Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಐಫೋನ್ ಖರೀದಿಗೆ ಅಂಡಾಣು ಮಾರಲು ಮುಂದಾದಳು! ಕೊನೆಗೆ ಏನಾಯಿತು ಗೊತ್ತೇ?
ಐ ಫೋನ್ ಖರೀದಿದಾಗಿ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಿರುವಂತಹ ಸುದ್ದಿ ನೀವು ಓದಿರಬಹುದು. ಇಂತಹ ಹಲವಾರು ಚಿತ್ರ ವಿಚಿತ್ರ ಜನರು ನಮ್ಮ ಸುತ್ತಲೂ ಇರುತ್ತಾರೆ. ಇವರಿಗೆ ತಮ್ಮ ಜೀವನಕ್ಕಿಂತಹ ಬಾಹ್ಯವಾಗಿ ಕಾಣಿಸುವಂತಹ ಆಕರ್ಷಣೆ, ಐಷಾರಾಮ ತುಂಬಾ ಇಷ್ಟವಾಗುವುದು. ಇದಕ್ಕಾಗಿ ಅವರು ದರೋಡೆ, ಕೊಲೆ, ಸುಳಿಗೆ ಮುಂತಾದ ಯಾವುದೇ ಕೃತ್ಯಕ್ಕೂ ಮುಂದಾಗುವರು. ಇಂತಹವರು ಕೊನೆಗೆ ಬೀಳುವುದು ಹಳ್ಳಕ್ಕೆ ಎನ್ನುವುದು ತಿಳಿದಿರಲ್ಲ. ಇದೇ ವಿಭಾಗದಲ್ಲಿ ನಾವು ಇಂತಹ ಹಲವಾರು ಘಟನೆಗಳ ಬಗ್ಗೆ ಓದಿಕೊಂಡಿದ್ದೇವೆ. ಈ ಲೇಖನದಲ್ಲಿ ನಾವು ಯುವತಿಯೊಬ್ಬಳು ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ ಖರೀದಿ ಮಾಡಲು ಸುಲಭವಾಗಿ ಹಣ ಸಂಪಾದನೆ ಮಾಡುವಂತಹ ದಾರಿ ಕಂಡುಕೊಂಡಳು. ಆಕೆ ಕಂಡುಕೊಂಡ ದಾರಿ ಯಾವುದು? ಆಕೆಗೆ ಇದರಿಂದ ಲಾಭವಾಯಿತೇ ಅಥವಾ ಪ್ರಾಣಕ್ಕೆ ಹಾನಿಯಾಯಯಿತೇ ಎಂದು ನೀವು ತಿಳಿಯಿರಿ.

ಆಕೆ ತನ್ನ ಅಂಡಾಣುಗಳನ್ನು ಮಾರಲು ನಿರ್ಧರಿಸಿದಳು
ಪೂರ್ವ ಚೀನಾದ ವಿಶ್ವವಿದ್ಯಾನಿಲಯವೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು(ಗುರುತು ಬಹಿರಂಗಪಡಿಸಲಾಗಿಲ್ಲ) ಹಣ ಮಾಡಲು ತುಂಬಾ ಸುಲಭವಾದ ವಿಧಾನ ಕಂಡುಕೊಂಡಳು. ಹೊಸ ಐಫೋನ್ ಖರೀದಿ ಮಾಡಲು ಆಕೆ ತನ್ನ ಅಂಡಾಣುಗಳನ್ನು ಕಾನೂನುಬಾಹಿರವಾಗಿ ಮಾರಲು ಯತ್ನಿಸಿದ ವೇಳೆ ಶಸ್ತ್ರಚಿಕಿತ್ಸೆಯಿಂದ ಮೃತಪಟ್ಟಳು.

ಆಕೆಗೆ ಪ್ರತೀ ದಿನ ಹತ್ತು ಇಂಜೆಕ್ಷನ್ ಕೊಡಲಾಗುತ್ತಿತ್ತು!
ಶಸ್ತ್ರಚಿಕಿತ್ಸೆಗೆ ಮೊದಲು 20ರ ಹರೆಯದ ಯುವತಿಗೆ ಪ್ರತೀ ದಿನ ಹತ್ತು ಇಂಜೆಕ್ಷನ್ ಕೊಡಲಾಗುತ್ತಿತ್ತು ಎಂದು ವರದಿಗಳು ಹೇಳಿವೆ. ಶಸ್ತ್ರಚಿಕಿತ್ಸೆ ಮೂಲಕವಾಗಿ ತನ್ನ ಅಂಡಾಣುಗಳನ್ನು ತೆಗೆಯುವ ಮೊದಲು ಆಕೆಯಲ್ಲಿ ಅಂಡೋತ್ಪತ್ತಿ ಮಾಡಲು ಹೀಗೆ ಮಾಡಲಾಗುತ್ತಿತ್ತು.

ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು
ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಮತ್ತು ಮೂರು ದಿನಗಳಲ್ಲಿ ಆಕೆಯ ಆರೋಗ್ಯವು ಸಂಪೂರ್ಣವಾಗಿ ಹದಗೆಟ್ಟಿತು. ಆಕೆಯ ಹೊಟ್ಟೆ ಉಬ್ಬರ ಉಂಟಾಯಿತು ಮತ್ತು ಉಸಿರಾಡಲು ಕಷ್ಟವಾಗುತ್ತಿತ್ತು. ಇದರಿಂದಾಗಿ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.

ಆಕೆಗೆ ದುಷ್ಪರಿಣಾಮಗಳ ಬಗ್ಗೆ ತಿಳಿದೇ ಇರಲಿಲ್ಲ!
ಅಂಡಾಣುಗಳನ್ನು ತೆಗೆಯುವುದರಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಆಕೆಗೆ ತಿಳಿದೇ ಇರಲಿಲ್ಲ. ಆಕೆ ಅಂಡಾಣು ಮಾರಾಟ ಮಾಡಲು ಸಂಪರ್ಕಿಸಿದ ವ್ಯಕ್ತಿ ಕೂಡ ದೇಹಕ್ಕೆ ಇದರಿಂದ ಯಾವುದೇ ಹಾನಿಯಾಗದು ಎಂದು ಹೇಳಿದ್ದ. ಅಂಡಾಣುವನ್ನು ತೆಗೆಯುವ ಮೊದಲು ಪ್ರತೀ ದಿನ 15 ದಿನಗಳ ಕಾಲ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಇದರ ಬಳಿಕ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಅಂಡಾಣು ತೆಗೆಯುತ್ತಾರೆ ಎಂದು ಹೇಳಿ ಆಕೆಗೆ ಮಂಕುಬೂದಿ ಎರಚಿದ್ದ.

ಪರೀಕ್ಷೆಯಲ್ಲಿ ಪತ್ತೆಯಾಗಿರುವುದು
ಈ ಯುವತಿಯಗೆ `ಓವರಿಯನ್ ಹೈಪರ್ಸ್ಟೈಮ್ಯುಲೇಶನ್ ಸಿಂಡ್ರೋಮ್' ಕಾಣಿಸಿಕೊಂಡಿತು. ಈ ಸಮಸ್ಯೆಯು ಗರ್ಭಕೋಶವು ಅತಿಯಾಗಿ ಅಂಡೋತ್ಪತ್ತಿ ಮಾಡಲು ಉತ್ತೇಜಿಸುವ ಸಮಸ್ಯೆಯಾಗಿದೆ ಮತ್ತು ಅದರ ಸುತ್ತಲು ದ್ರವ ಶೇಖರಣೆ ಆಗುವುದು.

ಆಕೆಗೆ ತಕ್ಷಣವೇ ಚಿಕಿತ್ಸೆ ನೀಡಲಾಯಿತು
ಆಕೆಯ ಹೊಟ್ಟೆಯಿಂದ 5 ಲೀಟರ್ ನಷ್ಟು ನೀರನ್ನು ಹೊರಗೆ ತೆಗೆಯಲಾಯಿತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆಕೆಯ ಗರ್ಭಕೋಶವು 7-8 ತಿಂಗಳ ಗರ್ಭಿಣಿಯರ ಗರ್ಭಕೋಶದಂತೆ ಉಬ್ಬಿ ಹೋಗಿತ್ತು.

ಆಕೆ ಅದೃಷ್ಟದಿಂದ ಚೇತರಿಸಿಕೊಂಡಳು
ಯುವತಿಯ ಆರೋಗ್ಯ ಸ್ಥಿತಿಯು ಕೈಮೀರಿ ಹೋದ ವೇಳೆ ಆಕೆ ಪರೀಕ್ಷೆ ಮಾಡಿಕೊಳ್ಳದೆ ಇದ್ದರೆ ಪ್ರಾಣಕ್ಕೆ ಹಾನಿಯಾಗುವಂತಹ ಸಂಭವವಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆಕೆಗೆ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು ಮತ್ತು ಆಕೆ ಈಗ ಚೇತರಿಕೆ ಹಾದಿಯಲ್ಲಿದ್ದಾಳೆ ಎಂದು ವೈದ್ಯರು ತಿಳಿಸಿರುವರು. ಹಣ ಸಂಪಾದನೆ ಮಾಡುವುದು ಅಷ್ಟು ಸುಲಭದ ವಿಚಾರವಲ್ಲವೆಂದು ಆ ಯುವತಿಯು ಈಗ ಪಾಠ ಕಲಿತುಕೊಂಡಿರಬಹುದು. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನೀವು ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications
