For Quick Alerts
ALLOW NOTIFICATIONS  
For Daily Alerts

ಗುರುತು ಮರೆಮಾಚಿ ಕ್ಷೌರದಂಗಡಿ ನಡೆಸುತ್ತಿರುವ ಸಹೋದರಿಯರು!

|

ಕ್ಷೌರದ (ಕೂದಲು ಕತ್ತರಿಸುವ) ಅಂಗಡಿಗೆ ಹೋದರೆ ನಿಮಗೆ ಕಾಣಿಸುವುದು ಹುಡುಗರು ಕೆಲಸ ಮಾಡುವುದು ಮಾತ್ರ. ಅದರಲ್ಲೂ ಪುರುಷರಿಗಾಗಿ ಇರುವಂತಹ ಸೆಲೂನ್ ಗಳಲ್ಲಿ ಅಪ್ಪತಪ್ಪಿಯೂ ಮಹಿಳೆಯರು ಕೆಲಸ ಮಾಡುವುದಿಲ್ಲ. ಯಾಕೆಂದರೆ ಇದು ಪುರುಷರಿಗಾಗಿಯೇ ಮೀಸಲಾಗಿರುವಂತಹ ಕ್ಷೇತ್ರವೆಂದು ಹೇಳಲಾಗುತ್ತದೆ. ಆದರೆ ಇಂದಿನ ಮುಂದುವರಿದಿರುವ ದುನಿಯಾದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಕೈಯಾಡಿಸುತ್ತಿದ್ದಾರೆ.

ಆದರೆ ಕೆಲವೊಂದು ಸಲ ಅನಿವಾರ್ಯವಾಗಿ ಉದ್ಯೋಗವನ್ನು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ವೇಳೆ ಪುರುಷರ ಪ್ರಧಾನವಾಗಿರುವಂತಹ ಸಮಾಜದಲ್ಲಿ ತಮ್ಮ ಪರಿಚಯವನ್ನೇ ಮರೆಮಾಚಬೇಕಾಗುತ್ತದೆ. ಇಂತಹ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ...

ತಮ್ಮ ತಂದೆಯ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿ

ತಮ್ಮ ತಂದೆಯ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿ

ಹದಿಹರೆಯದ ಯುವತಿಯರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಹುಡುಗರ ವೇಷದಲ್ಲಿ ತಮ್ಮ ತಂದೆಯ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಗುರುತಿಸಿರುವ ಸರ್ಕಾರವನ್ನು ಅವರನ್ನು ಗೌರವಿಸಿದೆ. ಜ್ಯೋತಿ ಕುಮಾರಿ(18) ಮತ್ತು ಆಕೆಯ ಸೋದರ ನೇಹಾ(16) ಉತ್ತರ ಪ್ರದೇಶದ ಸಣ್ಣ ಹಳ್ಳಿಯಲ್ಲಿರುವ ತಮ್ಮ ತಂದೆಯ ಕ್ಷೌರದ ಅಂಗಡಿಯಲ್ಲಿ 2014ರಲ್ಲಿ ಕೆಲಸ ಮಾಡಲು ಆರಂಭಿಸಿದರು. ಇವರ ತಂದೆ ಅನಾರೋಗ್ಯಕ್ಕೆ ಒಳಗಾದ ಕಾರಣದಿಂದಾಗಿ ಕ್ಷೌರದ ಅಂಗಡಿಯನ್ನು ಮುಚ್ಚಬೇಕಾಗಿ ಬಂತು. ಆದರೆ ಈ ಕುಟುಂಬಕ್ಕೆ ಬೇರೆ ಯಾವುದೇ ರೀತಿಯ ಆದಾಯವು ಇಲ್ಲದೆ ಇದ್ದ ಕಾರಣದಿಂದಾಗಿ ಹುಡುಗಿಯರಿಬ್ಬರು ಕ್ಷೌರದಂಗಡಿ ನಡೆಸಲು ಮುಂದಾದರು.

ಗುರುತನ್ನೇ ಮರೆಮಾಚಲು ಕಾರಣವೇನು?

ಗುರುತನ್ನೇ ಮರೆಮಾಚಲು ಕಾರಣವೇನು?

ಹದಿಹರೆಯದ ಯುವತಿಯರು ತಮ್ಮ ಮೀಸೆ ಅಥವಾ ಕೂದಲು ತೆಗೆಯುವ ಬಗ್ಗೆ ಕೆಲವು ಜನರಿಗೆ ತುಂಬಾ ಸಂಶಯವಿತ್ತು. ಇನ್ನು ಕೆಲವು ಮಂದಿ ತಮ್ಮ ಜತೆಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು ಎಂದು ಜ್ಯೋತಿ ಹೇಳುತ್ತಾರೆ. ಇದರಿಂದಾಗಿ ಅವರು ತಮ್ಮ ಗುರುತನ್ನೇ ಮರೆಮಾಚಿ, ಸಂಪೂರ್ಣವಾಗಿ ಹುಡುಗರಂತೆ ಕಾಣಿಸಿಕೊಳ್ಳಲು ನಿರ್ಧರಿಸಿದರು.

ದೀಪಕ್ ಮತ್ತು ರಾಜು ಎನ್ನುವ ಹೆಸರನ್ನು ಇಟ್ಟುಕೊಂಡರು!

ದೀಪಕ್ ಮತ್ತು ರಾಜು ಎನ್ನುವ ಹೆಸರನ್ನು ಇಟ್ಟುಕೊಂಡರು!

ಈ ಹುಡುಗಿಯರು ತಮ್ಮ ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡರು. ಇದರ ಬಳಿಕ ಪುರುಷರಂತೆ ಸ್ಟೇನ್ ಲೆಸ್ ಸ್ಟೀಲ್ ಬ್ರಾಸ್ ಲೆಟ್ ಧರಿಸಿದರು ಮತ್ತು ತಮಗೆ ದೀಪಕ್ ಮತ್ತು ರಾಜು ಎನ್ನುವ ಹೆಸರನ್ನು ಇಟ್ಟುಕೊಂಡರು. ಗ್ರಾಮದಲ್ಲಿ ಇರುವಂತಹ ಸುಮಾರು 100ರಷ್ಟು ಮನೆಗಳಿಗೆ ಇವರ ನಿಜವಾದ ಪರಿಚಯವಿತ್ತು. ಆದರೆ ತಮ್ಮ ಸುತ್ತಲಿನ ಕೆಲವೊಂದು ಹಳ್ಳಿಗಳ ಜನರಿಗೆ ತಮ್ಮ ಗುರುತಿನ ಬಗ್ಗೆ ಕೆಲವು ವರ್ಷಗಳ ಬಗ್ಗೆ ತಿಳಿದೇ ಇರಲಿಲ್ಲ. ಕೆಲವರಿಗೆ ಇಂದು ಕೂಡ ಆ ಬಗ್ಗೆ ತಿಳಿದಿಲ್ಲ ಎಂದು ನೇಹಾ ಹೇಳುತ್ತಾರೆ.

Most Read: ಕೈಯಲ್ಲಿ ಹೆಚ್ಚು ಹಣ ಉಳಿತಾಯಕ್ಕೆ 7 ಸ್ಮಾರ್ಟ್ ಟಿಪ್ಸ್

ದಿನಕ್ಕೆ 400 ರೂ. ದುಡಿಯುತ್ತಿದ್ದರು

ದಿನಕ್ಕೆ 400 ರೂ. ದುಡಿಯುತ್ತಿದ್ದರು

ಈ ಸೋದರಿಯರು ದಿನಕ್ಕೆ 400 ರೂ. ದುಡಿಯುತ್ತಿದ್ದರು. ಇದರಿಂದ ತಂದೆಯ ಔಷಧಿ ಮತ್ತು ಕುಟುಂಬದ ಜೀವನ ನಿರ್ವಹಣೆಗೆ ಸಾಕಾಗುತ್ತಿತ್ತು. 2014ರಲ್ಲಿ ನಾವು ಈ ಕೆಲಸ ಆರಂಭಿಸಿದಾಗ ತುಂಬಾ ಸಮಸ್ಯೆಗಳನ್ನು ಎದುರಿಸಿದೆವು. ಗ್ರಾಮದಲ್ಲಿರುವ ಜನರು ನಮ್ಮನ್ನು ಹೀಯಾಳಿಸಿದರು. ಆದರೆ ನಾವು ಅವರನ್ನು ಕಡೆಗಣಿಸಿದೆವು ಮತ್ತು ಕೆಲಸದ ಕಡೆ ಗಮನಹರಿಸಿದೆವು. ಯಾಕೆಂದರೆ ನಮಗೆ ಬೇರೆ ಆಯ್ಕೆಯೇ ಇರಲಿಲ್ಲ ಎನ್ನುತ್ತಾರೆ ನೇಹಾ.

ಮಧ್ಯಾಹ್ನ ಬಳಿಕ ಮಾತ್ರ ಅಂಗಡಿ ತೆರೆಯುತ್ತಿದ್ದರು

ಮಧ್ಯಾಹ್ನ ಬಳಿಕ ಮಾತ್ರ ಅಂಗಡಿ ತೆರೆಯುತ್ತಿದ್ದರು

ವಿದ್ಯಾಭ್ಯಾಸವನ್ನು ಮುಂದುವರಿಸುವ ಕಾರಣದಿಂದಾಗಿ ಇವರು ಮಧ್ಯಾಹ್ನ ಬಳಿಕ ಮಾತ್ರ ಅಂಗಡಿ ತೆರೆಯುತ್ತಿದ್ದರು. ಜ್ಯೋತಿ ಈಗ ಪದವಿ ಪಡೆದಿದ್ದಾರೆ ಮತ್ತು ನೇಹಾ ಈಗಲೂ ಕಲಿಯುತ್ತಿದ್ದಾರೆ. ವರ್ಷಗಳು ಉರುಳಿದಂತೆ ಇವರು ತಮ್ಮ ನಿಜವಾದ ಪರಿಚಯವನ್ನು ಗ್ರಾಹಕರಿಗೆ ಹೇಳುತ್ತಾ ಇದ್ದಾರೆ. ನಮಗೆ ಈಗ ಆತ್ಮವಿಶ್ವಾಸ ಬಂದಿದೆ ಮತ್ತು ಯಾವುದೇ ರೀತಿಯ ಭೀತಿಯಿಲ್ಲ ಎಂದು ನೇಹಾ ಹೇಳುತ್ತಾರೆ. ಹೆಚ್ಚಿನ ಜನರಿಗೆ ನಾವು ಹುಡುಗಿಯರು ಎಂದು ಈಗ ತಿಳಿದುಬಂದಿದೆ ಎಂದು ತನ್ನ ಕೂದಲನ್ನು ಉದ್ದ ಬಿಡುತ್ತಿರುವ ಜ್ಯೋತಿ ತಿಳಿಸಿದ್ದಾರೆ.

 ಇವರು ಸಮಾಜಕ್ಕೆ ಕೂಡ ಪ್ರೇರಣೆ

ಇವರು ಸಮಾಜಕ್ಕೆ ಕೂಡ ಪ್ರೇರಣೆ

ಗೋರಖ್ ಪುರದ ಪತ್ರಕರ್ತರೊಬ್ಬರು ಈ ಸೋದರಿಯರು ಕಥೆಯನ್ನು ಹಿಂದಿ ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಿದ ಬಳಿಕ ಸರ್ಕಾರವು ಅವರನ್ನು ಗೌರವಿಸಿದೆ. ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಜೀವನ ಸಾಗಿಸುವುದಕ್ಕೆ ಇವರು ಒಳ್ಳೆಯ ಉದಾಹರಣೆ. ಇವರು ಸಮಾಜಕ್ಕೆ ಕೂಡ ಪ್ರೇರಣೆ ಮತ್ತು ಇವರ ಕಥೆಯನ್ನು ಯುವ ಜನಾಂಗಕ್ಕೆ ಹೇಳಬೇಕಾಗಿದೆ ಎಂದು ಸರ್ಕಾರಿ ಅಧಿಕಾರಿ ಅಭಿಷೇಕ್ ಪಾಂಡೆ ಹೇಳುತ್ತಾರೆ.

Most Read: ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೆವ್ವದ ಆಕೃತಿಗಳು

ಈ ಬಾಲಕಿಯರ ತಂದೆ ಹೇಳುವ ಪ್ರಕಾರ

ಈ ಬಾಲಕಿಯರ ತಂದೆ ಹೇಳುವ ಪ್ರಕಾರ

ಅವರಿಬ್ಬರು ಕೆಲಸ ಮಾಡುವಾಗ ನನಗೆ ತುಂಬಾ ನೋವಾಗುತ್ತಲಿತ್ತು. ಆದರೆ ನನ್ನ ಮಕ್ಕಳಿಂದ ತುಂಬಾ ಹೆಮ್ಮೆಯೆನಿಸುತ್ತಿದೆ. ಅವರು ಹಠಾತ್ ತೊಂದರೆಯಿಂದ ಕುಟುಂಬವನ್ನು ಕಾಪಾಡಿದ್ದಾರೆ ಎಂದು ಸೋದರಿಯರ ತಂದೆ ಧ್ರುವ ನಾರಾಯಣ್ ಹೇಳಿದ್ದಾರೆ. ಸ್ಥಳೀಯ ದಿನಪತ್ರಿಕೆಯಲ್ಲಿ ತಮ್ಮ ಕಥೆಯು ಪ್ರಕಟಗೊಂಡ ಬಳಿಕ ಕ್ಷೌರದ ಅಂಗಡಿಯು ಮತ್ತಷ್ಟು ಜನಪ್ರಿಯವಾಗಿದೆ. ಈ ಕಾರಣದಿಂದಾಗಿ ಬನ್ವಾರಿ ಟೊಲಾ ಗ್ರಾಮದಲ್ಲಿ ಕ್ಷೌರದಂಗಡಿಯನ್ನು ನಾವು ಮುಂದುವರಿಸಿಕೊಂಡು ಹೋಗಲಿದ್ದೇವೆ. ತಮ್ಮ ನಿಜ ಪರಿಚಯದಿಂದಾಗಿ ಹೆಚ್ಚಿನ ಗ್ರಾಹಕರಿಗೆ ಯಾವುದೇ ರೀತಿಯ ಚಿಂತೆಯಾಗಿಲ್ಲ ಮತ್ತು ಸಂಕಷ್ಟದಲ್ಲಿ ಹೀಗೆ ಮಾಡುತ್ತಲಿರುವ ಕಾರಣದಿಂದಾಗಿ ಹೆಚ್ಚಿನವರ ಮನಸ್ಸಿಗೆ ಇದು ನಾಟಿದೆ ಎಂದು ಸೋದರಿಯರು ತಿಳಿಸುತ್ತಾರೆ.

ನಿಜವಾಗಿಯೂ ಬಾಲಕಿಯರ ಇದು ದಿಟ್ಟ ಹೆಜ್ಜೆ

ನಿಜವಾಗಿಯೂ ಬಾಲಕಿಯರ ಇದು ದಿಟ್ಟ ಹೆಜ್ಜೆ

ಭಾರತದಲ್ಲಿ ಹೆಚ್ಚಾಗಿ ಮಹಿಳೆಯರು ಗದ್ದೆ, ಮನೆ, ಬಟ್ಟೆ ಹೊಲಿಯುವ ಕೆಲಸ ಮಾಡುತ್ತಾರೆ. ಆದರೆ ಇಂತಹ ಕೆಲಸಗಳನ್ನು ಮಾಡುವುದು ತುಂಬಾ ಕಡಿಮೆ. ಅದರಲ್ಲೂ ಕ್ಷೌರದಂಗಡಿ ಎನ್ನುವುದು ಪುರುಷರಿಗೆ ಉದ್ಯೋಗ ಮಾಡಲು ಮಾತ್ರಸೀಮಿತ ಎನ್ನುವ ಮಾತಿದೆ. ಅದರಲ್ಲೂ ತುಂಬಾ ಸಂಪ್ರದಾಯ ಬದ್ಧ ವಾಗಿರುವಂತಹ ಗ್ರಾಮದಲ್ಲಿ ಪುರುಷರಿಗಾಗಿ ಮೀಸಲು ಎಂದೇ ಭಾವಿಸಲಾಗಿರುವ ಕ್ಷೌರದಂಗಡಿ ನಡೆಸಿಕೊಂಡು ಹೋಗುವುದು ನಿಜವಾಗಿಯೂ ದಿಟ್ಟ ಹೆಜ್ಜೆ ಎನ್ನಬಹುದು.

English summary

Indian Sisters Pretend To Be Boys To Keep Barbershop

Two teenage girls have been honoured by the Indian government after it was discovered they had pretended to be boys for four years to run their father’s barbershop when he became too ill to work. Jyoti Kumari, 18, and her 16-year-old sister, Neha, took over their father’s salon in their rural Uttar Pradesh state village after he became ill in 2014. The barbershop had initially closed but was the family’s only source of income, compelling the girls to try to run it themselves.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more