For Quick Alerts
ALLOW NOTIFICATIONS  
For Daily Alerts

ನಿಮ್ಮ ಜೀವನದ ಹಲವಾರು ಸಮಸ್ಯೆಗಳಿಗೆ ಇಲ್ಲಿವೆ ಸುಲಭ ಪರಿಹಾರಗಳು

|

ಜೀವನ ಎಂಬುದು ನಮ್ಮ ಮುಖ್ಯ ಪಾಠ ಶಾಲೆ . ಅದು ಕಷ್ಟ , ಸುಖ , ನೋವು , ನಲಿವು ,ದುಃಖ ಎಲ್ಲವೂ ಅಡಗಿರುವ ಹೂರಣ . ಹಾಗೆ ನೋಡಿದರೆ ಸುಖ ಸಂತೋಷಕ್ಕಿಂತ ನೋವು , ದುಃಖ , ಕಷ್ಟಗಳೇ ಜಾಸ್ತಿ . ಒಂದು ಕಷ್ಟದಿಂದ ಪಾರಾದೆವು ಎನ್ನುತ್ತಿದ್ದಾಗಲೇ ಮತ್ತೊಂದು ಅದರ ಬೆನ್ನ ಹಿಂದೆಯೇ ಶುರುವಾಗಿರುತ್ತದೆ . ಡಾರ್ವಿನ್ ಥಿಯರಿ ಯ ಪ್ರಕಾರ " ಸರ್ವೀವಲ್ ಒಫ್ ದಿ ಫಿಟ್ಟೆಸ್ಟ್ " ತತ್ವದಂತೆ ಎಲ್ಲವನ್ನು ಮೆಟ್ಟಿ ನಿಂತು ಯಾರು " ಈಸಬೇಕು ಇದ್ದು ಜಯಿಸಬೇಕು " ಎನ್ನುವ ಮಾತಿನಂತೆ ಜೀವನ ನಡೆಸುತ್ತಾರೋ ಅವರು ಮಾತ್ರ ಈ ಪ್ರಪಂಚದಲ್ಲಿ ಬದುಕಬಲ್ಲರು.

ಕಷ್ಟಗಳು ಮನುಷ್ಯನಿಗೆ ಅಲ್ಲದೆ ಮರಗಳಿಗೆ ಬರದು ಎಂಬ ಮಾತಿದೆ . ಅದರಂತೆ ಮನುಷ್ಯ ಯಾವ ಕಷ್ಟ ಬಂದರೂ ಕುಗ್ಗಬಾರದು. ಇದು ಕೇವಲ ದೇವರು ನಮಗೆಂದೇ ನೀಡಿರುವ ಪರೀಕ್ಷೆ ಎಂದು ತಿಳಿದು ಅದರಲ್ಲಿ ಆದಷ್ಟು ಜಯಶಾಲಿಯಾಗುವುದರ ಬಗ್ಗೆ ಮಾತ್ರ ಗಮನ ಹರಿಸಬೇಕು . ಕೆಲವರಿಗೆ ಕಷ್ಟಗಳು ಸಣ್ಣದಾಗಿ ಬಂದು ನಂತರ ದೊಡ್ಡದಾಗುತ್ತವೆ. ಇನ್ನೂ ಕೆಲವರಿಗೆ ಬರುವ ಕಷ್ಟಗಳು ಆಕಾಶವೇ ತಲೆಯ ಮೇಲೆ ಬಿದ್ದಂತೆ ಭಾಸವಾಗುತ್ತವೆ.

ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಬಗೆಹರಿಯದ ಸಮಸ್ಯೆಗಳು ಎಂದು ತಿಳಿದು ನಮಗೆ ನಾವೇ ಸಮಾಧಾನದ ಮಾತುಗಳನ್ನಾಡಿಕೊಂಡು ಸುಮ್ಮನಾಗಿಬಿಡುತ್ತೇವೆ . ಆದರೆ ನೆನಪಿರಲಿ , ಯಾವುದೂ ಶಾಶ್ವತವಲ್ಲ. ಬರುವ ಕಷ್ಟಗಳು ಮಂಜಿನಂತೆ ಕರಗುತ್ತವೆ ಎಂದು ನಂಬಿಕೆ ಇಟ್ಟುಕೊಂಡು ಮುನ್ನಡೆದರೆ , ಒಂದಲ್ಲ ಒಂದು ರೀತಿಯಲ್ಲಿ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ.ನಿಮ್ಮ ಜೀವನದಲ್ಲಿ ಎದುರಾಗುವ ಕೆಲವೊಂದು ಪ್ರತಿನಿತ್ಯದ ಸಮಸ್ಯೆಗಳನ್ನು ಮತ್ತು ಅದಕ್ಕಿರುವ ಪರಿಹಾರಗಳನ್ನು ನಾವು ಇಲ್ಲಿ ಚರ್ಚೆ ಮಾಡುತ್ತಿದ್ದೇವೆ . ದಯವಿಟ್ಟು ಗಮನ ಹರಿಸಿ.

ನಿಮ್ಮ ಕೆಲಸಕ್ಕೆ ಸಂಬಂಧಿತ

ನಿಮ್ಮ ಕೆಲಸಕ್ಕೆ ಸಂಬಂಧಿತ

ನೀವು ಯಾವುದಾದರೂ ಕೆಲಸವನ್ನು ಮಾಡಬೇಕೆಂದು ಅತೀ ಉತ್ಸಾಹದಿಂದ ಶುಭ ಗಳಿಗೆಯಲ್ಲಿ ಬಹಳ ಆಸೆ ಇಟ್ಟುಕೊಂಡು ಕಷ್ಟ ಪಟ್ಟು ಶುರುಮಾಡಿರುತ್ತೀರಿ ಎಂದುಕೊಳ್ಳೋಣ . ನಂತರ ಅದಕ್ಕೆ ಒಂದರ ಮೇಲೊಂದು ತೊಡಕುಗಳು ಉಂಟಾಗಿ ಆಗುವ ಕೆಲಸ ಪೂರ್ತಿಯಾಗದೆ ನಿಂತಲ್ಲಿಯೇ ನಿಂತಿರುತ್ತದೆ ಎಂದಾದರೆ , ನೀವು ಈ ರೀತಿಯ ಪರಿಹಾರ ವನ್ನು ಒಮ್ಮೆ ಪ್ರಯತ್ನಿಸಬಹುದು . ಪ್ರತಿ ಬುಧವಾರದ ದಿನ ಒಂದು ಬಟ್ಟಲು ಬಾಸುಮತಿ ಅಕ್ಕಿಯನ್ನು ಯಾರಾದರೂ ಬಡವರಿಗೆ ದಾನ ಮಾಡಬೇಕು . ಇದರಿಂದ ನಿಮ್ಮ ಕೆಲಸ ಪೂರ್ತಿಗೊಳ್ಳಲಿದೆ .

ಹಣಕಾಸಿನ ತೊಂದರೆ

ಹಣಕಾಸಿನ ತೊಂದರೆ

ಎಷ್ಟೇ ದುಡಿದರೂ ದುಡ್ಡೇ ನಿಲ್ಲುತ್ತಿಲ್ಲ , ಲಾಭಕ್ಕಿಂತ ಈ ನಡುವೆ ಖರ್ಚೆ ಜಾಸ್ತಿ ಎನ್ನುವವರು ಈ ಪರಿಹಾರವನ್ನು ಮಾಡಬಹುದು . ಸ್ವಲ್ಪ ಕೆಂಪು ಚಂದನ , ಕೆಲವು ಕೆಂಪು ಗುಲಾಬಿ ದಳಗಳು , ರೋಲಿ ಸ್ಟ್ರಿಂಗ್ ಮತ್ತು 58 ರೂಪಾಯಿಗಳನ್ನು ಒಂದು ಹಾಸಿದ ಕೆಂಪು ಬಟ್ಟೆಯ ಮೇಲೆ ಹಾಕಿ ನಂತರ ಎಲ್ಲವನ್ನೂ ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಿ ನಿಮ್ಮ ಆಫೀಸ್ ನ ಲಾಕರ್ ನಲ್ಲಿಡಿ . ಆಗ ನೋಡಿ ಇನ್ನು ಮುಂದೆ ನಿಮ್ಮ ಬಳಿಗೆ ಹಣ ಹೇಗೆ ಹರಿದು ಬರುತ್ತದೆ ಎಂದು.

Most Read: ಕೈಯಲ್ಲಿ ಹೆಚ್ಚು ಹಣ ಉಳಿತಾಯಕ್ಕೆ 7 ಸ್ಮಾರ್ಟ್ ಟಿಪ್ಸ್

ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು

ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು

ನೀವು ಮಾಡುತ್ತಿರುವ ವ್ಯಾಪಾರ ಕುಂಠಿತವಾಗಿದೆಯೇ ? ಮೊದಲಿನಂತೆ ವ್ಯಾಪಾರ ವ್ಯವಹಾರ ನಡೆಯುತ್ತಿಲ್ಲವೇ ? ಈ ಸುಲಭವಾದ ಪರಿಹಾರವನ್ನು ಒಮ್ಮೆ ಮಾಡಿ ನೋಡಿ 5 ನಿಂಬೆ ಹಣ್ಣುಗಳ ಜೊತೆ 1 ಹಿಡಿ ಕಪ್ಪು ಮೆಣಸಿನ ಕಾಳು ಮತ್ತು ಸಾಸಿವೆ ಕಾಳುಗಳನ್ನು ತೆಗೆದುಕೊಂಡು ನಿಮ್ಮ ಅಂಗಡಿಯಲ್ಲಿ ಅಥವಾ ನೀವು ಕೆಲಸ ಮಾಡುವ ಸ್ತಳದಲ್ಲಿಡಿ. ನಿಮ್ಮ ವ್ಯಾಪಾರ ನಿಧಾನವಾಗಿ ಅಭಿವೃದ್ಧಿ ಹೊಂದಿ ಮೊದಲಿನಂತಾಗುತ್ತದೆ.

Most Read: ವ್ಯಾಪಾರದಲ್ಲಿ ಲಾಭಗಳಿಸಲು ಈ ವಾಸ್ತು ಟಿಪ್ಸ್ ತಪ್ಪದೇ ಅನುಸರಿಸಿ

ಬಿಸಿನೆಸ್‌ನಲ್ಲಿ ಯಶಸ್ಸು ಕಾಣಬೇಕಾದರೆ

ಬಿಸಿನೆಸ್‌ನಲ್ಲಿ ಯಶಸ್ಸು ಕಾಣಬೇಕಾದರೆ

ಬಹಳ ಮುಂದಾಲೋಚನೆಯಿಂದ ಶುರು ಮಾಡಿದ ನಿಮ್ಮ ಬಿಸಿನೆಸ್ ಮಾಮೂಲಾಗಿ ನಡೆಯುತ್ತಿದ್ದರೆ ಮತ್ತು ನೀವು ಅಂದುಕೊಂಡ ಟಾರ್ಗೆಟ್ ಮುಟ್ಟಲಾಗದೆ ಇದ್ದರೆ , ಈ ಪರಿಹಾರವನ್ನೊಮ್ಮೆ ಪ್ರಯತ್ನ ಮಾಡಿ ನೋಡಿ . ಮೇಲೆ ಹೇಳಿದ ನಿಂಬೆ ಹಣ್ಣು ಸಾಸಿವೆ ಮೆಣಸುಗಳ ಮಿಶ್ರಣವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ಒಂದು ಖಾಲಿ ರಸ್ತೆಯಲ್ಲಿ ಇಟ್ಟು ತಿರುಗಿ ನೋಡದಂತೆ ವಾಪಾಸ್ ಬಂದು ಬಿಡಿ . ಯಶಸ್ಸು ನಿಮ್ಮ ಬೆನ್ನ ಹಿಂದೆಯೇ ಬರುತ್ತದೆ.

ಗಂಡ ಹೆಂಡತಿ ಜಗಳ

ಗಂಡ ಹೆಂಡತಿ ಜಗಳ

ಇದು ಎಲ್ಲರ ಮನೆಯಲ್ಲೂ ಮಾಮೂಲು . "ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ "ಎಂಬ ಗಾದೆ ಮಾತಿನಂತೆ . ಆದರೆ ಕೆಲವೊಮ್ಮೆ ಉಂಡು ಮಲಗಿದರೂ ಕಡಿಮೆಯಾಗದೇ ಜಗಳ ತಾರಕಕ್ಕೇರಿದರೆ? ಇದನ್ನೊಮ್ಮೆ ಮಾಡಿ ನೋಡಿ. ಕೆಲವು ಕರ್ಪೂರದ ಚೂರುಗಳನ್ನು ನಿಮ್ಮ ಹೆಂಡತಿಯ ಕಡೆ ಮತ್ತು ಕೆಲವು ಸಿಂಧೂರ ಬಿಂದಿಗಳನ್ನು ನಿಮ್ಮ ಕಡೆ ಇಟ್ಟು ಮಲಗಿಕೊಳ್ಳಿ . ಇದರಿಂದ ವೈಮನಸ್ಸು ದೂರಾಗಿ ಮನೆಯಲ್ಲಿ ನಿಧಾನವಾಗಿ ಸಮಾಧಾನದ ಶಾಂತಿ ನೆಲೆಸುತ್ತದೆ .

ಗಂಡ ಹೆಂಡತಿಯ ಮಧ್ಯೆ ಪ್ರೀತಿ

ಗಂಡ ಹೆಂಡತಿಯ ಮಧ್ಯೆ ಪ್ರೀತಿ

ಮೇಲಿನ ಉಪಾಯ ಕೇವಲ ಜಗಳ ನಿಲ್ಲಿಸುವುದಷ್ಟೇ ಅಲ್ಲದೆ ಇಬ್ಬರ ಮಧ್ಯೆ ಪ್ರೀತಿ ಜಾಸ್ತಿಯಾಗುವಂತೆ ಕೂಡ ಮಾಡಿ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ .

ವಿವಾಹ ವಿಚ್ಛೇದನ ತಡೆಯಲು

ವಿವಾಹ ವಿಚ್ಛೇದನ ತಡೆಯಲು

ನೀವು ಜಗಳ ಆಡಿ ಬೇಸತ್ತು ವಿಚ್ಛೇದನಕ್ಕಾಗಿ ಕೋರ್ಟ್ ನ ಮೊರೆ ಹೋಗಿದ್ದೀರಾ? ಇದನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ಇಬ್ಬರ ಮನಸ್ಸಿನಲ್ಲೂ ಎಲ್ಲೋ ಒಂದು ಕಡೆ ಅನ್ನಿಸಿಯೇ ಇರುತ್ತದೆ . ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯೇ ಹಾಗೆ . ಅದಕ್ಕೆ ತಕ್ಷಣ ಇದನ್ನೊಮ್ಮೆ ಪ್ರಯತ್ನಿಸಿ. ಒಂದು ಆಲದ ಮರದ ಎಲೆ ತೆಗೆದುಕೊಂಡು ಅದರ ಮೇಲೆ ಗಂಡ ಹೆಂಡತಿ ಇಬ್ಬರ ಹೆಸರನ್ನು ಒಂದು ಶ್ರೀಗಂಧದ ಕಡ್ಡಿಯಿಂದ ಬರೆಯಿರಿ. ಆ ಎಲೆಯನ್ನು ಗಂಗಾ ಜಲದಲ್ಲಿ ಅದ್ದಿ ಅದನ್ನು ನಿಮ್ಮ ಬೆಡ್ ರೂಮ್ ನಲ್ಲಿ ಇರಿಸಿ. ಆಗ ನಿಮ್ಮ ಮನಸ್ಸಿನಲ್ಲಿ ವಿಚ್ಛೇದನದ ಯೋಚನೆ ನಿಧಾನವಾಗಿ ದೂರಾಗುತ್ತಾ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಮೂಡಲು ಶುರುವಾಗುತ್ತದೆ.

ಪ್ರೀತಿ ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಆಗದಿದ್ದರೆ

ಪ್ರೀತಿ ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಆಗದಿದ್ದರೆ

ಮೇಲಿನ ಉಪಾಯ ಖಂಡಿತ ಬೇರಾಗುವ ಜೋಡಿಗಳನ್ನು ಹತ್ತಿರಕ್ಕೆ ತಂದು ಜೀವನದಲ್ಲಿ ಇನ್ನೆಂದೂ ದೂರಾಗುವ ಯೋಚನೆ ಬರದಂತೆ ನೋಡಿಕೊಳ್ಳುತ್ತದೆ .

ಕೆಲಸದ ಸ್ಥಳದ ಬಾಸ್ ನ ಜೊತೆ ಕಿರಿಕಿರಿ

ಕೆಲಸದ ಸ್ಥಳದ ಬಾಸ್ ನ ಜೊತೆ ಕಿರಿಕಿರಿ

ಇದು ಇತ್ತೀಚಿನ ಪೀಳಿಗೆಯ ಮಂದಿ ಬಹಳ ಅನುಭವಿಸುತ್ತಾರೆ . ಇದಕ್ಕೆ ಪರಿಹಾರ ಎಂದರೆ , ಒಂದು ಶುದ್ಧವಾದ ಬಿಳಿ ಬಣ್ಣದ ಕರ್ಚೀಫ್ ನ ಮೇಲೆ ಒಂದು ಕಪ್ಪು ಕಾಡಿಗೆಯನ್ನು ತೆಗೆದುಕೊಂಡು ಯಾರಿಂದ ನೀವು ಪ್ರತಿದಿನ ಕಿರಿ ಕಿರಿ ಅನುಭವಿಸುತ್ತಿರುವಿರೋ ಅವರ ಹೆಸರನ್ನು ಅದರ ಮೇಲೆ ಬರೆದು ಅದನ್ನು ನಿಮ್ಮ ಆಫೀಸ್ ಟೇಬಲ್ ನಲ್ಲಿ ಸ್ವಲ್ಪ ಸಮಯದ ವರೆಗೆ ಇಟ್ಟುಕೊಳ್ಳಿ .

ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳ ನಂಬಿಕೆ ಗಳಿಸಲು

ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳ ನಂಬಿಕೆ ಗಳಿಸಲು

ಮೇಲಿನ ಪರಿಹಾರ ಕೇವಲ ನಿಮ್ಮ ಬಾಸ್ ನ ಜೊತೆಗೆ ವೈಮನಸ್ಸು ದೂರ ಮಾಡುವುದಲ್ಲದೆ, ನಿಮ್ಮ ಸಹೋದ್ಯೋಗಿಗಳ ಜೊತೆಗೂ ನಿಮಗೆ ಉತ್ತಮ ಭಾಂದವ್ಯ ಬೆಳೆಯುವಂತೆ ಮಾಡುತ್ತದೆ ಮತ್ತು ಇನ್ನು ಮುಂದಕ್ಕೆ ಯಾವುದೇ ತರನಾದ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ .

ಹಣದ ಆಲೋಚನೆ ಬಿಡಿ

ಹಣದ ಆಲೋಚನೆ ಬಿಡಿ

ಒಂದು ಮಂಗಳವಾರದ ದಿನ 22 ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಪ್ರತಿ ಎಲೆಯ ಮೇಲೆ " ರಾಮ " ಎಂದು ಬರೆದು ಅವುಗಳನ್ನು ಯಾವುದಾದರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಹನುಮಂತ ದೇವರ ಪಾದಕ್ಕೆ ಅರ್ಪಿಸಿ ನಮಸ್ಕರಿಸಿ . ಇದು ಕೇವಲ ನಿಮ್ಮ ಹಣದ ಸಮಸ್ಯೆ ನೀಗಿಸುವುದಲ್ಲದೆ ಮನಸ್ಸಿಗೆ ಶಾಂತಿ ನೆಮ್ಮದಿ ತಂದು ಕೊಡುತ್ತದೆ .

ಉತ್ತಮ ಭಾಂಧವ್ಯಕ್ಕಾಗಿ

ಉತ್ತಮ ಭಾಂಧವ್ಯಕ್ಕಾಗಿ

ನೀವು ಯಾವುದಾದರೂ ಹಿಟ್ಟು ಬೀಸುತ್ತಿದ್ದರೆ ಅದಕ್ಕೆ ಕಪ್ಪು ಬಣ್ಣದ ಕಡಲೆ ಕಾಳುಗಳನ್ನು ಸೇರಿಸಿ ಬೀಸಿ . ಆ ರೀತಿ ಬೀಸಿದ ಮಿಶ್ರಣದ ಹಿಟ್ಟನ್ನು ಯಾವ ಕುಟುಂಬ ಅಡುಗೆ ಮಾಡಿಕೊಂಡು ಸೇವಿಸುತ್ತದೋ ಆ ಕುಟುಂಬ ದಲ್ಲಿ ಯಾವುದೇ ಕಿರಿ ಕಿರಿ ಇಲ್ಲದೆ ಬಹಳ ಸಂತೋಷದಿಂದ ಮತ್ತು ನೆಮ್ಮದಿಯಿಂದ ಕುಟುಂಬ ಸದಸ್ಯರ ಜೊತೆ ಜೀವನ ಮಾಡುತ್ತಾರೆ .

English summary

Simple remedies to solve all your life's problems

Sometimes, inspite of our best efforts, we are unable to deal with the big problems of life. However, even though it is not always possible to control all our problems, we can negate the influence of some. Read on to know more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X