Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮಾರ್ಚ್ ತಿಂಗಳ ಬಗ್ಗೆ ಇರುವಂತಹ ಕೆಲವೊಂದು ಆಸಕ್ತಿಕರ ಸಂಗತಿಗಳು
ವಸಂತ ಕಾಲ ಬಂತೆಂದರೆ ಆಗ ಮಾರ್ಚ್ ತಿಂಗಳು ಬಂತು ಎನ್ನುವ ಅರ್ಥವಿದೆ. ಯಾಕೆಂದರೆ ವಸಂತ ಕಾಲದಲ್ಲಿ ಮರಗಳು ಚಿಗುರುವುದು ಹಾಗೂ ಹೂ ಬಿಡುವುದು. ವರ್ಷದ ಮೂರನೇ ತಿಂಗಳಾಗಿರುವ ಮಾರ್ಚ್ ನಲ್ಲಿ ಸುತ್ತಲು ಹಸಿರೇ ಹಸಿರು ಕಂಡುಬರುವುದು. ಹಸಿರು ಬಣ್ಣವನ್ನು ವಸಂತದ ಆಗಮನ ಎಂದು ಬಿಂಬಿಸಲಾಗುತ್ತದೆ. ಜಾರ್ಜಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ತಿಂಗಳ ಬಗ್ಗೆ ಇರುವಂತಹ ಕೆಲವೊಂದು ತಮಾಷೆಯ ವಿಚಾರಗಳು ಮತ್ತು ಸತ್ಯಗಳನ್ನು ನಾವು ನಿಮಗೆ ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ. ಇದನ್ನು ನೀವು ತಿಳಿಯಲು ಮುಂದಾಗಿ.

ಮಾರ್ಚ್ ವರ್ಷದ ಮೊದಲ ತಿಂಗಳು!
ಜುಲಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ವರ್ಷದ ಮೊದಲ ತಿಂಗಳು ಎಂದು ಹೇಳಲಾಗುತ್ತದೆ. 1752ರ ತನಕವೂ ಮಾರ್ಚ್ ವರ್ಷದ ಮೊದಲ ತಿಂಗಳು ಎಂದು ಹೇಳಲಾಗಿತ್ತು. ಆದರೆ ಇದರ ಬಳಿಕ ಜಾರ್ಜಿಯನ್ ಕ್ಯಾಲೆಂಡರ್ ಎಲ್ಲವನ್ನು ಬದಲಾಯಿಸಿತು.

ಮಾರ್ಚ್ ತಿಂಗಳ ಅರ್ಥವೇನು?
ಮಾರ್ಚ್ ತಿಂಗಳು ರೋಮನ್ ನ ಯುದ್ಧ ದೇವತೆಯಾಗಿರುವ ಮಾರ್ಸ್ ನಿಂದ ಬಂದಿರುವುದು. ಮಾರ್ಚ್ ಪದಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧವು ಇಲ್ಲವಾಗಿದೆ.

ಹುಟ್ಟುವ ಹೂವು(ಬರ್ತ್ ಫ್ಲವರ್)ನ ತಿಂಗಳು
ಡಾಫ್ಪೊಡಿಲ್ ಎನ್ನುವುದು ಈ ತಿಂಗಳಲ್ಲಿ ಹುಟ್ಟುವ ಹೂ ಆಗಿದೆ. ಆದರೆ ಕೆಲವರು ಇದು ನೇರಳೆ ಬಣ್ಣದ್ದು ಎಂದು ಹೇಳುವರು. ಈ ತಿಂಗಳ ಬಗ್ಗೆ ಇರುವ ಜನಪ್ರಿಯ ವಾಕ್ಯ ಪುರಾತನ ನಾಣ್ನುಡಿಯ ಪ್ರಕಾರ, ಮಾರ್ಚ್ ತಿಂಗಳು ಸಿಂಹದಂತೆ ಬರುವುದು ಮತ್ತು ಕುರಿಮರಿಯಂತೆ ಹೋಗುವುದು. ಇದು ಚಳಿಗಾಲವು ಅಂತ್ಯವಾಗಿ ವಸಂತ ಕಾಲವು ಆಗಮನವಾಗುವ ಸೂಚನೆಯಾಗಿದೆ. ಮಾರ್ಚ್ ನ್ನು ಬಣ್ಣಿಸುವಂತಹ ಇನ್ನೊಂದು ವಿಧಾನವೆಂದರೆ, ಮಾರ್ಚ್ ತಿಂಗಳು ಮೊಲದಂತೆ ಹುಚ್ಚಾಟವಾಡುತ್ತದೆ. ಯಾಕೆಂದರೆ ಈ ವೇಳೆ ಪ್ರಾಣಿಗಳು ಪರಸ್ಪರ ಕಚ್ಚಾಡುತ್ತಾ ಇರುತ್ತದೆ.

ಈ ತಿಂಗಳ ಮೇಲೆ ಜ್ಯೋತಿಷ್ಯದ ಪ್ರಭಾವ
ಮಾರ್ಚ್ ನ ಆರಂಭದಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಮೀನ ರಾಶಿಗೆ ಸೇರುವರು. ಮಾರ್ಚ್ 21ರ ಬಳಿಕ ಹುಟ್ಟುವಂತಹ ಮಕ್ಕಳು ಮೇಷ ರಾಶಿಯವರಾಗಿರುವರು. ಇದು ರಾಶಿಚಕ್ರಗಳ ಆರಂಭವಾಗಿದೆ.

ಈ ತಿಂಗಳ ಪ್ರಮುಖ ಆಚರಣೆ
ಮಾರ್ಚ್ ತಿಂಗಳು ಮಹಿಳಾ ಇತಿಹಾಸದ ತಿಂಗಳು ಎಂದು ತುಂಬಾ ಜನಪ್ರಿಯವಾಗಿದೆ. ಆದರೆ ಇದನ್ನು ಅಮೆರಿಕಾದ ರೆಡ್ ಕ್ರಾಸ್ ತಿಂಗಳು ಮತ್ತು ಅಗ್ನಿ ಅವಘಡ ತಪ್ಪಿಸುವ ತಿಂಗಳಾಗಿ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಹೊರತಾಗಿ ಸೇಂಟ್ ಪ್ಯಾಟ್ರಿಕ್ಸ್ ದಿನವು ಮಾರ್ಚ್ 17ರಂದು ಆಚರಣೆ ಮಾಡಲಾಗುತ್ತದೆ ಮತ್ತು ಪಿ ಡೇಯನ್ನು ಮಾರ್ಚ್ 14ರಂದು ಜಗತ್ತಿನಾದ್ಯಂತ ಆಚರಣೆ ಮಾಡಲಾಗುತ್ತದೆ.



Click it and Unblock the Notifications
