Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹಣ ಸಂಪಾದನೆಗೆ ತಾನು ಧರಿಸಿದ ಒಳ ಉಡುಪು ಮಾರುತ್ತಿರುವ ಯುವತಿ!
ಹಣ ಮಾಡಲು ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮದ ಹಾದಿಯನ್ನು ಹಿಡಿಯುವಂತಹ ಜನರು ಇಂದಿನ ದಿನಗಳಲ್ಲಿ ತುಂಬಾ ಕಡಿಮೆ ಆಗುತ್ತಿದ್ದಾರೆ. ಪ್ರತಿಯೊಬ್ಬರಿಗೂ ಐಷಾರಾಮಿ ಜೀವನ ಮಾಡಲು ಮನಸ್ಸು. ಇದಕ್ಕಾಗಿ ತುಂಬಾ ಸುಲಭ ಹಾಗೂ ಬೇಗನೆ ಶ್ರೀಮಂತರಾಗಬೇಕು ಎನ್ನುವ ಕನಸು ಕಟ್ಟಿಕೊಳ್ಳುವರು. ಹೀಗಾಗಿ ಅವರು ಹಣ ಮಾಡಲು ಅಡ್ಡ ದಾರಿ ಹಿಡಿಯುವರು. ಆ ಅಡ್ಡದಾರಿಯಿಂದ ಸಮಾಜ ಹಾಗೂ ಅವರ ಮೇಲೆ ಯಾವುದೇ ಪರಿಣಾಮವಾಗದೆ ಇದ್ದರೆ ಚಿಂತಿಲ್ಲ. ಆದರೆ ಮುಂದೆ ದೊಡ್ಡ ಅನಾಹುತಕ್ಕೆ ಕಾರಣವಾದರೆ ಖಂಡಿತವಾಗಿಯೂ ಇಂತಹ ದಾರಿಯು ವಿನಾಶ ಉಂಟು ಮಾಡುವುದು. ಇದೇ ವಿಭಾಗದಲ್ಲಿ ನಾವು ಕಿಡ್ನಿ ಮಾರಿ ಐಫೋನ್ ಖರೀದಿ ಮಾಡಿರುವ ಬಗ್ಗೆ ಮತ್ತು ಯುವತಿಯೊಬ್ಬಳು ಅಂಡಾಣು ಮಾರಲು ಹೋಗಿ ಪ್ರಾಣಕ್ಕೆ ಅಪತ್ತು ತಂದುಕೊಂಡಿರುವಂತಹ ಘಟನೆಗಳ ಬಗ್ಗೆ ಓದಿಕೊಂಡಿದ್ದೇವೆ. ಇಂದಿನ ಲೇಖನವು ಹಣ ಸಂಪಾದನೆಯದ್ದಾಗಿದೆ.

ಆದರೆ ಇದರಿಂದ ಯಾರಿಗೂ ಅನಾಹುತ, ಪ್ರಾಣಹಾನಿ ಉಂಟಾಗುವುದಿಲ್ಲ. ಕೆಲವು ಚಟ ಹೊಂದಿರುವಂತಹ ವ್ಯಕ್ತಿಗಳು ಇಂತದಕ್ಕೆ ಸಾಕ್ಷಿಯಾಗುವರು. ಇಲ್ಲಿ ಯುವತಿಯೊಬ್ಬಳು ತಾನು ಬಳಸಿದ ಒಳ ಉಡುಪವನ್ನು ಇಂಟರ್ನೆಟ್ ನಲ್ಲಿ ಮಾರಿ, ಭಾರಿ ಹಣ ಸಂಪಾದನೆ ಮಾಡುತ್ತಿದ್ದಾಳೆ. ಹೀಗೂ ಹಣ ಮಾಡಬಹುದೇ ಎಂದು ನೀವು ಪ್ರಶ್ನಿಸಬಹುದು. ಆದರೆ ಇದು ಆಧುನಿಕ ಲೋಕ, ಇಲ್ಲಿ ಎಲ್ಲವೂ ನಡೆಯುವುದು. ತನ್ನ ಒಳ ಉಡುಪು ಮಾರಾಟ ಮಾಡುವ ಮೂಲಕ ಮತ್ತು ಕಂಕುಳಿನ ವಾಸನೆ ನೋಡಲು ಬಿಡುವ ಮೂಲಕ ಹಣ ಸಂಪಾದನೆ ಮಾಡುತ್ತಲಿದ್ದೇನೆ ಎಂದು ಆಕೆ ಹೇಳಿದ್ದಾರೆ. ಇದರ ಬಗ್ಗೆ ನೀವು ಇನ್ನಷ್ಟು ಓದಿಕೊಳ್ಳಿ.

ಆಕೆ ಇದನ್ನು ರಖಂನಲ್ಲಿ ಖರೀದಿ ಮಾಡುವಳು
21ರ ಹರೆಯದ ವಿದ್ಯಾರ್ಥಿಯೊಬ್ಬಳು ಹೇಳಿರುವ ಪ್ರಕಾರ ಆಕೆ ಪ್ರತೀ ತಿಂಗಳು ಸುಮಾರು 1,700 ಡಾಲರ್ ನ್ನು ತಾನು ಬಳಸಿದ ಒಳ ಉಡುಪನ್ನು ಆನ್ ಲೈನ್ ನಲ್ಲಿ ಮಾರಿ ಸಂಪಾದನೆ ಮಾಡುತ್ತಿದ್ದಾಳೆ ಅಂತೆ. ಕಾಲೇಜಿನಲ್ಲಿ ಪದವಿ ಪಡೆಯುವ ಜತೆಗೆ ಸ್ವಲ್ಪ ಹೆಚ್ಚುವರಿಯಾಗಿ ಸಂಪಾದನೆ ಮಾಡುವ ದೃಷ್ಟಿಯಿಂದ ಆಕೆ ಹೀಗೆ ಮಾಡಿದ್ದಾಳಂತೆ. ಆಕೆ ಒಂದು ರಾಶಿಯಲ್ಲಿ ಒಳ ಉಡುಪುಗಳನ್ನು ಖರೀದಿ ಮಾಡುವಳು ಮತ್ತು ಅದನ್ನು ಪ್ರತೀ ಜತೆಗೆ 120 ಡಾಲರ್ ನಂತೆ ಮಾರುತ್ತಾಳಂತೆ!

ಆಕೆ ಎಷ್ಟು ದಿನ ಬಳಸಿದ್ದಾಳೆ ಎನ್ನುವುದರ ಮೇಲೆ ದರ ನಿಗದಿ!
ಆಕೆ ಒಳಉಡುಪುಗಳನ್ನು ರಾಶಿಯಾಗಿ ಸುಮಾರು 37.87 ಡಾಲರ್ ನಲ್ಲಿ ಖರೀದಿ ಮಾಡವಳು. ಆದರೆ ಇದನ್ನು ಮಾರುವಾಗ ಆಕೆ ಎಷ್ಟು ಸಮಯ ಇದನ್ನು ಬಳಕೆ ಮಾಡಿದ್ದಾಳೆ ಎನ್ನುವುದನ್ನು ಅವಲಂಬಿಸಿರುವುದು.

ಖರೀದಿ ಮಾಡುವವರಿಗೆ ಚಿತ್ರವು ಲಭ್ಯವಿರುವುದು
ತಾನು ಧರಿಸಿರುವ ಒಳ ಉಡುಪಿನ ಫೋಟೊವನ್ನು ಖರೀದಿದಾರರಿಗೆ ತೋರಿಸಲಾಗುವುದು ಮತ್ತು ಎಷ್ಟು ದಿನ ಇದನ್ನು ಧರಿಸಲಾಗಿದೆ ಎನ್ನುವುದರ ಮೇಲೆ ಇದರ ದರ ನಿಗದಿ ಮಾಡಲಾಗುತ್ತದೆ. ತಾನು ವೆಬ್ ಕ್ಯಾಬ್ ಹುಡುಗಿಯಾಗಿ ಕೆಲಸ ಮಾಡುತ್ತಿದ್ದು, ತನ್ನ ಬಳಸಿದ ಒಳ ಉಡುಪನ್ನು ಕ್ರೇಗ್ಸ್ಲಿಸ್ಟ್ ಮೂಲಕ ಮಾರಿರುವುದಾಗಿ ಆಕೆ ಹೇಳಿದ್ದಾಳೆ.

ಆಕೆಗೆ ಇದರಿಂದ ಅಧಿಕ ಲಾಭವಾಗುತ್ತಲಿದೆ
ತನ್ನ ಬಳಸಿದ ಒಳ ಉಡುಪನ್ನು ಮಾರುವಂತಹ ವ್ಯಾಪಾರಿಂದ ತನಗೆ ಹೆಚ್ಚಿನ ಲಾಭವಾಗುತ್ತಿದೆ ಎಂದು ಆ ಯುವತಿಯು ಹೇಳಿದ್ದಾಳೆ. ಜನರು ಯಾವುದರ ಕಡೆ ಹೆಚ್ಚು ಮಾಂತ್ರಿಕವಾಗುತ್ತಾರೆ ಎಂದು ಆಕೆ ಮಾರುಕಟ್ಟೆ ಅಧ್ಯಯನ ಕೂಡ ಮಾಡಿಕೊಂಡಿದ್ದಾಳೆ. ಮತ್ತು ಈ ರೀತಿಯ ಜನರಿಗೆ ಆಕೆ ತನ್ನ ಬಳಸಿದ ಒಳ ಉಡುಪನ್ನು ಮಾರಲು ನಿರ್ಧಾರ ಮಾಡಿದ್ದಾಳೆ. ಇದರಿಂದ ಲಾಭ ಕೂಡ ಮಾಡಿಕೊಳ್ಳುತ್ತಿದ್ದಾಳೆ.

ಇನ್ನು ಹೆಚ್ಚುವರಿ ಆದಾಯ
ತಾನು ಬಳಸಿರುವಂತಹ ಒಳ ಉಡುಪನ್ನು ಮಾರುವ ಜತೆಗೆ ಆಕೆ ತನ್ನ ನಿಯಮಿತ ಗ್ರಾಹಕರಿಗೆ ಕೆಲವೊಂದು ಹೆಚ್ಚುವರಿ ಸೇವೆ ಕೂಡ ನೀಡುತ್ತಿರುವಳು. ತನ್ನ ಬಳಸಿದ ಒಳ ಉಡುಪು ಖರೀದಿಸುವ ನಿಯಮಿತ ಗ್ರಾಹಕರಿಗೆ ತನ್ನ ಕಂಕುಳನ್ನು ಮೂಸಿ ನೋಡಲು ಅವಕಾಶ ನೀಡುತ್ತಾಳೆ. ಇದಕ್ಕಾಗಿ ಆಕೆ 15 ನಿಮಿಷಕ್ಕೆ 500 ಡಾಲರ್ ದರ ವಿಧಿಸುತ್ತಾಳೆ. ಇದರಿಂದ ಆಕೆಗೆ ಮತ್ತೊಂದು ರೀತಿಯಲ್ಲಿ ಹಣ ಸಂಪಾದನೆ ಆಗುತ್ತಿದೆ. ಕ್ಷಿಪ್ರವಾಗಿ ಹಣ ಮಾಡಲು ಇದು ಸರಿಯಾದ ಹಾದಿಯೇ? ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications