For Quick Alerts
ALLOW NOTIFICATIONS  
For Daily Alerts

ತಾಯಿಯ ಗರ್ಭದೊಳಗೆ ಮಿದುಳು ಮತ್ತು ಹೃದಯವಿಲ್ಲದಿದ್ದರೂ ಬೆಳವಣಿಗೆ ಹೊಂದುತ್ತಿರುವ ಮಗು.

|

ಪ್ರಪಂಚದಲ್ಲಿ ವಿಸ್ಮಯಗಳು ಆಗಾಗ ನಡೆಯುತ್ತಲೇ ಇರುತ್ತವೆ. ಕೆಲವೊಂದು ನಮ್ಮ ಗಮನಕ್ಕೆ ಬರುತ್ತವೆ. ಇನ್ನೂ ಕೆಲವು ನಮ್ಮ ಗಮನಕ್ಕೆ ಬಾರದೆಯೇ ಹೋಗುತ್ತವೆ. ನಡೆಯುವ ಅದ್ಭುತಗಳ ಹಿಂದೆ ಎಂತಹ ಶಕ್ತಿ ಇರಬಹುದು? ಅಥವಾ ಅದ್ಭುತ ನಡೆಯಲು ದೈವ ಎನ್ನುವ ಪವಿತ್ರ ಶಕ್ತಿಯ ಕೃಪೆ ಇರುವುದೇ? ಎನ್ನುವ ಪ್ರಶ್ನೆಗಳು ಆಗಾಗ ಕಾಡುತ್ತಲೇ ಇರುತ್ತವೆ. ಕೆಲವು ಸಂನ್ನಿವೇಶಗಳಿಗೆ ಕಾರಣಗಳು ನಿಧಾನವಾಗಿ ದೊರೆಯುತ್ತವೆ. ಇನ್ನೂ ಕೆಲವು ಅದ್ಭುತ ಹಾಗೂ ಆಶ್ಚರ್ಯದ ಸಂಗತಿಗೆ ಯಾವುದೇ ಅರ್ಥ ಅಥವಾ ವಿವರಣೆ ದೊರೆಯದೆ ನಿಧಾನವಾಗಿ ನೆನಪಿನಂಗಳದಿಂದ ಜಾರಿಹೋಗುವುದು.

ಅದ್ಭುತ ಘಟನೆಗಳು ಇತ್ತೀಚೆಗೆ ವೈಜ್ಞಾನಿಕ ಹಾಗೂ ವಿಜ್ಞಾನದ ಕ್ಷೇತ್ರದಲ್ಲಿ ಹೆಚ್ಚಾಗಿ ನಡೆಯುವುದನ್ನು ಕಾಣುತ್ತಿದ್ದೇವೆ. ಹೌದು, ಹೀಗೆ ಎಲ್ಲರ ಹುಬ್ಬನ್ನು ಏರಿಸುವಂತೆ ಮಾಡುವ ಒಂದು ಘಟನೆಯು ನಡೆದಿದೆ. ಅದು ವೈದ್ಯರಿಗೆ ಆಶ್ಚರ್ಯ ಹಾಗೂ ಕುತೂಹಲವನ್ನು ತಂದುಕೊಟ್ಟಿದೆ ಎನ್ನಲಾಗುತ್ತಿದೆ. ಒಬ್ಬ ತಾಯಿಯ ಹೊಟ್ಟೆಯಲ್ಲಿ ಅವಳಿ ಮಕ್ಕಳ ಬೆಳವಣಿಗೆ ಆಗಿದೆ. ಅದರಲ್ಲಿ ಒಂದು ಮಗುವಿನ ಬೆಳವಣಿಗೆಯಲ್ಲಿ ಅದ್ಭುತವೇ ನಡೆದಿದೆ. ಆ ಮಗುವಿನ ಬೆಳವಣಿಗೆಗೆ ಹೃದಯ ಹಾಗೂ ಮೆದುಳುಗಳಿಲ್ಲ. ಆದರೂ ಕೈ-ಕಾಲುಗಳು ಬೆಳವಣಿಗೆಯನ್ನು ಕಾಣುತ್ತಿವೆ. ಅದು ಹೇಗೆ ಎನ್ನುವುದು ವೈದ್ಯರಿಗೆ ಒಂದು ಸವಾಲಿನ ಪ್ರಶ್ನೆಯಾಗಿದೆ.

ಕೊಲಂಬಿಯಾದ ಬರಾನ್ಕ್ವಿಲ್ಲದ ನಿವಾಸಿ

ಕೊಲಂಬಿಯಾದ ಬರಾನ್ಕ್ವಿಲ್ಲದ ನಿವಾಸಿ

ಆಕೆ ಕೊಲಂಬಿಯಾದ ಬರಾನ್ಕ್ವಿಲ್ಲದ ನಿವಾಸಿ ಮೋನಿಕ. ಅವಳು 35 ವಾರಗಳನ್ನು ಪೂರೈಸಿದ ಗರ್ಭಿಣಿಯಾಗಿದ್ದಾಳೆ. ಇವಳಿಗೆ ಮಾಡಿರುವ ಕಲರ್ ಸ್ಕ್ಯಾನಿಂಗ್‍ನಿಂದ ಅವಳಿ ಹೆಣ್ಣು ಭ್ರೂಣವನ್ನು ಹೊತ್ತಿದ್ದಾಳೆ ಎನ್ನುವುದು ತಿಳಿದಿದೆ. ನಂತರದ ದಿನದಲ್ಲಿ ಸಣ್ಣ ಅವಳಿಯು ಶೇ.20-30ರಷ್ಟು ಬೆಳವಣಿಗೆ ಹೊಂದಿದೆ. ದೊಡ್ಡ ಅವಳಿಯ ಅಂಗಾಂಗಳ ಬೆಳವಣಿಗೆ ಅನುಚಿತಗೊಂಡಿದೆ ಎನ್ನುವುದು ತಿಳಿಯಿತು. ಮೋನಿಕ ಅಧಿಕ ರಕ್ತದೊತ್ತಡಕ್ಕೆ ಒಳಗಾದಳು. ಇದರಿಂದ ಸ್ಟ್ರೋಕ್ ಉಂಟಾಗುವ ಸಾಧ್ಯತೆಗಳು ಕಂಡುಬಂದವು. ಅದಾದ ಬಳಿಕ ತುರ್ತು ಪರಿಸ್ಥಿತಿಯಿಂದಾಗಿ ವೈದ್ಯರು ಸಿ-ಸೆಕ್ಷನ್ ಮಾಡುವುದರ ಮೂಲಕ ಒಬ್ಬ ಹೆಣ್ಣು ಮಗು ಇಟ್ಜಮರಳನ್ನು ಹೊರತೆಗೆದರು. ಒಂದು ದಿನದ ಬಳಿಕ ಕಾಲು ಮತ್ತು ಭುಜದ ಬೆಳವಣಿಗೆ ಹೊಂದಿದ್ದ ಭ್ರೂಣವನ್ನು ಹೊರತೆಗೆದರು. ಆದರೆ ಆ ಭ್ರೂಣಕ್ಕೆ ಹೃದಯ ಹಾಗೂ ಮಿದುಳುಗಳಿರಲಿಲ್ಲ. ಅದೊಂದು ವೈದ್ಯರಿಗೆ ಅಚ್ಚರಿಯನ್ನು ಮೂಡಿಸಿದೆ.

ಕರಳು ಬಳ್ಳಿಯ ಶಕ್ತಿ

ಕರಳು ಬಳ್ಳಿಯ ಶಕ್ತಿ

ಒಂದು ಭ್ರೂಣ ಸಂಪೂರ್ಣವಾಗಿ ಉತ್ತಮ ಬೆಳವಣಿಗೆ ಹಾಗೂ ಅಂಗಾಂಗವನ್ನು ಹೊಂದಿತ್ತು. ಆದರೆ ಇನ್ನೊಂದು ಭ್ರೂಣ ಕೇವಲ ಭುಜ ಹಾಗೂ ಕಾಲುಗಳನ್ನು ಹೊಂದಿತ್ತು. ಆದರೂ ಬೆಳವಣಿಗೆ ಯನ್ನು ಕಾಣುತ್ತಿತ್ತು. ಅದು ಕರುಳು ಬಳ್ಳಿಯ ಶಕ್ತಿಯಿಂದ ಎಂದು ಹೇಳಲಾಗುತ್ತಿದೆ. ಹೃದಯ ಮತ್ತು ಮಿದುಳನ್ನು ಹೊಂದಿರದ ಭ್ರೂಣದ ಬೆಳವಣಿಗೆಯೂ ಆರೋಗ್ಯಯುತವಾದ ಒಂದು ಭ್ರೂಣದ ಬೆಳವಣಿಗೆಗೆ ಅಡ್ಡಿ ಮಾಡುತ್ತಿದೆ ಹಾಗೂ ಆಂತರಿಕ ಬೆಳವಣಿಗೆಗೆ ಅಡ್ಡಿಪಡಿಸುವುದು ಎನ್ನುವ ಉದ್ದೇಶದಿಂದ ವೈದ್ಯರು ಸಿ-ಸೆಕ್ಷನ್ ಮೂಲಕ ಮಗುವನ್ನು ಹೊರತೆಗೆದರು. ನಂತರ ಹೃದಯವಿಲ್ಲದ ಭ್ರೂಣವನ್ನು ಕರಳು ಬಳ್ಳಿಯಿಂದ ಬಿಡಿಸಿ ಹೊರತೆಗೆದಾಗ ಜೀವವನ್ನು ಕಳೆದುಕೊಂಡಿತು ಎಂದಿದ್ದಾರೆ.

ಆಶ್ಚರ್ಯದ ಹುಟ್ಟು

ಆಶ್ಚರ್ಯದ ಹುಟ್ಟು

ಈ ವಿಸ್ಮಯವು ಫೆಬ್ರುವರಿ 22ರಂದು ಕೊಲಂಬಿಯಾದ ಬರಾನ್ಕ್ವಿದಲ್ಲಿ ನಡೆದಿದೆ. ಇಟ್ಜಮರಾ ಎನ್ನುವ ಹೆಣ್ಣು ಭ್ರೂಣ ವನ್ನು ಯಾವುದೇ ಅಪಾಯಕ್ಕೆ ಒಳಗಾಗದಂತೆ ರಕ್ಷಿಸಲಾಗಿದೆ. ಇದೊಂದು ಅದ್ಭುತವನ್ನು ಉಂಟುಮಾಡಿರುವ ಸಂಗತಿ ಹಾಗೂ ವಿಜ್ಞಾನವು ಆಶ್ವರ್ಯಗೊಳ್ಳುವಂತೆ ಮಾಡಿದೆ. ಈ ರೀತಿಯ ಬೆಳವಣಿಗೆಯನ್ನು ಕಂಡ ಮೊದಲ ಅದ್ಭುತ ಎಂದು ಹೇಳಲಾಗುತ್ತಿದೆ.

ವಿಸ್ಮಯದ ಬೆಳವಣಿಗೆ

ವಿಸ್ಮಯದ ಬೆಳವಣಿಗೆ

ತಾಯಿಯು ತನ್ನ ಒಡಲಲ್ಲಿ ಅವಳಿ ಮಕ್ಕಳನ್ನು ಹೊಂದಿದ್ದಳು. ಆದರೆ ಅದರಲ್ಲಿ ಒಂದು ಮಾತ್ರ ಆರೋಗ್ಯಕರ ಬೆಳವಣಿಗೆಯನ್ನು ಕಾಣುತ್ತಿತ್ತು. ಇನ್ನೊಂದು ಅನುಚಿತ ಬೆಳವಣಿಗೆ ಪಡೆಯುತ್ತಿತ್ತು. ಇದರ ಬೆಳವಣಿಗೆಯು ಆರೋಗ್ಯವಂತ ಭ್ರೂಣದ ಮೇಲೆ ಉಂಟಾಗುವುದು ಎನ್ನುವ ಕಾರಣಕ್ಕೆ ವಿಶೇಷ ತಜ್ಞರಾದ ಡಾ. ಮಿಗುಯೆಲ್ ಪರ್ರಾ-ಸಾವೇದ್ರ ಅವರು ಸಿ-ಸೆಕ್ಷನ್ ಮೂಲಕ ಪ್ರಸವವನ್ನು ಮಾಡಿಸಿದರು. ಅವರು ಕೈಗೊಂಡ ನಿರ್ಧಾರಕ್ಕೆ 3ಡಿ/4ಡಿ ಅಲ್ಟ್ರಾ ಸವಂಡ್ ತಂತ್ರದ ಮಾಹಿತಿಯೇ ಕಾರಣ. ಸೂಕ್ತ ಮಾಹಿತಿಯನ್ನು ಒದಗಿಸುವುದರ ಮೂಲಕ ಸಹಾಯ ಮಾಡಿರುವುದಕ್ಕೆ ತಂತ್ರಜ್ಞಾನಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ.

ತಲೆ ಮತ್ತು ಹೃದಯ ಇಲ್ಲದ ಭ್ರೂಣ

ತಲೆ ಮತ್ತು ಹೃದಯ ಇಲ್ಲದ ಭ್ರೂಣ

ತಲೆಯಿಲ್ಲದೆ ಬೆಳವಣಿಗೆ ಕಾಣುತ್ತಿರವ ಭ್ರೂಣವು ಸಾಕಷ್ಟು ಅಚ್ಚರಿಯನ್ನು ಮೂಡಿಸಿತ್ತು. ಜೊತೆಗೆ ಇದರ ಬೆಳವಣಿಗೆಯು ಇನ್ನೊಂದು ಭ್ರೂಣದ ಮೇಲೆ ಹಾನಿ ಉಂಟುಮಾಡುತ್ತಿದೆ ಎಂದಾಗ ಸಿ-ಸೆಕ್ಷನ್ ಮೂಲಕ ಪ್ರಸವ ಮಾಡಿಸಲಾಯಿತು. ಆರೋಗ್ಯ ಭ್ರೂಣದ ಪ್ರಸವದ ನಂತರ ಇನ್ನೊಂದು ಭ್ರೂಣದ ಪ್ರಸವ ಮಾಡಲಾಯಿತು. ಅನುಚಿತ ಬೆಳವಣಿಗೆ ಹೊಂದಿರುವ ಭ್ರೂಣವು 45 ಮಿಲಿಮೀಟರ್ ಉದ್ದ, 14 ಗ್ರಾಂ. ತೂಕವನ್ನು ಪಡೆದು ಕೊಂಡಿತ್ತು. ಕೀ ಹೋಲ್ ಚಿಕಿತ್ಸೆಯ ಮೂಲಕ ಹೊರ ತೆಗೆಯಲಾಗಿತ್ತು. ಹೊಕ್ಕಳು ಬಳ್ಳಿಯನ್ನು ಕತ್ತರಿಸಿದಾಗ ಹೃದಯ ಮತ್ತು ಮಿದುಳು ಇಲ್ಲದೆ ಬೆಳವಣಿಗೆಯನ್ನು ಹೊಂದುತ್ತಿದ್ದ ಭ್ರೂಣವು ಮೃತಪಟ್ಟಿತು ಎಂದು ಹೇಳಲಾಗುತ್ತಿದೆ.

ತಾಯಿಯ ಆರೋಗ್ಯ ಉತ್ತಮವಾಗಿದೆ

ತಾಯಿಯ ಆರೋಗ್ಯ ಉತ್ತಮವಾಗಿದೆ

ವಿಚಿತ್ರ ಹಾಗೂ ಆಶ್ಚರ್ಯವನ್ನುಂಟು ಮಾಡುವ ಸಂಗತಿಯಿಂದ ಕೂಡಿರುವ ಭ್ರೂಣದ ಬೆಳವಣಿಗೆಯು ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತಿತ್ತು. ಅನಾಹುತ ಅಥವಾ ಆಘಾತಗಳು ಉಂಟಾಗುವ ಮೊದಲು ವೈದ್ಯರಾದ ಪರ್ರಾ ಅವರ ಸೂಕ್ತ ಚಿಂತನೆ ಹಾಗೂ ತಂತ್ರಜ್ಞಾನಗಳ ಬಳಕೆಯಿಂದ ಪ್ರಸವವನ್ನು ಮಾಡಿಸಿದರು. ಇದು ಆರೋಗ್ಯವಂತ ಮಗುವನ್ನು ಪಡೆದುಕೊಳ್ಳಲು ತಾಯಿ ಯಶಸ್ವಿಯಾದಳು. ಜೊತೆಗೆ 33 ವರ್ಷದ ತಾಯಿ ಮೋನಿಕಾಳ ಆರೋಗ್ಯದ ಮೇಲೂ ಯಾವುದೇ ಅಹಿತಕರ ಪರಿಣಾಮ ಉಂಟಾಗಲಿಲ್ಲ. ತಾಯಿಯ ಆರೋಗ್ಯವೂ ಉತ್ತಮವಾದ ಚೇತರಿಕೆಯನ್ನು ಕಂಡುಕೊಂಡಿದೆ ಎಂದು ಹೇಳಲಾಗುವುದು.

ವಿಜ್ಞಾನ ಹಾಗೂ ವೈದ್ಯರ ಅನುಸಾರ

ವಿಜ್ಞಾನ ಹಾಗೂ ವೈದ್ಯರ ಅನುಸಾರ

ವೀರ್ಯವು ಅಂಡಾಣುವಿನೊಂದಿಗೆ ಸೇರಿಕೊಂಡು, ಭ್ರೂಣವಾಗಿ ಮಾರ್ಪಡುತ್ತದೆ. ಕೆಲವೊಮ್ಮೆ ಅನಾರೋಗ್ಯ ಭರಿತವಾದ ವೀರ್ಯ ಅಥವಾ ಅನುಚಿತವಾದ ಸೇರ್ಪಡೆಯಿಂದ ಕೆಲವು ಆಶ್ಚರ್ಯಕರ ಮಗುವಿನ ಬೆಳವಣಿಗೆ ಉಂಟಾಗುವುದು. ಅಂತಹ ಬೆಳವಣಿಗೆಯಲ್ಲಿ ಇದೂ ಒಂದು. ತಾಯಿಯ ಕರುಳು ಬಳ್ಳಿಯೇ ಭ್ರೂಣದ ಬೆಳವಣಿಗೆಗೆ ಶಕ್ತಿ ಹಾಗೂ ಆಹಾರವನ್ನು ನೀಡುತ್ತದೆ. ಅದರ ಸಹಾಯದಿಂದ ಹೃದಯ ಮತ್ತು ಮಿದುಳು ಇಲ್ಲದ ಮಗುವಿನ ಬೆಳವಣಿಗೆ ಉಂಟಾಯಿತು. ಕರುಳು ಬಳ್ಳಿ ಕಳಚಿದಾಗ ಮೃತ ಪಟ್ಟಿತು. ಅದರ ಬೆಳವಣಿಗೆ ಹಾಗೆಯೇ ಮುಂದುವರಿದಿದ್ದರೆ ಇನ್ನೊಂದು ಮಗು ಹಾಗೂ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಆಘಾತಗಳು ಉಂಟು ಮಾಡುತ್ತಿದ್ದವು ಎಂದು ಹೇಳಲಾಗಿದೆ.

English summary

No heart or brain still growing inside newborn's abdomen

A baby girl was born with her own twin sister, unformed but still growing with its own umbilical cord, inside her.The little girl called Itzamara, born on February 22 in Barranquilla, Colombia, is an incredibly rare example of 'fetus-in-fetu' births, first described in 1808 but rarely seen since. The handful of other cases, mostly in Asia, were discovered after birth, with stunned doctors realizing that what appeared to be an abdominal cyst was actually a fetus.
X
Desktop Bottom Promotion