For Quick Alerts
ALLOW NOTIFICATIONS  
For Daily Alerts

ಇಂಟರ್ನೆಟ್‌ನಲ್ಲಿ ಪ್ರೀತಿಸಿದ ಆಕೆಗೆ ಕಾದಿದ್ದ ಅಚ್ಚರಿಯಾದರೂ ಏನು?

|

ಇಂಟರ್ನೆಟ್ ಬಂದ ಬಳಿಕ ಹಲವಾರು ರೀತಿಯ ಲಾಭಗಳು ಆಗುತ್ತಾ ಇರುವಂತೆ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಆನ್ ಲೈನ್ ನಲ್ಲಿ ಬ್ಯಾಂಕ್ ಗಳ ಮೂಲಕ ವಂಚನೆ ಮಾಡುವುದು ಒಂದು ಕಡೆಯಾದರೆ, ಇನ್ನಿತರ ಕೆಲವೊಂದು ವಂಚನೆಗಳನ್ನು ಕೂಡ ಮಾಡುವಂತಹ ಜನರು ನಿಮಗೆ ಸಿಗುವರು. ಹೀಗೆ ಆನ್ ಲೈನ್ ನಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ವಂಚನೆಗೆ ಒಳಗಾಗುತ್ತಲೇ ಇರುವರು.

ಆದರೆ ಇದೇ ಆನ್ ಲೈನ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸ್ನೇಹಿತರಾಗಿ, ಬಳಿಕ ಪ್ರೇಮಿಗಳಾಗಿ ಮದುವೆಯಾಗಿರುವಂತಹ ಘಟನೆಗಳು ಇದೆ. ಆದರೆ ಆನ್ ಲೈನ್ ನಲ್ಲಿ ತಾವು ಮಾತನಾಡಿರುವಂತಹ ವ್ಯಕ್ತಿಯು ಮುಖತಃ ಭೇಟಿಯಾದಾಗ ಮೋಸ ಎಂದು ಹೆಚ್ಚಿನ ಸಂದರ್ಭದಲ್ಲಿ ತಿಳಿದಿರುವುದು. ಇಂತಹ ಒಂದು ಸುದ್ದಿ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಈ ಜೋಡಿಯು ಆನ್ ಲೈನ್ ನಲ್ಲೇ ಪ್ರೀತಿಸಿ ಬಳಿಕ ಹುಡುಗಿಯು ರಷ್ಯಾದ ಅತೀ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದಳು. ಈ ಕಥೆಯ ಬಗ್ಗೆ ತಿಳಿಯಿರಿ

 ಆ ಹುಡುಗಿಯು ಮೊದಲ ಸಲ ಮೆಸೇಜ್ ಮಾಡಿದಳು

ಆ ಹುಡುಗಿಯು ಮೊದಲ ಸಲ ಮೆಸೇಜ್ ಮಾಡಿದಳು

ನ್ಗುಯೇನ್ ವ್ಯಾನ್ ಅನ್ ಎನ್ನುವ ಹುಡುಗಿ ಅಪರಿಚಿತರಿಗೆ ಮೆಸೇಜ್ ಮಾಡಲು ಬೇರೆ ಹುಡುಗಿಯರಂತೆ ನಾಚಿಕೆ ಪಟ್ಟುಕೊಳ್ಳುವಳಲ್ಲ. ನ್ಗುಯೇನ್ ವ್ಯಾನ್ ಅನ್ ಮೊದಲ ಸಲ ಈಗ ತನ್ನ ಪತಿಯಾಗಿ ಡ್ಯಾಂಗ್ ಟುವಾನ್ ಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿದಳು ಮತ್ತು ನೀವು ಯಾವ ವ್ಯಕ್ತಿಯೊಂದಿಗೆ ನಿಂತು ಫೋಟೊ ತೆಗೆಸಿಕೊಂಡಿದ್ದೀರಾ ಆ ವ್ಯಕ್ತಿಯ ಪರಿಚಯ ಇದೆಯಾ ಎಂದು ಕೇಳಿದಳು. ಆಕೆ ತನ್ನ ಕನಸಿನ ಐಡಲ್ ನ್ನು ಭೇಟಿ ಮಾಡಲು ಬಯಸಿದಳು ಮತ್ತು ತನ್ನ ಐಡಲ್ ಗೆ ತುಂಬಾ ನಿಕಟವಾಗಿದ್ದೇನೆ ಎಂದು ಆಕೆ ಭಾವಿಸಿದಳು.

ಇದು ಗಂಭೀರ ಸಂಬಂಧವಾಗಿ ಪರಿವರ್ತನೆಗೊಂಡಿತು

ಇದು ಗಂಭೀರ ಸಂಬಂಧವಾಗಿ ಪರಿವರ್ತನೆಗೊಂಡಿತು

ಪರಸ್ಪರ ಸರಿಯಾಗಿ ತಿಳಿಯದೆ ಇದ್ದ ಇವರಿಬ್ಬರು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸಿದರು. ಇದರಿಂದಾಗಿ ಆರು ತಿಂಗಳಲ್ಲಿ ಅವರು ಮದುವೆಯಾಗಲು ನಿರ್ಧರಿಸಿದರು. ಸಮಯದ ಸಮಸ್ಯೆಯಿದ್ದರೂ ಈ ಜೋಡಿಯು 2016ರ ನವಂಬರ್ ನಲ್ಲಿ ಅಧಿಕೃತವಾಗಿ ಮದುವೆಯಾಗಲು ನಿರ್ಧಾರ ಮಾಡಿತು. ಇದರ ಬಳಿಕ ಅವರು ಜತೆಯಾಗಿಯೇ ಇದ್ದಾರೆ.

Most Read: ಹೊಟ್ಟೆಯಲ್ಲಿರುವುದು ಗಂಡು ಮಗು ಎಂದು ತಿಳಿಸುವ ಚಿನ್ಹೆಗಳು!

ಆಕೆಯ ಪೋಷಕರು ಈ ಮದುವೆ ಒಪ್ಪಿಕೊಳ್ಳಲಿಲ್ಲ

ಆಕೆಯ ಪೋಷಕರು ಈ ಮದುವೆ ಒಪ್ಪಿಕೊಳ್ಳಲಿಲ್ಲ

ನ್ಗುಯೇನ್ ವ್ಯಾನ್ ಅನ್ ತನ್ನ ಪ್ರೇಮದ ಬಗ್ಗೆ ಪೋಷಕರ ಬಳಿ ಹೇಳಿಕೊಂಡಳು. ಆರಂಭದಲ್ಲಿ ಅವರು ಈ ಸಂಬಂಧವನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಆನ್ ಲೈನ್ ನಲ್ಲಿ ಡೇಟಿಂಗ್ ಮಾಡುವುದು ಅವರಿಗೆ ಸರಿಕಂಡುಬರಲಿಲ್ಲ. ಯಾಕೆಂದರೆ ಇಲ್ಲಿ ಹೆಚ್ಚಾಗಿ ವಂಚನೆ ಮಾಡುವವರೇ ಇರುತ್ತಾರೆ ಎಂದು ಅವರು ನಂಬಿದ್ದರು.

ಆಕೆ ಪೋಷಕರ ವಿರುದ್ಧವಾಗಿ ಮದುವೆಯಾದಳು

ಆಕೆ ಪೋಷಕರ ವಿರುದ್ಧವಾಗಿ ಮದುವೆಯಾದಳು

ನ್ಗುಯೇನ್ ವ್ಯಾನ್ ಅನ್ ತನ್ನ ಪೋಷಕರ ಮಾತನ್ನು ತಿರಸ್ಕರಿಸಿದಳು ಮತ್ತು ತನ್ನ ಪ್ರೇಮಿಯನ್ನು ಆಯ್ಕೆ ಮಾಡಿದಳು. ಇನ್ನೊಂದು ಕಡೆಯಲ್ಲಿ ಡ್ಯಾಂಗ್ ಟುವಾನ್ ತನ್ನ ಪೋಷಕರಿಗೆ ತನ್ನ ಪ್ರೇಮದ ಬಗ್ಗೆ ಮನವರಿಕೆ ಮಾಡಿಸಿಕೊಟ್ಟ. ತಮ್ಮ ನಿರ್ಧಾರಕ್ಕೆ ಅಂಟಿಕೊಂಡ ಇವರಿಬ್ಬರು ಡ್ಯಾಂಗ್ ಟುವಾನ್ ವಾಸಿಸುತ್ತಿದ್ದ ರಷ್ಯಾಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದರು.

ಅಲ್ಲಿ ಆಕೆಗೆ ಅಚ್ಚರಿ ಕಾದಿತ್ತು

ಅಲ್ಲಿ ಆಕೆಗೆ ಅಚ್ಚರಿ ಕಾದಿತ್ತು

ರಷ್ಯಾದಲ್ಲಿ ಈ ಜೋಡಿಯು ಬಂದಿಳಿದ ವೇಳೆ ಡ್ಯಾಂಗ್ ಟುವಾನ್ ಗೆ ಇರುವಂತಹ ಜನಪ್ರಿಯತೆ ಹಾಗೂ ಶ್ರೀಮಂತಿಗೆ ಬಗ್ಗೆ ನ್ಗುಯೇನ್ ವ್ಯಾನ್ ಅನ್ ಗೆ ತಿಳಿದಿರಲಿಲ್ಲ. ಯಾಕೆಂದರೆ ಟುವಾನ್ ತನ್ನ ಉದ್ಯೋಗದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದು ಆಕೆಗೆ ಸಿಕ್ಕಿದಂತಹ ಅದ್ಭುತವಾದ ಉಡುಗೊರೆಯಾಗಿತ್ತು. ಯಾಕೆಂದರೆ ಆಕೆ ಪರಿಶುದ್ಧವಾದ ಪ್ರೀತಿಯಲ್ಲಿ ನಂಬಿಕೆ ಇರಿಸಿಕೊಂಡಿದ್ದಳು ಮತ್ತು ಆತನ ಆರ್ಥಿಕ ಸ್ಥಿತಿಗತಿ ಬಗ್ಗೆ ಚಿಂತೆ ಮಾಡಿರಲಿಲ್ಲ.

Most Read: ಮುಖ ಸುಂದರವಾಗಿ ಕಾಣಬೇಕೆಂದರೆ, ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಹೀಗೆ ಮಾಡಿ...

ಈಗ ಹೇಗಿದ್ದಾರೆ?

ಈಗ ಹೇಗಿದ್ದಾರೆ?

ಈಗ ದಂಪತಿಗೆ ಎರಡು ಮಕ್ಕಳಿದ್ದಾರೆ ಮತ್ತು ಅವರು ಸುಂದರ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ. ಟುವಾನ್ ತನ್ನ ಶ್ರೀಮಂತಿಗೆ ಬಗ್ಗೆ ಯಾವತ್ತೂ ಆಕೆಯ ಬಳಿ ಹೇಳಿರಲಿಲ್ಲ. ಯಾಕೆಂದರೆ ಆತನಿಗೆ ತಮ್ಮ ಸಂಬಂಧವು ದೃಢವಾಗುವುದು ಬೇಕಿತ್ತು. ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.

English summary

Online Love Was A Disguise For Her!

A couple shared their love story with the world on how they met and fell in love on online social platforms. The woman had no idea about the man she was virtually dating to be one of the wealthiest businessmen of Russia until she went against her parents and got married to the man. Their story is melting hearts of people around the world.
Story first published: Friday, January 11, 2019, 15:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more