For Quick Alerts
ALLOW NOTIFICATIONS  
For Daily Alerts

ಅತಿ ಹೆಚ್ಚು ಅಮೆರಿಕನ್ನರ ಜನ್ಮದಿನ ಇರುವುದೇ ಸೆಪ್ಟೆಂಬರ್‌ನಲ್ಲಿ, ಯಾಕೆ ಅಂತೀರಾ?

|

ಪ್ರತಿದಿನ ನೀವು ಫೇಸ್‌ಬುಕ್‌ನಲ್ಲಿ ಅಥವಾ ವಾಟ್ಸಾಪ್‌ನಲ್ಲಿ ನಿಮ್ಮ ಗೆಳೆಯರು ಹಾಗೂ ಪರಿಚಿತರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುವುದು ಸಾಮಾನ್ಯವಾಗಿದೆ. ವಾರಪೂರ್ತಿ ಪ್ರತಿದಿನ ಕನಿಷ್ಠ ನಾಲ್ಕಾರು ಜನರ ಬರ್ಥಡೇ ಇದ್ದೇ ಇರುತ್ತವೆ. ಆದರೆ ನಾವು ಇಲ್ಲಿ ಹೇಳಲು ಹೊರಟಿರುವ ವಿಷಯ ಕೊಂಚ ಡಿಫರೆಂಟ್ ಆಗಿದೆ. ಇದು ಅಮೆರಿಕನ್ನರ ಒಂದು ಕುತೂಹಲಕಾರಿ ವಿಷಯದ ಬಗ್ಗೆ ಬೆಳಕು ಚೆಲ್ಲುವ ಸಂಗತಿಯಾಗಿದ್ದು ಈ ಇಂಟೆರೆಸ್ಟಿಂಗ್ ಸಂಗತಿಯನ್ನು ಓದಿ ನೀವೂ ಎಂಜಾಯ್ ಮಾಡಿ.

ಸುಪ್ರಸಿದ್ಧ 10 ಜನರ ಪೈಕಿ 9 ಜನರ ಬರ್ಥಡೇ ಸೆಪ್ಟೆಂಬರ್‌ನಲ್ಲಿ !

ಸುಪ್ರಸಿದ್ಧ 10 ಜನರ ಪೈಕಿ 9 ಜನರ ಬರ್ಥಡೇ ಸೆಪ್ಟೆಂಬರ್‌ನಲ್ಲಿ !

ಕಳೆದ 2 ದಶಕಗಳಲ್ಲಿನ ಶಿಶು ಜನನ ಮಾಹಿತಿಯನ್ನು ಕಲೆಹಾಕಿ ನಡೆಸಿರುವ ನಿಖರ ಸಂಶೋಧನೆಯೊಂದರ ಪ್ರಕಾರ ಪ್ರತಿ ವರ್ಷ ಸೆಪ್ಟೆಂಬರ್ ಮಧ್ಯಭಾಗ ಅತಿ ಹೆಚ್ಚು ಅಮೆರಿಕನ್ನರು ಜನಿಸಿರುವ ಅವಧಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ. ಅದರಲ್ಲೂ ಸೆಪ್ಟೆಂಬರ್ 9 ಅತಿ ಹೆಚ್ಚು ಅಮೆರಿಕನ್ನರ ಬರ್ಥಡೇ ಆಗಿದ್ದು ಅದರ ನಂತರದ ಸ್ಥಾನ ಸೆಪ್ಟೆಂಬರ್ 19ಕ್ಕೆ ಸಲ್ಲುತ್ತದೆ.

ಅಂಕಿ ಅಂಶಗಳು ಏನು ಹೇಳುತ್ತವೆ?

ಅಂಕಿ ಅಂಶಗಳು ಏನು ಹೇಳುತ್ತವೆ?

ಅಮೆರಿಕದ ಖ್ಯಾತ ಮಾಹಿತಿ ಪತ್ರಕರ್ತೆ ಮ್ಯಾಟ್ ಸ್ಟೈಲ್ಸ್ ಎಂಬುವರು ಕಳೆದ 20 ವರ್ಷಗಳ ಅವಧಿಯ ಅಮೆರಿಕದಲ್ಲಿನ ಶಿಶು ಜನನದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದರು. 1994 ರಿಂದ 2014 ರ ಮಧ್ಯದ ಅವಧಿಯ ಈ ಅಂಕಿ ಅಂಶಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಇದರ ಪ್ರಕಾರ ಸೆಪ್ಟೆಂಬರ್ 9 ಹಾಗೂ 20ರ ನಡುವಿನ ಮೊದಲ ವಾರ ಹಾಗೂ ಅದರ ನಂತರದ ಅರ್ಧ ವಾರದಲ್ಲಿ ಅಮೆರಿಕದ ಅತಿ ಪ್ರಸಿದ್ಧ 10 ಜನ್ಮದಿನಗಳಲ್ಲಿ 9 ಜನ್ಮದಿನಗಳು ಇವೆ ಎಂಬುದು ಕಂಡು ಬಂದಿದೆ. ಸೆ.9, 12 ಹಾಗೂ 19 ಈ ಮೂರು ದಿನಗಳಂತೂ ಅತಿ ಹೆಚ್ಚು ಜನರ ಬರ್ಥಡೇ ಇರುವ ದಿನಗಳಾಗಿವೆ.

Most Read: 2019ರಲ್ಲಿ ಬುಧನ ಹಿಮ್ಮುಖ ಚಲನೆ- ಇದರಿಂದ ಆರು ರಾಶಿಚಕ್ರದವರ ಮೇಲೆ ಪ್ರಮುಖ ಬದಲಾವಣೆ ಉಂಟಾಗಲಿದೆ!

ಈ ದಿನಾಂಕಗಳಲ್ಲಿ ಅತಿ ಕಡಿಮೆ ಬರ್ತ್ ಡೇ!

ಈ ದಿನಾಂಕಗಳಲ್ಲಿ ಅತಿ ಕಡಿಮೆ ಬರ್ತ್ ಡೇ!

ಅತಿ ಹೆಚ್ಚು ಬರ್ಥಡೇಗಳಿರುವುದು ಸೆಪ್ಟೆಂಬರ್‌ನಲ್ಲಿ ಎಂಬುದು ಗೊತ್ತಾಯಿತು. ಆದರೆ ಅತಿ ಕಡಿಮೆ ಬರ್ಥಡೇಗಳಿರುವ ದಿನಾಂಕಗಳಾವುವು ಎಂಬುದನ್ನು ನೋಡಿದರೆ ಆ ಮಾಹಿತಿ ಇನ್ನೂ ಕುತೂಹಲಕರವಾಗಿದೆ. ಅಮೆರಿಕದಲ್ಲಿ ರಜಾ ದಿನಗಳಾದ ಡಿಸೆಂಬರ್ 25, ಜನೆವರಿ 1, ಡಿಸೆಂಬರ್ 24, ಜುಲೈ 4 ಈ ದಿನಗಳಂದು ಅತಿ ಕಡಿಮೆ ಜನ ಜನಿಸಿದ್ದಾರಂತೆ. ಅಧಿಕ ವರ್ಷದಲ್ಲಿ ಅಂದರೆ 4 ವರ್ಷಕ್ಕೊಮ್ಮೆ ಕ್ಯಾಲೆಂಡರ್‌ನಲ್ಲಿ ಸಿಗುವ ಫೆ.29 ರಂದು ಜನಿಸಿರುವುದಕ್ಕಿಂತಲೂ ಕಡಿಮೆ ಜನ ಈ ರಜಾ ದಿನಗಳಂದು ಜನಿಸಿದ್ದಾರಂತೆ.

ಸೆಪ್ಟೆಂಬರ್‌ನಲ್ಲಿಯೇ ಅಷ್ಟೊಂದು ಅಮೆರಿಕನ್ನರು ಹುಟ್ಟುವುದೇಕೆ?

ಸೆಪ್ಟೆಂಬರ್‌ನಲ್ಲಿಯೇ ಅಷ್ಟೊಂದು ಅಮೆರಿಕನ್ನರು ಹುಟ್ಟುವುದೇಕೆ?

ಅಮೆರಿಕದಲ್ಲಿ ಅಷ್ಟೊಂದು ಜನ ಸೆಪ್ಟೆಂಬರ್‌ನಲ್ಲಿಯೇ ಜನಿಸಲು ಕಾರಣಗಳಾದರೂ ಏನು? ರಜಾದಿನಗಳು ಹೆಚ್ಚಾಗಿರುವ ಅವಧಿಗಿಂತಲೂ ಈ ಸೆಪ್ಟೆಂಬರ್ ಮ್ಯಾಜಿಕ್ ಯಾವುದು? ಇವುಗಳ ಬಗ್ಗೆ ಸಂಶೋಧನೆಗಳು ತಿಳಿಸಿದ ವಿಷಯಗಳು ಹೀಗಿವೆ:

ಅದು ಪ್ರೇಮಿಗಳ ಚಳಿಗಾಲ

ಅದು ಪ್ರೇಮಿಗಳ ಚಳಿಗಾಲ

ಸೆಪ್ಟೆಂಬರ್ 19 ರಿಂದ ಹಿಂದೆ 40 ವಾರ ಕ್ಯಾಲೆಂಡರ್ ತಿರುಗಿಸಿ. ಅದು ಡಿಸೆಂಬರ್ ತಿಂಗಳಿನ ರಜಾ ಅವಧಿಯಾಗಿರುವುದನ್ನು ನೀವು ನೋಡುವಿರಿ. ಈ ಕುರಿತು ಪತ್ರಕರ್ತೆ ಸ್ಟೈಲ್ಸ್ ಹೇಳುವುದು ಹೀಗೆ:ಸರಾಸರಿ ಗರ್ಭಧಾರಣೆಯ ಅವಧಿಯನ್ನು ಗಣನೆಗೆ ತೆಗೆದುಕೊಂಡಲ್ಲಿ ಸೆಪ್ಟೆಂಬರ್ 9 ಹಾಗೂ 19 ರ ಮಧ್ಯೆ ಜನಿಸಿದ ಶಿಶುಗಳು ಡಿ.17 ರಂದು ಗರ್ಭದಲ್ಲಿ ಅಂಕುರಿಸಿರಬಹುದು. ಇದು ನಿಜವೂ ಆಗಿದೆ. ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಬಹುತೇಕ ಅಮೆರಿಕನ್ ವಿದ್ಯಾರ್ಥಿಗಳು, ಉದ್ಯೋಗಿಗಳು ರಜೆ ಪಡೆದಿರುತ್ತಾರೆ. ಅಂದರೆ ನೆಮ್ಮದಿಯಾಗಿ ಏಕಾಂತದಲ್ಲಿ ಸಂಗಾತಿಗಳು ಕಾಲ ಕಳೆಯುತ್ತಾರೆ ಎಂದರ್ಥ. ಅಂದ ಮೇಲೆ ಇದು ಮಕ್ಕಳನ್ನು ಹುಟ್ಟಿಸುವ ಕಾಲವೂ ಹೌದು.ಇನ್ನು ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ದಿನಗಳು ಅತಿ ಕಡಿಮೆ ಶಿಶು ಜನನದ ದಿನಗಳಾಗಿವೆ. ಈ ದಿನಗಳಂದು ಅಮೆರಿಕದ ವೈದ್ಯರು ತಾವಾಗಿಯೇ ಕೆಲಸಕ್ಕೆ ರಜೆ ಹಾಕುತ್ತಾರೆ ಎಂಬ ವಿಷಯ ತಿಳಿದಿರುವುದರಿಂದಲೇ ಪಾಲಕರಾಗುವವರು ಈ ದಿನಗಳಂದು ತಮ್ಮ ಮಗು ಜನಿಸಲು ಬಯಸಲಾರರು. 1990 ಕ್ಕೂ ಮುಂಚೆ ಶೇ.10 ರಷ್ಟು ಹೆರಿಗೆಗಳನ್ನು ಒತ್ತಾಯಪೂರ್ವಕ ಮಾಡಿಸಲಾಗಿತ್ತು. ಆದರೆ ಇದರ ನಂತರದ ದಶಕದಲ್ಲಿ ಈ ಪ್ರಮಾಣ ದುಪ್ಪಟ್ಟಾಗಿದೆ.

Most Read: ಬಡತನದ ಬೇಗೆ ತಾಳರಾದರೆ ತನ್ನ ವೃಷಣಗಳನ್ನೇ ಮಾರಾಟಕ್ಕಿಟ್ಟ ಭೂಪ!

ಚಳಿಗಾಲದ ಹಿತಕ್ಕೆ ದೇಹ ಹಾತೊರೆಯುತ್ತದೆಯಂತೆ

ಚಳಿಗಾಲದ ಹಿತಕ್ಕೆ ದೇಹ ಹಾತೊರೆಯುತ್ತದೆಯಂತೆ

ಚಳಿಗಾಲದ ದಿನಗಳಲ್ಲಿ ಸಂಗಾತಿಗಳಿಗೆ ಹೆಚ್ಚು ರಜಾದಿನಗಳು ಸಿಗುತ್ತವೆ ಎಂಬ ಅಂಶದ ಹೊರತಾಗಿಯೂ ಆ ದಿನಗಳಲ್ಲಿ ಮಿಲನವಾಗಲು ಇನ್ನೂ ಕೆಲ ಕಾರಣಗಳಿವೆ. 2001 ರಲ್ಲಿ ಟೆಕ್ಸಾಸ್ ವಿವಿಯ ವೈದ್ಯಕೀಯ ವಿಭಾಗ ನಡೆಸಿದ ಸಂಶೋಧನೆಯೊಂದರ ಪ್ರಕಾರ, ಬೇಸಿಗೆಯಲ್ಲಿ ವೀರ್‍ಯಾಣುಗಳ ಗುಣಮಟ್ಟ ಕುಸಿದಿರುತ್ತದೆ. ಇನ್ನು ದಿನ ಎಷ್ಟು ಸುದೀರ್ಘವಾಗಿರುತ್ತದೆ ಎಂಬ ಅಂಶ ಸಹ ಮಹಿಳೆ ಗರ್ಭ ಧರಿಸುವ ಸಾಧ್ಯತೆಗಳನ್ನು ನಿರ್ಧರಿಸುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ ವರ್ಷಾಂತ್ಯದ ರಜಾ ದಿನ ಅಥವಾ ಹವಾಮಾನ ಹೀಗೆ ನಿಜವಾಗಿಯೂ ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಗರ್ಭಧಾರಣೆಗೆ ಕಾರಣವಾಗುವ ನಿಖರ ಅಂಶ ಯಾವುದು ಎಂಬುದು ತಿಳಿಯದ ಸಂಗತಿಯಾಗಿದೆ.

ಪ್ರತಿದಿನವೂ ಬರ್ತ್ ಡೇ ಆಚರಣೆಯ ದಿನವೇ ಅಗಿದೆ

ಪ್ರತಿದಿನವೂ ಬರ್ತ್ ಡೇ ಆಚರಣೆಯ ದಿನವೇ ಅಗಿದೆ

ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಬರ್ತ್ ಡೇ ಇರುವುದು ನಿಜವಾದರೂ ಇನ್ನುಳಿದ ತಿಂಗಳುಗಳ ದಿನಗಳಲ್ಲಿನ ಬರ್ಥಡೇಗಳ ಸಂಖ್ಯೆಯಲ್ಲಿ ಕೆಲವು ಸಾವಿರ ವ್ಯತ್ಯಾಸ ಮಾತ್ರವಿರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಎರಡನೆ ಅತಿ ಹೆಚ್ಚು ಬರ್ಥಡೇ ದಿನವಾದ ಸೆಪ್ಟೆಂಬರ್ 19 ರಂದು ಸರಾಸರಿ 12,229 ಶಿಶುಗಳ ಜನನವಾಗಿದ್ದರೆ, 356 ನೇ ಅತಿ ಹೆಚ್ಚು ಸಂಖ್ಯೆಯ ಬರ್ಥಡೆ ದಿನವಾದ ನವೆಂಬರ್ 24 ರಂದು ಸರಾಸರಿ 10,015 ಶಿಶುಗಳು ಜನಿಸಿವೆ. ಈ ಅಂಕಿ ಅಂಶಗಳನ್ನು ಗಮನಿಸಿದಲ್ಲಿ ವರ್ಷದ ಪ್ರತಿದಿನವೂ ಸರಾಸರಿ ಬರ್ಥಡೇ ದಿನವೇ ಆಗಿದೆ.

English summary

September popular birth month for Americans!

According to real birth data compiled from 20 years of American births, mid-September is the most birthday-packed time of the year, with September 9th being the most popular day to be born in America, followed closely by September 19th.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more