For Quick Alerts
ALLOW NOTIFICATIONS  
For Daily Alerts

ದೇವರು ಕನಸಿನಲ್ಲಿ ಬಂದರೆ, ಇದರ ಅರ್ಥ ಏನು ಗೊತ್ತೇ?

|

ನಾವು ಮನುಷ್ಯರಾರೂ ದೇವರನ್ನು ಕಂಡಿಲ್ಲ . ಹಾಗಾಗಿ ನಮಗೆ ದೇವರು ಹೇಗೆ ಕಾಣಬಹುದು ಎಂಬ ಕಲ್ಪನೆ ಕೂಡ ಇಲ್ಲ. ನಮಗೆ ಆಗಾಗ ದೇವರನ್ನು ಕನಸಿನಲ್ಲಿ ನೋಡಿದಂತೆ ಭಾಸವಾಗುತ್ತದೆ . ದೇವರು ಕನಸಿನಲ್ಲಿ ಬಂದರೆ ಒಬ್ಬೊಬ್ಬರಲ್ಲಿ ಒಂದೊಂದು ಪ್ರತೀತಿ ಇದೆ . ನಂಬಿಕೆ ಇದೆ. ಆದರೆ ಸಾಮಾನ್ಯವಾಗಿ ಈ ರೀತಿಯ ಅನುಭವ ಒಂದು ಒಳ್ಳೆಯದೇ ಮತ್ತು ಧನಾತ್ಮಕ ಮುನ್ಸೂಚನೆ ಎಂದೇ ತೋರುತ್ತದೆ.ದೇವರನ್ನು ಕನಸಿನಲ್ಲಿ ಕಾಣುವ ಬಗ್ಗೆ ಕೆಲವೊಂದು ಸಾಂಕೇತಿಕ ಅರ್ಥಗಳೂ ಉಂಟು.

ನೀವೇನಾದರೂ ದೇವರನ್ನು ಕನಸಿನಲ್ಲಿ ಕಂಡರೆ ಅದರ ಅರ್ಥ ದೇವರಿಗೆ ನೀವು ಇಷ್ಟವಾಗಿದ್ದೀರಿ ಮತ್ತು ದೇವರು ನಿಮ್ಮನ್ನು ಭಕ್ತಿಭಾವರನ್ನಾಗಿ ಮಾಡಿ ತನ್ನತ್ತ ಸೆಳೆಯಲು ಬಯಸುತ್ತಿದ್ದಾನೆ ಎಂದು. ಇದನ್ನು ಸರಿಯಾದ ರೀತಿಯಲ್ಲಿ ಅನ್ವೇಷಿಸಿ ನೋಡಿದಾಗ ನಮಗೆ ದಾರಿ ತಪ್ಪಿದಂತೆ ಭಾಸವಾಗುತ್ತದೆ ಮತ್ತು ಮನಸಿನಲ್ಲಿ ತಳಮಳ ಉಂಟಾಗುತ್ತದೆ. ಆದರೆ ನೈಜ ಕಾರಣ ಅದಾಗಿರುವುದಿಲ್ಲ . ನೀವು ದೇವರ ಧ್ಯಾನ ಮಾಡುವುದನ್ನು , ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಮತ್ತು ಪೂಜೆ ಮಾಡುವುದನ್ನು ಮರೆತರೆ ಈ ರೀತಿಯ ಕನಸು ಬೀಳುವುದು ಸಹಜ. ಇದನ್ನು ಅನ್ಯಥಾ ಭಾವಿಸದೆ ದೇವರ ಕಡೆಗೆ ಭಕ್ತಿಪರವಶರಾಗಿ ನಡೆದುಕೊಳ್ಳುವುದು ಒಳ್ಳೆಯದು.

ಭರವಸೆಯ ಚಿಹ್ನೆ

ಭರವಸೆಯ ಚಿಹ್ನೆ

ನೀವು ದೇವರನ್ನು ಆಗಾಗ ಕನಸಿನಲ್ಲಿ ಕಾಣುತ್ತಿದ್ದರೆ ಅದಕ್ಕೆ ಭಯ ಪಡುವ ಅಗತ್ಯವಿಲ್ಲ. ಏಕೆಂದರೆ ಅದೇ ನಿಮಗೆ ಒಂದು ಭರವಸೆಯ ಚಿಹ್ನೆ ಆಗಿರುತ್ತದೆ . ಸುಮ್ಮನೆ ಹಾಗೆ ಒಮ್ಮೆ ಯೋಚಿಸಿ ನೋಡಿ . ನೀವೇನಾದರೂ ಕಷ್ಟದ ದಿನಗಳನ್ನು ದೂಡುತ್ತಿದ್ದರೆ , ಮಾನಸಿಕ ನೆಮ್ಮದಿ ಇಲ್ಲದಂತಾಗಿದ್ದರೆ ಆ ವೇಳೆಯಲ್ಲಿ ಈ ರೀತಿಯ ಕನಸು ನಿಮಗೆ ಬಿದ್ದಿದ್ದರೆ ಅಥವಾ ಬಿದ್ದರೆ ನಿಮ್ಮ ಕಷ್ಟದ ದಿನಗಳು ಕಳೆದು ಒಳ್ಳೆಯ ಕಾಲ ಬರುವುದು ಬಹಳ ದೂರ ಉಳಿದಿಲ್ಲ ಎಂದು ಅರ್ಥ.

ಆಂತರಿಕ ಧ್ವನಿ

ಆಂತರಿಕ ಧ್ವನಿ

ಎಂದಾದರೂ ನಿಮಗೆ ದೇವರು ಸಲಹೆ ನೀಡುತ್ತಿರುವಂತೆ ಕನಸು ಬಿದ್ದರೆ ,ಅದು ನೀವು ನಿಮ್ಮ ಮನಃಸಾಕ್ಷಿ ಹೇಳಿದಂತೆ ಕೇಳಬೇಕು ಎಂದರ್ಥ. ಏಕೆಂದರೆ ನಿಮ್ಮನ್ನು ನಿಮಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿರುವವರೂ ಮತ್ತು ಅರ್ಥ ಮಾಡಿಕೊಳ್ಳುವವರು ಬೇರೆ ಯಾರು ಇರುವುದಿಲ್ಲ . ಹಾಗಾಗಿ ಅರ್ಥ ಮಾಡಿಕೊಂಡಿರುವವರು ನೀಡುವ ಸಲಹೆ ಜೀವನದಲ್ಲಿ ಬಹಳ ಅರ್ಥಪೂರ್ಣವಾಗಿರುತ್ತದೆ . ಅದು ನಿಮಗೆ ನೀವೇ ನೆನಪಿರಲಿ.

Most Read: 28ರ ಹರೆಯದ ಕಾಮುಕನಿಂದಾಗಿ ಮೂಕ ಪ್ರಾಣಿ ಆಡು ಬಲಿ ಆಯಿತು

ದೇವರ ಆಶೀರ್ವಾದ

ದೇವರ ಆಶೀರ್ವಾದ

ನೀವು ದೇವರನ್ನು ಕನಸಿನಲ್ಲಿ ಯಾವ ಯಾವ ಜಾಗದಲ್ಲಿ ಕಾಣುತ್ತೀರೋ ಆ ಸ್ಥಳಕ್ಕೆ ಅದರದೇ ಆದ ಸ್ವಂತ ವಿಶ್ಲೇಷಣೆ ಇರುತ್ತದೆ. ಉದಾಹರಣೆಗೆ ನಿಮ್ಮ ಸ್ವಂತ ಮನೆಯಲ್ಲೇ ದೇವರು ಕಂಡಂತೆ ನಿಮಗೆ ಕನಸು ಬಿದ್ದರೆ , ದೇವರ ಆಶೀರ್ವಾದ ನಿಮ್ಮ ಮನೆಯ ಮೇಲಿದೆ ಮತ್ತು ಯಾವುದೇ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ ಎಂದು ಅರ್ಥ. ಅದೇ ರೀತಿ ನೀವು ಪ್ರತಿನಿತ್ಯ ದುಡಿಯುವವರಾಗಿದ್ದರೆ , ಕೆಲಸ ಮಾಡುವ ಸ್ಥಳದಲ್ಲಿ ದೇವರನ್ನು ಕಂಡಂತೆ ಕನಸು ಬಿದ್ದರೆ ನೀವು ಇನ್ನೂ ಬಹಳ ಕಷ್ಟ ಪಟ್ಟು ದುಡಿದು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದೂ ಮತ್ತು ನೀವು ವಿದ್ಯಾರ್ಥಿಯಾಗಿ ಶಾಲೆಯಲ್ಲಿ ದೇವರು ಕಂಡಂತೆ ಕನಸು ಬಿದ್ದರೆ ಕಷ್ಟ ಪಟ್ಟು ಓದಬೇಕೆಂದೂ ಇದರ ತಾತ್ಪರ್ಯ.

Most Read: ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಕೋಪ

ಕೋಪ

ದೇವರಿಗೆ ಸಂಬಂಧಿಸಿದಂತೆ ಬೀಳುವ ಕನಸುಗಳೆಲ್ಲವೂ ಸಕಾರಾತ್ಮಕ ಅಥವಾ ಒಳ್ಳೆಯ ಭಾವನೆಗಳನ್ನೇ ಕೊಡುತ್ತವೆ ಎಂದೇನಿಲ್ಲ. ಉದಾಹರಣೆಗೆ ದೇವರು ನಿಮ್ಮ ಮೇಲೆ ಕೋಪಿಸಿಕೊಂಡಂತೆ ಕನಸು ಬಿದ್ದರೆ , ನೀವು ದೇವರಿಗೆ ಇಷ್ಟವಿಲ್ಲದಂಥ ಕೆಲಸ ಮಾಡುತ್ತಿದ್ದೀರಿ ಮತ್ತು ನೇಮ ನಿಷ್ಠೆ ಮಡಿಯನ್ನು ಪಾಲಿಸುತ್ತಿಲ್ಲ ಎಂದರ್ಥ. ಒಂದು ವೇಳೆ ಈ ರೀತಿಯ ಕನಸು ನಿಮಗೆ ಆಗಾಗ್ಗೆ ಬೀಳುತ್ತಿದ್ದರೆ ನೀವು ಆದಷ್ಟು ಬೇಗ ನಿಮ್ಮ ಅನೀತಿಯಿಂದ ಕೂಡಿದ ಪದ್ದತಿಯನ್ನು ಬದಲಿಸಿಕೊಂಡು ಭಕ್ತಿಯಿಂದ ನಡೆದುಕೊಳ್ಳುವುದು ಒಳಿತು.

English summary

Seeing God in Dream Meaning

Though not all of us have an image of God in our minds, some humans often dream about seeing God in their dreams. To dream about god can mean various things, but it’s a general belief that a dream about God is a positive one. There are some symbolic meanings attached to dream about God.Path of God If you dream about God, it could mean that God is trying to get you closer to him. In the material pursuit of the world, we stray from the path of God. This dream could mean that you should get closer to God.
Story first published: Tuesday, February 5, 2019, 16:34 [IST]
X
Desktop Bottom Promotion