For Quick Alerts
ALLOW NOTIFICATIONS  
For Daily Alerts

ಎರಡು ವರ್ಷಗಳಲ್ಲಿ 300 ನಾಯಿಗಳನ್ನು ದತ್ತು ಪಡೆದ ವ್ಯಕ್ತಿಯ ಬಗ್ಗೆ ಒಂದು ನೋಟ...

|

ಸಾಕು ಪ್ರಾಣಿಗಳನ್ನು ಸಾಮಾನ್ಯವಾಗಿ ಮನುಷ್ಯ ತನ್ನ ಕೆಲಸಕ್ಕೆ ಅಥವಾ ತನ್ನ ಸ್ವಾರ್ಥಕ್ಕೆ ಸಾಕುತ್ತಾರೆ. ಆದರೆ ಆ ಮೂಕ ಪ್ರಾಣಿಗಳು ಯಾವುದೇ ಅಪೇಕ್ಷೆಗಳಿಲ್ಲದೆ ತನ್ನ ಒಡೆಯನಿಗಾಗಿ ಸದಾ ಇರುತ್ತಾರೆ. ತಮ್ಮನ್ನು ಯಾವ ಉದ್ದೇಶಕ್ಕೆ ಸಾಕಿದ್ದಾರೋ ಅದರ ಲಾಭವನ್ನು ನೀಡುತ್ತಲೇ ಇರುತ್ತಾರೆ. ಆ ಪ್ರಾಣಿಗಳಿಗೆ ಮಾತು ಬರದೆ ಇರಬಹುದು. ಆದರೆ ಪ್ರಾಮಾಣಿಕತೆಯಿಂದ ಇರುತ್ತಾರೆ. ತನ್ನ ಒಡೆಯನ ಏಳಿಗೆಗಾಗಿ ಶ್ರಮಿಸುತ್ತಲೇ ಇರುತ್ತಾರೆ. ಹಾಗಾಗಿಯೇ ಮನುಷ್ಯನು ಕೂಡ ಮನುಷ್ಯನಿಗಿಂತ ಪ್ರಾಣಿಗಳನ್ನು ಹೆಚ್ಚು ನಂಬುತ್ತಾನೆ ಎಂದು ಹೇಳಬಹುದು.

ಅದರಲ್ಲೂ ನಾಯಿ ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚು ನಂಬಿಕಸ್ತಪ್ರಾಣಿ ಎಂದು ಹೇಳಲಾಗುತ್ತದೆ. ಒಡೆಯನಿಗಾಗಿ ತನ್ನ ಜೀವನವನ್ನು ಮುಡುಪಾಗಿಡುವ ಮುಗ್ಧ ಹಾಗೂ ಶಕ್ತಿಯುತವಾದ ಪ್ರಾಣಿ. ಅದು ತನಗೆ ಅನ್ನ ಹಾಕಿದ ಮನೆಗೆ ಅಥವಾ ವ್ಯಕ್ತಿಗೆ ಯಾವುದೇ ರೀತಿಯಿಂದಲೂ ಹಾನಿಯನ್ನುಂಟುಮಾಡದು. ಬದಲಿಗೆ ಸದಾ ಅವನ ಕಾವಲುಗಾರನಾಗಿ ನಿಲ್ಲುತ್ತದೆ. ಇಂತಹ ಒಂದು ಮುಗ್ಧ ಪ್ರಾಣಿಗಳನ್ನು ಸಾಕುವುದು, ನಂತರ ಅವರಿಗೆ ಏನಾದರೂ ತೊಂದರೆ ಉಂಟಾದರೆ ಆ ನಾಯಿಯನ್ನು ಬೀದಿಗೆ ಬಿಡುವ ಜನರು ಇದ್ದಾರೆ. ಇಲ್ಲದಿದ್ದರೆ ಮೃಗಾಲಯಗಳಿಗೆ ಆಹಾರವಾಗಿ ನೀಡುವ ಕ್ರೂರ ಮನುಷ್ಯರು ಇದ್ದಾರೆ. ತಾವು ಸಾಕಿದ ಸಾಕು ಪ್ರಾಣಿಗಳಿಗೆ ಹೆಚ್ಚು ಪ್ರೀತಿಯನ್ನು ಎರೆಯುವುದರ ಮೂಲಕ ತಮ್ಮ ಜೀವನವನ್ನು ಮುಡಿಪಾಗಿಡುವ ಜನರೂ ಇದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಜಾಂಗ್ ಕೈ ಲೆಡ್ ಎನ್ನುವ ವ್ಯಕ್ತಿಯು ಒಬ್ಬ.

ಈತ ಸಾಕು ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹಾಗೂ ಪ್ರೀತಿಯನ್ನು ಹೊಂದಿರುವ ವ್ಯಕ್ತಿ. ತನ್ನ ಪ್ರೀತಿಯ ಸಾಕು ನಾಯಿಗಳಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದಾನೆ. ಸಾಕು ಪ್ರಾಣಿಯನ್ನು ಹೊಂದಿರುವವರಿಗೆ ಸಾಮಾನ್ಯವಾಗಿ ಅವುಗಳ ಭಾವನೆ ಹಾಗೂ ಪ್ರೀತಿ ಏನು ಎನ್ನುವುದು ತಿಳಿದಿರುತ್ತದೆ. ಯಾರಿಗೆ ಸಾಕು ಪ್ರಾಣಿಯ ಬಗ್ಗೆ ಆಸಕ್ತಿ ಹಾಗೂ ಸಾಕು ಪ್ರಾಣಿಯನ್ನು ಹೊಂದಿರದೇ ಇರುವವರಿಗೆ ತಿಳಿಯದೆ ಇರಬಹುದು. ಆದರೆ ಸಾಕು ಪ್ರಾಣಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಆ ಮುಗ್ಧ ಜೀವಿಗಳ ವರ್ತನೆ, ಪ್ರೀತಿ, ವಿಶ್ವಾಸ ಹಾಗೂ ಅವುಗಳೊಂದಿಗೆ ಹೊಂದಿರುವ ಭಾವನೆಗಳನ್ನು ತಿಳಿದಿರುತ್ತಾರೆ. ಇಂತಹ ಒಬ್ಬ ಸಾಕು ಪ್ರಾಣಿಗಳ ವ್ಯಕ್ತಿ 300 ನಾಯಿಗಳನ್ನು ದತ್ತು ಪಡೆದುಕೊಳ್ಳುವುದರ ಮೂಲಕ ಅವುಗಳಿಗೆ ಆಸರೆಯಾಗಿದ್ದಾರೆ. ಅವರ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ...

ಜಾಂಗ್ ಕೈ ಲೆಡ್ ಉತ್ತಮ ಜೀವನ ಹೊಂದಿದ್ದರು

ಜಾಂಗ್ ಕೈ ಲೆಡ್ ಉತ್ತಮ ಜೀವನ ಹೊಂದಿದ್ದರು

ಚೀನಾದ ಚೆಂಗ್ಡು ಮೂಲದ 41 ವರ್ಷದ ವ್ಯಕ್ತಿ ಜಾಂಗ್ ಕೈ ಲೆಡ್. ಈತ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ತಮ್ಮದೇ ಆದ ಟ್ರಾವೆಲ್ ಏಜೆನ್ಸಿಯನ್ನು ಹೊಂದುವುದರ ಮೂಲಕ ಅತ್ಯುತ್ತಮ ಆದಾಯ ಹಾಗೂ ಆರಾಮದಾಯಕ ಜೀವನವನ್ನು ನಡೆಸುತ್ತಿದ್ದರು. ಜೊತೆಗೆ ಒಂದು ಸಾಕು ನಾಯಿಯನ್ನು ತಮ್ಮೊಂದಿಗೆ ಸಾಕಿಕೊಂಡಿದ್ದನು. ಆದರೆ ಪ್ರೀತಿಯಿಂದ ಸಾಕಿಕೊಂಡ ಆ ನಾಯಿಯ ಸಾವಿನ ನಂತರ ಇವರ ಜೀವನದ ದಾರಿಯೇ ಬದಲಾಯಿತು.

ನಾಯಿಯ ಸಾವು ನೋವನ್ನು ಉಂಟುಮಾಡಿತು

ನಾಯಿಯ ಸಾವು ನೋವನ್ನು ಉಂಟುಮಾಡಿತು

13 ವರ್ಷಗಳ ಕಾಲ ತನ್ನೊಂದಿಗೆ ಪ್ರೀತಿಯಿಂದ ಇದ್ದ ನಾಯಿ ಇದ್ದಕ್ಕಿದ್ದ ಹಾಗೆ ತೀರಿಹೋಯಿತು. ಅದು ಅವನ ಜೀವನದಲ್ಲಿ ಸಕಷ್ಟು ನೋವು ಹಾಗೂ ಬದಲಾವಣೆಯನ್ನು ತಂದಿತು. ತನ್ನ ಮುದ್ದು ನಾಯಿಯ ಸಾವಿನ ನೋವನ್ನು ಮರೆಯಲು ಬೀದಿ ನಾಯಿಗಳ ಕಡೆಗೆ ಒಲವನ್ನು ತೋರಿದನು. ಆಗ ಬೀದಿಯಲ್ಲಿ ಇದ್ದ ಎರಡು ನಾಯಿಯನ್ನು ತಂದು ತನ್ನ ಟ್ರಾವೆಲ್ ಏಜೆನ್ಸಿಯ ಜಾಗದಲ್ಲಿ ತಂದು ಸಾಕಿದರು. ಆ ನಾಯಿಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಲು ತನ್ನ ಹೆಚ್ಚಿನ ಸಮಯವನ್ನು ವಿನಿಯೋಜಿಸಿದನು.

ನಾಯಿಗಳನ್ನು ಸಾಕಲು ಒಂದು ಸ್ಥಳವನ್ನು ಕಂಡುಕೊಂಡನು

ನಾಯಿಗಳನ್ನು ಸಾಕಲು ಒಂದು ಸ್ಥಳವನ್ನು ಕಂಡುಕೊಂಡನು

ಒಂದು ಖಾಲಿಯಾದ ಕಾರ್ಖಾನೆಯೊಂದರ ಜಾಗದಲ್ಲಿ ಸಾಕುನಾಯಿಗಳ ಪ್ರಾಣಿ ಧಾಮವನ್ನು ಪ್ರಾರಂಭಿಸಿದರು. ಅದಕ್ಕೆ ಲಿಟಲ್ ಏಂಜಲ್ ಅನಿಮಲ್ ಪ್ರೊಡೆಕ್ಷನ್ ಸೆಂಟರ್ ಎಂದು ಹೆಸರಿಟ್ಟರು. ನಾಯಿಗಳ ಸಂಖ್ಯೆ 300ಕ್ಕೆ ಏರುವ ವರೆಗೂ ವಿವಿಧ ಕಡೆಯಿಂದ ಬೀದಿ ನಾಯಿಗಳನ್ನು ತಂದು ಸಾಕಿದರು. ಈಗ ಅವರ ಆರೈಕೆಯಲ್ಲಿ ಸುಮಾರು 260 ನಾಯಿಗಳಿವೆ ಎಂದು ವರದಿಯಾಗಿದೆ.

ಸಾಕು ನಾಯಿಗಳಿಗಾಗಿ ಸಾಕಷ್ಟು ಹಣವನ್ನು ವ್ಯಯಿಸಿದರು

ಸಾಕು ನಾಯಿಗಳಿಗಾಗಿ ಸಾಕಷ್ಟು ಹಣವನ್ನು ವ್ಯಯಿಸಿದರು

ಆರಂಭದಲ್ಲಿ ಸಾಕು ಪ್ರಾಣಿಗಳಿಂದ ಹೆಚ್ಚು ಪ್ರಭಾವಿತರಾದರು. ನಂತರ ಅವರಿಗಾಗಿಯೇ ತನ್ನ ಜೀವನ ಹಾಗೂ ಸಮಯವನ್ನು ಮೀಸಲಿಟ್ಟರು. ಆದರೆ ನಾಯಿಯ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅಧಿಕ ಹಣದ ಅವಶ್ಯಕತೆ ಇರುತ್ತದೆ ಎನ್ನುವುದನ್ನು ಅರಿತರು. ಇವರಲ್ಲಿ ಇರುವ ಸಾಕು ನಾಯಿಗಳ ಆರೈಕೆ ಹಾಗೂ ಆಹಾರಕ್ಕಾಗಿ ಉಂಟಾಗುವ ಖರ್ಚುಗಳು ಇವರ ಮಾಸಿಕ ಸಂಬಳ ಹಾಗೂ ವ್ಯವಹಾರದಲ್ಲಿ ಬರುವ ಲಾಭಕ್ಕೂ ಮೀರಿತ್ತು. ಈ ಕಾರಣದಿಂದ ಇವರು ಬ್ಯಾಂಕ್‍ಗಳಿಂದ ಸಾಲ ಪಡೆದುಕೊಂಡರು. ತಮ್ಮ ನಾಯಿಗಳಿಗಾಗಿ ತಿಂಗಳಿಗೆ ಸುಮಾರು 20,000 ಯುವಾನ್ ಹಣವನ್ನು ಖರ್ಚುಮಾಡುತ್ತಾರೆ ಎಂದು ಬಹಿರಂಗ ಪಡಿಸಿದ್ದಾರೆ. ಪ್ರತಿ ದಿನ ಎರಡು 40 ಕೆಜಿ ಯ ಚೀಲ ನಾಯಿಯ ಆಹಾರವನ್ನು ಖರೀದಿಸಬೇಕಿದೆ. ನಾಯಿಗಳನ್ನು ನೋಡಿಕೊಳ್ಳುವ ಇಬ್ಬರು ಕಾರ್ಮಿಕರಿಗೆ ತಿಂಗಳಿಗೆ 6,000 ಯುವಾನ್ ಹಣವನ್ನು ನೀಡುತ್ತಾರೆ.

ಸಾಲದ ಹಣ ವಿಪರೀತವಾಗಿ ಬೆಳೆಯಿತು

ಸಾಲದ ಹಣ ವಿಪರೀತವಾಗಿ ಬೆಳೆಯಿತು

ಸಾಲ ಮಾಡಿ ನಾಯಿಗಳ ಆಹಾರ ಹಾಗೂ ಆರೈಕೆಗಳಿಗೆ ವ್ಯಯ ಮಾಡುವುದರಿಂದ ದಿನದಿಂದ ದಿನಕ್ಕೆ ಸಾಲದ ಮಿತಿ ಏರುತ್ತಲೇ ಹೋಯಿತು. ಅದನ್ನು ಮರುಪಾವತಿಸಬೇಕು ಎಂದು ಯೋಚಿಸಿದರೂ, ಅದು ಸಾಧ್ಯವಾಗದೆ ಉಳಿಯಿತು. ತನ್ನ ವೃದ್ಧ ತಂದೆತಾಯಿಗಳಿಗೆ ತೊಂದರೆ ಹಾಗೂ ನೋವನ್ನು ನೀಡುತ್ತಿದ್ದೇನೆ ಎಂದು ಅಂದುಕೊಳ್ಳುತ್ತಿದ್ದರು. ಜಾಂಗ್ 600,000 ಯುವಾನ್ ಹಣಗಳ ಸಾಲವನ್ನು ಹೊಂದಿದ್ದರು. ಆ ಸಾಲ ತೀರಿಸುವುದರ ಬಗ್ಗೆ ನಿರಾಶೆ ಹಾಗೂ ಗೊಂದಲವನ್ನು ಹೊಂದಿದ್ದರು. ಇವರ ಸ್ಥಿತಿ ಹಾಗೂ ನಾಯಿಗಳ ಬಗ್ಗೆ ಇರುವ ಕಾಳಜಿಯನ್ನು ಅರಿತ ಪಾಲಕರು ಈಗ ಇವರ ಸಾಲವನ್ನು ತೀರಿಸಲು ಸಹಾಯ ಮಾಡುತ್ತಿದ್ದಾರೆ. ಹಾಗಂತ ಜಾಂಗ್ ತನ್ನ ನಾಯಿಗಳನ್ನುಬಿಡಲಿಲ್ಲ. ಅವರ ಕಾಳಜಿ ಹಾಗೂ ಆರೈಕೆಗೆ ಬೇಕಾದ ಅಗತ್ಯತೆಯನ್ನು ಪೂರೈಸುತ್ತಿದ್ದಾರೆ.

Read more about: dogs
English summary

Man In Debt After Adopting 300 Dogs

Zhang adopted a street dog after he lost his pet dog of 13 years. He began the sanctuary in 2017 with eight dogs. As time passed by, he had over 300 dogs. Feeding these dogs became a task as he needs over two 40 kg bags of dog food alone. Hence he ran out of money and now his pensioner parents are also working to help him repay his debt!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more