For Quick Alerts
ALLOW NOTIFICATIONS  
For Daily Alerts

ಅಡುಗೆ ಮಾಡಲು ತಂದಿಟ್ಟ ಮೊಟ್ಟೆಯಲ್ಲಿ ಮರಿಗಳಾಗಿದ್ದವು!

|

ಮಾಂಸಹಾರಿಗಳು ಯಾವಾಗಲೂ ಮೊಟ್ಟೆ, ಕೋಳಿ ಹೀಗೆ ಹಲವಾರು ರೀತಿಯ ಖಾದ್ಯಗಳನ್ನು ತಿನ್ನಲು ಇಷ್ಟಪಡುವರು. ಅದರಲ್ಲೂ ಮೊಟ್ಟೆ ಇಂದಿನ ದಿನಗಳಲ್ಲಿ ಅತಿಯಾಗಿ ಮಾರಾಟವಾಗುವಂತಹ ಮಾಂಸಹಾರಿ ಪದಾರ್ಥವಾಗಿದೆ. ಹೆಚ್ಚಾಗಿ ಮಾಂಸಾಹಾರದಲ್ಲಿ ತೊಂದರೆ ಕಾಣಿಸಿಕೊಂಡು ಅವರು ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿ ಪರಿವರ್ತಿತರಾಗುವಂತಹ ಘಟನೆಗಳ ಬಗ್ಗೆ ನಾವು ಕೇಳಿದ್ದೇವೆ.

ಈ ಲೇಖನದಲ್ಲಿ ಕೂಡ ನಾವು ನಿಮಗೆ ಇಂತಹ ಒಂದು ಘಟನೆ ಬಗ್ಗೆ ಹೇಳಲಿದ್ದೇವೆ. ವಿಯೆಟ್ನಾಂನ ಮಹಿಳೆಯೊಬ್ಬರು ಬಾತುಕೋಳಿ ಮೊಟ್ಟೆಗಳನ್ನು ತಂದು ಅದರ ಪದಾರ್ಥ ಮಾಡಲು ಒಡೆಯಬೇಕು ಎನ್ನುತ್ತಿರುವಾಗಲೇ ಅದರಲ್ಲಿ ಸಣ್ಣಬಾತು ಮರಿಗಳು ಕಾಣಿಸಿಕೊಂಡಿದೆ. ಇದರಿಂದ ಆ ಮಹಿಳೆ ಒಂದು ಕ್ಷಣ ದಂಗಾಗಿ ಹೋದರು. ಈ ಬಗ್ಗೆ ವಿವರವಾಗಿ ತಿಳಿಯಿರಿ....

ವಿಯೆಟ್ನಾಂನಲ್ಲಿ ಈ ಘಟನೆ ನಡೆದಿದೆ

ವಿಯೆಟ್ನಾಂನಲ್ಲಿ ಈ ಘಟನೆ ನಡೆದಿದೆ

ಈ ಘಟನೆಯು ವಿಯೆಟ್ನಾಂನಲ್ಲಿ ನಡೆದಿದೆ. ತಾನು ಮಾರುಕಟ್ಟೆ ಯಿಂದ ತಂದರೆ ಬಾತುಕೋಳಿ ಮೊಟ್ಟೆಯಲ್ಲಿ ಬಾತುಕೋಳಿ ಮರಿಗಳು ಕಾಣಿಸಿಕೊಂಡಿದ್ದರಿಂದ ಆ ಮಹಿಳೆ ದಂಗಾಗಿ ಹೋದರು.

ಒಂದು ಡಜನ್ ಮೊಟ್ಟೆಗಳನ್ನು ಖರೀದಿಸಿ ತಂದಿದ್ದರು

ಒಂದು ಡಜನ್ ಮೊಟ್ಟೆಗಳನ್ನು ಖರೀದಿಸಿ ತಂದಿದ್ದರು

ವರದಿಗಳು ಹೇಳುವ ಪ್ರಕಾರ ವಿಯೆಟ್ನಾಂನ ಮಹಿಳೆಯು ಪದಾರ್ಥ ಮಾಡಲೆಂದು ಒಂದು ಡಜನ್ ಬಾತುಕೋಳಿ ಮೊಟ್ಟೆಗಳನ್ನು ಖರೀದಿಸಿ ತಂದಿದ್ದರು. ಇದನ್ನು ಆಕೆ ಅಡುಗೆ ಮನೆಯಲ್ಲಿ ಇಟ್ಟಿದ್ದರು. ಬೇಸಿಗೆಯಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಲು ಆಕೆ ಇದನ್ನು ತಿನ್ನಬೇಕೆಂದು ನಿರ್ಧಾರ ಮಾಡಿದ್ದರು.

ಬಾಲೌಟ್ ತಿನ್ನಲು ಆ ಮಹಿಳೆಯು ಬಯಸಿದ್ದರು

ಬಾಲೌಟ್ ತಿನ್ನಲು ಆ ಮಹಿಳೆಯು ಬಯಸಿದ್ದರು

ಥಾಯ್ಲೆಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಂನಲ್ಲಿ ತುಂಬಾ ರುಚಿಕರವಾಗಿರುವಂತಹ ಬಾಲೌಟ್ ಎನ್ನುವ ಖಾದ್ಯವನ್ನು ಹೆಚ್ಚಿನ ಜನರು ಇಷ್ಟಪಡುವರು. ಹಕ್ಕಿಯ ಭ್ರೂಣ ಮೊಟ್ಟೆಯಲ್ಲಿ ಬೆಳೆಯುವ ವೇಳೆ ಇದರ ಪದಾರ್ಥ ಮಾಡುವುದು. ಇದನ್ನು ಸಾಮಾನ್ಯವಾಗಿ ಬಾತುಕೋಳಿ ಮೊಟ್ಟೆಯಿಂದ ತಯಾರಿಸಲಾಗುತ್ತದೆ.

ಮೊಟ್ಟೆಯಲ್ಲಿ ಮರಿಗಳಾಗಿದ್ದವು

ಮೊಟ್ಟೆಯಲ್ಲಿ ಮರಿಗಳಾಗಿದ್ದವು

ಮಹಿಳೆಗೆ ತಾನು ತಂದಿದ್ದ ಮೊಟ್ಟೆಗಳನ್ನು ಒಡೆದು ನೋಡಿದ ವೇಳೆ ಅದರಲ್ಲಿ ಬಾತುಕೋಳಿ ಮರಿಗಳು ಕಾಣಿಸಿಕೊಂಡಿದೆ. ಇದನ್ನು ಕಂಡು ಆಕೆ ಒಂದು ಕ್ಷಣ ಅಚ್ಚರಿಗೊಳಗಾದರು. ತಾನು ತಂದಿದ್ದ ಒಂದು ಡಜನ್ ಮೊಟ್ಟೆಯಲ್ಲಿ ಕೂಡ ಮರಿಗಳು ಆಗಿದ್ದವು ಮತ್ತು ಪುಟ್ಟ ಪುಟ್ಟ ಮರಿಗಳು ಅದರಲ್ಲಿ ಇದ್ದವು. ತನ್ನ ಮನೆಯಲ್ಲಿ ಈ ಮರಿಗಳನ್ನು ನೋಡಿಕೊಳ್ಳುವುದು ಹೇಗೆ ಎನ್ನುವುದೇ ಆಕೆಗೆ ದೊಡ್ಡ ತಲೆನೋವಾಗಿತ್ತು. ಕೆಲವು ಮರಿಗಳನ್ನು ನೆರೆಮನೆಯವರು ಮತ್ತು ಸ್ನೇಹಿತರು ಕೊಂಡು ಹೋಗಿ ಸಾಕಿದ್ದಾರೆ ಎಂದು ವರದಿಗಳು ತಿಳಿಸಿವೆ. ಬೇಸಿಗೆಯಲ್ಲಿ ನೀವು ತಂದಿಟ್ಟ ಕೋಳಿ ಮೊಟ್ಟೆಯಲ್ಲಿ ಕೋಳಿ ಮರಿಗಳು ಹೊರಗೆ ಬಂದರೆ ಆಗ ನಿಮಗೆ ಹೇಗೆ ಅನಿಸಬಹುದು?ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಲು ಮರೆಯಬೇಡಿ. ಇಂತಹ ಕುತೂಹಲಕಾರಿ ಕಥೆ ಹಾಗೂ ಘಟನೆಗಳ ಬಗ್ಗೆ ಓದಲು ನೀವು ಇದೇ ವಿಭಾಗದಲ್ಲಿ ಯಾವಾಗಲೂ ಕ್ಲಿಕ್ ಮಾಡುತ್ತಲಿರಿ.

English summary

She Bought Eggs To Eat But They Hatched!

A woman in Vietnam got the surprise of her life when the duck eggs that she had bought to consume ended up hatching a bunch of cute ducklings. It is predicted that the reason for this could be the hot weather!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X