Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಸುಮಾರು 3 ಗಂಟೆಯಿಂದ ಡೋರ್ ಬೆಲ್ ನೆಕ್ಕಿದ ವ್ಯಕ್ತಿ! ಇಲ್ಲಿದೆ ನೋಡಿ ವಿಡಿಯೋ!
ಆಧುನಿಕ ಯುಗದಲ್ಲಿ ಏನೇ ಮಾಡಿದರೂ ಅದು ಇಡೀ ಜಗತ್ತಿಗೆ ತಿಳಿಯುತ್ತದೆ. ಯಾಕೆಂದರೆ ಪ್ರತಿಯೊಂದು ಕಡೆಯಲ್ಲೂ ಈಗ ಸಿಸಿಟಿವಿ ಇರುವ ಕಾರಣದಿಂದಾಗಿಯಾವುದೇ ಕೃತ್ಯ ಮಾಡಿದರೂ ಅದು ಬೆಳಕಿಗೆ ಬರುತ್ತದೆ. ಹಿಂದೆ ಕೆಲವೊಂದು ಪ್ರಮುಖ ಸ್ಥಳಗಳಲ್ಲಿ ಮಾತ್ರ ಸಿಸಿಟಿವಿ ಇತ್ತು. ಆದರೆ ಇಂದು ಮನೆ ಹಾಗೂ ಸಣ್ಣ ಅಂಗಡಿಗಳಲ್ಲೂ ಸಿಸಿಟಿವಿ ಅಳವಡಿಸಲಾಗುತ್ತಿದೆ. ಯಾಕೆಂದರೆ ಇದರಿಂದ ಹಲವಾರು ಲಾಭಗಳು ಇವೆ. ಕಳ್ಳತನದಂತಹ ಕೃತ್ಯಗಳನ್ನು ಇದು ಸೆರೆ ಹಿಡಿಯುವುದು. ಇನ್ನು ಕೆಲವೊಮ್ಮೆ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಮನೆ ಅಥವಾ ಅಂಗಡಿ ಸುತ್ತಲು ತಿರುಗಾಡಿದರೂ ಇದರಿಂದ ನಮಗೆ ತಿಳಿಯುವುದು.

ಈ ಎಲ್ಲಾ ಲಾಭಗಳನ್ನು ನೀಡುವಂತಹ ಸಿಸಿಟಿವಿಯಲ್ಲಿ ಕೆಲವೊಂದು ಸಂದರ್ಭದಲ್ಲಿ ವಿಚಿತ್ರವಾಗಿರುವ ದೃಶ್ಯಗಳು ಸೆರೆಯಾಗುವುದು. ಇದು ನಮ್ಮನ್ನು ಖಂಡಿತವಾಗಿಯೂ ನಗೆಗಡಲಿನಲ್ಲಿ ತೇಲಿಸುವುದು. ಇಂತಹ ಹಲವಾರು ವಿಡಿಯೋಗಳನ್ನು ನಾವು ಈಗಾಗಲೇ ನೋಡಿರುತ್ತೇವೆ. ಇದು ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಹೌದು, ಈ ಲೇಖನದಲ್ಲಿ ನಾವು ಮನೆಯ ಡೋರ್ ಬೆಲ್ ನ್ನು ನೆಕ್ಕುವ ವ್ಯಕ್ತಿಯೊಬ್ಬ ಸಿಸಿಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ ಬಗ್ಗೆ ಹೇಳಲಿದ್ದೇವೆ. ಆತ ಮೂರು ಗಂಟೆಗಳ ಕಾಲ ಡೋರ್ ಬೆಲ್ ನ್ನು ನೆಕ್ಕಿದ್ದಾನೆ. ಅದನ್ನು ನೀವು ಓದಿ, ನಗಲು ತಯಾರಾಗಿ...

ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ….
ಕ್ಯಾಲಿಫೋರ್ನಿಯಾದ ಸಾಲಿನಸ್ ಎಂಬಲ್ಲಿ 33ರ ಹರೆಯದ ರಾಬರ್ಟ್ ಡೇನಿಯಲ್ ಅರ್ರೊಯೊ ಎಂಬಾತ ವಿಚಿತ್ರವಾಗಿ ವರ್ತಿಸುತ್ತಿರುವಂತಹ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದೃಶ್ಯಾವಳಿಗಳು ತೋರಿಸಿದಂತೆ...
ಮನೆಯ ಮುಖ್ಯ ಬಾಗಿಲಿನ ಹೊರಗಡೆ ಇರುವಂತಹ ಇಂಟರ್ ಕಾಮ್ ಗೆ ವಿರುದ್ಧವಾಗಿ ತನ್ನ ತಲೆ ತೂರಿಸಿಕೊಳ್ಳುವ ಈ ವ್ಯಕ್ತಿ ಹಲವಾರು ಕಡೆಗಳಿಂದ ಡೋರ್ ಬೆಲ್ ನ್ನು ಮೂರು ಗಂಟೆಗಳ ಕಾಲ ನೆಕ್ಕುತ್ತಿರುವಂತಹ ದೃಶ್ಯವು ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದೆ.

ಮುಂಜಾನೆ ಐದು ಗಂಟೆಗೆ ಈ ಘಟನೆ ನಡೆದಿದೆ!
ಈ ಘಟನೆಯು ನಡೆದಿರುವ ವೇಳೆ ಮನೆಯ ಮಾಲಕರು ಮನೆಯಲ್ಲಿರಲಿಲ್ಲ. ಆದರೆ ಮನೆಯಲ್ಲಿ ಅವರ ಮಕ್ಕಳು ಇದ್ದ ಕಾರಣ ಅವರಿಗೆ ಸಿಸಿಟಿವಿಯಲ್ಲಿ ಚಲನವಲನಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಸಿಸಿಟಿವಿ ವಿಡಿಯೋವನ್ನು ನೋಡಿದಾಗ ವ್ಯಕ್ತಿಯೊಬ್ಬ ಬೆಲ್ ನ್ನು ನೆಕ್ಕುತ್ತಿರುವಂತಹ ದೃಶ್ಯವು ಅವರನ್ನು ಅಚ್ಚರಿಗೀಡು ಮಾಡಿದೆ.
ಈ ವಿಡಿಯೋ ವೈರಲ್ ಆಯಿತು…
ತುಂಬಾ ವಿಚಿತ್ರವಾಗಿರುವಂತಹ ವಿಡಿಯೋವು ಈಗ ವೈರಲ್ ಆಗಿದೆ ಮತ್ತು ಈ ಕ್ಯಾಮರಾದಲ್ಲಿ ವ್ಯಕ್ತಿಯ ಮುಖವು ಸರಿಯಾಗಿ ಸೆರೆಯಾದ ಕಾರಣದಿಂದ ಆ ವ್ಯಕ್ತಿಯನ್ನು ಪೊಲೀಸರಿಗೆ ಬಂಧಿಸಲು ಸಹಕಾರಿಯಾಗಿದೆ. ಆದರೆ ಆ ವ್ಯಕ್ತಿಯು ಮನೆಯ ಯಾವುದೇ ವಸ್ತುವಿಗೆ ಹಾನಿ ಮಾಡಿಲ್ಲ ಮತ್ತು ಕಳ್ಳತನವು ನಡೆದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಈ ಸಂಪೂರ್ಣ ವಿಡಿಯೋ ಮಾತ್ರ ತುಂಬಾ ವಿಚಿತ್ರ ವ್ಯಕ್ತಿತ್ವವನ್ನು ತೋರಿಸುವುದು. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
