For Quick Alerts
ALLOW NOTIFICATIONS  
For Daily Alerts

ಸಂಗೀತ ಕಾರ್ಯಕ್ರಮಗಳು ತಂದ ವಿಪತ್ತುಗಳು

|

ವಾರಾಂತ್ಯದಲ್ಲಿ ಉತ್ತಮ ಸಮಯವನ್ನು ಕಳೆಯಬೇಕು ಎನ್ನುವುದು ಎಲ್ಲರ ಆಸೆ ಆಕಾಂಕ್ಷೆಗಳಾಗಿರುತ್ತವೆ. ವಾರಾಂತ್ಯದಲ್ಲಿ ದೊರೆಯುವ ಸಮಯ ಸಂಗೀತ ಮತ್ತು ನೃತ್ಯದಿಂದ ಕೂಡಿರುವ ಕಾರ್ಯಕ್ರಮಗಳಿಂದ ಕೂಡಿರುತ್ತವೆ ಎಂದಾದರೆ ಅದು ಇನ್ನಷ್ಟು ಸಂತೋಷ ಹಾಗೂ ಹುಮ್ಮಸ್ಸನ್ನು ನೀಡುತ್ತವೆ. ಈ ಕಾರಣಗಳಿಂದಲೇ ಅನೇಕ ಸಂಗೀತಗಾರರು ಹಾಗೂ ಸಂಗೀತ ಪ್ರಿಯರು ತಮ್ಮ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ವಾರಾಂತ್ಯದ ಸಮಯದಲ್ಲಿ ಆಯೋಜಿಸುತ್ತಾರೆ. ಅಂತಹ ಕಾರ್ಯಕ್ರಮಗಳ ಭೇಟಿಗೆ ಜನ ಸಮೂಹ ಹರಿದು ಬರುವುದು ಸಾಮಾನ್ಯ.

ಸಂಗೀತ ಎನ್ನುವುದು ಮಾನಸಿಕವಾಗಿ ಉಂಟಾಗುವ ದಣಿವಿಗೆ ಸಾಂತ್ವನ ಹಾಗೂ ನಿರಾಳತೆಯನ್ನು ತಂದುಕೊಡುವುದು. ಒಮ್ಮೆ ಸಂಗೀತ ಕೇಳುವುದು ಅಥವಾ ನೃತ್ಯದಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಒಂದಿಷ್ಟು ಉತ್ಸಾಹ ಹಾಗೂ ನೆಮ್ಮದಿಯನ್ನು ನೀಡುವುದು. ಅಲ್ಲದೆ ಬಹುತೇಕ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿ ಸಂಗೀತಕ್ಕೆ ಇದೆ ಎಂದರೆ ಸುಳ್ಳಾಗದು. ಮನಸ್ಸಿಗೆ ಉಂಟಾದ ಬೇಸರ ಅಥವಾ ಒತ್ತಡವನ್ನು ತೆಗೆಯಲು ಒಂದೆರಡು ಹಾಡನ್ನು ಕೇಳಿದರೆ ಸಾಕು. ಮನಸ್ಸು ಪುನಃ ನೆಮ್ಮದಿ ಹಾಗೂ ಬದಲಾವಣೆಯನ್ನು ಕಂಡುಕೊಳ್ಳುವುದು.

ಇಂತಹ ದೊಡ್ಡ ದೊಡ್ಡ ಸಂಗೀತ ಕಾರ್ಯಕ್ರಮವು ಕೆಲವೊಮ್ಮೆ ವಿಪತ್ತನ್ನು ತಂದೊಡ್ಡುವ ಸಾಧ್ಯತೆಗಳು ಇರುತ್ತವೆ. ಸಂಗೀತ ಗೋಷ್ಠಿ, ನೃತ್ಯ ಕಾರ್ಯಕ್ರಮಗಳಲ್ಲಿ ಸಾಕಷ್ಟು ಜನರು ಸೇರುವುದರಿಂದ ಹಲವಾರು ದುರಂತಗಳು ಸಂಭವಿಸುತ್ತವೆ. ಅಂತಹ ವಿಚಾರ ವರದಿಯಾಗಿರುವುದನ್ನು ನೀವು ಕಂಡಿರಬಹುದು. ಅನಿರೀಕ್ಷಿತವಾಗಿ ಉಂಟಾಗುವ ಬೆಂಕಿ, ಸಾವು, ಮಳೆ, ಅಪಘಾತ ಸೇರಿದಂತೆ ಅನೇಕ ಸಂಗತಿಗಳು ನಡೆಯುತ್ತವೆ. ಅಂತಹ ಸಮಯದಲ್ಲಿ ಅಭಿಮಾನಿಗಳು ನಿರಾಶೆಗೊಳ್ಳುವುದು, ಕೋಪಕ್ಕೆ ಒಳಗಾಗುವುದು ಮತ್ತು ದುಃಖವನ್ನು ಅನುಭವಿಸುವುದು ಸಹಜ.

ಕಾರ್ಯಕ್ರಮಗಳನ್ನು ಆಯೋಜಿಸುವುದು, ಅದರ ನಿರ್ವಹಣೆ, ಅಲ್ಲಿಗೆ ಬಂದವರಿಗೆ ಅಗತ್ಯವಾದ ಸೌಕರ್ಯ ಒದಗಿಸುವುದು ಪ್ರತಿಯೊಂದು ಕಾರ್ಯಕ್ರಮದಲ್ಲೂ ಅತ್ಯಗತ್ಯ. ಇಂತಹ ಒಂದು ಕಾಳಜಿಯನ್ನು ಕೈಗೊಳ್ಳದೆ ಕಾರ್ಯಕ್ರಮ ನಡೆಸಿದರೆ ಅಥವಾ ಪ್ರಕೃತಿಯ ವಿಕೋಪದಿಂದ ತೊಂದರೆ ಉಂಟಾದರೆ ಅದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ದುಃಖದ ಸಂಗತಿ ಅಥವಾ ನೋವನ್ನು ಉಂಟುಮಾಡಿದಂತಹ ಕೆಲವು ಸಂಗೀತ ಕಾರ್ಯಕ್ರಮಗಳು ನಮಗೆ ಸಾಕ್ಷಿಯಾಗಿವೆ. ಹಾಗಾದರೆ ಆ ಕಾರ್ಯಕ್ರಮಗಳು ಯಾವವು? ಎನ್ನುವುದರ ಪರಿಚಯ ಈ ಮುಂದೆ ವಿವರಿಸಲಾಗಿದೆ.

2000ದ ಸಾಲಿನಲ್ಲಿ ನಡೆದ ರಾಸ್ಕಿಲ್ ಉತ್ಸವ

2000ದ ಸಾಲಿನಲ್ಲಿ ನಡೆದ ರಾಸ್ಕಿಲ್ ಉತ್ಸವ

ರಾಸ್ಕಿಲ್ ಉತ್ಸವದಲ್ಲಿ ರಾಕ್ ಸಂಗೀತ ನೆರವೇರುತ್ತಿತ್ತು. ಡೆನ್ಮಾರ್ಕ್‍ಅಲ್ಲಿ ನಡೆದ ಈ ಉತ್ಸವವು ಬಹಳ ಜನರನ್ನು ಒಳಗೊಂಡಿತ್ತು. ಅತಿಯಾದ ಜನಸಂದಣಿಯ ಕಾರಣದಿಂದ ಜನರಿಗೆ ಉಸಿರಾಡಲು ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿಯೇ ಕೆಲವರಿಗೆ ಉಸಿರಾಡಲು ತೊಂದರೆ ಉಂಟಾಗಿ ಸುಮಾರು ಒಂಬತ್ತು ಜನರು ಸಾವನ್ನಪ್ಪಿದರು ಎಂದು ವರದಿಯಾಗಿದೆ. ಅತಿಯಾದ ಅವ್ಯವಸ್ಥೆ ಹಾಗೂ ತೊಂದರೆಯ ಕಾರಣದಿಂದ ಸಂಗೀತವನ್ನು ನಿಲ್ಲಿಸಬೇಕಾಯಿತು. ಜನರು ಸೂಕ್ತ ಕ್ರಮವನ್ನು ಕೈಗೊಂಡಿದ್ದರೆ ಅಥವಾ ಕಾಳಜಿ ವಹಿಸಿದ್ದರೆ ಸಾವಿನ ಸಂಖ್ಯೆಯು ಕಡಿಮೆಯಾಗುತ್ತಿತ್ತು.

2014 ಹಡ್ಸನ್ ಪ್ರಾಜೆಕ್ಟ್

2014 ಹಡ್ಸನ್ ಪ್ರಾಜೆಕ್ಟ್

ಪ್ರತಿಭಾವಂತ ಸಂಗೀತಗಾರರನ್ನು ಒಳಗೊಂಡ ಪರಿಪೂರ್ಣ ಉತ್ಸವವಾಗಿತ್ತು. ದುರಾದೃಷ್ಟವಶಾತ್ ಭಾರೀ ಮಳೆ ಸಂಭವಿಸಿದ ಕಾರಣದಿಂದಾಗಿ ಹಾಗೂ ಹವಾಮಾನ ಮುನ್ಸೂಚನೆಯ ಕಾರಣದಿಂದಾಗಿ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದರು. ಕಾರ್ಯಕ್ರಮವು ನಡೆಯದೇ ಇದ್ದುದ್ದರಿಂದ ಹಲವಾರು ಮಂದಿ ಅಸಮಧಾನಕ್ಕೆ ಒಳಗಾದರು. ಅತಿಯಾದ ಮಳೆಯ ಕಾರಣದಿಂದ ಅಲ್ಲಿಗೆ ಬಂದ ಅನೇಕ ಅಭಿಮಾನಿಗಳು ಮಣ್ಣಿನಲ್ಲಿ ಹಾಗೂ ಕೊಣಕು ನೀರಿನಲ್ಲಿಯೇ ಸಿಲುಕಿಕೊಳ್ಳಬೇಕಾಯಿತು. ಅನೇಕ ಜನರ ಕಾರುಗಳು ಸಹ ಮಣ್ಣಿನಲ್ಲಿ ಮುಳುಗಿ ಹೋಗಿತ್ತು ಎಂದು ವರದಿಯಾಗಿತ್ತು.

2012ರಲ್ಲಿ ನಡೆದ ಇಸ್ಲೇ ಆಫ್ ವಿಟ್

2012ರಲ್ಲಿ ನಡೆದ ಇಸ್ಲೇ ಆಫ್ ವಿಟ್

ಅದ್ಧೂರಿಯಾಗಿ ನಡೆಸಲಾದ ಸಂಗೀತ ಕಾರ್ಯಕ್ರಮವು ಎಲ್ಲರನ್ನೂ ಆಕರ್ಷಿಸಿತ್ತು. ಆಕಸ್ಮಿಕವಾಗಿ ಉಂಟಾದ ತೀವ್ರವಾದ ಮಳೆಯು ಸಂಚಾರ ಮಾರ್ಗದಲ್ಲಿ ತೊಂದರೆಯನ್ನು ಉಂಟುಮಾಡಿತು. ಮೈಲುಗಳಷ್ಟು ದೂರ ದೋಣಿಯಲ್ಲಿ ಸಾಗಬೇಕಾಯಿತು. ಆದರೆ ಅತಿಯಾದ ಮಳೆ ಅಥವಾ ಹೆಚ್ಚಿದ ಮಳೆಯ ಕಾರಣದಿಂದ ದೋಣಿಯನ್ನು ಸಹ ರದ್ದುಗೊಳಿಸಲಾಯಿತು. ಆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ತಮ್ಮ ಕಾರುಗಳನ್ನು ಸಾಲಾಗಿ ನಿಲ್ಲಿಸಿಕೊಂಡು, ಅದರೊಳಗೇ ಉಳಿಯಬೇಕಾಯಿತು. ಮಡ್ಡಿ ಮಣ್ಣುಗಳು ರಸ್ತೆ ಮಾರ್ಗವನ್ನು ಹಾಳುಮಾಡಿರುವ ಕಾರಣ ಅವುಗಳೊಂದಿಗೇ ಜನರು ಸಮಯವನ್ನು ಕಳೆಯಬೇಕಾಯಿತು. ಅದು ಜನರಿಗೆ ಭೀಕರ ಅನುಭವ ನೀಡುವುದರ ಮೂಲಕ ಒಂದಿಷ್ಟು ಬೇಸರವನ್ನು ತಂದೊಡ್ಡಿತ್ತು.

2016ರರಲ್ಲಿ ನಡೆದ ಟೈಮ್ ವಾರ್ಪ್ ಅರ್ಜೆಂಟೀನಾ

2016ರರಲ್ಲಿ ನಡೆದ ಟೈಮ್ ವಾರ್ಪ್ ಅರ್ಜೆಂಟೀನಾ

ಈ ಸಂಗೀತ ಕಾರ್ಯಕ್ರಮವು ಕೆಟ್ಟ ದುರಂತವನ್ನು ಅನುಭವಿಸಿದ ಕಾರ್ಯಕ್ರಮಗಳಲ್ಲಿ ಒಂದು. ಕೆಲವು ಔಷಧಗಳಲ್ಲಿ ವಿಷಯುಕ್ತವಾದ ಪದಾರ್ಥವನ್ನು ಬಳಕೆ ಮಾಡಿದ್ದರು. ಅದನ್ನು ಸೇವಿಸಿದ ಆರು ಯುವಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಉತ್ಸವದ ಎರಡನೇ ದಿನ ದುರಂತದ ಕಾರಣದಿಂದಾಗಿ ನಿಲ್ಲಿಸಿದರು. ಈ ಒಂದು ನೋವಿನ ವಿಷಯ ತಿಳಿದ ಜನರು ಅತ್ಯಂತ ದುಃಖ ಹಾಗೂ ಬೇಸರವನ್ನು ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.

English summary

Music Concerts That Became Disasters

We look for concerts and events to make the best memories over the weekends. While concerts hold promises from renowned musicians and fun times, there are high chances that they don't not go as planned.Several tragedies have taken place during the concerts.Roskilde Festival,The Hudson Project and Isle Of Wight are a few.
Story first published: Tuesday, June 18, 2019, 14:43 [IST]
X
Desktop Bottom Promotion