರವಸೆಯನ್ನು ಕಲ್ಪಿಸಿಕೊಡುವರು. ಜಂಭ ಹಾಗೂ ಅಹಂಕಾರದ ಗುಣಗಳಿಂದ ದೂರ ಉಳಿದ ವ್ಯಕ್ತಿಗಳು ಎಂದು ಹೇಳಲಾಗುವುದು. ತಾವು ಮೇಲೆ ಸಾಗುವ ಉದ್ದೇಶದಿಂದ ಇತರರನ್ನು ತಳ್ಳುವುದು ಅಥವಾ ಅವರನ್ನು ಮೆಟ್ಟಿ ಮೇಲೆ ಬರಲು ಬಯಸುವುದಿಲ್ಲ. ಅಗತ್ಯವಿದ್ದವರಿಗೆ ಸಹಾಯ ಸಹಾಕಾರ ನೀಡುವುದರ ಮೂಲಕ ಅವರ ಸಂತೋಷ ಹಾಗೂ ಭರವಸೆಗೆ ಕಾರಣ ವಾಗುವರು. ಜೀವನದಲ್ಲಿ ಸಂತೋಷ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳಲು ಇತರರಿಗೆ ಸಹಾಯ ಮಾಡುವರು. ಶ್ರಮ ಜೀವಿಗಳಾದ ಇವರು ತಮ್ಮವರಿಗಾಗಿಯೂ ಸಾಕಷ್ಟು ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಬಯಸುತ್ತಾರೆ.

English summary

Six down to earth zodiac signs

The people in your life who are grounded are probably some of the healthiest people you know. And when you’re one of those down-to-earth zodiac signs, you’re present in your body and you aren’t swayed by superficial things. Not even a less-than-stellar horoscope can sway you, because you’re able to feel centered and balanced, no matter what’s going on around you.Astrology aside, we can depend on our friends and family members who are grounded as they tend to be there when we need them. They don’t say things they don’t mean just to get a reaction, nor do they make promises that they can’t keep.
X
Desktop Bottom Promotion