For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಇಂದಿಗೂ ನಿಗೂಢವಾಗಿಯೇ ಉಳಿದಿರುವ ಕೆಲವು ರಹಸ್ಯಗಳು

|

ಕೆಲವೊಂದು ರಹಸ್ಯಗಳು ಹಾಗೆಯೇ ಉಳಿದುಬಿಡುವುದು. ಇದನ್ನು ಬೇಧಿಸಲು ಸಾಧ್ಯವಾಗುವುದೇ ಇಲ್ಲ. ಈ ಕಾರಣದಿಂದಾಗಿ ಇದು ಸಾಧ್ಯವೇ ಎನ್ನುವಂತಹ ಕುತೂಹಲವೂ ನಮ್ಮಲ್ಲಿ ಹಾಗೆ ಉಳಿದುಬಿಡುವುದು. ಭಾರತದಲ್ಲಿ ಕೂಡ ಇದೇ ರೀತಿಯ ಹಲವಾರು ರಹಸ್ಯಗಳು ಈಗಲೂ ರಹಸ್ಯವಾಗಿಯೇ ಉಳಿದಿದೆ. ಸಂಶೋಧಕರು ಈ ರಹಸ್ಯವನ್ನು ಬೇಧಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಈ ರಹಸ್ಯದ ಬಗ್ಗೆ ಸಂಶೋಧಕರಲ್ಲೇ ಹಲವಾರು ಪ್ರಶ್ನೆಗಳು ಮತ್ತಷ್ಟು ಮೂಡಿದೆ. ಭಾರತದಲ್ಲಿ ಇರುವಂತಹ ಕೆಲವೊಂದು ರಹಸ್ಯಗಳ ಬಗ್ಗೆ ತಿಳಿಯಲೇಬೇಕಾಗಿದೆ. ಈ ರಹಸ್ಯಗಳು ಯಾವುದು ಎಂದು ನೀವು ತಿಳಿಯಿರಿ.

ಅವಳಿಗಳ ಗ್ರಾಮ

ಅವಳಿಗಳ ಗ್ರಾಮ

ಭಾರತದಲ್ಲಿರುವ ಈ ಗ್ರಾಮವನ್ನು ``ಅವಳಿಗಳ ಗ್ರಾಮ''ವೆಂದು ಕರೆಯಲಾಗುತ್ತದೆ. ಯಾಕೆಂದರೆ ಈ ಗ್ರಾಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಅವಳಿಗಳು ಜನಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಸ್ವಲ್ಪ ಸಮಯ ವಾಸ ಮಾಡಿ, ಬೇರೆ ಗ್ರಾಮಕ್ಕೆ ಹೋಗಿ ವಾಸಿಸಲು ಆರಂಭಿಸಿದರೂ ಅವರಿಗೂ ಅವಳಿ ಮಕ್ಕಳಾಗಿರುವುದು ವರದಿಯಾಗಿದೆ. ಅಂಕಿಅಂಶಗಳ ಪ್ರಕಾರ ಈ ಗ್ರಾಮದಲ್ಲಿ ಸುಮಾರು 200 ಜೋಡಿ ಅವಳಿಗಳು ಇದ್ದಾರೆ.

ತಾಜ್ ಮಹಲ್ ಪಿತೂರಿ

ತಾಜ್ ಮಹಲ್ ಪಿತೂರಿ

ಲೇಖಕ ಪಿ.ಕೆ. ಒಕಾ ಎಂಬವರು ಬರೆದಿರುವಂತಹ ಪುಸ್ತಕದಲ್ಲಿ ಇರುವ ಪ್ರಕಾರ, ಅಂದಿನ ಮೊಘಲ್ ದೊರೆ ಷಹಾಜಹಾನ್ `ತೇಜೋಮಹಾಲಯ'ವನ್ನು ಜೈಪುರದ ರಾಜನಿಂದ ಕಿತ್ತುಕೊಂಡಿದ್ದ ಮತ್ತು ಅದಕ್ಕೆ ತಾಜ್ ಮಹಲ್ ಎಂದು ಮರು ನಾಮಕರಣ ಮಾಡಿದ್ದ.

ಜೋಧಪುರದ ದೊಡ್ಡ ಸದ್ದು

ಜೋಧಪುರದ ದೊಡ್ಡ ಸದ್ದು

2012ರ ಡಿಸೆಂಬರ್ 18ರಂದು ಜೋಧಪುರದಲ್ಲಿ ದೊಡ್ಡ ಮಟ್ಟದ ಸೋನಿಕ್ ಶಬ್ದ ಕಾಣಿಸಿಕೊಂಡಿತ್ತು. ಈ ಬಗ್ಗೆ ಇದುವರೆಗೂ ರಹಸ್ಯ ಬೇಧಿಸಲು ಸಾಧ್ಯವಾಗಿಲ್ಲ. ಸಂಪೂರ್ಣ ನಗರಕ್ಕೆ ಈ ಸದ್ದು ಕೇಳಿಸಿದೆ. ಆದರೆ ಸೇನೆಯು ಯಾವುದೇ ರೀತಿಯ ಪರೀಕ್ಷೆ ಮಾಡಿಕೊಂಡಿಲ್ಲವೆಂದು ಸ್ಪಷ್ಟವಾಗಿ ಹೇಳಿತ್ತು.

ಶಾಪಗ್ರಸ್ತ ಗ್ರಾಮ-ಕುಲ್ದಹಾರ

ಶಾಪಗ್ರಸ್ತ ಗ್ರಾಮ-ಕುಲ್ದಹಾರ

ಈ ಗ್ರಾಮವು ಜೈಸ್ಮೆಲಾರ್ ನಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿನ ಜನರು ಒಂದು ದಿನ ರಾತ್ರಿ ವೇಳೆ ಬೇರೆ ಕಡೆಗೆ ಸ್ಥಳಾಂತಗೊಂಡರು. ಈ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ. ಕುಲ್ದಹಾರ ಗ್ರಾಮವು 1291ರಲ್ಲಿ ನಿರ್ಮಾಣವಾಗಿತ್ತು. ಇದರ ಬಳಿಕ ಇದು ಅಭಿವೃದ್ಧಿ ಹೊಂದಿ ಸುಮಾರು 84 ಗ್ರಾಮಗಳು ಇದರಡಿಯಲ್ಲಿ ಇದ್ದವು. ದುಷ್ಟ ಶಕ್ತಿಯೊಂದು ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿದ ಪರಿಣಾಮವಾಗಿ ಜನರೆಲ್ಲರೂ ಹೆದರಿ ಅಲ್ಲಿಂದ ಪರಾರಿಯಾದರು ಮತ್ತು ರಾತ್ರಿ ಬೆಳಗಾಗುವುದರ ಒಳಗಡೆ ಸಂಪೂರ್ಣ ಗ್ರಾಮದ ಜನರು ಅಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದರು.

ಕೊನ್ಕಾ ಲಾ ಪಾಸ್ ಯುಎಫ್ ಒ ನೆಲೆ

ಕೊನ್ಕಾ ಲಾ ಪಾಸ್ ಯುಎಫ್ ಒ ನೆಲೆ

ಭಾರತ-ಚೀನಾ ಗಡಿ ಭಾಗದಲ್ಲಿ ಯುಎಫ್ ಒ ನೆಲೆಯು ಇದೆ. ಆಗಸದಲ್ಲಿ ಯುಎಫ್ ಒ ರೀತಿಯ ಹಲವಾರು ದೃಶ್ಯಗಳು ಕಾಣಿಸುವುದು ಎಂದು ವರದಿಗಳು ಹೇಳಿವೆ. ವರದಿಗಳ ಪ್ರಕಾರ ಈ ಭಾಗದಲ್ಲಿ ಯಾವುದೇ ಸೇನೆಯ ನೆಲೆಯು ಇಲ್ಲ ಮತ್ತು ಯೋಧರನ್ನು ಕೂಡ ನಿಯೋಜಿಸಲಾಗಿಲ್ಲ. ಇದರಿಂದಾಗಿ ಯುಎಫ್ ಒ ಒಂದು ದೊಡ್ಡ ರಹಸ್ಯವಾಗಿಯೇ ಇದೆ.

English summary

Mysteries Of India That Are Still Unsolved

There are several unsolved mysteries that will make you wonder on how was it even possible! These mysteries are the ones that do not have an answer yet! As researchers try to solve them through various means, they only leave them with more questions and most of the mysteries still remain unanswered.Unsolved Mysteries Of India
Story first published: Tuesday, March 5, 2019, 19:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X