For Quick Alerts
ALLOW NOTIFICATIONS  
For Daily Alerts

ಸ್ಫೂರ್ತಿದಾಯಕ ಉಲ್ಲೇಖಗಳು: ಹೃದಯದಲ್ಲಿ ಯುವಕರಂತೆ ಇದ್ದರೆ ಜೀವನದಲ್ಲಿ ಸಂತೋಷವಾಗಿ ಇರಬಹುದು

|

ಪ್ರತೀ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಾಗ ನಮಗೆ ವಯಸ್ಸಾಗುತ್ತಾ ಹೋಗುತ್ತದೆ. ಆದರೆ ನಾವೆಲ್ಲರೂ ಈ ಸತ್ಯವನ್ನು ಮರೆಯುತ್ತೇವೆ ಮತ್ತು ಅತಿಯಾಸೆಯಲ್ಲೇ ದಿನ ದೂಡುತ್ತೇವೆ. ಇದರಿಂದಾಗಿ ನಮಗೆ ಸ್ವಲ್ಪವೂ ಜೀವನದಲ್ಲಿ ಸುಖ ಎನ್ನವುದು ಸಿಗುವುದೇ ಇಲ್ಲ. ಹೀಗಾಗಿ ದೇಹವು ಕೂಡ ವಯಸ್ಸಾದಂತೆ ಕಂಡುಬರುವುದು. ಹೃದಯದಿಂದ ಯುವಕರಾಗಿದ್ದರೆ ಆಗ ದೇಹವು ಯುವಕರಂತೆ ಕಾಣುವುದು. ಇದಕ್ಕಾಗಿ ನಾವು ಮಾಡಬೇಕಾಗಿರುವುದು ಇಷ್ಟೇ. ಅದೇನೆಂದರೆ ಯಾವಾಗಲೂ ಸಂತೋಷವಾಗಿ ಇರುವುದು. ಸಂತೋಷವಾಗಿದ್ದರೆ ದೇಹಕ್ಕೆ ವಯಸ್ಸಾದರೂ ಅದು ಕಂಡುಬರುವುದಿಲ್ಲ.

ಬಾಲ್ಯದಲ್ಲಿ ನಾವು ಇದ್ದ ಸ್ಥಿತಿ ಕಲ್ಪಿಸಿಕೊಂಡರೆ ಆಗ ಸ್ವಚ್ಛಂದವಾಗಿ ನಮ್ಮದೇ ಪ್ರಪಂಚದಲ್ಲಿ ಇದ್ದೆವು. ಅದೇ ರೀತಿಯಾಗಿ ಈಗಲೂ ಇರಬೇಕು. ಹೃದಯದಲ್ಲಿ ಯುವಕರಂತೆ ಇದ್ದರೆ ಆಗ ಧನಾತ್ಮಕ ಮತ್ತು ಸಂತೋಷವಾಗಿ ಇರಬಹುದು ಎಂದು ಕೆಲವು ಮಹನೀಯರು ಹೇಳಿರುವರು. ಅವರು ಈ ಬಗ್ಗೆ ನಮಗೆ ಕೆಲವು ನುಡಿಗಳನ್ನು ಹೇಳಿರುವರು. ಇಂತಹ ಕೆಲವೊಂದು ನುಡಿಗಳನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದರಿಂದ ನಿಮ್ಮ ಹೃದಯವು ಕೂಡ ಯೌವನಯುವಾಗಿ ಸ್ಪೂರ್ತಿಯನ್ನು ಪಡೆಯುವುದು.

1. ವಯಸ್ಸಾದ ವ್ಯಕ್ತಿಯ ಅಂತರಂಗದಲ್ಲೂ ಹದಿಹರೆಯದ ಯುವಕನೊಬ್ಬ ಇರುತ್ತಾನೆ

1. ವಯಸ್ಸಾದ ವ್ಯಕ್ತಿಯ ಅಂತರಂಗದಲ್ಲೂ ಹದಿಹರೆಯದ ಯುವಕನೊಬ್ಬ ಇರುತ್ತಾನೆ

ಪ್ರತಿಯೊಬ್ಬ ವಯಸ್ಸಾದ ವ್ಯಕ್ತಿಯ ಅಂತರಂಗದಲ್ಲೂ ಹದಿಹರೆಯದ ಯುವಕನೊಬ್ಬ ಇರುತ್ತಾನೆ. ಆತ ಇದೆಲ್ಲಾ ಏನು ನಡೆಯುತ್ತಿದೆ ಎಂದು ಕೆಲವೊಂದು ಸಲ ಅಚ್ಚರಿಗೀಡಾಗುವನು-ಅನಾಮಿಕ

2.ಹೃದಯದಲ್ಲಿ ಯುವಕನಾಗಿರುವುದು ಅತೀ ಮುಖ್ಯ

2.ಹೃದಯದಲ್ಲಿ ಯುವಕನಾಗಿರುವುದು ಅತೀ ಮುಖ್ಯ

ಹೃದಯದಲ್ಲಿ ಯುವಕನಾಗಿರುವುದು ಅತೀ ಮುಖ್ಯವೆಂದು ನಾನು ಭಾವಿಸಿರುವೆ. ಅಸಾಧ್ಯವೆಂದು ಕಂಡ ಕಡೆ ನೀವು ಧ್ಯೇಯನ್ನಿಡಿ. ನಿಮ್ಮ ಪ್ರಸಕ್ತ ಸಾಮರ್ಥ್ಯ ಮತ್ತು ತಾತ್ಕಾಲಿಕ ಅರ್ಥಗಳಿಗೆ ಮಿಗಿಲಾದ ಗುರಿಯನ್ನಿಡಿ-ಹೆನ್ಲಿ ವಿಲಿಯಮ್ಸ್.

3. ಜಾನ್ ವಗ್ನೆರ್ ಅವರ ಮನಮುಟ್ಟುವ ಮಾತು

3. ಜಾನ್ ವಗ್ನೆರ್ ಅವರ ಮನಮುಟ್ಟುವ ಮಾತು

ವಯಸ್ಸು ನಿಮ್ಮನ್ನು ಕುಗ್ಗುವಂತೆ ಮಾಡಲು ಬಿಡಬೇಡಿ. ಅಲ್ಲಿಂದ ಮರಳುವುದು ತುಂಬಾ ಕಠಿಣ-ಜಾನ್ ವಗ್ನೆರ್

4. ಯೌವನವು ಹಿಂದೆ ಹೋಗಿ ಆಗಿದೆ ಎಂದು ಮನವರಿಕೆ ಆದಾಗ

4. ಯೌವನವು ಹಿಂದೆ ಹೋಗಿ ಆಗಿದೆ ಎಂದು ಮನವರಿಕೆ ಆದಾಗ

ಒಂದು ದಿನ ನೀವು ಹಠಾತ್ ಆಗಿ ಎದ್ದಾಗ ಯೌವನವು ಹಿಂದೆ ಹೋಗಿ ಆಗಿದೆ ಎಂದು ಮನವರಿಕೆ ಆಗುವುದು. ಹಾಗಿದ್ದರೂ ನೀವು ಹೃದಯದಲ್ಲಿ ಇನ್ನೂ ಯುವಕನಾಗಿರುವಿರಿ-ಜೊನಿ ಮಿಚೆಲ್

5. 105ರ ಹರೆಯದ ತನಕ ಬದುಕುಳಿದರೆ

5. 105ರ ಹರೆಯದ ತನಕ ಬದುಕುಳಿದರೆ

ನೀವು 105ರ ಹರೆಯದ ತನಕ ಬದುಕುಳಿದರೆ, ಆಗ ನೀವು ಜೀವಂತವಾಗಿರಲು ಏನು ಪಡೆದಿದ್ದೀರಿ ಎಂದು ನೋಡಿ. ಇದರ ಅತ್ಯುತ್ತಮ ವಿಚಾರವೆಂದರೆ ಅದು ತಲೆಯಿಂದ ಆರಂಭವಾಗುವುದು. ನೀವು ಹೃದಯದಲ್ಲಿ ಯುವಕನಾಗಿದ್ದರೆ-ಫ್ರಾಂಕ್ ಸಿಂಟ್ರಾ

6. ಯುವ ಹೃದಯಕ್ಕೆ ಆಗುವ ಗಾಯ

6. ಯುವ ಹೃದಯಕ್ಕೆ ಆಗುವ ಗಾಯ

ಯುವ ಹೃದಯಕ್ಕೆ ಆಗುವ ಗಾಯವು ಯುವ ಮರಕ್ಕೆ ಆದ ಗಾಯದಂತೆ. ಅದು ಹೊರಗಡೆ ಬೆಳೆಯಲ್ಲ, ಒಳಗಡೆ ಬೆಳೆಯುವುದು-ನೆಲ್ಲಿ ಎಲ್. ಮ್ಯಾಕ್ಕ್ಲಂಗ್

7. ಹಸಿ ಬಿದಿರು ಬೇಗನೆ ಬಾಗುವುದು

7. ಹಸಿ ಬಿದಿರು ಬೇಗನೆ ಬಾಗುವುದು

ಹಸಿ ಬಿದಿರು ಬೇಗನೆ ಬಾಗುವುದು. ಆದರೆ ಸಂಪೂರ್ಣವಾಗಿ ಬೆಳೆದ ಬಿದಿರನ್ನು ಬಗ್ಗಿಸಿದರೆ ಆಗ ಅದು ತುಂಡಾಗುವುದು. ದೇವರ ಕಡೆಗೆ ಯುವ ಹೃದಯವನ್ನು ತಿರುಗಿಸುವುದು ತುಂಬಾ ಸುಲಭ. ಆದರೆ ವಯಸ್ಸಾದ ಮತ್ತು ತರಬೇತಿ ಇಲ್ಲದ ಹೃದಯವು ಬೇಗನೆ ತಪ್ಪಿಹೋಗುವುದು-ರಾಮಕೃಷ್ಣ

8. ವೈಯಕ್ತಿಕ ನಡವಳಿಕೆ

8. ವೈಯಕ್ತಿಕ ನಡವಳಿಕೆ

ಒಬ್ಬರ ವೈಯಕ್ತಿಕ ನಡವಳಿಕೆ ಮೇಲೆ ಹೃದಯದಿಂದ ಯುವಕರಾಗಿ ಇರುವುದು ಅವಲಂಬಿಸಿದೆ. ಇದನ್ನು ನೀವು ಯಾರಿಗೂ ಅಳವಡಿಸಲು ಆಗಲ್ಲ-ರಿಟಾ ಮೊರೆನೊ

9. ಚುಂಬನ

9. ಚುಂಬನ

ಒಂದು ಚುಂಬನವು ಹೃದಯವನ್ನು ಮತ್ತೆ ಯೌವನಯುತವಾಗಿಸುವುದು ಮತ್ತು ಹಲವಾರು ವರ್ಷವನ್ನು ತೆಗೆದುಹಾಕುವುದು-ರೂಪರ್ಟ್ ಬ್ರೂಕ್

10. ಬಾಲ್ಯದ ಜೀವನ

10. ಬಾಲ್ಯದ ಜೀವನ

ನೀವು ಬಾಲ್ಯದಲ್ಲಿ ಹೇಗೆ ಇದ್ದೀರಿ ಎಂದು ಒಮ್ಮೆ ಆಲೋಚನೆ ಮಾಡಿಕೊಳ್ಳಿ, ಯಾವುದೇ ಶಬ್ಧದ ಅರ್ಥ ತಿಳಿಯುವ ಮೊದಲು ಅಥವಾ ನಿಮ್ಮ ಮನಸ್ಸಿನಲ್ಲಿ ಯಾವುದೇ ಅಭಿಪ್ರಾಯವು ಬರುವ ಮೊದಲು. ನಿಜವಾಗಿಯೂ ಆಗ ನೀವು ತುಂಬಾ ಸಂತೋಷ, ಪ್ರೀತಿಯ ಮತ್ತು ಸ್ವತಂತ್ರರಾಗಿದ್ದೀರಿ. ನಿಜವಾಗಿಯೂ ನೀವು ಒಂದು ಹೂವಿನಂತೆ, ಗಾಳಿ, ಒಂದು ರೀತಿಯಲ್ಲಿ ಸಮುದ್ರ ಮತ್ತು ಸೂರ್ಯನಂತೆ ಇದ್ದೀರಿ- ಡಾನ್ ಮಿಗುಯೆಲ್ ರುಯಿಜ್.

English summary

Quotes To Stay Young At Heart Forever!

With each passing year, as we grow older, we humans tend to forget certain little things in life that would be bringing in happiness. There are a few quotes by great men that makes us realise that staying young at heart is all about being positive and staying happy.These quotes will keep you young at heart now and forever. Check them out.
Story first published: Monday, February 25, 2019, 16:15 [IST]
X