For Quick Alerts
ALLOW NOTIFICATIONS  
For Daily Alerts

ರಾಶಿ ಚಕ್ರಕ್ಕೆ ಅನುಗುಣವಾಗಿ ಪ್ರತಿಯೊಬ್ಬರಲ್ಲಿ ಅಡಗಿರುವ ಪ್ರತಿಭೆಗಳು

|

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಏನಾದರೊಂದು ಪ್ರತಿಭೆಯು ಅಡಗಿರುವುದು. ಇದು ಆತನಿಗ ಕೆಲವೊಂದು ಸಲ ತಿಳಿದಿರುವುದಿಲ್ಲ. ಇಂತಹ ಪ್ರತಿಭೆಯು ಕೆಲವೊಂದು ಸಲ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಬಹುದು, ಇನ್ನು ಕೆಲವೊಮ್ಮೆ ಹಾಗೆ ಮುದುಡಿ ಹೋಗಬಹುದು.

ನಮ್ಮಲ್ಲಿರುವ ಪ್ರತಿಭೆಯನ್ನು ಬೇರೆಯವರು ಹುಡುಕಿ ಹೇಳಬಹುದು. ನಿಮ್ಮಲ್ಲಿ ಈ ರೀತಿಯ ಪ್ರತಿಭೆ ಇದೆ, ಅದನ್ನು ಬೆಳೆಸಿಕೊಂಡು ಹೋಗಿ ಎನ್ನಬಹುದು. ಆದರೆ ನಾವು ಈ ಪ್ರತಿಭೆಯನ್ನು ಹುಡುಕುವುದು ಹೇಗೆ. ನಮ್ಮ ರಾಶಿ ಚಕ್ರಗಳಿಗೆ ಅನುಗುಣವಾಗಿ ನಮ್ಮಲ್ಲಿ ಕೂಡ ಕೆಲವು ಪ್ರತಿಭೆಗಳು ಅಡಗಿರುವುದು. ಆ ಪ್ರತಿಭೆಯು ಯಾವುದು ಎಂದು ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಮೇಷ(ಮಾರ್ಚ್ 21-ಏಪ್ರಿಲ್ 19)

ಮೇಷ(ಮಾರ್ಚ್ 21-ಏಪ್ರಿಲ್ 19)

ಮೇಷ ರಾಶಿಯವರು ಜನ್ಮತಃ ನಾಯಕರು, ಜನರು ಯಾವಾಗಲೂ ಇವರನ್ನು ಹಿಂಬಾಲಿಸುತ್ತಾ ಇರುವರು. ಇವರು ಬೇರೆಯವರಿಗೆ ಮಾದರಿಯಾಗಿರುವರು. ಸರಿಯಾದ ವಿಷಯಗಳಿಗೆ ಯಾವಾಗ ಎದ್ದು ನಿಲ್ಲಬೇಕು ಎನ್ನುವುದು ಇವರಿಗೆ ಸರಿಯಾಗಿ ತಿಳಿದಿದೆ ಮತ್ತು ಫಲಿತಾಂಶ ಸಿಗುವ ತನಕ ಇವರು ತಮ್ಮ ಬದ್ಧತೆಯನ್ನು ಪ್ರದರ್ಶಿಸುವರು. ಇನ್ನು ಮೇಷ ರಾಶಿಯವರಲ್ಲಿ ಯಾವಾಗಲೂ ಒಬ್ಬ ಯೋಧನ ಮನಸ್ಥಿತಿಯು ಇರುತ್ತದೆ ಮತ್ತು ಅವರಿಗೆ ಇದನ್ನು ಹೇಗೆ ಬಿಡಬೇಕೆಂದು ತಿಳಿಯಲ್ಲ. ಇವರ ವ್ಯಕ್ತಿಯು ತುಂಬಾ ಶ್ರಮ ಹಾಗೂ ಪಟ್ಟುಹಿಡಿದಿರುವುದಾಗಿದೆ. ಇವರು ಯಾವತ್ತೂ ಜಗಳ ದಿಂದ ಓಡಿ ಹೋಗುವವರಲ್ಲ. ಇವರು ಆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವವರು. ಹಿಂದಿನ ಜನ್ಮದಲ್ಲಿ ಇವರು ಯೋಧ ಅಥವಾ ಹೋರಾಟಗಾರನಾಗಿದ್ದರು.

ವೃಷಭ(ಏಪ್ರಿಲ್ 20-ಮೇ 20)

ವೃಷಭ(ಏಪ್ರಿಲ್ 20-ಮೇ 20)

ವೃಷಭ ರಾಶಿಯವರು ಒಳ್ಳೆಯ ಆಹಾರಕ್ಕಾಗಿ ಏನು ಮಾಡಬಲ್ಲರು. ಒಳ್ಳೆಯ ಊಟವು ಏನು ಎನ್ನುವುದು ಇವರಿಗೆ ತಿಳಿದಿದೆ. ಈ ಕಾರಣದಿಂದಾಗಿ ಇವರಲ್ಲಿ ಒಳ್ಳೆಯ ಅಡುಗೆ ಮಾಡುವ ಪ್ರತಿಭೆಯು ಇರುವುದು. ಇದರಿಂದ ಇನ್ನು ಕಾಯುವುದು ಯಾಕೆ? ಅಡುಗೆ ಮನೆಗೆ ಹೋಗಿ ನಿಮ್ಮ ಕೆಲಸ ಆರಂಭಿಸಿ. ಇನ್ನು ಈ ರಾಶಿಯವರಿಗೆ ವೃಷಭ ರಾಶಿಯವರು ತಮ್ಮ ಅಭಿಪ್ರಾಯ ಮಂಡಿಸಿ, ತಮ್ಮ ನಿರ್ಧಾರಕ್ಕೆ ಬದ್ಧರಾಗಿ ನಿಲ್ಲುವವರು. ನಾಯಕನಾಗಿರಲು ಏನು ಬೇಕು ಎಂದು ಅವರಿಗೆ ತಿಳಿದಿದೆ. ಇವರು ಬೇರೆಯವರಿಗೆ ಮಾದರಿಯಾಗಬಲ್ಲರು. ಇವರು ತುಂಬಾ ಸೌಮ್ಯ ಸ್ವಭಾವದವರಾಗಿರುವ ಕಾರಣದಿಂದಾಗಿ ಯಶಸ್ಸಿನ ಶ್ರೇಯ ಬೇರೆಯವರಿಗೂ ನೀಡುವರು. ಹಿಂದಿನ ಜನ್ಮದಲ್ಲಿ ಈ ವ್ಯಕ್ತಿಗಳು ಒಬ್ಬ ನಾಯಕ, ಪ್ರವರ್ತಕ ಅಥವಾ ಪರಿಶೋಧಕನಾಗಿದ್ದಿರಬಹುದು.

ಮಿಥುನ(ಮೇ21-ಜೂನ್ 20)

ಮಿಥುನ(ಮೇ21-ಜೂನ್ 20)

ಮಿಥುನದ ರಾಶಿಗ್ರಹವು ಬುಧವಾಗಿರುವ ಕಾರಣದಿಂದಾಗಿ ಅವರು ತುಂಬಾ ಕುತೂಹಲಕಾರಿ, ಅರಿವು ಇರುವ ಮತ್ತು ಜ್ಞಾನವಿರುವ ವ್ಯಕ್ತಿ ಆಗಿರುವಿರಿ. ಬೇರೆಯವರಿಗಿಂತ ನಿಮ್ಮ ಜಾಣ್ಮೆಯ ಮಟ್ಟವು ತುಂಬಾ ಹೆಚ್ಚಾಗಿರುವುದು. ಇದು ನಿಮ್ಮಲ್ಲಿ ಅಡಗಿರುವ ಪ್ರತಿಭೆ ಯಾಗಿರುವುದು. ಇನ್ನು ಈ ರಾಶಿಯವರದು, ಬಂಗಾರದಂತಹ ಮನಸ್ಸು ಮತ್ತು ಪ್ರತಿಯೊಬ್ಬರಿಗೂ ಅವರು ನೆರವಾಗುವರು. ಇವರಿಗೆ ಇನ್ನೊಬ್ಬರ ನೋವು ಅರ್ಥ ಮಾಡಿಕೊಳ್ಳುವ ಮನಸ್ಸು ಮತ್ತು ತೀಕ್ಷ್ಣವಾಗಿರುವ ಬುದ್ಧಿಯಿದೆ. ನೋವಿನಲ್ಲಿ ಇರುವವರ ಕಾಳಜಿ ಹೇಗೆ ವಹಿಸಬೇಕೆಂದು ಅವರಿಗೆ ತಿಳಿದಿದೆ. ಅವರು ನಿಸ್ವಾರ್ಥ ಭಾವದಿಂದ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ ಎಂದು ಬಯಸವರು. ಹಿಂದಿನ ಜನ್ಮದಲ್ಲಿ ಇವರು ವೈದ್ಯ ಅಥವಾ ಔಷಧಿಕಾರನಾಗಿರಬಹುದು. ಇನ್ನು ಇವರು ಎಂತಹ ವಿಚಾರಗಳನ್ನಾದರೂ ಹೀರಿಕೊಳ್ಳುವ ಅಥವಾ ಅರ್ಥೈಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ಏನನ್ನೇ ಕಲಿಯಲು ಪ್ರಯತ್ನಿಸಿದರೂ ಅದನ್ನು ಬಲು ಸುಲಭವಾಗಿ ನಿರ್ವಹಿಸುತ್ತಾರೆ. ಉದಾಹರಣೆಗೆ ಹಾಡುಗಾರಿಕೆ, ಆಡುವುದು, ಅಭಿನಯ, ವಾದ್ಯ, ಭಾಷೆ ಕಲಿಕೆ ಅದೇನೇ ಆದರೂ ಬಹುಬೇಗ ಕಲಿತುಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ.

ಕರ್ಕಾಟಕ(ಜೂನ್ 21-ಜುಲೈ22)

ಕರ್ಕಾಟಕ(ಜೂನ್ 21-ಜುಲೈ22)

ಭಾವೋದ್ರಿಕ್ತ ಚಂದ್ರನ ಚಕ್ರಗಳಿಂದ ಈ ರಾಶಿಯವರು ತುಂಬಾ ಪ್ರಭಾವಕ್ಕೆ ಒಳಗಾಗುವರು. ಇದರಿಂದಾಗಿ ಈವು ತುಂಬಾ ಆಳವಾಗಿ ಗಮನಹರಿಸುವಿರಿ. ಇದು ನಿಮ್ಮ ಪೈಂಟಿಂಗ್ ಗಳಲ್ಲಿ ಕಾಣಸಿಗುವುದು. ನೀವು ಇದುವರೆಗೆ ಪೈಂಟಿಂಗ್ ಮಾಡದೆ ಇದ್ದರೆ ಈಗಲೇ ಒಂದು ಬ್ರಷ್ ತೆಗೆದುಕೊಂಡು ಪೈಟಿಂಗ್ ಮಾಡಿ. ಇನ್ನು ಈ ರಾಶಿಯವರು ಕರ್ಕಾಟಕ ರಾಶಿಯವರು ತುಂಬಾ ಹೊಂದಿಕೊಳ್ಳುವ ಸ್ವಭಾವ ಹಾಗೂ ತೀಕ್ಷ್ಣ ಬುದ್ಧಿ ಹೊಂದಿರುವರು. ಇವರು ಸ್ವಭಾವದಲ್ಲಿ ತಂತ್ರಜ್ಞರಾಗಿರುವರು. ಯಾವುದೇ ಕೆಟ್ಟ ಪರಿಸ್ಥಿತಿಯಿಂದ ಒಳ್ಳೆಯದನ್ನು ಮಾಡುವ ಕಲೆ ಇವರಿಗೆ ತಿಳಿದಿದೆ. ಪರಿಸ್ಥಿತಿಯನ್ನು ತಮ್ಮ ಪರ ಹೇಗೆ ತಿರುಗಿಸಬೇಕು ಎಂದು ಅವರಿಗೆ ತಿಳಿದಿದೆ. ಹಿಂದಿನ ಜನ್ಮದಲ್ಲಿ ಇವರುಪರಿಣಿತ ರಾಜತಾಂತ್ರಿಕ ಅಥವಾ ಸಂಧಾನಕಾರನಾಗಿರಬಹುದು.

ಸಿಂಹ(ಜುಲೈ23-ಆಗಸ್ಟ್ 22)

ಸಿಂಹ(ಜುಲೈ23-ಆಗಸ್ಟ್ 22)

ನಿಮಗೆ ದೃಶ್ಯೀಕರಣದ ಒಳ್ಳೆಯ ಜ್ಞಾನವಿರುವುದು. ಯಾವುದೇ ಪಾರ್ಟಿ ಅಥವಾ ಕಾರ್ಯಕ್ರಮವನ್ನು ಯಾವ ರೀತಿಯಲ್ಲಿ ಆರಂಭಿಸಬೇಕು ಎಂದು ನಿಮಗೆ ಸರಿಯಾಗಿ ತಿಳಿದಿದೆ. ಇದನ್ನು ನೀವು ಸರಿಯಾಗಿ ದೃಶ್ಯೀಕರಿಸಬಲ್ಲಿರಿ ಮತ್ತು ದೀರ್ಘವಾಗಿ ಅಲಂಕಾರ ಮಾಡಬಲ್ಲಿರಿ. ಈ ರಾಶಿಯವರು ಅಭಿವ್ಯಕ್ತಿ ಪಡಿಸುವ ಹಾಗೂ ಭಾವನಾತ್ಮಕವಾದ ವ್ಯಕ್ತಿಗಳಾಗಿರುವರು. ತಮ್ಮ ಹೃದಯವು ಯಾವುದರ ಆಕಾಂಕ್ಷಿಯಾಗಿದೆ ಮತ್ತು ಅದನ್ನು ಹೇಗೆ ಪಡೆಯಬೇಕು ಎಂದು ಅವರಿಗೆ ತಿಳಿದಿದೆ. ಆದರೆ ಇವರಲ್ಲಿ ಇರುವಂತಹ ದೊಡ್ಡ ಗುಣವೆಂದರೆ ಜಗತ್ತು ಇವರನ್ನು ಇನ್ನೊಂದು ದೃಷ್ಟಿಯಿಂದ ನೋಡುವಂತೆ ಮಾಡುವರು. ಹಿಂದಿನ ಜನ್ಮದಲ್ಲಿ ಇವರು ಒಂದಾ ಕಲಾವಿದ, ಚಿತ್ರಕಲಾವಿದ ಅಥವಾ ತನ್ನದೇ ಕಲ್ಪನೆಯಿಂದ ಜಗತ್ತನ್ನು ನಿರ್ಮಿಸಿದ ಶಿಲ್ಪಿಯಾಗಿದ್ದಿರಬಹುದು.

ಕನ್ಯಾ(ಆಗಸ್ಟ್ 23-ಸಪ್ಟೆಂಬರ್ 22)

ಕನ್ಯಾ(ಆಗಸ್ಟ್ 23-ಸಪ್ಟೆಂಬರ್ 22)

ನೀವು ಪ್ರತಿಯೊಂದು ವಿವರ ಬಗ್ಗೆ ದೃಷ್ಟಿ ನೆಟ್ಟಿರುವಿರಿ. ಇದರೊಂದಿಗೆ ನಿಮ್ಮಲ್ಲಿ ಒಳ್ಳೆಯ ತಾಳ್ಮೆ ಮತ್ತು ಕೈಚಳಕವು ಕಡುಬರುವುದು. ಮ್ಯಾಜಿಕ್ ಮಾಡುವುದು ಪ್ರತಿಯೊಬ್ಬರಿಗೂ ಕರಗತ ಆಗದು. ಆದರೆ ನೀವು ಇದನ್ನು ಕಲಿತುಕೊಂಡರೆ ಆಗ ಖಂಡಿತವಾಗಿಯೂ ಯಶಸ್ಸು ಕಟ್ಟಿಟ್ಟ ಬುತ್ತಿ.ಇನ್ನು ಇತರ ರಾಶಿಚಕ್ರಗಳಿಗೆ ಹೋಲಿಸಿದರೆ ಕನ್ಯಾ ರಾಶಿಯವರು ಹೆಚ್ಚು ಬುದ್ಧಿವಂತರು ಎಂದು ಪರಿಗಣಿಸಲಾಗುವುದು.ಇವರು ತಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಕ್ರಮಬದ್ಧವಾದ ವಿಧಾನಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ.ಇವರ ಉತ್ತಮ ಆಯ್ಕೆಗಳೇ ಇವರ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಹೆಚ್ಚು ಶ್ರಮದಾಯಕ ವ್ಯಕ್ತಿಗಳಾಗಿರುವುದರಿಂದ ಯಾವುದೇ ಕೆಲಸವನ್ನು ಒಪ್ಪಿಸಿದರೂ ಅದನ್ನು ಮೊದಲ ಹಂತದಲ್ಲಿಯೇ ಯಶಸ್ವಿ ಯಾಗುವಂತೆ ಮಾಡುತ್ತಾರೆ.

ತುಲಾ(ಸಪ್ಟೆಂಬರ್ 23-ಅಕ್ಟೋಬರ್ 22)

ತುಲಾ(ಸಪ್ಟೆಂಬರ್ 23-ಅಕ್ಟೋಬರ್ 22)

ತುಲಾ ರಾಶಿಯವರು ಯಾವಾಗಲೂ ಸೌಂದರ್ಯದ ಆರಾಧಕರು. ಅದರಲ್ಲೂ ಮುಖ್ಯವಾಗಿ ಕಲೆ ಮತ್ತು ಕರಕುಶಲ ವಿಚಾರದಲ್ಲಿ. ನಿಮ್ಮಲ್ಲಿ ಒಳ್ಳೆಯ ಕಲೆ ಮತ್ತು ಕರಕುಶಲದ ಪ್ರತಿಭೆಯು ಅಡಗಿದೆ. ಹೀಗಾಗಿ ಇದನ್ನು ನೀವು ಒಳ್ಳೆಯ ರೀತಿಯಲ್ಲಿ ಕರಗತ ಮಾಡಿಕೊಳ್ಳಿ.

ವೃಶ್ಚಿಕ(ಅಕ್ಟೋಬರ್ 23-ನವಂಬರ್ 21)

ವೃಶ್ಚಿಕ(ಅಕ್ಟೋಬರ್ 23-ನವಂಬರ್ 21)

ನಿಮ್ಮ ಪ್ರಬಲ ವ್ಯಕ್ತಿತ್ವದಿಂದಾಗಿ ನೀವು ಎಲ್ಲರ ಆಕರ್ಷಣೆಯ ಬಿಂದುವಾಗುವಿರಿ ಮತ್ತು ಇದರ ಹೊರತಾಗಿ ನಿಮ್ಮಲ್ಲಿ ಒಳ್ಳೆಯ ತಮಾಷೆಯ ಗುಣಗಳು ಇರುವುದು. ಇದರಿಂದಾಗಿ ನೀವು ಒಬ್ಬ ಮೂಲ ಕಾಮಿಡಿಯನ್ ಆಗುವಿರಿ. ನಿಮ್ಮ ತಮಾಷೆಯ ಗುಣದಿಂದಾಗಿ ಸಣ್ಣ ಕಥೆಯು ದೊಡ್ಡ ಮಟ್ಟದಲ್ಲಿ ಮನರಂಜನೆ ನೀಡಬಹುದು. ಜನರು ಬಿದ್ದುಬಿದ್ದು ನಗಬಹುದು. ಇನ್ನುಇವರು ನೈಸರ್ಗಿಕವಾಗಿಯೇ ಉತ್ತಮ ಜ್ಞಾನವನ್ನು ಹೊಂದಿದ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ಪರಿಪೂರ್ಣಗೊಳಿಸುತ್ತಾರೆ. ತಮ್ಮ ಪ್ರತಿಭೆ ಅಥವಾ ಬುದ್ಧಿವಂತಿಕೆಯಿಂದ ಮನರಂಜನೆ ಹಾಗೂ ತಂತ್ರಗಾರಿಕೆಯನ್ನು ಕೈಗೊಳ್ಳುವರು. ಇವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಕೆಲಸದಲ್ಲಿ ಹೇಗೆ ಯಶಸ್ಸನ್ನು ಕಾಣಬೇಕು ಎನ್ನುವ ಸೂಕ್ಷ್ಮತೆಯನ್ನು ತಿಳಿದಿರುತ್ತಾರೆ.

ಧನು(ನವಂಬರ್ 22-ಡಿಸೆಂಬರ್ 21)

ಧನು(ನವಂಬರ್ 22-ಡಿಸೆಂಬರ್ 21)

ನಿಮ್ಮಲ್ಲಿ ಅಡಗಿರುವಂತಹ ಪ್ರತಿಭೆಯು ತುಂಬಾ ಭಿನ್ನ. ನಿಮ್ಮಲ್ಲಿನ ಕಲ್ಪನೆಯಿಂದಾಗಿ ನೀವು ಸ್ನೇಹಿತರ ಬಳಗದಲ್ಲಿ ಒಳ್ಳೆಯ ಉಡುಗೊರೆ ನೀಡುವವರು ಆಗಿರುವಿರಿ. ನಿಮ್ಮ ಸುತ್ತಲು ಇರುವಂತಹ ಯಾವ ವ್ಯಕ್ತಿಗೆ ಯಾವ ರೀತಿಯ ಉಡುಗೊರೆಯು ಕೆಲಸ ಮಾಡುವುದು ಎಂದು ನಿಮಗೆ ಸರಿಯಾಗಿ ತಿಳಿದಿರುವುದು.

ಮಕರ(ಡಿಸೆಂಬರ್ 22-ಜನವರಿ19)

ಮಕರ(ಡಿಸೆಂಬರ್ 22-ಜನವರಿ19)

ತಾಳ್ಮೆ, ಶಾಂತ ಗುಣದಿಂದಾಗಿ ನೀವು ಒಳ್ಳೆಯ ಚಾಲಕನಾಗುವಿರಿ. ನಿಮ್ಮ ಸುತ್ತಲು ಇರುವಂತಹ ಜನರು ಕೂಡ ಇದನ್ನೇ ನಂಬಿರುವರು. ಮಕರ ರಾಶಿಯವರು ತಮಗಿಂತ ದುರ್ಬಲರನ್ನು ರಕ್ಷಿಸುವವರಾಗಿರುವರು. ಇವರಿಗೆ ಏನೂ ಮಾಡದವರಿಗಾಗಿ ಮಿಡಿಯುವಂತಹ ಹೃದಯವು ಇವರದ್ದಾಗಿದೆ ಮತ್ತು ಇವರ ಜತೆಗೆ ನಿಲ್ಲದವರಿಗೂ ಇವರು ನೆರವಾಗುವಂತಹ ಆತ್ಮ ಹೊಂದಿರುವರು. ಹಿಂದಿನ ಜನ್ಮದಲ್ಲಿ ಈ ರಾಶಿಯವರು ಒಬ್ಬ ರಕ್ಷಕ ಅಥವಾ ಉದ್ಧಾರಕನಾಗಿದ್ದೀರ ಬಹುದು.

ಕುಂಭ(ಜ.20-ಫೆ.18)

ಕುಂಭ(ಜ.20-ಫೆ.18)

ಭವಿಷ್ಯದ ಬಗ್ಗೆ ತುಂಬಾ ತಿಳಿಯುವಂತಹ ಆರನೇ ಇಂದ್ರಿಯವು ಇವರಲ್ಲಿ ಇರುವುದು. ಇವರು ಯಾವುದೇ ವಿಚಾರವನ್ನು ತುಂಬಾ ಸುಲಭವಾಗಿ ತಿಳಿಯುವರು. ಆಸ್ಕರ್ ಬೆಟ್ಟಿಂಗ್, ಕಾರ್ಡ್ ಗೇಮ್ ಇತ್ಯಾದಿಗಳಲ್ಲಿ ಇವರ ಗ್ರಹಿಕೆ ಸರಿಯಾಗಿರುವುದು. ಇನ್ನು ಇವರು ಯಶಸ್ಸು ಪಡೆಯುವಂತಹ ಪ್ರೇರಣೆ ಹೊಂದಿರುವರು ಮತ್ತು ಇತರರು ಇವರನ್ನು ನೋಡಿ ಪ್ರೇರಣೆ ಪಡೆದುಕೊಳ್ಳುವರು. ಈಗ ಮಾಡುವುದಕ್ಕಿಂತ ಇನ್ನು ಹೆಚ್ಚಿಗೆ ಮಾಡಬಹುದೆಂದು ಬೇರೆಯವರಿಗೆ ತೋರಿಸಿಕೊಡುವರು. ಹಿಂದಿನ ಜನ್ಮದಲ್ಲಿ ಈ ರಾಶಿಯವರು ಒಬ್ಬ ಪ್ರೇರಕ, ನಾಯಕ ಅಥವಾ ಪ್ರವರ್ತಕ ನಾಗಿದ್ದೀರಬಹುದು. ಇನ್ನು ಇವರನ್ನು ಜಗತ್ತನ್ನು ವಿಭಿನ್ನವಾಗಿ ನೋಡುವ ಪ್ರತಿಭೆಯನ್ನು ಕಂಡುಕೊಳ್ಳುವ ರಾಶಿಚಕ್ರ ಎಂದು ಹೇಳಲಾಗುವುದು. ಹೊಸತನವನ್ನು ಕಂಡುಕೊಳ್ಳುವ ವಿಶೇಷ ಕಲೆಯನ್ನು ಹೊಂದಿರುತ್ತಾರೆ. ಇವರು ಅತ್ಯುತ್ತಮ ಪ್ರತಿಭೆಯನ್ನು ಹೊಂದಿದ ವ್ಯಕ್ತಿಗಳಾಗಿರುತ್ತಾರೆ. ಹೊಸತನ್ನು ತಿಳಿಯುವುದು ಹಾಗೂ ಅದರ ಮೇಲೆ ಪ್ರಯೋಗ ಕೈಗೊಳ್ಳುವುದು ಎಂದರೆ ಇವರಿಗೆ ಅತ್ಯಂತ ಪ್ರಿಯವಾದ ವಿಚಾರವಾಗಿರುತ್ತವೆ.

ಮೀನ(ಫೆ.19-ಮಾರ್ಚ್ 20)

ಮೀನ(ಫೆ.19-ಮಾರ್ಚ್ 20)

ನೀವು ಕನಸುಗಾರ, ಕಲ್ಪನಾಶೀಲ ಮತ್ತು ಕ್ರಿಯಾತ್ಮಕ ವ್ಯಕ್ತಿ. ಇದರಿಂದಾಗಿ ನೀವು ಒಳ್ಳೆಯ ನೃತ್ಯ ಪಟು ಆಗುವಿರಿ. ನೀವು ಚೆನ್ನಾಗಿ ಕಲಿತಿರುವಂತಹ ನೃತ್ಯ ಪಟು ಅಲ್ಲದೆ ಇದ್ದರೂ ನಿಮಗೆ ಯಾವ ಹೆಜ್ಜೆಗಳನ್ನು ಇಡಬೇಕು ಮತ್ತು ಅದನ್ನು ಯಾವ ಸಮಯ ಹಾಗೂ ಗತಿಯಲ್ಲಿರಬೇಕು ಎಂದು ತಿಳಿದಿರುವುದು. ಮೀನ ರಾಶಿಯವರು ತಮ್ಮ ಆದ ಭಿನ್ನ ದೃಷ್ಟಿಯಿಂದ ವಿಶ್ವವನ್ನು ನೋಡುವರು. ಇವರು ಸಾಮಾಜಿಕ ಕಟ್ಟುಪಾಡುಗಳಿಗೆ ಜೋತುಬಿದ್ದವರಲ್ಲ. ಆದರೆ ತಮ್ಮದೇ ಆಗಿರುವ ಹಾದಿ ಸೃಷ್ಟಿಸುವರು. ಜಗತ್ತಿಗೆ ಇವರಲ್ಲಿ ತಮ್ಮದೇ ಆಗಿರುವ ಆಲೋಚನೆಗಳಿರುವುದು ಮತ್ತು ಸಮಾಜಕ್ಕೂ ತಮ್ಮದೇ ಆಗ ದೃಷ್ಟಿ ಕೋನವಿರುವುದು. ಹಿಂದಿನ ಜನ್ಮದಲ್ಲಿ ಇವರು ದಾರ್ಶನಿಕ ನಾಗಿದ್ದೀರ ಬಹುದು. ಇವರು ಎಲ್ಲ ಕಟ್ಟುಪಾಡುಗಳನ್ನು ಮುರಿದು ತಮ್ಮದೇ ಆಗಿರುವ ಹಾದಿ ಸೃಷ್ಟಿಸಿದವರಾಗಿದ್ದೀರ ಬಹುದು. ಇನ್ನುಈ ಈ ರಾಶಿಯ ವ್ಯಕ್ತಿಗಳಿಗೆ ಸಂಗೀತ ಹಾಗೂ ಆಧುನಿಕತೆ ಎಂದರೆ ಬಹಳ ಇಷ್ಟ ಹಾಗೂ ಮಹಾನ್ ವಿಚಾರ ವಾಗಿರುತ್ತವೆ. ಇವರು ಸಾಮಾನ್ಯವಾಗಿ ಸಂಗೀತ, ಕಲೆ ಮತ್ತು ಕನಸುಗಳ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತಾರೆ. ಇವರು ಸದಾ ಕಾಲ ಸೃಜನಾತ್ಮಕ ರೀತಿಯಲ್ಲಿ ಚಿಂತನೆ ನಡೆಸುತ್ತಲೇ ಇರುತ್ತಾರೆ. ಕನಸುಗಾರರಾದ ಇವರು ಹೊಸ ವಿಚಾರಗಳ ಬಗ್ಗೆಯೂಹೆಚ್ಚಿನ ಚಿಂತನೆ ನಡೆಸುತ್ತಾರೆ.

English summary

Secret hidden talent as per your Zodiac Sign

We all carry something in us with which we are naturally blessed, but finding that hidden talent can be tricky sometimes. Fortunately, we can always look to our stars for some guidance as they help to discover something about ourselves. So, let’s find out what secret hidden talent we carry according to our Zodiac sign
Story first published: Tuesday, May 14, 2019, 18:09 [IST]
X
Desktop Bottom Promotion